ಶ್ರೀನಿವಾಸಪುರ:ಇಕ್ಕಟಿನ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಚಿಂತಾಮಣೆಯಿಂದ ಐಸ್ ಕ್ರಿಮ್ ಮಾರುವ ವಾಹನದಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದ ಮೂಲಕ ಮುಳಬಾಗಿಲು ಕಡೆ ಹೋಗಲಾಗುತ್ತಿತ್ತು.ವಾಹನದಲ್ಲಿದ್ದ ಹಸುವೊಂದು ಅಬ್ಬರಿಸುತ್ತ ಇದ್ದ ಬಗ್ಗೆ ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದ್ದಾರೆ. ಸಣ್ಣ ಇಕ್ಕಾಟಾದ ಜಾಗದ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ಅನುಮಾನಗೊಂಡು ವಾಹನ ಸುತ್ತುವರೆದು ಪ್ರಶ್ನಿಸಿದ್ದಾರೆ.ಹಸುಗಳೊಂದಿಗೆ ವಾಹನದಲ್ಲಿದ್ದವರು ನೀಡುತ್ತಿದ್ದ ಹೇಳಿಕೆಗಳು ಅನುಮಾನ್ಪದ ರೀತಿಯಲ್ಲಿದ್ದು ಜನರು ಸಂಶಯಗೊಂಡು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ಪಿಸ್ಸೈ ಜಯರಾಮ್ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಅವುಗಳನ್ನು ಕೋಲಾರದ ಅರಾಬಿಕೊತ್ತನೂರು ಬಳಿ ಇರುವ ಗೋಶಾಲೆಗೆ ರವಾನಿಸಲಾಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



