ನ್ಯೂಜ್ ಡೆಸ್ಕ್:ಸರ್ಕಾರಿ ಕೆಲಸ ಹಾಗು ಹಣಕ್ಕಾಗಿ ಕಾನೂನು ವಿದ್ಯಾರ್ಥಿನಿಯೊಬ್ಬಳು ಹೆತ್ತ ತಾಯಿಯನ್ನೇ ಕೊಂದು ಪೊಲೀಸರ ಅತಿಥಿಯಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕಳೆದ ವರ್ಷ ಆಕೆ ತನ್ನ ತಂದೆಯನ್ನೂ ಕೊಂದಿರಬಹುದು ಎಂದು ಆಕೆಯ ತಾಯಿಯ ಸಹೋದರ ರಾಕೇಶ್ ಶರ್ಮಾ ( ಮಾಮ) ಆರೋಪಿಸಿದ್ದಾರೆ. ಜೈಪುರ ನ್ಯಾಯಾಲಯದಲ್ಲಿ ಕೋರ್ಟ್ ಮಾಸ್ಟರ್ ಆಗಿದ್ದ ನೀರಜ್ ಶರ್ಮಾ,ಅವರ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದುಕೊಂಡಿದ್ದರು.
ತಂದೆಯನ್ನು ಕೊಂದ ಪಾತಕಿ!
ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಕೆಯ ಮಗಳು ಆಯುಷಿಯನ್ನು ಬಂಧಿಸಿದ್ದು ಆರೋಪಿ ಆಯುಷಿ ತನ್ನ ಹೆತ್ತು ಹೊತ್ತು ಸಾಕಿದ ಅಪ್ಪ ವಿಜಯ್ ಶರ್ಮಾರಿಗೆ ಕಾರು ಅಪಘಾತ ಮಾಡಿಸಿ ಗಂಭೀರವಾಗಿ ಗಾಯಗೊಂಡು ದೀರ್ಘಕಾಲದ ಅನಾರೋಗ್ಯಕ್ಕೆ ಈಡಾಗಿ ಬ್ರೇನ್ ಸ್ಟೋಕ್ ಗೆ ಒಳಗಾಗಿದ್ದರು ಅವರನ್ನು ಮನೆಗೆ ಕರೆತಂದಾಗ ಅವರ ಅನೇಕ ಆಂಗಾಂಗಗಳು ವಿಫಲವಾಗಿತ್ತು ಇದನ್ನೆ ಬಳಸಿಕೊಂಡ ಆರೋಪಿ ತನ್ನ ತಂದೆಗೆ ನೀಡಲಾಗುತ್ತಿದ್ದ ಆಹಾರ ಟ್ಯೂಬ್ ಅನ್ನು ತೆಗೆದು ಸಾವಿಗೆ ಕಾರಣಳಾಗಿದ್ದಾಳೆ ಎಂದು ಆರೋಪಿ ತಾಯಿ ಸಹೋದರ ರಾಕೇಶ್ ಶರ್ಮಾ ಆರೋಪಿಸಿದ್ದಾರೆ.ಪೋಲಿಸ್ ತನಿಖೆಯಲ್ಲೂ ಅಪಘಾತ ಮಾಡಿಸಿದ್ದು ಮಗಳೇ ಎಂಬುದು ಹೊರಬಂದಿದೆಯಂತೆ.
ಆರೋಪಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ
ಅಂತಿಮ ವರ್ಷದ LLB ವಿದ್ಯಾರ್ಥಿನಿ ಆಯುಷಿ, ತನ್ನ ಸೋದರಸಂಬಂಧಿ ಬಲರಾಮ್ ಮೂಲಕ 7 ಲಕ್ಷ ಕೊಟ್ಟು ಸುಫಾರಿ ಹಂತಕರನ್ನು ನೇಮಿಸಿಕೊಂಡು ತಾಯಿಯನ್ನು ಕೊಂದು ರಸ್ತೆ ಅಪಘಾತದಂತೆ ಬಿಂಬಿಸುವುದು ಆಕೆಯ ಯೋಜನೆಯಾಗಿತ್ತು. ಆಯುಷಿ ತನ್ನ ತಾಯಿಯನ್ನು ಕೊಂದು ಸರ್ಕಾರಿ ಕೆಲಸ ಪಡೆಯಲು ಬಯಸಿದ್ದಲ್ಲದೇ ಕುಟುಂಬದ ಆಸ್ತಿಯ ಮೇಲೆ ಕಣ್ಣು ಹಾಕಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



