ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆ ತರಾಕಾರಿ ಅಂಗಡಿಗಳ ವೃತ್ತದಲ್ಲಿ ಅತಿವೇಗದಿಂದ ಬಂದ ದ್ವಿಚಕ್ರವಾಹನ ಸವಾರರು ಡಿಕ್ಕಿಯಾಗಿ ಮತ್ತೊಂದು ದ್ವಿಚಕ್ರವಾಹನದಲ್ಲಿ ಹೋಗಿತಿದ್ದ ಮಹಿಳೆ ಹಾಗು ವಾಹನ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಬೆಳೆಗ್ಗೆ ನಡೆದಿರುತ್ತದೆ.ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.ಗಾಯಗೊಂಡ ವ್ಯಕ್ತಿಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನೌಕರಿ ಮಾಡುವ ವೇಣು ಎಂದು ಗುರುತಿಸಲಾಗಿದೆ.

ಗಾಯಾಳು ವೇಣು ಮಾರುಕಟ್ಟೆಗೆ ಹೋಗಲು ನೆಹರು ರಸ್ತೆಯಿಂದ ಆಜಾದ್ ರಸ್ತೆ ಮೂಲಕ ಹೋಗಲು ತರಕಾರಿ ಮಾರುಕಟ್ಟೆ ವೃತ್ತದಿಂದ ಸಾಗುತ್ತಿರುವಾಗ ಎಂ.ಜಿ.ರಸ್ತೆಯಲ್ಲಿ ಮುಳಬಾಗಿಲು ವೃತ್ತದ ಕಡೆಯಿಂದ ಬಂದಂತ ಇಬ್ಬರು ಯುವಕರಿದ್ದ ಪಲ್ಸರ್ ಬೈಕ್ ಅತಿಯಾದ ವೇಗದಿಂದ ಬಂದು ವೇಣು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೋಡೆದ್ದಿರುತ್ತಾರೆ.ಗುದ್ದಿದ ರಭಸಕ್ಕೆ ವೇಣು ಅಜಾದ್ ರಸ್ತೆಯಲ್ಲಿ ತರಕಾರಿ ಅಂಗಡಿಗಳ ಬಳಿ ಇಟ್ಟಿದ್ದ ಕಲ್ಲುಗಳ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟಾಗಿದೆ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.ಅತಿಯಾದ ವೇಗದಿಂದ ಬಂದ ಯುವಕರಿದ್ದ ಪಲ್ಸರ್ ಬೈಕ್ ಎಂ.ಜಿ.ರಸ್ತೆಯಲ್ಲಿನ ತರಕಾರಿ ಅಂಗಡಿಯ ತೆಂಗಿನಕಾಯಿ ಸ್ಟಾಂಡ್ ಗುದ್ದಿ ಮೇಲಕ್ಕೆ ಎಗುರಿ ಬಿದಿದ್ದು ದ್ವಿಚಕ್ರವಾಹನದಲ್ಲಿದ್ದ ಯುವಕರು ಗಾಯಗೊಂಡಿದ್ದಾರೆ.
ಎಂ.ಜಿ.ರಸ್ತೆಯಲ್ಲಿ ಅಪಘಾತ ನಿರಂತರ
ಎಂ.ಜಿ.ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಡುವಿನ ಅಪಘಾತ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ, ಕೆಲ ಸಂದರ್ಭಗಳಲ್ಲಿ ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ. ಆದರೂ ಪೋಲಿಸ್ ಇಲಾಖೆ ಯಾವುದೆ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಪಟ್ಟಣದ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯಲ್ಲಿ ದಿನೆ ದಿನೆ ವಾಹನ ದಟ್ಟಣೆ ಹೆಚ್ಚುತ್ತಿದೆ ರಸ್ತೆ ಉದ್ದಕ್ಕೂ ಪುಟ್ಪಾತ್ ಅತಿಕ್ರಮ ಆಗಿದ್ದರೂ ಪೋಲಿಸ್ ಇಲಾಖೆ ಆಗಲಿ ಪುರಸಭೆಯವರಾಗಲಿ ಅತಿಕ್ರಮಣ ತೆರವು ಮಾಡುವ ಕಾರ್ಯ ಮಾಡುತ್ತಿಲ್ಲ ಪವನ್ ಆಸ್ಪತ್ರೆ ವೃತ್ತ,ಇಂದಿರಾಭವನ್ ವೃತ್ತ,ವಿವೇಕಾನಂದ ವೃತ್ತ ,ತರಕಾರಿ ಮಾರುಕಟ್ಟೆ ವೃತ್ತ ಹಾಗು ಮುಳಬಾಗಿಲು ವೃತ್ತಗಳಲ್ಲಿ ತಿರವು ಹಾಗು ವೃತ್ತ ಇರುವ ಸೂಚನಾ ಫಲಕಗಳು ಮತ್ತು ಸೂಕ್ತ ರಸ್ತೆ ಪಟ್ಟಿಗಳನ್ನು ಹಾಕಿಲ್ಲ ಅಪಘಾತಗಳ ತಡೆಗಾಗಿ ಹಳದಿ ಬ್ಲಿಂಕರ್, ರಸ್ತೆ ಉಬ್ಬುಗಳು ಸೇರಿದಂತೆ ಇತರೆ ಸೂಚನಾ ಫಲಕಗಳ ಅಳವಡಿಕೆ ಮಾಡಿಲ್ಲ ವಾಹನ ಚಾಲಕರಿಗೆ ತಿಳಿಯವ ರೀತಿಯಲ್ಲಿ ಸುಗಮ ಸಂಚಾರಕ್ಕೆ ಅನಕೂಲ ಆಗುವಂತೆ ಫಲಕಗಳನ್ನು, ಸೂಕ್ತ ಸ್ಥಳಗಳಲ್ಲಿ ಜೀಬ್ರ ಗುರುತುಗಳನ್ನು ಆಳವಡಿಸಿದರೆ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಸಾರ್ವಜನಿಕರು.



