ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ 20 ನೇ ಶತಮಾನದ ಆರಂಭದಲ್ಲಿ, ಮದ್ರಾಸ್ ಪ್ರೆಸಿಡೆನ್ಸಿ ಆಡಳಿತಾವಧಿಯಲ್ಲಿ ಸರ್ಕಾರಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರ ರಾಜಕೀಯ ರಂಗದಲ್ಲಿ ಬ್ರಾಹ್ಮಣರು ಪ್ರಾಬಲ್ಯ ಇತ್ತು.ದ್ರಾವಿಡ ಪಕ್ಷಗಳ ಉದಯಿಸುವ ಮೊದಲು,ರಾಜಗೋಪಾಲಾಚಾರಿ, ವೆಂಕಟರಾಮನ್ ಮತ್ತು ಟಿಟಿ ಕೃಷ್ಣಮಾಚಾರಿಯಂತಹ ಪ್ರಭಾವಿ ಬ್ರಾಹ್ಮಣ ವ್ಯಕ್ತಿಗಳು ತಮಿಳು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೇ3% ಪ್ರತಿಶತ ಬ್ರಾಹ್ಮಣರು ಉದ್ಯೋಗದಲ್ಲಿ ಶೇಕಡಾ 70 ಕ್ಕೂ ಹೆಚ್ಚು ಪಾಲು ಪಡೆದಿದ್ದಾರೆ ಎಂದು ವಿರೋಧಿಸಿ ಬ್ರಾಹ್ಮಣೇತರರಿಗೆ ನ್ಯಾಯ ಸೀಗಬೇಕು ಎಂಬ ಬೇಡಿಕೆಯೊಂದಿಗೆ, 1916 ರಲ್ಲಿ ಜಸ್ಟೀಸ್ ಪಾರ್ಟಿ ಉದ್ಭವಿಸಿತು ಪೆರಿಯಾರ್ ನಿಲವುಗಳನ್ನು ಬೆಂಬಲಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಂದ ದ್ರಾವಿಡ ಸಿದ್ಧಾಂತ ಬಲಗೊಂಡಿತು ಎನ್ನುತ್ತಾರೆ.
ಎಂ.ಜಿ.ಆರ್ ಅವಕಾಶ ನೀಡಿದ್ದರು.
ಎಂಜಿ ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದಾಗ,ಎಚ್.ವಿ. ಹಂಡೆ ಎಂಬ ಬ್ರಾಹ್ಮಣ ವ್ಯಕ್ತಿ ಆರೋಗ್ಯ ಸಚಿವರಾಗಿದ್ದರು, ಎಐಎಡಿಎಂಕೆ ಮುಖ್ಯಸ್ಥೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸ್ವತಃ ಬ್ರಾಹ್ಮಣರಾದರೂ,ತಮ್ಮ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಅವಕಾಶ ನೀಡಿರಲಿಲ್ಲ, ಪಕ್ಷದಲ್ಲಿ ಪ್ರಭಾವಿಯಾಗಿದ್ದ ಬ್ರಾಹ್ಮಣ ಸಮಾಜದ ವಿ. ಮೈತ್ರೇಯನ್ ಅವರನ್ನು ಜಯಲಲಿತಾ ಮೂರು ಬಾರಿ ರಾಜ್ಯಸಭೆಗೆ ಕಳಸಿದ್ದರೆ, ಜಯಲಲಿತಾ ತಮ್ಮ ರಾಜಕೀಯ ಸಲಹೆದಾರರನ್ನಾಗಿ ಬ್ರಾಹ್ಮಣ ಸಮಾಜದವರನ್ನು ನೇಮಿಸಿಕೊಂಡಿದ್ದರು ಎನ್ನುತ್ತಾರೆ.
ಬ್ರಾಹ್ಮಣರಿಗೆ ಟಿಕೆಟ್ ನೀಡದ ರಾಜಕೀಯ ಪಕ್ಷಗಳು:2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಬ್ರಾಹ್ಮಣ ಸಮುದಾಯಕ್ಕೆ ಸ್ಪರ್ದಿಸಲು ಟಿಕೆಟ್ ನೀಡಿರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸಹ ಬ್ರಾಹ್ಮಣರಿಗೆ ಟಿಕೆಟ್ ನಿರಾಕರಿಸಿದ್ದವು ಆದರೆ ವಿಜಯ್ ತಮ್ಮ ಪಕ್ಷದಿಂದ ಇಬ್ಬರು ಬ್ರಾಹ್ಮಣರಿಗೆ ಟಿಕೆಟ್ ನೀಡುವ ಮೂಲಕ ಬ್ರಾಹ್ಮಣ ಸಮಾಜದ ಪರವಾಗಿ ಇದ್ದೇವೆ ಎಂಬ ಸಂದೇಶ ನೀಡಿದ್ದರು. ಮೈಲಾಪುರ ಕ್ಷೇತ್ರದಿಂದ ವೆಂಕಟರಮಣನ್ಗೆ ಮತ್ತು ಪ್ರಖ್ಯಾತ ಪುಣ್ಯಕ್ಷೇತ್ರವಾದ ಶ್ರೀರಂಗಂ ಕ್ಷೇತ್ರದಿಂದ ರಮೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು ಮೈಲಾಪುರ ಕ್ಷೇತ್ರದಲ್ಲಿ ವೆಂಕಟ ರಮಣನ್ 28,972 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರೆ, ಇವರ ಸಮೀಪದ ಪ್ರತಿಸ್ಪರ್ದಿ ಡಿಎಂಕೆ ಪಕ್ಷದ ವೇಲು ಎರಡನೆ ಸ್ಥಾನಕ್ಕೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳುಸೆಲ್ವೈ ಸೌಂದರರಾಜನ್ 32,328 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ.ಶ್ರೀರಂಗಂ ಕ್ಷೇತ್ರದಿಂದ ಸ್ಪರ್ದಿಸಿದ್ದ ರಮೇಶ್ 33590 ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ದಿ ಡಿಎಂಕೆ ಪಕ್ಷದ ದುರೈರಾಜ್ ಅವರನ್ನು ಸೋಲಿಸಿದ್ದಾರೆ.
ಶಿಕ್ಷಣ ಮಂತ್ರಿಯಾದ ಬ್ರಾಹ್ಮಣ ಶಾಸಕ
ವೆಂಕಟ ರಮಣನ್ಗೂ ವಿಜಯ್ ಅವರ ಸಂಪುಟದಲ್ಲಿ ಶಿಕ್ಷಣ ಮತ್ರಿ ಸ್ಥಾನ ಸಿಕ್ಕಿದೆ. ಇದರೊಂದಿಗೆ, ಜಯಲಲಿತಾ ಅವರ ಮರಣದ ನಂತರ ತಮಿಳುನಾಡಿನಲ್ಲಿ ಸಚಿವ ಹುದ್ದೆಯನ್ನು ಅಲಂಕರಿಸಿದ ಮೊದಲ ಬ್ರಾಹ್ಮಣ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನು ಓದಿ



