ನ್ಯೂಜ್ ಡೆಸ್ಕ್:ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದೆ. ಈ ನಿಟ್ಟಿನಲ್ಲಿ, ಎಐಸಿಸಿ ಗುರುವಾರ ನವದೆಹಲಿಯಲ್ಲಿ ಸತೀಶನ್ ಅವರ ಹೆಸರನ್ನು ಕೇರಳದ ಮುಖ್ಯಮಂತ್ರಿಯಾಗಿ ಘೋಷಿಸಿತು.
ಕೇರಳ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದೊಂದು ವಾರದಿಂದ ನಡೆದಿದ್ದ ರಾಜಕೀಯ ಸಸ್ಪೆನ್ಸ್ ಕೊನೆಗೂ ಅಂತ್ಯವಾಗಿದ್ದು ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ.
ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಮುಖ್ಯಮಂತ್ರಿ ಪದವಿ ರೇಸ್ ನಲ್ಲಿ ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಹೈಕಮಾಂಡ್ ನಿಂದ ಸಾಕಷ್ಟು ಆಶೀರ್ವಾದ ಇತ್ತಾದರೂ, ಕೇರಳದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಿದೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತು ನಡೆಯುತ್ತಿದ್ದ ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಿದೆ.
ಫಲಿತಾಂಶ ಪ್ರಕಟವಾದ 10 ದಿನಗಳ ನಂತರ.
ಎಲ್ಡಿಎಫ್ ಸರ್ಕಾರದ ಅವಧಿಯಲ್ಲಿ ವಿ.ಡಿ. ಸತೀಶನ್ ವಿರೋಧ ಪಕ್ಷದ ನಾಯಕರಾಗಿದ್ದರು. ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಅವರು ಶ್ರಮಿಸಿದ್ದು, ಸತೀಶನ್ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೂ ಇದೇ ಅಭಿಪ್ರಾಯ ಬಲವಾಗಿದೆ. ಇದನ್ನು ಪರಿಗಣಿಸಿ, ಹೈಕಮಾಂಡ್ ಸತೀಶನ್ ಕಡೆಗೆ ವಾಲಿತು. ಇದರೊಂದಿಗೆ, ಮೇ 4 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಲಾಯಿತು. ಸುಮಾರು ಹತ್ತು ದಿನಗಳ ನಂತರದಲ್ಲಿ ಕೇರಳದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.ಐದು ಬಾರಿ ಶಾಸಕ. ವಿ.ಡಿ. ಸತೀಶನ್ ಅವರ ಪೂರ್ಣ ಹೆಸರು ವಡಸ್ಸೇರಿ ದಾಮೋದರನ್ ಸತೀಶನ್. ಅವರು ಮೇ 31, 1964 ರಂದು ಜನಿಸಿದ ಅವರಿಗೆ 61 ವರ್ಷ ವಯಸ್ಸು, 2001 ರಿಂದ ಪರವೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
Trending
- ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅಯ್ಕೆ
- ನರಸಿಂಹಸ್ವಾಮಿ ದೇವಾಲಯ ರಾಜಗೋಪುರಕ್ಕೆ ವೆಂಕಟಶಿವಾರೆಡ್ದಿ ಭೂಮಿಪೂಜೆ.
- ಶ್ರೀನಿವಾಸಪುರ ಜೆಡಿಎಸ್ ಟಿಕೆಟ್ ಹೊರಗಿನವರಿಗೆ ಇಲ್ಲ,ಭುಗಿಲೆದ್ದ ಅಸಮಾಧಾನ!
- ಶ್ರೀನಿವಾಸಪುರ:ಅನುಮಾನಸ್ಪದ ಹಸು ಸಾಗಾಟ ಪೊಲೀಸರಿಗೆ ಒಪ್ಪಿಸಿದ ಜನತೆ!
- ಬೆಟ್ಟಿಂಗ್ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್ಟಾಪ್ ಕಳ್ಳತನ!
- ತಮಿಳುನಾಡು ವಿಜಯ್ ಸಂಪುಟದಲ್ಲಿ 4 ದಶಕಗಳ ನಂತರ ಬ್ರಾಹ್ಮಣ ಸಚಿವ!
- ತಮಿಳುನಾಡು ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು!
- ಶ್ರೀನಿವಾಸಪುರ:SSLC ಪವನ ವಿದ್ಯಾ ಭವನ ವಿದ್ಯಾರ್ಥಿ ತಾಲೂಕಿಗೆ ಮೊದಲಿಗ!
Thursday, May 14



