ಶ್ರೀನಿವಾಸಪುರ:ರಾಜ್ಯ ಲೋಕಾಯುಕ್ತ ಜಿಲ್ಲಾಡಳಿತ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಶ್ರೀನಿವಾಸಪುರ-ಹೊಗಳಗೆರೆ ರಸ್ತೆಯ ಮಜರಾ ಚಿಂತಕುಂಟ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವಕ್ಕೆ ಗಿಡ ನೆಡುವ ಮೂಲಕ ಕರ್ನಾಟಕ ಉಪ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಇಂದು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಅರಣ್ಯ ಎಂದರೆ ಕೇವಲ ಮರಗಳ ಸಮೂಹವಲ್ಲ, ಪ್ರಕೃತಿಯ ಸಂಪತ್ತು ಅದನ್ನು ಮಕ್ಕಳ ರೀತಿಯಲ್ಲಿ ಪೋಷಿಸುವ ಮೂಲಕ ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ ಮಾಡಬೇಕಿದೆ.ಇದರಿಂದ ಜೀವಸಂಕುಲದ ಉಳಿವು ಹಾಗು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಅರಣ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ, ಅಪರ ಜಿಲ್ಲಾಧಿಕಾರಿ ಮಂಗಳ, ಎಸ್.ಪಿ ಕನ್ಯಕಾ ಸಿಕ್ರಿವಾಲ, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧಿಶ ಆನಂದಶೆಟ್ಟಿ, ಕಾನೂನು ಸೇವಾಪ್ರಾಧಿಕಾರದ ನ್ಯಾಯಧಿಶ ಪ್ರಭು ನಿಲಾಚಾರ್,ಡಿವೈಎಸ್.ಪಿ ಮನಿಷಾ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಲೋಕಾಯುಕ್ತ ಇನ್ಸಪೇಕ್ಟರ್ ರೇಣುಕಾ,ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್,ತಹಶೀಲ್ದಾರ್ ಸುಧೀಂದ್ರ. ಇಒ ಡಾ.ಸರ್ವೇಶ್,ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಹರ್ಷವರ್ಧನ್ ಪೋಲಿಸ್ ಇನ್ಸಪೇಕ್ಟರ್ ಶಂಕರಾಚಾರಿ ಮುಂತಾದವರು ಇದ್ದರು.
Trending
- ಸರ್ಕಾರಿ ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
- ತೇಜೋವದೆ ಆರೋಪ ಮಾಲೂರು ಚಲಪತಿ ವಿರುದ್ದ ವೆಂಕಟಶಿವಾರೆಡ್ಡಿ ದೂರು!
- ರಸ್ತೆಯಲ್ಲಿ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್,ಜೊತೆಗೆ ಹಾಲಿನ ಟ್ಯಾಂಕರ್ ಭಸ್ಮ!
- ಲಂಚ ಪಡೆಯುವಾಗ ಲೋಕಾ ಪೊಲೀಸರಿಗೆ ಸಿಕ್ಕಿಬಿದ್ದ ಯಲ್ದೂರು ಪಂಚಾಯಿತಿ ಅಧಿಕಾರಿ!
- ಗಂಡನ ಟವಲ್ ಹಿಡಿದು ತಿರುಮಲ ಬೆಟ್ಟ ಹತ್ತಿದ ಹೆಂಡತಿ,ವೃದ್ಧ ದಂಪತಿ LOVE STEP!
- ಮಾಜಿ CM ಸಿದ್ದರಾಮಯ್ಯ ಭೇಟಿಯಾದ ಸಚಿವ ಆಕಾಂಕ್ಷಿಗಳು.
Saturday, July 11



