ದೆಹಲಿ ಮಾದರಿಯಲ್ಲಿ ಬೆಂಗಳೂರಿನಿಂದ ಕೋಲಾರ ,ತುಮಕೂರು,ಮೈಸೂರು ಸೇರಿದಂತೆ ಇನ್ನೂ ಹಲವು ನಗರಗಳಿಗೆ ವಿಸ್ತರಿಸುವ ಆಲೋಚನೆ ಇರುವ ಸೆಮಿ-ಹೈ-ಸ್ಪೀಡ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದ್ದು ತಾಂತ್ರಿಕವಾಗಿ ಆರ್‌ಆರ್‌ಟಿಎಸ್ ಎಂಬುದು ಉಪನಗರ ರೈಲಿನ ಭವಿಷ್ಯದ ಹಂತವಾಗಿದೆ. ನಮ್ಮ ಮೂಲಸೌಕರ್ಯ ಮತ್ತು ಸಿಗ್ನಲಿಂಗ್ ವಿನ್ಯಾಸವನ್ನು ಹೆಚ್ಚಿನ ವೇಗದ ಕಾರ್ಯಾಚರಣೆಗೆ ಬೆಂಬಲಿಸುವ ರೀತಿಯಲ್ಲಿ ಯೋಜಿಸಲಾಗುತ್ತಿದೆ,ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ. ನ್ಯೂಜ್ ಡೆಸ್ಕ್:ಬೆಂಗಳೂರು ಉಪನಗರ ರೈಲು ಯೋಜನೆ(Bengaluru Suburban Railway Plan) ನಾಲ್ಕು ಮಾರ್ಗಗಳಲ್ಲಿ ಸಂಚರಿಸಲಿದ್ದು ಇದರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.1980 ರಲ್ಲಿ ರೂಪುಗೊಂಡ ಈ ಯೋಜನೆಗೆ 2022ರಲ್ಲಿ ರೆಕ್ಕೆಪುಕ್ಕ ಬಂತಾದರೂ ನಂತರದಲ್ಲಿ ಮುಂದುವರಿದಿರಲಿಲ್ಲ, ಭೂ ಸ್ವಾಧೀನ, ಹಣಕಾಸು ಸಮಸ್ಯೆ, ರೈಲ್ವೆ ಸಚಿವಾಲಯದ ಜತೆಗಿನ ಸಮನ್ವಯದ ಕೊರತೆ, ಯೋಜನೆ ಅನುಷ್ಠಾನಕ್ಕೆ ಪರಿಣತ ತಂಡದ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಯೋಜನೆ ನಿಂತಲ್ಲೇ ನಿಂತು ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ 148.3 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ…
Author: Srinivas_Murthy
ಚಿಂತಾಮಣಿ:ಕರ್ನಾಟಕ ವಿಧಾನಸಭೆ ಮಹಿಳಾ ಶಾಸಕಿಯರಾದ ಮಂಜುಳಾ ಅರವಿಂದ ಲಿಂಬಾವಳಿ,ಶಶಿಕಲಾ ಜೊಲ್ಲೆ, ಹಾಗು ಭಾಗೀರಥಿ ಮುರುಳ್ಯ ಮೂವರು ಶಾಸಕಿಯರು ಚಿಂತಾಮಣಿಯ ಕೈಲಾಸಗಿರಿ ಬೆಟ್ಟದಲ್ಲಿ ಪ್ರಸಿದ್ದ ಗುಹಾಂತರ ದೇವಾಲಯವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳ ಶಿವ),ಜಗದಾಂಬೆ(ಪಾರ್ವತಿ ದೇವಿ) ಮತ್ತು ಶ್ರೀ ವಲ್ಲಭ ಗಣಪತಿ ದೇವರ ದರ್ಶನ ಪಡೆದರು.ಈ ಕುರಿತು ಹಿರಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವು ಭೇಟಿ ನೀಡಿದ್ದ ಕೈಲಾಸಗಿರಿ ಬೆಟ್ಟದ ಬಗ್ಗೆ ಹಂಚಿಕೊಂಡಿದ್ದು ಪ್ರಕೃತಿಯ ಮಡಿಲಿನಲ್ಲಿ ಮಾನವ ನಿರ್ಮಿತ ಗುಹಾಂತರ ದೇವಾಲಯವಾಗಿದ್ದು ‘ಅಂಬಾಜಿದುರ್ಗ’ ಪರ್ವತ ಶ್ರೇಣಿಯ ಕಲ್ಲಿನ ಬೆಟ್ಟವನ್ನು ಕೊರೆದು ಅದ್ಭುತವಾಗಿ ಬೃಹದಾಕಾರದ ಗುಹಾಂತರ ದೇವಾಲಯಗಳ ಸಮುಚ್ಛಯವನ್ನು ನಿರ್ಮಿಸಲಾಗಿದೆ ಇಲ್ಲಿ ಗಿರಿಜಾ ಕಲ್ಯಾಣದಂತ ಸುಂದರ ಶಿಲ್ಪಕಲೆಗಳಿವೆ ಎಂದು ವರ್ಣಿಸಿದ್ದಾರೆ. ನಂತರ ಅವರು ಕೈವಾರದ ಐತಿಹಾಸಿಕ ಪುಣ್ಯಕ್ಷೇತ್ರ ಹಾಗೂ ಆಧ್ಯಾತ್ಮಿಕ ತಾಣವಾದ ಶ್ರೀ ಕೈವಾರ ಯೋಗೀ ತಾತಯ್ಯ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆದಿರುತ್ತಾರೆ.
ಶ್ರೀನಿವಾಸಪುರ:ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರು ತಲುಪುತ್ತಿದ್ದ ಚನೈ-ಮೈಸೂರು ಮಾರ್ಗದ ಸುಮಾರು ಹದಿನೈದು ರೈಲುಗಳು ಒಂದೇ ರಾತ್ರಿ ಕೋಲಾರ-ಶ್ರೀನಿವಾಸಪುರ-ಚಿಂತಾಮಣಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ.ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವಿನ ರೈಲ್ವೆ ಮೂಲಸೌಕರ್ಯ ನವೀಕರಣಗಳಿಂದಾಗಿ, ನೈಋತ್ಯ ರೈಲ್ವೆ ಜೂನ್ 6 ಮತ್ತು ಜೂನ್ 8 ರ ನಡುವೆ ಹಲವಾರು ರೈಲು ಸೇವೆಗಳ ಕಾರ್ಯಾಚರಣೆಯನ್ನು ಪರಿಷ್ಕರಿಸಿದ ಪರಿಣಾಮ ರೈಲು ಸೇವೆಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ ಹಿನ್ನಲೆಯಲ್ಲಿ ಕೆಲವು ರೈಲುಗಳನ್ನು ಅವುಗಳಲ್ಲಿ ಪ್ರಮುಖವಾದ ಚನೈ-ಮೈಸೂರು ಶತಾಬ್ದಿ ಎಕ್ಸಪ್ರೆಸ್, ವಂದೇಭಾರತ್, ಪುದುಚೆರಿ-ದಾದರ್ ಚಾಲುಕ್ಯ ಎಕ್ಸಪ್ರೆಸ್, ಧಾನಪುರ,ತಿರುಪತಿ-ಮೈಸೂರು, ಕನ್ಯಾಕುಮಾರಿ ಎಕ್ಸ್‌ಪ್ರೆಸ್, ತಿರುಪತಿ ಎಕ್ಸ್‌ಪ್ರೆಸ್, ವಂದೇ ಭಾರತ್, ಚೆನ್ನೈ-ಬೆಂಗಳೂರು ರೈಲುಗಳು, ಹುಬ್ಬಳ್ಳಿ ಎಕ್ಸ್‌ಪ್ರೆಸ್ ಮತ್ತು ಎರ್ನಾಕುಲಂ-ಬೆಂಗಳೂರು ರೈಲುಗಳಂತಹ ಸೇವೆಗಳ ರೈಲುಗಳನ್ನು ಬಂಗಾರಪೇಟೆಯಿಂದ ಕೋಲಾರ ಶ್ರೀನಿವಾಸಪುರ ಚಿಂತಾಮಣಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ ಎನ್ನಲಾಗಿದ್ದು ಇಡಿ ರಾತ್ರಿ ವೇಗದ ರೈಲುಗಳ ಒಡಾಟ ಅದರ ಕೂಗು ರೈಲ್ವೆ ನೀಲ್ದಾಣದ ಸುಮುತ್ತಲಿನ ಜನರನ್ನು ಒಂದಡೆ ಭಯಬ್ರಾಂತರನ್ನಾಗಿಸಿದೆ. ಮತ್ತೊಂದಡೆ ಆಶ್ಚರ್ಯ ಚಕಿತರನ್ನಾಗಿಸಿದೆ.
ಆಂಧ್ರಪರದೇಶ ಸರ್ಕಾರ ಅಲ್ಲಿನ ಮೂರು ಜಿಲ್ಲೆಗಳಲ್ಲಿ ತೋತಾಪುರಿ ಮಾವಿನ ಕಾಯಿಗೆ ಪ್ರತಿ ಕೆಜಿಗೆ 4 ರೂ ಬೆಂಬಲ ಬೆಲೆ ಘೋಷಿಸಿದೆ.ಆಂಧ್ರದ ಕೃಷಿ ಸಚಿವ ಅಚ್ಚಂನಾಯುಡು ಗುರುವಾರ ತಡ ಸಂಜೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಆಂಧ್ರದ ಮೂರು ಜಿಲ್ಲೆಗಳಾದ ಅನ್ನಮಯ್ಯ,ಚಿತ್ತೂರು ಹಾಗು ತಿರುಪತಿ ಜಿಲ್ಲೆಗಳ ಮಾವು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ನ್ಯೂಜ್ ಡೆಸ್ಕ್:ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ಆಂಧ್ರದ ರೈತರು ಮೂಲತಃ ಚಿತ್ತೂರು ಜಿಲ್ಲೆಯವರಾದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.ಸ್ವಂತ ಜಿಲ್ಲೆಯ ಮಾವು ಬೆಳೆಗಾರರನ್ನು ಕಾಪಾಡುವಂತೆ ಪ್ರತಿ ಕೆಜಿಗೆ 12 ರೂಪಾಯಿಂದ 16 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಅಗ್ರಹಿಸಿದ್ದರು.ಇದಕ್ಕೆ ಸ್ಪಂದಿಸಿರುವ ಆಂಧ್ರ ಸರ್ಕಾರ ತೋತಾಪುರಿ ಮಾವಿನಕಾಯಿಗೆ ಕೆಜಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಸಾವಿರಾರು ಮಾವಿನ ರೈತರಿಗೆ ಅಲ್ಪ ಪಟ್ಟದ ಪರಿಹಾರ ಸಿಕ್ಕಂತಾಗಿದೆ ಮಾವಿನಕಾಯಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಸರ್ಕಾರದ ನಿರ್ಧಾರ ನಿರ್ಣಾಯಕವಾಗಲಿದೆ ಎಂದು…
ಶ್ರೀನಿವಾಸಪುರ:ವಾರಂತ್ಯದ ಒಳಗಾಗಿ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಘೋಷಿಸಿದರು.ಇಂದು ಮಂಗಳವಾರ ಕಾರ್ಮಿಕ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು,ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರೂಪಾಯಿಗಳು ಮಾತ್ರ ಬೆಳೆಗಾರನಿಗೆ ಉಳಿಯುತ್ತಿದೆ.ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯಗಳ ಸರಮಾಲೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆಗಾರನ ಕೈ ಹಿಡಿಯುವ ಅವಶ್ಯಕತೆ ಇದೆ ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡಬೇಕಿದೆ ಮಾವು ಕೊಯ್ಲು…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಪಾಲಿಟೆಕ್ನಿಕ್ ಹಿಂಭಾಗದ ಒಂಟಿ ಮನೆಯಲ್ಲಿ ಈಗ್ಗೆ ಇಪ್ಪತ್ತು ದಿನಗಳ ಹಿಂದೆ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ ಮನೆಯಲ್ಲಿದ್ದ ಹಾಗು ಆಕೆ ಧರಿಸಿದ್ದ ಚಿನ್ನದ ಆಭರಣಗಳು, ಮೊಬೈಲ್ ಫೋನ್ ದೋಚಿಕೊಂಡು ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರು ಸಮೇತ ಖದೀಮರು ಪರಾರಿಯಾಗಿದ್ದರು.ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಿಸಿಕೊಂಡ ಶ್ರೀನಿವಾಸಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಕಳುವಾದ ಆಭರಣ, ಮೊಬೈಲ್ ಫೋನ್ ಹಾಗೂ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್, ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿಶಂಕರ್ ಮಾರ್ಗದರ್ಶನದಲ್ಲಿ ಶ್ರೀನಿವಾಸಪುರ ವೃತ್ತ ನಿರೀಕ್ಷಕ ಶಂಕರಾಚಾರ್ಯ ಕಾರ್ಯಚರಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಸಹಕಾರ ಪಡೆದು ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸಲಾಗಿದ್ದು ಬಂಧಿತರಿಂದ ಕಳುವಾಗಿದ್ದ ಚಿನ್ನಾಭರಣ,ಮೊಬೈಲ್ ಫೋನ್ ಹಾಗೂ ಸುಮಾರು ಎರಡು ಲಕ್ಷ ರೂ. ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಕಳವು ಮಾಡಿದ್ದ ಆಭರಣಗಳನ್ನು ಕೋಲಾರದ ಕುಂಬಾರಪೇಟೆಯಲ್ಲಿರುವ ಚಿನ್ನಾಭರಣ ವ್ಯಾಪಾರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.…
ಬೆಂಗಳೂರು:ರಾಜಧಾನಿ ಬೆಂಗಳೂರು ಜನತೆಯ ದಿನನಿತ್ಯದ ಸಂಚಾರದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋದ ಪ್ರಸ್ತಾವಿತ ಕೆಂಪು ಲೈನ್ (Red Line)ಹೆಬ್ಬಾಳ-ಸರ್ಜಾಪುರ ಮಾರ್ಗವಾಗಿದ್ದು ಸುಮಾರು 37 ಕಿ.ಮೀ ಉದ್ದದ ಈ ಡಬಲ್ ಡೆಕ್ಕರ್ ಕಾರಿಡಾರ್ ಯೋಜನೆಯು ವೆಚ್ಚ ಕಡಿತ ಮತ್ತು ಪರಿಷ್ಕರಣೆ ಹಂತದಲ್ಲಿದೆ.ಇದು ಬೆಂಗಳೂರು ನಗರದ ಉತ್ತರ ಭಾಗದ ಕೈಗಾರಿಕಾ ಪ್ರದೇಶಗಳು ಹಾಗೂ ಆಗ್ನೇಯ ಭಾಗದ ಐಟಿ (IT) ಕಾರಿಡಾರ್ ನಡುವಿನ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ ಎನ್ನುತ್ತಾರೆ ತಜ್ಞರು.ಕೆಂಪು ಮಾರ್ಗ ಎಂದೂ ಕರೆಯಲ್ಪಡುವ 36.59 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಬರಲಿದ್ದು ಇದರಲ್ಲಿ 11 ಸುರಂಗ ಮಾರ್ಗದ ನಿಲ್ದಾಣಗಳಾಗಿವೆ.ಈ ಪೈಕಿ 14.45 ಕಿ.ಮೀ. ಸುರಂಗ ಮಾರ್ಗ ಮತ್ತು 22.14 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುತ್ತದೆ.ಡಿಪಿಆರ್‌ಗೆ ಸಿದ್ಧತೆ:ಈ ಮಾರ್ಗದ ಭೂತಾಂತ್ರಿಕ ಅಧ್ಯಯನಕ್ಕಾಗಿ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದ್ದು ಇದಕ್ಕಾಗಿ 6.86 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಗುತ್ತಿಗೆದಾರರು ಕಾರ್ಯಾದೇಶ ಪಡೆದ 150 ದಿನಗಳಲ್ಲಿಈ ಅಧ್ಯಯನ…
ಭೈರನದೊಡ್ಡಿ(ಮಾಲೂರು):ನಾಮಧಾರಿ ನಗರ್ತ ಸಮುದಾಯ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿಯಾಗಿಲ್ಲ ಹಿಂದುಳಿದ ವರ್ಗ ಎಂಬುದಾಗಿ ಗುರುತಿಸುವಲ್ಲಿ ಸರ್ಕಾರ ಎಡವುತ್ತಿದೆ ಎಂದು ರಾಜ್ಯ ನಗರ್ತ ಸಂಘದ ಅಧ್ಯಕ್ಷ ಸಾಯಿರಾಮ್ ಪ್ರಸಾದ್ ಹೇಳಿದರು. ಅವರು ಮಾಲೂರಿನ ಭೈರನದೊಡ್ಡಿಯ ನಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ನಾಮಧಾರಿ ನಗರ್ತ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಇವತ್ತಿನ ವ್ಯವಸ್ಥೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾಮಾಜಿಕ ನ್ಯಾಯ ಪಡೆಯಲು ನಮ್ಮ ಸಮುದಾಯಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಕೆಲವು ತಾಲೂಕುಗಳಲ್ಲಿ ಸಮುದಾಯದ ಬಂಧುಗಳು ಸಾಮಾಜಿಕ ಹಾಗು ಶೈಕ್ಷಣಿಕ ತಾರತಮ್ಯಕ್ಕೆ ಒಳಗಾಗಿದ್ದಾರೆ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ ಎಂದರು.ಕೋಲಾರ ಜಿಲ್ಲಾ ನಾಮಧಾರಿ ಫೌಂಡೇಶನ್ ಕಾರ್ಯಧ್ಯಕ್ಷ ಹಾಗು ನಿವೃತ್ತ ಪೌರಾಯುಕ್ತ ರಾಮಪ್ರಕಾಶ್ ಮಾತನಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪ್ರಾತಿನಿಧ್ಯತೆ ಪಡೆಯಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಿಲ್ಲ ಇದಕ್ಕಾಗಿ ಜನಾಂಗದ ಭವಿಷ್ಯದ ದೃಷ್ಠಿಯಿಂದ ತಜ್ಞರ ಸಲಹೆ ಸೂಚನೆ ಪಡೆದು ಮುಂದಿನ ಹೋರಾಟ ರೂಪಿಸುವ ಅಗತ್ಯತೆ ಇದೆ ಎಂದರು.ರಾಜ್ಯದಲ್ಲಿನ ನಾಮಧಾರಿ ನಗರ್ತ ಸಮಾಜದ ಎಲ್ಲಾ ಸಂಘಟನೆಗಳು ಭವಿಷ್ಯದ ದೃಷ್ಟಿಯಲ್ಲಿ ಒಗ್ಗೂಡಿ…
ನ್ಯೂಜ್ ಡೆಸ್ಕ್:ಶ್ರೀಶೈಲ ಕ್ಷೇತ್ರದಲ್ಲಿ ಇರುವ ರಹಸ್ಯ ಕ್ಷೇತ್ರವಾದ ಮಾತೆ ಇಷ್ಟಕಾಮೇಶ್ವರಿ ಅಮ್ಮನವರು ಮನುಷ್ಯನ ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎನ್ನುತ್ತಾರೆ.ಶ್ರೀಶೈಲದಿಂದ ಸುಮಾರು 21 ಕಿಮೀ ದೂರದಲ್ಲಿ ನಲ್ಲಮಲ್ಲ ಕಾಡಿನಲ್ಲಿರುವ 8 ಅಥವಾ 9 ನೇ ಶತಮಾನದ ಪ್ರಾಚೀನ ಕಾಲಕ್ಕೆ ಸೇರಿದ ದೇವಾಲಯ.ಇಷ್ಟ+ಕಾಮ+ ಈಶ್ವರಿ ಈ ಮೂರು ಪದ ಸೇರಿ, ಆಕೆ ಇಷ್ಟಕಾಮೇಶ್ವರಿ ದೇವಿ ಆಗಿದ್ದಾಳೆ. ಇಷ್ಟ ಅಂದರೆ ಮನದ ಆಸೆ, ಕಾಮ ಅಂದರೆ ಕೋರಿಕೆ, ಈಶ್ವರಿ ಅಂದರೆ ದೇವತೆ. ಮನದಲ್ಲಿ ಇರುವ ಸದುದ್ದೇಶದ ಆಸೆಯ ಕೋರಿಕೆಗಳನ್ನು ಈಡೇರಿಸುವುದಕ್ಕೆ ಅನುಗ್ರಹ ನೀಡುವ ದೇವತೆ ಆಕೆ ಆದ್ದರಿಂದ ಇಷ್ಟಕಾಮೇಶ್ವರಿ ಎಂದು ಕರೆಯಲಾಗುತ್ತದೆ.ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬಿಕಾ ಅಮ್ಮನವರು ನೆಲೆಸಿರುವ ಶ್ರೀ ಶೈಲ ಕ್ಷೇತ್ರದಲ್ಲಿ ಅನೇಕ ಆಧ್ಯಾತ್ಮಿಕ ರಹಸ್ಯಗಳ ನೆಲೆ ಎನ್ನಬಹುದು.ಪುರಾಣಗಳ ಪ್ರಕಾರ, ಲಲಿತಾ ತ್ರಿಪುರ ಸುಂದರಿ ದೇವಿಯ ಶಕ್ತಿಯುತ ರೂಪವೇ ಇಷ್ಟಕಾಮೇಶ್ವರಿದೇವಿ ಎನ್ನುತ್ತಾರೆ. ಭಕ್ತರಿಗೆ ಅರಿವಿಲ್ಲದೆ ಮೂಡುವ ದುರಾಸೆಗಳನ್ನು ಹತೋಟಿಗೆ ತಂದು, ಅವರ ಹಿತಕ್ಕೆ ಪೂರಕವಾದ ‘ಇಷ್ಟಗಳನ್ನು’ ಮಾತ್ರ ಈ ತಾಯಿ ಕರಣಿಸುತ್ತಾಳೆ. ಆದಿ…
ಶ್ರೀನಿವಾಸಪುರ: ಒಂದು ಟನ್ ಮಾವಿನಕಾಯಿಗೆ ಹತ್ತು ಸಾವಿರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರಿಗೆ ಮಾವು ಬೆಳೆಗಾರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಮಾವು ಬೆಳೆಗಾರರು ಮಂಗಳವಾರ ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರ ಕಚೇರಿಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಮಾವು ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರರು, PDPS ಸ್ಕೀಮಿನಲ್ಲಿ ಮಾವಿನಕಾಯಿಗೆ ಒಂದು ಟನ್ ಗೆ ಕನಿಷ್ಠ 10000ರೂಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಮತ್ತು ಒಂದು ರೈತನಿಗೆ ಸುಮಾರು 30 ಟನ್ನು ರವರಿಗೂ ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಕೂಡ ಮನವಿ ಮಾಡಿರುತ್ತಾರೆ.ಇದಕ್ಕೆ ಸ್ಪಂದಿಸಿದ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರು ಸರ್ಕಾರದ ಹಂತದಲ್ಲಿ ಮಾವು ಬೆಳೆಗಾರರ ಸಮಸ್ಯೆಯನ್ನು ಚರ್ಚಿಸಿ ಸರ್ಕಾರದ ಅನುಮತಿ ಪಡೆದು ಕೇಂದ್ರ ಸರ್ಕಾರದ ಗಮನಕ್ಕೆ ತಂದು…


