ಕೋಲಾರ:ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರೆ ನಮ್ಮ ನಾಯಕರು ಅವರೇನಾದರೂ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ ಆದರೆ ಅಗ ತೂಪಲ್ಲಿ ನಾರಾಯಣಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜೆಡಿಎಸ್ ಪಕ್ಷದಲ್ಲಿ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ.
ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗಳು ಹರಿದಾಡುತ್ತಿರುವ ಸಮಯದಲ್ಲಿ ಶ್ರೀನಿವಾಸಪುರದಲ್ಲಿ ಸ್ಪರ್ದಿಸಲು ಹೊರಗಿನವರಿಗೆ ಅವಕಾಶವಿಲ್ಲ ಕಾರ್ಯಕರ್ತರು ಒಪ್ಪುವುದೂ ಇಲ್ಲ ಎಂಬ ಮಾತು ದಳಪತಿಗಳಿಂದಲೆ ಕೇಳಿಬರುತ್ತಿದೆ.
ಶಾಸಕರು ಹಿಂದೆ ಸರಿದರೆ ಅಹಿಂದಾಗೆ ಅವಕಾಶ
ವೆಂಕಟಶಿವಾರೆಡ್ಡಿ ಅವರು ಶಾಸಕರಾಗಿದ್ದು, ಇಲ್ಲಿ ಬೇರೆಯವರ ಸ್ಪರ್ಧೆ ವಿಷಯ ಅಪ್ರಸ್ತುತ,ಎರಡನೆ ಸಾಲಿನಲ್ಲಿ ತೂಪಲ್ಲಿ ನಾರಾಯಣಸ್ವಾಮಿ ಇದ್ದಾರೆ ಅವರು ಜಿಪಂ ಅಧ್ಯಕ್ಷರಾಗಿ, ಪಕ್ಷಕ್ಕಾಗಿ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದ್ದು ಅವರೊಂದಿಗೆ ಮತ್ತೊಬ್ಬ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಹಿಂದ ಮುಖಂಡ ಎಂದು ಗುರುತಿಸಿಕೊಂಡಿರುವವರು ಹೇಳಿಕೊಂಡಿರುವುದು ಏನೆಂದರೆ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇವೆ, ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದಿದ್ದೇವೆ,ಅವಕಾಶ ಕೊಟ್ಟರೆ ನಾನು MLA ಅಭ್ಯರ್ಥಿ ಎಂದು ಎಂದು ತಮ್ಮ ಮನದಾಳದ ಮಾತನ್ನು Indirectly ಹೇಳಿದ್ದಾರೆ.
ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ ಕಷ್ಟ ಸುಖಕ್ಕೆ ಸ್ಪಂದಿಸುತ್ತ ಮುಂಚೂಣಿಯಲ್ಲಿದ್ದಾರೆ, ಅವರು ಶ್ರೀನಿವಾಸಪುರಕ್ಕೆ ಬರುವುದೂ ಬೇಡ ಎನ್ನುವುದಾದರೆ ಸ್ಥಳೀಯ ಜೆಡಿಎಸ್ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.
ಈ ಎಲ್ಲಾ ಹೇಳಿಕೆಗಳಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮನೆಯೊಂದು ಎರಡು ಬಾಗಿಲು ಆಗುವ ಲಕ್ಷಣಗಳು ಗೋಚರವಾಗುತ್ತಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



