Author: Srinivas_Murthy

ನ್ಯೂಜ್ ಡೆಸ್ಕ್: ಕಲಿಯುಗದ ಪ್ರತ್ಯಕ್ಷ ದೈವ ಸಪ್ತಗಿರಿವಾಸ ವೆಂಕಟೇಶ್ವರನ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸುವುದು ಸಹಜ ಆಗಮಿಸುವಂತ ಭಕ್ತರಿಗೆ ಉಳಿದುಕೊಳ್ಳಲು ಕೊಠಡಿಗಳ ಅವಶ್ಯಕತೆ ಇರುತ್ತದೆ.ಇತ್ತ ಕೊಠಡಿಗಳನ್ನು ಕೊಡುವಂತ ಟಿಟಿಡಿ ಕಚೇರಿಯಲ್ಲಿ ಕೊಠಡಿಗಳು ಕಾಲಿ ಇರುವುದಿಲ್ಲ ಸಾವಿರಾರು ಭಕ್ತರು ತಿರುಮಲ ಕಾಯುತ್ತಲೇ ಇರುತ್ತಾರೆ. ಕೆಲವರು ಇದನ್ನೇ ಅವಕಾಶವಾಗಿ ಬಳಸಿಕೊಂಡು, ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ಅಕ್ರಮವಾಗಿ ಪಡೆದುಕೊಂಡಿದ್ದ ಕೊಠಡಿಗಳನ್ನು ಭಕ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಲ್ಲಾಳಿಗಳ ಗ್ಯಾಂಗ್ ಅನ್ನು ತಿರುಮಲ ಟೂ ಟೌನ್ ಪೊಲೀಸರು ಮತ್ತು ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಅನುಮಾನಸ್ಪದವಾಗಿ ಒಡಾಡುತ್ತಿದ್ದ ಆರು ಜನರನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಗ್ಯಾಂಗ್ ರಚಿಸಿಕೊಂಡು ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಠಿಸಿ ಅವುಗಳಲ್ಲಿ ಅವರ ಫೋಟೋಗಳನ್ನು ಮಾರ್ಫಿಂಗ್ ಮಾಡಿಸಿ ಟಿಟಿಡಿ ಸಿಆರ್‌ಒ ಕಚೇರಿಯಲ್ಲಿ ಬಳಸಿ ಕೊಠಡಿ ಪಡೆಯುತ್ತ ಇದ್ದರು ಎನ್ನಲಾಗಿದ್ದು.ತಿರುಮಲ ದರ್ಶನ ಪಡೆಯಲು ಬರುವವರನ್ನು ಗುರಿಯಾಗಿಸಿಕೊಂಡು ಅವರಿಗೆ ಹೆಚ್ಚಿನ ಬೆಲೆಗೆ ಕೊಠಡಿಗಳನ್ನು ಮಾರಾಟ…

Read More

ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ರಾಜ್ಯದಲ್ಲಿ ಮತ್ತೊಂದು ಹೊಸ ರೈಲ್ವೆ ಜಂಕ್ಷನ್ ಸಿಗಲಿದೆ. ಇದು ಕುಪ್ಪಂ ರೈಲ್ವೆ ಜಂಕ್ಷನ್ ಆಗಲಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ. ಕರ್ನಾಟಕದ ಮಾರಿಕುಪ್ಪಂ ನಿಂದ ಚಿತ್ತೂರು ಜಿಲ್ಲೆಯ ಕುಪ್ಪಂ ವರೆಗೆ ಹೊಸ ರೈಲ್ವೆ ಹಳಿ ಹಾಕಲಾಗುತ್ತಿರುವುದಾಗಿ ತಿಳಿದುಬಂದಿದೆ. ರೈಲ್ವೆ ಅಧಿಕಾರಿಗಳು ಈ ಕಾಮಗಾರಿಗಳ ವೇಗವನ್ನು ಹೆಚ್ಚಿಸಿದ್ದು ಪ್ರಸ್ತುತ ಈ ಮಾರ್ಗದಲ್ಲಿ ಕೆಲಸ ನಡೆಯುತ್ತಿದೆ. ಕರ್ನಾಟಕದ ಗಡಿಯಿಂದ ಆಂಧ್ರಪ್ರದೇಶ ಗಡಿಯವರೆಗಿನ ಕೆಲಸ ನಡೆಯುತ್ತಿದ್ದು ಶೇ. 90 ರಷ್ಟು ಈಗಾಗಲೇ ಪೂರ್ಣಗೊಂಡಿದೆ. ಅಲ್ಲದೆ, ಬಿಸನತ್ತಂ ನಿಂದ ಕುಪ್ಪಂ ವರೆಗಿನ 18 ಕಿಲೋಮೀಟರ್ ಪ್ರದೇಶದ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ 269 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ ಅಂದಾಜು ರೂ. 363 ಕೋಟಿ ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. ಮಾರ್ಚ್ 2028 ರೊಳಗೆ ಕೆಲಸವನ್ನು ಪೂರ್ಣಗೊಳಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.ಕುಪ್ಪಂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಊರು. ಇದು ಎರಡೂ ರಾಜ್ಯಗಳಿಗೆ 30 ಕಿಲೋಮೀಟರ್ ದೂರದಲ್ಲಿದ್ದು ಕುಪ್ಪಂ ರೈಲು…

Read More

ನ್ಯೂಜ್ ಡೆಸ್ಕ್: ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತ್ ಸುಧೀರ್ಘ ಅವಧಿಯ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜೀನಾಮೆ ನೀಡುವಂತೆ ಮಾಡಿದ ಮನವಿ ಹಿನ್ನೆಲೆಯಲ್ಲಿ ಹೊರಟ್ಟಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.75 ಸಂಖ್ಯಾ ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ, ಸಭಾಪತಿ ಮತ್ತು ಉಪಸಭಾಪತಿ ಎರಡೂ ಹುದ್ದೆಗಳನ್ನು ತನ್ನ ವಶಕ್ಕೆ ಪಡೆಯಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ ಬಸವರಾಜ ಹೊರಟ್ಟಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು.ಈಗ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ…

Read More

ಚಿಂತಾಮಣಿ: ಬಹುಕಾಲದಿಂದ ಸಾರ್ವಜನಿಕರ ನಿರೀಕ್ಷೆಯಾಗಿದ್ದ ಚಿಂತಾಮಣಿ–ಹೊಸಕೋಟೆ ರಸ್ತೆ ಅಗಲೀಕರಣ ಹಾಗೂ ಕೋಲಾರ–ವಿಜಯಪುರ ರಾಜ್ಯ ಹೆದ್ದಾರಿಯ ಹೆಚ್.ಕ್ರಾಸ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇತ್ತೀಚೆಗೆ ಹೆಚ್.ಕ್ರಾಸ್ ಜಂಕ್ಷನ್ ನಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಚಿಂತಾಮಣಿ ಕಡೆಯಿಂದ ಬರುವ ಕರ್ನಾಟಕ ಆಂಧ್ರ ವಾಹನಗಳು ಜಂಕ್ಷನ್ ಟ್ರಾಫಿಕ್ ನಲ್ಲಿ ಗಂಟೆಗಟ್ಟಲೇ ಸಿಲುಕಿ ಒದ್ದಾಡುವ ಪರಿಸ್ಥಿತಿ ಇತ್ತು. ರಸ್ತೆ ಅಗಲೀಕರಣ ಆಗಿದೆ ಚಿಂತಾಮಣಿ–ಹೊಸಕೋಟೆ ರಸ್ತೆಯಲ್ಲಿ ಏರುತ್ತಿರುವ ವಾಹನ ದಟ್ಟಣೆ ವಾಹನ ಸವಾರಿಗೆ ಆತಂಕ ಸೃಷ್ಟಿಸಿದ್ದು ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವುದರಿಂದ ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಆಗಲೀಕರಣದಿಂದ ವಾಹನ ಸಂಚಾರ ಸುಗಮವಾಗಲಿದ್ದು, ಬೆಂಗಳೂರು ಸಂಚಾರದಲ್ಲಿ ಸಮಯ ಉಳಿತಾಯವಾಗುತ್ತದೆ.ಕೋಲಾರ–ವಿಜಯಪುರ ರಸ್ತೆಯ ಹೆಚ್.ಕ್ರಾಸ್ ನಲ್ಲಿ ಫ್ಲೈಓವರ್ ನಿರ್ಮಾಣವಾದರೆ ಈ ಪ್ರದೇಶದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಪಘಾತಗಳ ಸಂಖ್ಯೆಯೂ ಇಳಿಕೆಯಾಗುವ ನಿರೀಕ್ಷೆಯಿದೆ. ಪ್ರಮುಖ ಹೆಚ್ ಕ್ರಾಸ್ ಜಂಕ್ಷನಲ್ಲಿ ವಾಹನಗಳು…

Read More

ಭೈರವ ಕಾಲದ ನಿಯಂತ್ರಕ ಹಾಗಾಗಿ ಕಾಲಭೈರವ ಎಂದು ಪೂಜಿಸಿ ಆರಾಧನೆ ಮಾಡಿದರೆ ಕಾಲ ಮತ್ತು ಮೃತ್ಯುಭಯದಿಂದ ಮುಕ್ತಗೊಳಿಸುತ್ತದೆ. ಭೈರವನ ಉಗ್ರ ರೂಪ ಮನುಷ್ಯನ ಅಜ್ಞಾನ, ಭಯ ಹಾಗೂ ಅಹಂಕಾರವನ್ನು ದಹಿಸುತ್ತದೆ ಅಷ್ಟ ದಿಕ್ಪಾಲಕರು ರಕ್ಷಣೆ ನೀಡುತ್ತಾರೆ.ಭೈರವ ಉಪಾಸನೆಯು ಶಾಸ್ತ್ರಗಳ 64 ಶಾಖೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಭೈರವಗಣಂ ಎಂಬುದು ಮಹಾಭೈರವ ಮತ್ತು ಮಹಾಭೈರವಿಯಿಂದ ಜನಿಸಿದ ಎಂಟು ಭೈರವರು ಮತ್ತು ಎಂಟು ಭೈರವಿಯರು, ಅವರ ಪತ್ನಿಯರು, ಇವರಿಂದ ರೂಪುಗೊಂಡ ಗುಂಪಾಗಿದೆ. ಭೈರವ ಆರಾಧನೆ ಅತ್ಯುನ್ನತ ಪ್ರಜ್ಞೆಯ ಸ್ಥಿತಿಯನ್ನು ತಲುಪಿಸಲು ಇರುವ ಅತ್ಯಂತ ಶಕ್ತಿಶಾಲಿ ಹಾಗೂ ಗಂಭೀರ ಆಧ್ಯಾತ್ಮಿಕ ಮಾರ್ಗವಾಗಿದ್ದು, ಕಾಶ್ಮೀರ ಶೈವ ಮತ್ತು ತಾಂತ್ರಿಕ ಪರಂಪರೆಗಳಲ್ಲಿ ಭೈರವನನ್ನು ಪರಬ್ರಹ್ಮ ಸ್ವರೂಪಿ ಹಾಗೂ ಅನಂತ ಪ್ರಜ್ಞೆಯ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ಯಾತ್ಮಿಕ ಡೆಸ್ಕ್:ವಿಜ್ಞಾನ ಭೈರವ ತಂತ್ರವು ಪ್ರಾಚೀನ ಕಾಶ್ಮೀರಿ ವಿದ್ವಾಂಸರಲ್ಲಿ ಬಹಳ ಪ್ರಸಿದ್ಧವಾದ ಗ್ರಂಥ ಇದು ರುದ್ರಾಯಮಲ ತಂತ್ರದ ಒಂದು ಶಾಖೆ. ವಿಜ್ಞಾನ ಭೈರವ ತಂತ್ರವು ಕಾಶ್ಮೀರ ಶೈವ ಧರ್ಮದ ಒಂದು ಪವಿತ್ರ ಗ್ರಂಥವಾಗಿದ್ದು, ಇದರಲ್ಲಿ…

Read More

ಶ್ರೀಶ್ರೀನಿವಾಸಪುರ:ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಅದ್ಧೂರಿಯಾಗಿ ಚಾಮುಂಡೇಶ್ವರಿ ಜಯಂತ್ಯುತ್ಸವ ಆಚರಿಸಲಾಯಿತು. ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಬೆಳಗ್ಗಿನಿಂದಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದಿವ್ಯ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣ್ಯಂ ಅವರು ವಿವಿಧ ಬಗೆಯ ಹೂವುಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು, ಅಲಂಕೃತ ರೂಪದಲ್ಲಿ ದೇವಿಯ ದರ್ಶನ ಭಕ್ತರನ್ನು ಭಕ್ತಿಪರಶರನ್ನಾಗಿಸಿತು. ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಆವರಣವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಊರಿನ ಯುವಕ ಮಂಡಳಿ ಸದಸ್ಯರು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಡೆಯಲು ಅನವು ಮಾಡಿದ್ದರು. ಜಯಂತ್ಯುತ್ಸವದ ಅಂಗವಾಗಿ ಪ್ರಸಾದ ವಿತರಣೆ ಅನ್ನಧಾನ ಏರ್ಪಡಿಸಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.ಭಕ್ತರ ಸಂಭ್ರಮದ ವಾತಾವರಣದಲ್ಲಿ ಶ್ರೀ ಚಾಮುಂಡೇಶ್ವರಿ ಜಯಂತ್ಯುತ್ಸವವು ಅತ್ಯಂತ…

Read More

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ಸಂಜೆ ವಿಸ್ತರಣೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಪ್ರಕಟಿಸಿತ್ತಾದರೂ ಕೊನೆ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಇಂದು ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು 19 ಸಚಿವರಿಗೆ ಮಾತ್ರ ಪ್ರತಿಜ್ಞಾವಿಧಿ ಬೋಧಿಸಿದರು. ಮಂತ್ರಿ ಸ್ಥಾನ ಪಡೆದವರಲ್ಲಿ ಡಾ. ಅಜಯ್‌ ಸಿಂಗ್‌ ಎಚ್‌.ಸಿ.ಬಾಲಕೃಷ್ಣ, ಕೆ.ಎಸ್‌.ಬಸವಂತಪ್ಪ, ಬಸವರಾಜ್‌ ರಾಯರೆಡ್ಡಿ, ಎನ್‌.ಚಲುವರಾಯಸ್ವಾಮಿ, ಲಕ್ಷ್ಮಣ್‌ ಸವದಿ, ಮಧು ಬಂಗಾರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಬಿ.ನಾಗೇಂದ್ರ, ಪಿ.ಎಂ.ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ, ಟಿ.ರಘುಮೂರ್ತಿ, ರಿಜ್ವಾನ್‌ ಅರ್ಷದ್‌, ರುದ್ರಪ್ಪ ಲಮಾಣಿ, ಸಂತೋಷ್‌ ಲಾಡ್‌, ಶಿವಲಿಂಗೇಗೌಡ, ಶಿವರಾಜ್‌ ತಂಗಡಗಿ, ವಿಜಯಾನಂದ ಕಾಶಪ್ಪನವರ್‌, ಜಮೀರ್‌ ಅಹ್ಮದ್‌ ಖಾನ್ ಅವರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.ಅವಿಭಜಿತ ಕೋಲಾರಕ್ಕೆ ಸಿಗದ ಅವಕಾಶಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ದೊರೆಯದಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.…

Read More

ಶ್ರೀನಿವಾಸಪುರ: ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಅವೈಜ್ಞಾನಿಕ ವೃತ್ತಗಳು ಅಪಘಾತಗಳಿಗೆ ಆಹ್ವಾನ ನೀಡುವಂತಿವೆ. ಈ ಕುರಿತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ದೂರದೃಷ್ಟಿ ಮುಂದಾಲೋಚನೆ ಪುರಸಭೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕಂಡುಬರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಂಚಾರ ಸುರಕ್ಷತೆಗೆ ಅಗತ್ಯವಾದ ಸೂಚನಾ ಫಲಕಗಳು, ವೈಜ್ಞಾನಿಕ ರಸ್ತೆ, ವೇಗ ನಿಯಂತ್ರಣ ವ್ಯವಸ್ಥೆಗಳು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರತಿನಿತ್ಯ ಜೀವಭಯದಲ್ಲೇ ಸಂಚರಿಸುವಂತಾಗಿದೆ.ಇಲ್ಲಿನ ರಸ್ತೆಗಳು ಹಾಗೂ ಇಕ್ಕಾಟ್ಟಾದ ವೃತ್ತಗಳಲ್ಲಿ ಅಗತ್ಯ ಮಾರ್ಗಸೂಚಿ ಫಲಕಗಳ ಅಗತ್ಯ ಇದೆ. ಅಡ್ಡ ರಸ್ತೆಗಳಿಂದ ಮುಖ್ಯ ರಸ್ತೆಗೆ ಸೇರುವ ವಾಹನ ಸವಾರರು ಸೂಕ್ತ ಸೂಚನೆಗಳಿಲ್ಲ ಇದರಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಡ್ಡ ರಸ್ತೆಗಳು ಕೂಡುವ ವೃತ್ತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ತಿರುವು ಸೂಚಿಸುವ ಬಿಳಿ ಬಣ್ಣದ ಜಿಗ್-ಜಾಗ್ ರಸ್ತೆ ಗುರುತುಗಳನ್ನು (Zig-Zag Markings), ವೇಗಮಿತಿ ಸೂಚನೆಗಳು ಹಾಗೂ ರಸ್ತೆ ತಡೆ ಉಬ್ಬುಗಳನ್ನು (Speed Breakers) ನಿರ್ಮಿಸುವುದು ಅಗತ್ಯವಾಗಿದೆ. ಇದಲ್ಲದೆ, ಕೆಲವು ವೃತ್ತಗಳಲ್ಲಿ ಬಿಳಿ ಬಣ್ಣದಿಂದ ಗುರುತಿಸಲಾದ…

Read More

ನ್ಯೂಜ್ ಡೆಸ್ಕ್:ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಅಪರೂಪದ ಘಟನೆ, ವಂದೇ ಭಾರತ್​ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಯಶಸ್ವಿಯಾಗಿ ಜೀವಂತ ಹೃದಯ ಸಾಗಾಟ ಮಾಡಲಾಗಿದೆ.ಇತಿಹಾಸ ಸೃಷ್ಟಿಸಿದ ಕಥೆ. ಇದಕ್ಕೆ ಗುಜರಾತ್​ ಸಿಎಂ ಸಹ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ಜೀವಂತ ಹೃದಯವನ್ನು ಸಾಗಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸೂರತ್‌ನಿಂದ ಅಹಮದಾಬಾದ್‌ಗೆ ಹೃದಯವನ್ನು ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೂಲಕ ಕೊಂಡೊಯ್ಯಲಾಯಿತು. ಇದನ್ನು ಅಹಮದಾಬದ್ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಕಸಿ ಮಾಡಲು ಕಳುಹಿಸಲಾಗಿತ್ತು. 20901 ಸಂಖ್ಯೆಯ ರೈಲಿನ ಮೂಲಕ ಕಳುಹಿಸಲಾದ ಈ ಹೃದಯ ನಿಗದಿತ ಸಮಯದೊಳಗೆ ಅಹಮದಾಬಾದ್‌ಗೆ ತಲುಪಿತು. ಈ ಸಂಪೂರ್ಣ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ, ಗುಜರಾತ್ ಪೊಲೀಸ್, ರೈಲ್ವೆ ಭದ್ರತಾ ಪಡೆ (RPF) ಮತ್ತು ವೈದ್ಯಕೀಯ ತಂಡಗಳ ನಡುವೆ ಸಮನ್ವಯ ಸಾಧಿಸಿ ಹೃದಯವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲಾಯಿತು.ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF…

Read More

ನ್ಯೂಜ್ ಡೆಸ್ಕ್:ತಿರುಮಲದ ಮೊದಲ ಘಾಟ್ ರಸ್ತೆಯಲ್ಲಿ ಅಂಜನೇಯನ ವಿಗ್ರಹ ಕಳ್ಳತನ ಇತ್ತೀಚೆಗೆ ಸಂಚಲನ ಮೂಡಿಸಿತು. ಅಲಿಪಿರಿ ನಡಿಗೆ ಮಾರ್ಗದ ಏಳನೇ ಮೈಲಿಯಲ್ಲಿರುವ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಇದ್ದ ಅಂಜನೇಯನ ವಿಗ್ರಹ ಕಳವು ಮಾಡಲಾಗಿದೆ. 15 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಜಸ್ವಂತನನ್ನು ಬಂಧಿಸಿದ್ದಾರೆ.ವಿಶಾಖಪಟ್ಟಣದ ಜಸ್ವಂತ್ ಕುಮಾರ್ ಎಂಬ ವ್ಯಕ್ತಿ ಹನುಮಂತನ ವಿಗ್ರಹವನ್ನು ಕದಿದ್ದು, ಗೋವಿಂದಮಾಲೆ ಧರಿಸಿ ಜಸ್ವಂತ್ ಕುಮಾರ್ ಘಾಟ್ ರಸ್ತೆಯಿಂದ ದೇವಾಲಯವನ್ನು ತಲುಪಿದ್ದಾನೆ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ವಿಗ್ರಹವನ್ನು ಕದ್ದ ಜಸ್ವಂತ್ ಕುಮಾರ್ ಅದನ್ನು ಬಟ್ಟೆಯಲ್ಲಿ ಸುತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಲೆ ವಿಗ್ರಹವನ್ನು ಕದ್ದ ಆರೋಪಿಯನ್ನು ಹುಡುಕಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ವರದಿಗಳ ಪ್ರಕಾರ, ತಿರುಮಲದ ಅಲಿಪಿರಿ ಪಾದಯಾತ್ರೆ ಮಾರ್ಗದ ಸಮೀಪದ ಅಂಜನೇಯ ಸ್ವಾಮಿ ವಿಗ್ರಹವನ್ನು ಕಳವು ಮಾಡಲಾಗಿತ್ತು. ತಿರುಪತಿ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ 15 ಗಂಟೆಗಳೊಳಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಒಂಗೋಲು…

Read More