Inspirational story:ಬಡತನವನ್ನು ಎದುರಿಸಲು ಶಿಕ್ಷಣ ಪ್ರಬಲ ಅಸ್ತ್ರ ಎಂಬ ಚಿಂತಕರ ಮಾತನ್ನು ಸಾಬಿತುಪಡಿಸಿದ ಕಾರ್ಮಿಕ ಮಹಿಳೆಯೊಬ್ಬಳು ಪಿಎಚ್‌ಡಿ ಸಾಧಿಸಿದ್ದಾಳೆ ಸಾಧನೆಗೆ ಬಡತನ ವಯಸ್ಸು ಮತ್ತು ಕೌಟುಂಬಿಕ ಸಮಸ್ಯಗಳು ಅಡ್ಡಿಯಲ್ಲ, ದೃಢ ಸಂಕಲ್ಪವೇ ದೊಡ್ಡ ಶಕ್ತಿ ಪರಿಶ್ರಮ ಓದಬೇಕೆಂಬ ಆಸೆ ಛಲ ಇದ್ದರೆ, ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಕೂಲಿ ಕಾರ್ಮಿಕ ಮಹಿಳೆ ಸಾಬೀತುಪಡಿಸಿದ್ದಾಳೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರೈತ ಕಾರ್ಮಿಕ ಕುಟುಂಬದ ಮಹಿಳೆ. ದಿನಗೂಲಿ ಕೆಲಸ ಮಾಡುತ್ತಲೇ ಶಿಕ್ಷಣವನ್ನು ಪೊರೈಸಿ, ಅನಂತಪುರದಲ್ಲಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಸಾಧಿಸಿದ್ದಾಳೆ.ಆಕೆ ಸಾಧನೆಯ ಜೀವನಗಾಥೆ ಪ್ರೇರಣಾದಾಯಕ ಕಥೆಯಾಗಿ ದೇಶದ ಗಮನ ಸೆಳೆದಿದೆ. ನ್ಯೂಜ್ ಡೆಸ್ಕ್: ಅನಂತಪುರ ಜಿಲ್ಲೆಯ ನಾಗುಲ ಗುಡ್ಡಂ ಎಂಬ ಸಣ್ಣ ಗ್ರಾಮದ ಸಣ್ಣ ಹುಲ್ಲಿನ ಗುಡಿಸಲಿನಲ್ಲಿ ನಿವಾಸಿ ಸಕ್ಯೇ ಭಾರತಿ ಬಾಲ್ಯದಿಂದಲೂ ಓದಬೇಕು ಎಂಬ ಹಂಬಲ ಉನ್ನತ ಹುದ್ದೆ ಪಡೆಯಬೇಕು ಎಂಬ ಆಶಾ ಭಾವನೆ ಹೊಂದಿದ್ದಳು. ಆದರೆ ಆಕೆಯ ಪೋಷಕರಿಗೆ ಮೂರು ಮಂದಿ ಹೆಣ್ಮಕ್ಕಳು ಮೂವರನ್ನು ಸಾಕುವುದು ವಿದ್ಯಾಭ್ಯಾಸ ಕೊಡಿಸುವುದು…
Author: Srinivas_Murthy
ಪರ್ವತಗಳ ಸಾಲು ಬೆಟ್ಟಗಳ ನಡುವಿನ ಶಿಖಕರಗಳಲ್ಲಿ ಪ್ರಕೃತಿಯ ನಡುವೆ ತುಂತುರು ಮಳೆಯ ಸೌಂದರ್ಯವನ್ನು ಸವಿಯಲು ಎಂತಹ ಬೈಕರನನ್ನು ಪ್ರೇರಿಪಿಸುತ್ತದೆ. ಇಂತಹ ದುರ್ಗಮ ಪ್ರದೇಶಗಳಲ್ಲಿ ಸವಾರಿ ಮಾಡುವುದು ಬೈಕರಗಳಿಗೆ ಎಷ್ಟು ಆನಂದವೊ ಆಗುವ ಸಣ್ಣ ಅಜಾಗರೂಕತೆ ವಿಷಾಧಕ್ಕೂ ಕಾರಣವಾಗುತ್ತದೆ. ಪಶ್ಚಿಮ ಬಂಗಾಳದ ಎತ್ತರವಾದ ಪರ್ವತ ತಿರುವುಗಳಲ್ಲಿ ನಡೆದ ಹೃದಯ ಸ್ಥಂಬಿಸುವಂತ ಘಟನೆ ಸಾಮಾಜಿಕ ಜಾಲತಾಣವನ್ನೆ ನಡುಗಿಸಿದೆ. ಒರ್ವ ಬೈಕ್ ಸವಾರ ತನ್ನ ಪ್ರಾಣ ಕಳೆದುಕೊಳ್ಳುವ ಅಪಾಯದಿಂದ ಕೆಲವೇ ಸೆಕೆಂಡುಗಳಲ್ಲಿ ಪಾರಾದ ದೃಶ್ಯ ನೋಡಿದಾಗ ಯಮಧರ್ಮರಾಜನ ಕರೆ ಬಂದು ಹೋಯಿತ ಎಂದು ಆಶ್ಚರ್ಯವಾಗುತ್ತದೆ. ನ್ಯೂಜ್ ಡೆಸ್ಕ್:ಪರ್ವತಗಳ ಮೇಲಿನ ರಸ್ತೆಗಳಲ್ಲಿ ತುಂತುರು ಮಳೆಯಲ್ಲಿ ಬೆಟ್ಟಗಳ ನಡುವೆ ಬೈಕ್ ಸವಾರಿ ಮಾಡುವುದು ಪ್ರತಿಯೊಬ್ಬ ಬೈಕ್ ಸವಾರನ ಆಸೆ ಕನಸು ಆಗಿರುತ್ತದೆ. ಆದರೆ ಅಲ್ಲಿ ಆಗುವ ಸ್ವಲ್ಪ ಪ್ರಮಾಣ ನಿರ್ಲಕ್ಷ್ಯ ಅತಿ ವೇಗ ಅಜಾಗರೂಕತೆ ಬೈಕರ್ ಬದುಕುನ್ನೆ ಕ್ಷಣಾರ್ಧದಲ್ಲಿ ದುರಂತವನ್ನಾಗಿ ಮಾಡುತ್ತದೆ. ಪಶ್ಚಿಮ ಬಂಗಾಳದ ಪರ್ವತ ಪ್ರದೇಶದಲ್ಲಿ ನಡೆದ ಭೀಕರ ಬೈಕ್ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ದೊಡ್ದ…
ಚಿಂತಾಮಣಿ: ಚಿಂತಾಮಣಿ ತಾಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಪಲ್ಲಿ ಗ್ರಾಮದಲ್ಲಿ ನೂತನವಾಗಿ ಗ್ರಾಮದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಕುಟುಂಬದವರಿಂದ ನಿರ್ಮಿಸಲಾದ ಶ್ರೀ ರುಕ್ಮಿಣಿ ಸಮೇತ ಪಾಂಡುರಂಗ ವಿಠಲ ಮಂದಿರವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಕ್ಸೆನ ಪೂಜೆ, ಪುಣ್ಯಾಹವಾಚನ, ಕಲಶ ಪ್ರತಿಷ್ಠಾಪನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ವೇದಪಂಡಿತರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಪಾಂಡುರಂಗ ವಿಠಲನಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾದರು. ಗ್ರಾಮದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ ಗ್ರಾಮಗಳಲ್ಲಿ ಸ್ಥಳೀಯ ಕಲಾವಿದರು ವಿಠಲನನ್ನು ಆರಾಧಿಸಿ ನಡೆಸುವ ಪಂಡರಿ ಭಜನೆಯ ಸಂಸ್ಕೃತಿಯನ್ನು ಮುಂದಿನ ಪೀಲಿಗೆಗೂ ಉಳಿಸಿ ಬೆಳೆಸುವ ಸಲುವಾಗಿ ಪಾಂಡುರಂಗ ವಿಠಲ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು ಸರ್ವರೂ ಮುಕ್ತವಾಗಿ ಪಾಂಡು ರಂಗ…
ನ್ಯೂಜ್ ಡೆಸ್ಕ್:ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ.ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಂದು ಭಾನುವಾರ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಜನತಾ ಪರಿವಾರದ ಮುಖಂಡ ಮಾಜಿ ಸ್ಪೀಕರ್ ದಿವಂಗತ.ಕೆ.ಆರ್.ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಚುನಾವಣಾ ರಾಜಕೀಯ ನಿವೃತ್ತಿ ಮಾತು ಆಡಿದ್ದಾರೆ.ಈ ವೇಳೆ ಅಭಿಮಾನಿಗಳು ಮುಂದಿನ 10 ವರ್ಷಗಳ ಚುನಾವಣಾ ರಾಜಕೀಯದಲ್ಲಿ ಇರುವಂತೆ ಮನವಿ ಮಾಡಿದ್ದು 2028ರ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ 2028ಕ್ಕೆ ಸ್ಪರ್ಧೆ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ಮೇ 28 ರಂದು ರಾಜೀನಾಮೆ ಸಲ್ಲಿಸಿದ್ದ ಸಿದ್ದರಾಮಯ್ಯ ಐದು ದಶಕಗಳ ಸುದೀರ್ಘ ರಾಜಕಾರಣದಲ್ಲಿ ದಣಿವರಿಯದ ರಾಜಕೀಯ ಮುತ್ಸದ್ದಿಯಾಗಿ ಹೋರಾಟಗಾರರಾಗಿ ಸಿದ್ದರಾಮಯ್ಯ ಯಶಸ್ವಿಯಾಗಿ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯ ಕಂಡಿತ್ತು. ಹೈಕಮಾಂಡ್ ಸೂಚನೆ ಮತ್ತು ರಾಹುಲ್…
ಶ್ರೀನಿವಾಸಪುರ:ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಯಲ್ದೂರು ಪಂಚಾತಿಯಿ ಕೇಂದ್ರ ಸಹ ಹೌದು. ಯಲ್ದೂರು ಅನ್ನು ಧಾರ್ಮಿಕ, ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಬಹುದಾಗಿತ್ತು ಆದರೆ ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹತ್ವದ ಹೋಬಳಿ ಕೇಂದ್ರ ಇಂದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಶ್ರೀನಿವಾಸಪುರ ಪಟ್ಟಣದಿಂದ ಅರ್ದ ಗಂಟೆ ಪ್ರಯಾಣದಲ್ಲಿ ತಲುಪಬಹುದಾದ ಊರು ಯಲ್ದೂರು ರಾಷ್ಟ್ರೀಯ ಹೆದ್ದಾರಿ 69 ರಿಂದ 7-8 ಕೀ.ಮಿ ಅಂತರದಲ್ಲಿ ಇದ್ದು ಇಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ.ಕಾಲ ಬೆಳೆದಿದೆ ಅಧುನಿಕತೆ ಮೈಗೂಡಿಸಿಕೊಂಡಾಗಿದೆ ಹಸಿರು ಮಾಯವಾಗಿ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ ಬಡಾವಣೆ ಸಂಸೃತಿ ತಲೆ ಎತ್ತಿದೆ ಆದರೆ ಊರಿನ ನೋಟ ಹಳ್ಳಿಯಾಗೆ ಕಾಣುತ್ತಿದೆ.ಪಟ್ಟಣ ಪಂಚಾಯಿತಿ ಕನಸಿನ ಮಾತುಭೌಗೋಳಿಕವಾಗಿ ದೊಡ್ಡದಾಗಿ ಇರುವ ಯಲ್ದೂರು ಪಕ್ಕದ ಶೀಗಹಳ್ಳಿ ಶಿತರೆಡ್ಡಿಹಳ್ಳಿ ಸೇರಿಸಿಕೊಂಡು ಪಟ್ಟಣ ಪಂಚಾಯಿತಿಯನ್ನಾಗಿ ಮೆಲ್ದರ್ಜೆಗೆ ಏರಿಸುತ್ತಾರೆ ಎನ್ನುವ ಮಾತು ಕಳೆದ 10-15 ವರ್ಷಗಳಿಂದ ಕೇಳಿಬರುತಿತ್ತು ಈಗ ಅದರ ನೆನಪು ಮಾಸಿ ಹೋದಂತಾಗಿ ಕನಸಿನ ಮಾತಾಗಿದೆ.ಶ್ರೀನಿವಾಸಪುರ ಕೋಲಾರ ಅಥಾವ ಮುಳಬಾಗಿಲು ನಗರಗಳಿಂದ ಬರಲು ಉತ್ತಮ ರಸ್ತೆ…
ಕೋಲಾರ :ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೆಸೆತ್ತು ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬಳು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಕೋಲಾರದಲ್ಲಿ ನಡೆದಿದೆ.ಮೃತರನ್ನು ತಾಯಿ ಪ್ರಮೀಳ (36) ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಎಂದು ಗುರತಿಸಲಾಗಿದ್ದು. ಇವರು ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿಯ ಬೆಗ್ಲಿಬೆಣಜೇನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಆಟೋ ಚಾಲಕರಾಗಿರುವ ಸುರೇಶ್ ಅವರ ಪತ್ನಿ ಪ್ರಮೀಳಾ ಗೃಹಿಣಿ. ಇವರ ಮಗಳು ಸ್ವಪ್ನಾ ಬಿಕಾಂ ಪದವೀಧರೆಯಾಗಿ, ಉನ್ನತ ವ್ಯಾಸಂಗಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಮಗ ರಾಮ್‌ಚರಣ್ ಪಿಯುಸಿ ವ್ಯಾಸಂಗ ಮುಗಿಸಿದ್ದು, ಬಿಇ ವ್ಯಾಸಂಗ ಮಾಡಲು ಕಾಲೇಜೊಂದರಲ್ಲಿ ಸೀಟು ಪಡೆದುಕೊಂಡಿದ್ದ ಸುರೇಶ್ ಆಟೋ ನಡೆಸಿಕೊಂಡು ಜೀವನ ಮಾಡುತಿದ್ದು,ಸುಮಾರು 15 ಲಕ್ಷ ರೂಪಾಯಿ ಸಾಲ ಮಾಡಿ ನೂತನವಾಗಿ ಕಟ್ಟಿಕೊಂಡಿದ್ದು ಮನೆ ಸಾಲ ತೀರಿಸಲು ಹೆಣಗಾಡುತ್ತಿದ್ದ ಎನ್ನಲಾಗಿದ್ದು ಇತ್ತಿಚಿಗೆ ತಾನು ಒಡಿಸುತ್ತಿದ್ದ ಆಟೋ ಫೈನಾನ್ಸ್ ಸಂಸ್ಥೆಯವರು ಸಿಝ್ ಮಾಡಿದ್ದು ಈ ವಿಚಾರದಲ್ಲಿ ಸುಂದರ ಸಂಸಾರದಲ್ಲಿ ಸಾಲದ ಕೋಲಾ ಹಲ ಎದ್ದು ದಂಪತಿ…
ಕೋಲಾರ:ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ರವಿ ಕುಮಾರ್ ಎಂ.ಆರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ.ಪ್ರಸ್ತುತ ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ರವಿ ಕುಮಾರ್.ಎಂ.ಆರ್ ಅವರನ್ನು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಕೋಲಾರ ಜಿಲ್ಲಾಧಿಕಾರಿಯಾಗಿರುವ ಡಾ.ಎಂ.ಆರ್. ರವಿ ಅವರು ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದು ಅವರ ನಿವೃತ್ತಿಯ ನಂತರ ನೂತನ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್.ಎಂ.ಆರ್ ಅಧಿಕಾರ ಸ್ವೀಕರಿಸಲಿದ್ದಾರೆ. ಮಾವು ಬೆಳೆಗಾರರ ಆಪತ್ಭಾಂಧವ ಡಾ.ಎಂ.ಆರ್. ರವಿ ನಿವೃತ್ತಿ ಆಗುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದ ರೈತರ ಪರವಾಗಿ ಅಧಿಕಾರ ನಡೆಸಿದ್ದರು ಎಂದು ಬಹುತೇಕ ರೈತರು ನೆನೆಸಿಕೊಳ್ಳುತ್ತಾರೆ.ಜನಸ್ನೇಹಿ ಆಡಳಿತ ನಡೆಸಿದ್ದ ಡಾ.ಎಂ.ಆರ್.ರವಿ ವಿಶೇಷವಾಗಿ ಮಾವು ರೈತರು ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಅವರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡುವ ಮೂಲಕ ಮಾವು ರೈತರನ್ನು ಆಪತ್ಭಾಂಧವರಂತೆ…
ಶ್ರೀನಿವಾಸಪುರ:ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚರ್ ಕ್ಯಾಂಟರ್ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಭೀಕರ ಅಪಘಾತವಾಗಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.ದ್ವಿಚಕ್ರ ವಾಹನ ಡಿಕ್ಕಿ ಹೋಡೆದ ರಭಸಕ್ಕೆ ದ್ವಿಚಕ್ರ ವಾಹನಕ್ಕೆ ಬೆಂಕಿ ಸೋಕಿದ್ದು ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ದ್ವಿಚಕ್ರವಾಹನದಲ್ಲಿದ್ದ ಮೃತ ವ್ಯಕ್ತಿಗಳನ್ನು ಕೆಜಿಎಫ್ ತಾಲ್ಲೂಕು ಕದಿರಿಗಾನಕುಪ್ಪ ಗ್ರಾಮದ ನಿವಾಸಿ ರಘುಪತಿ (57) ಹಾಗೂ ಆಂಧ್ರದ ಚಿತ್ತೂರು ಜಿಲ್ಲೆಯ ನಕ್ಕನಪಲ್ಲಿ ಗ್ರಾಮದ ನಿವಾಸಿ ಕಾಳಪ್ಪಗೌಡ (53) ಎಂದು ಗುರುತಿಸಲಾಗಿದೆ.ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಮುಳಬಾಗಿಲು ಡಿವೈಎಸ್ಪಿ ಮನಿಷಾ, ಶ್ರೀನಿವಾಸಪುರ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರಾಚಾರಿ, ಹಾಗೂ ಸಬ್‌ಇನ್ಸ್‌ಪೆಕ್ಟರ್ ಜಯರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಲಾರ:ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಇಂದು ಸೋಮವಾರ ಮಾವು ಬೆಂಬಲ ಬೆಲೆ ನೋಂದಣಿಗೆ ಅವಕಾಶ ಕಲ್ಪಿಸಿ ಅವಧಿ ವಿಸ್ತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಕುಳಿತು ಬೆಳಗಿನಿಂದ ಪ್ರತಿಭಟನೆ ನಡೆಸಿದ್ದು ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಸಂಜೆ ಮುಬ್ಬುಗತ್ತಲೆಯಲ್ಲಿ ಜಿಲ್ಲಾಡಳಿತ ಭವನದ ಮೆಟ್ಟಿಲಿನ ಮೇಲೆ ಕುಳಿತ ಮಾವು ರೈತರು ಸರ್ಕಾರದ ನಿಲವು ಹಾಗು ಆಡಳಿತ ರೂಡ ರಾಜಕಾರಣಿಗಳ ನಿರ್ಲಕ್ಷ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.ಈ ಸಂದರ್ಭದಲ್ಲಿ ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ದಿ, ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ರೈತ ಮುಖಂಡ ಫಾರೂಖ್ ನಾಗರಾಜ್, ಅಭಿಲಾಷ್ ರೆಡ್ದಿ ಜಿಲ್ಲಾದ್ಯಂತ ಇರುವ ಮಾವು ಬೆಳೆಗಾರರು ಭಾಗವಹಿಸಿದ್ದಾರೆ.ಹೆದ್ದಾರಿ ತಡೆಗೆ ಮುಂದಾಗಿದ್ದ ಮಾವು ರೈತರುನೊಂದಣೆ ವಿಸ್ತರಣೆಗೆ ಅಗ್ರಹಿಸಿ ಶನಿವಾರ ಕೋಲಾರ ಜಿಲ್ಲಾದ್ಯಂತ ಮಾವು ಬೆಳೆಗಾರರು ಮತ್ತು ರೈತ ಸಂಘಟನೆಗಳು ಹೆದ್ದಾರಿ ತಡೆಗೆ ಮುಂದಾದ ಹಿನ್ನಲೆಯಲ್ಲಿ ಅವರನ್ನು ಪೋಲಿಸರು…
ನ್ಯೂಜ್ ಡೆಸ್ಕ್:ನಿರಂತರವಾಗಿ ಪರೀಕ್ಷೆ ಬರೆದರೂ ಸರ್ಕಾರಿ ಕೆಲಸ ಸಿಗದ ಹಿನ್ನಲೆಯಲ್ಲಿ 23 ವರ್ಷದ ಬಿ.ಟೆಕ್ ಚಿನ್ನದ ಪದಕ ವಿಜೇತ ಯುವಕ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದ ಗುಜೈನಿಯಲ್ಲಿ ದುರಂತ ಘಟನೆ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬಿಹಾರದ ಬಕ್ಸಾರ್‌ನ ಆನಂದ್ ಕುಮಾರ್ ಎಂದಿರುತ್ತಾರೆ.ಬಿಟೆಕ್ ಚಿನ್ನದ ಪದಕ ಪಡೆದಿದ್ದ2024 ರಲ್ಲಿ ಕಾನ್ಪುರದ ಪ್ರಮುಖ PSIT ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯಲ್ಲಿ ಉತ್ತರ ಪ್ರದೇಶಕ್ಕೆ ಮೂರನೆ ರ್‍ಯಾಂಕ್ ವಿಜೇತನಾಗಿ ಚಿನ್ನದ ಪದಕ ಪಡೆದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಸ್ಥನಾಗಿದ್ದ ಆದರೂ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ 50 ಕ್ಕೂ ಹೆಚ್ಚು ಬಾರಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಹಾಜರಾದರೂ ಫಲಿತಾಂಶ ಸಿಗದ ಹಿನ್ನಲೆಯಲ್ಲಿ ತೀವ್ರ ಆಘಾತಕ್ಕೆ ಒಳಾಗದ ಯುವಕ ಗುಜೈನಿಯಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಅಪ್ಪನಿಗೆ ಪದೇ ಪದೇ ಕ್ಷಮಿಸಿ ಎಂದು ಕೇಳಿದ್ದಾನೆ!ಸಾಯುವ ಮುನ್ನ ಯುವಕ ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ ತಂದೆಗೆ…


