Author: Srinivas_Murthy

ನಾಲ್ಕನೇ ವರ್ಷದ ಕಾನೂನು ಪದವಿ ವಿದ್ಯಾರ್ಥಿನಿ ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿದ್ದ ಧನುಷ್ ನೊಂದಿಗೆ ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದಳು.ಧನುಷ್ ಗೆ ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆ ಆತನಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾಗ ಹತ್ಯೆ ನ್ಯೂಜ್ ಡೆಸ್ಕ್:ಅಣ್ಣನ ಪ್ರೀತಿ ನಿರಾಕರಿಸಿದ ಯುವತಿಯನ್ನು ತಮ್ಮ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಧಾರುಣ ಘಟನೆ ಬೆಂಗಳೂರಿನ ನಗರದ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹತ್ಯೆಯಾದ ಯುವತಿ ಅಮೃತಾ ಕಾನೂನು ವಿದ್ಯಾರ್ಥಿನಿಯಾಗಿದ್ದು ಈಕೆಯನ್ನು ಹತ್ಯೆ ಮಾಡಿದ ಆರೋಪದಡಿ ಪ್ರಿಯಕರ ಧನುಷ್ ಹಾಗೂ ಆತನ ಸಹೋದರ ಸೂರ್ಯನನ್ನು ಬಂಧಿಸಲಾಗಿದೆ. ಜುಲೈ 13ರಂದು ಘಟನೆ ನಡೆದಿದ್ದು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮೃತಾ, ಕೊನೆಗೂ ಸಾವನ್ನಪ್ಪಿದ್ದಾಳೆ.ಘಟನೆ ಹಿನ್ನಲೆಬೆಂಗಳೂರಿನ ಹೆಚ್​​ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಅಮೃತಾ ಕುಟುಂಬ ವಾಸವಾಗಿದ್ದು, ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಳು.ಈಗ್ಗೆ ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯ…

Read More

ನ್ಯೂಜ್ ಡೆಸ್ಕ್:ಕೋಲಾರ ಜಿಲ್ಲೆ ಗಡಿಯಾಚಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಕುಪ್ಪಂ ಮತ್ತು ಪಲಮನೇರು ಭಾಗಗಳಲ್ಲಿ ಬೆಳೆದಿದ್ದ ಉತ್ತಮ ಮಾವಿನ ಹಣ್ಣುಗಳನ್ನು ಸಂಗ್ರಹಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕಳೆದ ವಾರ ಎರಡನೆ ಬಾರಿಗೆ ತೋತಾಪುರಿ ಮತ್ತು ಬಂಗಿನಪಲ್ಲಿ(ಬೇನುಷ) ಮಾವಿನ ತಳಿಗಳನ್ನು ಸಿಂಗಾಪುರಕ್ಕೆ ರಫ್ತು ಮಾಡಲಾಗಿದ್ದು.ಉತ್ತಮ ಮಾವಿನ ಹಣ್ಣುಗಳನ್ನು ಸಂಗ್ರಹಿಸಿ ಚಿಂತಾಮಣಿ ಬಳಿಯ ಮಾಡಕೇರಿಯಲ್ಲಿನ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMC) ನಿರ್ವಹಣೆ ಹಾಗು ಅಪೇಡಾ ಸಹಯೋಗದ ಮಾವಿನ ನಂತರದ ಕೊಯ್ಲು ನಿರ್ವಹಣೆ ಕೇಂದ್ರ(ಪ್ಯಾಕ್ ಹೌಸ್‌)ನಲ್ಲಿ ಇಡಲಾಗಿತ್ತು. ನಂತರ ಅವುಗಳನ್ನು ಕಂಟೇನರ್ ಹಡಗಿನಲ್ಲಿ ಸಿಂಗಾಪುರಕ್ಕೆ ಕಳುಹಿಸಲಾಗಿದ್ದು 12ದಿನಗಳ ನಂತರ ಹಡಗು ಸಿಂಗಾಪುರ ತಲುಪಲಿದೆ ಎನ್ನುತ್ತಾರೆ. ವಿದೇಶಗಳಲ್ಲಿ ದಕ್ಷಿಣ ಭಾರತದ ಮಾವಿಗೆ ಬೆಡಿಕೆ ಹೆಚ್ಚುಪ್ರಪಂಚದಾದ್ಯಂತ ವಿಶೇಷವಾಗಿ ದಕ್ಷಿಣ ಭಾರತದ ಮಾವಿನ ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ ಅದರಲ್ಲೂವಿದೇಶಗಳಲ್ಲಿ ಆಂಧ್ರದ ಬೇನುಷ ಪ್ರಭೇದವನ್ನು ಹೆಚ್ಚು ಬಯಸುತ್ತಾರೆ. ಈ ಹಿನ್ನಲೆಯಲ್ಲಿ ಆಂಧ್ರದ ಚಿತ್ತೂರು ಜಿಲ್ಲೆಯಿಂದ ಮಾವಿನ ಹಣ್ಣುಗಳನ್ನು ಸಿಂಗಾಪುರಕ್ಕೆ ರಫ್ತು ಮಾಡಲು ಪ್ರಾರಂಭಿಸಲಾಗಿದ್ದು ಅದೂ ಆಂಧ್ರ…

Read More

ನ್ಯೂಜ್ ಡೆಸ್ಕ್:ಸರ್ಕಾರಿ ಕೆಲಸ ಹಾಗು ಹಣಕ್ಕಾಗಿ ಕಾನೂನು ವಿದ್ಯಾರ್ಥಿನಿಯೊಬ್ಬಳು ಹೆತ್ತ ತಾಯಿಯನ್ನೇ ಕೊಂದು ಪೊಲೀಸರ ಅತಿಥಿಯಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕಳೆದ ವರ್ಷ ಆಕೆ ತನ್ನ ತಂದೆಯನ್ನೂ ಕೊಂದಿರಬಹುದು ಎಂದು ಆಕೆಯ ತಾಯಿಯ ಸಹೋದರ ರಾಕೇಶ್ ಶರ್ಮಾ ( ಮಾಮ) ಆರೋಪಿಸಿದ್ದಾರೆ. ಜೈಪುರ ನ್ಯಾಯಾಲಯದಲ್ಲಿ ಕೋರ್ಟ್ ಮಾಸ್ಟರ್ ಆಗಿದ್ದ ನೀರಜ್ ಶರ್ಮಾ,ಅವರ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದುಕೊಂಡಿದ್ದರು.ತಂದೆಯನ್ನು ಕೊಂದ ಪಾತಕಿ!ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಕೆಯ ಮಗಳು ಆಯುಷಿಯನ್ನು ಬಂಧಿಸಿದ್ದು ಆರೋಪಿ ಆಯುಷಿ ತನ್ನ ಹೆತ್ತು ಹೊತ್ತು ಸಾಕಿದ ಅಪ್ಪ ವಿಜಯ್ ಶರ್ಮಾರಿಗೆ ಕಾರು ಅಪಘಾತ ಮಾಡಿಸಿ ಗಂಭೀರವಾಗಿ ಗಾಯಗೊಂಡು ದೀರ್ಘಕಾಲದ ಅನಾರೋಗ್ಯಕ್ಕೆ ಈಡಾಗಿ ಬ್ರೇನ್ ಸ್ಟೋಕ್ ಗೆ ಒಳಗಾಗಿದ್ದರು ಅವರನ್ನು ಮನೆಗೆ ಕರೆತಂದಾಗ ಅವರ ಅನೇಕ ಆಂಗಾಂಗಗಳು ವಿಫಲವಾಗಿತ್ತು ಇದನ್ನೆ ಬಳಸಿಕೊಂಡ ಆರೋಪಿ ತನ್ನ ತಂದೆಗೆ ನೀಡಲಾಗುತ್ತಿದ್ದ ಆಹಾರ ಟ್ಯೂಬ್ ಅನ್ನು ತೆಗೆದು ಸಾವಿಗೆ ಕಾರಣಳಾಗಿದ್ದಾಳೆ ಎಂದು ಆರೋಪಿ ತಾಯಿ…

Read More

ಶ್ರೀನಿವಾಸಪುರ:ರಾಜ್ಯ ಲೋಕಾಯುಕ್ತ ಜಿಲ್ಲಾಡಳಿತ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಶ್ರೀನಿವಾಸಪುರ-ಹೊಗಳಗೆರೆ ರಸ್ತೆಯ ಮಜರಾ ಚಿಂತಕುಂಟ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವಕ್ಕೆ ಗಿಡ ನೆಡುವ ಮೂಲಕ ಕರ್ನಾಟಕ ಉಪ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಇಂದು ಶನಿವಾರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಅರಣ್ಯ ಎಂದರೆ ಕೇವಲ ಮರಗಳ ಸಮೂಹವಲ್ಲ, ಪ್ರಕೃತಿಯ ಸಂಪತ್ತು ಅದನ್ನು ಮಕ್ಕಳ ರೀತಿಯಲ್ಲಿ ಪೋಷಿಸುವ ಮೂಲಕ ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ ಮಾಡಬೇಕಿದೆ.ಇದರಿಂದ ಜೀವಸಂಕುಲದ ಉಳಿವು ಹಾಗು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಅರಣ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ, ಅಪರ ಜಿಲ್ಲಾಧಿಕಾರಿ ಮಂಗಳ, ಎಸ್.ಪಿ ಕನ್ಯಕಾ ಸಿಕ್ರಿವಾಲ, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧಿಶ ಆನಂದಶೆಟ್ಟಿ, ಕಾನೂನು ಸೇವಾಪ್ರಾಧಿಕಾರದ ನ್ಯಾಯಧಿಶ ಪ್ರಭು ನಿಲಾಚಾರ್,ಡಿವೈಎಸ್.ಪಿ ಮನಿಷಾ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಲೋಕಾಯುಕ್ತ ಇನ್ಸಪೇಕ್ಟರ್ ರೇಣುಕಾ,ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ…

Read More

ಬೆಂಗಳೂರು:ಅಮ್ಮ, ಅಜ್ಜಿ ಹಾಗೂ ಮಾವನನ್ನು ಕೊಂದ ಯುವಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಮತ್ತು ಮಾವ ಸತೀಶ ಅವರನ್ನು ಪ್ರಶಾಂತ್ ಯುವಕ ಕೊಲೆ ಮಾಡಿದ್ದು ನಂತರ ಆತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ‌ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಆರೋಪಿ ಕ್ಯಾಬ್ ಚಾಲಕನಾಗಿದ್ದು ಆತನ ತಾಯಿ ಮಂಗಳಮ್ಮ ಗಾರ್ಮೆಂಟ್ಸ್‌ ಉದ್ಯೋಗಿ ಅಜ್ಜಿ ನಂಜಮ್ಮ ಪೌರಕಾರ್ಮಿಕರಾಗಿದ್ದರೆ ಮಾವ ಸತೀಶ್ ಪ್ಲಂಬರ್ ಕೆಲಸ ಮಾಡುತ್ತ ಜೀವನ ಮಾಡುತ್ತಿದ್ದರುಕುಟುಂಬಸ್ಥರು ಕಳೆದ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಆರೋಪಿ ಪ್ರಶಾಂತ್‌ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದ್ದು ಕುಟುಂಬದ ಹಿರಿಯ ಆರೋಪಿ ತಂದೆ ಕೆಲಸಕ್ಕೆಂದು ಹೋರ ಹೋಗಿದ್ದಾಗ ಪ್ರಶಾಂತ್‌ ಮೂವರನ್ನ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನೆಗೆ ಕಾರಣ ಗೊತ್ತಾಗಿಲ್ಲ. ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದನಾದರೂ ಮನೆ ಮಾಲೀಕ…

Read More

ಶ್ರೀನಿವಾಸಪುರ:ಆಕ್ಷೇಪಾರ್ಹ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿ ನನ್ನ ತೇಜೋವದೆ ಮಾಡಿದ್ದಾರೆಂದು ಆರೋಪಿಸಿ ಶಾಸಕ ವೆಂಕಟಶಿವಾರೆಡ್ಡಿ ಮಾಲೂರು ಚಲಪತಿ ಎಂಬುವರ ವಿರುದ್ದ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರವಾದ ಸುಳ್ಳು ಆಪಾದನೆಗಳನ್ನು ಮಾಡುವ ಮೂಲಕ ನನ್ನ ರಾಜಕೀಯ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ಆಕ್ಷೇಪಾರ್ಥವಾದ ವಿಚಾರಗಳನ್ನು ವಿಡಿಯೋ ಮೂಲಕ ಪ್ರಚಾರ ಮಾಡಿದ್ದಾರೆ ನಾನು ಶಾಸಕನಾಗಿ ನನ್ನ ನಡವಳಿಕೆ ಬಗ್ಗೆ ಆಗಲಿ ಅಥವಾ ನನ್ನ ಕರ್ತವ್ಯದಲ್ಲಾಗಲಿ ಏನಾದರೂ ಲೋಪವಿದ್ದಲ್ಲಿ ಈತ ನನ್ನನ್ನು ಸಂಪರ್ಕಿಸಿ ನನ್ನ ಜೊತೆ ಚರ್ಚಿಸಬಹುದಾಗಿತ್ತು. ಅದನ್ನು ಬಿಟ್ಟು ಈ ರೀತಿ ಏಕಾಏಕಿ ಮಾಧ್ಯಮದಲ್ಲಿ ನನ್ನ ಬಗ್ಗೆ ಮಾತಾಡಿರುವುದು ನನ್ನ ತೇಜೋವದೆ ಮಾಡಬೇಕೆಂದಲೇ ಮಾಡಿರುವ ಒಂದು ಕೃಕೃತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಇಂತಹ ಕಾನೂನು ಬಾಹಿರ ಮತ್ತು ಸಮಾಜದಲ್ಲಿ ಅಸಹ್ಯ ಮೂಡಿಸುವ ಪ್ರಯತ್ನದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿ ಹೇಳಿದ್ದಾರೆ.ಕ್ಷೇತ್ರದ ಜನರ ಋಣ ತೀರಿಸುವ ನಿಟ್ಟಿನಲ್ಲಿ ಇದ್ದೀನಿಕ್ಷೇತ್ರದ ಜನರ ಆಶೀರ್ವಾದದಿಂದ ಐದನೇ ಬಾರಿಗೆ…

Read More

ಚಿಕ್ಕಬಳ್ಳಾಪುರ:ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದ್ದು,ಸಮೀಪದಲ್ಲಿದ್ದ ಹಾಲಿನ ಟ್ಯಾಂಕರಗೂ ಬೆಂಕಿ ವ್ಯಾಪಿಸಿ ಎರಡು ಟ್ಯಾಂಕರಗಳು ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 11ನೇ ಮೈಲಿ ಸಮೀಪ ಸಂಭವಿಸಿದೆ.ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟ್ಯಾಂಕರ್‌ಗೆ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ.ಅದೇ ಸಂದರ್ಭದಲ್ಲಿ ಅಲ್ಲೆ ರಿವರ್ಸ್ ಮಾಡುತ್ತಿದ್ದ ಹಾಲಿನ ಲಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿವೆ.ವಾಹನಗಳಿಂದ ಜಿಗಿದು ಪಾರಾದ ಚಾಲಕರುಬೆಂಕಿ ಕಾಣಿಸಿಕೊಂಡ ತಕ್ಷಣವೇ ಪೆಟ್ರೋಲ್ ಟ್ಯಾಂಕರ್ ಹಾಗೂ ಹಾಲಿನ ಲಾರಿಯ ಚಾಲಕರು ವಾಹನಗಳಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅವಘಡಗಳನ್ನು ತಡೆದಿದ್ದಾರೆ ಬೆಂಕಿಯಿಂದಾಗಿ ಆ ಮಾರ್ಗದಲ್ಲಿ…

Read More

ಶ್ರೀನಿವಾಸಪುರ:ಲಂಚ ಪಡೆಯುತ್ತಿದ್ದ ಪಂಚಾಯಿತಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದಿದ್ದಾರೆ.ನರೇಗಾ ಕಾಮಗಾರಿ ಸಂಬಂಧ ಸಪ್ಲೈ ಬಿಲ್ ಬಿಡುಗಡೆ ಮಾಡಲು ಗುತ್ತಿದಾರನಿಂದ ಲಂಚದ ಮುಂಗಡ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.ಶ್ರೀನಿವಾಸಪುರ ತಾಲೂಕಿನ ಹೋಬಳಿ ಕೇಂದ್ರವಾದ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024-26 ನೇ ಸಾಲಿಗೆ ಸಂಬಂಧಪಟ್ಟಂತೆ ನರೇಗಾ ಯೋಜನೆಯಡಿಯಲ್ಲಿ ನಿರ್ವಹಿಸಲಾಗಿರುವ 32 ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನರೇಗಾ ಗುತ್ತಿಗೆದಾರ ಪಂಚಾಯಿತಿ ವತಿಯಿಂದ ಕಾರ್ಯಾದೇಶ ಪಡೆದುಕೊಂಡು 40 ಲಕ್ಷ ರೂ.ವೆಚ್ಚದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಬಿಲ್ಲಿನ ಮೊತ್ತ ಬಿಡುಗಡೆ ಮಾಡಲು ಕಮೀಷನ್ ರೂಪದಲ್ಲಿ ಆರೋಪಿಗಳು ಸೋಮವಾರ ಸಂಜೆ ಗುತ್ತಿಗೇದಾರ ಶಿವಕುಮಾರ್ ಮನೆಗೆ ಹೋಗಿ ಮೊದಲ ಕಂತಿನ ಲಂಚದ ಹಣ 5 ಲಕ್ಷ ರೂಗಳನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಶಿವಕುಮಾರ್ ಎಂಬುವವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಲಾಗಿದೆ.ಪಿಡಿಒ ಸೇರಿ ನಾಲ್ಕು ಜನರ ಬಂಧನಯಲ್ದೂರು ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ.ನರೇಂದ್ರಬಾಬು,ಗ್ರೇಡ್‌–2 ಕಾರ್ಯದರ್ಶಿ ಶಿವಶಂಕರ್‌, ಜೂನಿಯರ್‌…

Read More

‘ಏಳೇಳು ಜನುಮದ ಬಾಂಧವ್ಯ’ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಪತಿ-ಪತ್ನಿ ನಡುವಿನ ಅತ್ಯಂತ ಪವಿತ್ರ ಮತ್ತು ಗಾಢವಾದ ಸಂಬಂಧವನ್ನು ಪ್ರತಿಪಾದಿಸುತ್ತದೆ.ದಾಂಪತ್ಯ ಜೀವನ ಒಂದು ಜನ್ಮಕ್ಕೆ ಸೀಮಿತವಾಗದೆ, ಮುಂದಿನ ಏಳು ಜನ್ಮಗಳಿಗೂ ಜೊತೆಯಾಗಿ ಸಾಗುವ ಪ್ರೀತಿ, ನಂಬಿಕೆ ಮತ್ತು ಅನುಬಂಧದ ಸಂಕೇತ ಎನ್ನುತ್ತಾರೆ. ನ್ಯೂಜ್ ಡೆಸ್ಕ್:ಇದಕ್ಕೆ ಸಾಕ್ಷಿ ಎನ್ನುವಂತೆ ವೃದ್ಧ ದಂಪತಿ ಪ್ರಖ್ಯಾತ ತಿರುಮಲ ಮೆಟ್ಟಿಲು ಬೆಟ್ಟ ಹತ್ತುವಾಗ ಭಕ್ತರಿಗೆ ಕಂಡು ಬಂದಿದೆ.ತಿರುಮಲ ಮೆಟ್ಟಿಲುಗಳ ಮೇಲೆ ಅಪರೂಪದ ಅದ್ಭುತ ದೃಶ್ಯವೊಂದು ಇತ್ತಿಚಿಗೆ ಕಂಡುಬಂದಿದ್ದು ವೃದ್ಧ ದಂಪತಿ ನಡುವಿನ ಬಾಂಧವ್ಯ ಎಷ್ಟೊಂದು ಗಾಡವಾಗಿದೆ ಎಂಬುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದ್ಭುತ ದೃಶ್ಯ ವೈರಲ್ ಆಗಿದ್ದು ತಿರುಮಲಕ್ಕೆ ಹೋಗುವ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಮೆಟ್ಟಿಲುಗಳನ್ನು ಹತ್ತಲು ವೃದ್ಧ ಹೆಂಡತಿ ಪ್ರಯಾಸ ಪಡುತ್ತಿದ್ದಾಗ ವೃದ್ಧ ಗಂಡ ತನ್ನ ಬುಜದ ಮೇಲಿನ ಟವಲ್ ಅನ್ನು ಒಂದು ಭಾಗ ಕೈಗೆ ಸುತ್ತಿಕೊಂಡು ಮತ್ತೊಂದು ಭಾಗವನ್ನು ಹೆಂಡತಿಗೆ ನೀಡುತ್ತಾನೆ ಇದನ್ನು ಹಿಡಿದುಕೊಂಡ ಪತ್ನಿ ಭಕ್ತಿಂದ ಹೆಜ್ಜೆಗಳನ್ನು ಇಡುತ್ತ ಬೆಟ್ಟ ಹತ್ತುತ್ತಿರುವ ಅಪರೂಪದ ದೃಶ್ಯ…

Read More

ನ್ಯೂಜ್ ಡೆಸ್ಕ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಈಗ ಶಕ್ತಿ ಆಗಿದೆ   ಸಚಿವರಾಗಬೇಕು ಎನ್ನುವ ಆಕಾಂಕ್ಷಿಗಳು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.ಎನ್ ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಕೆ ಎಂ ಶಿವಲಿಂಗೇಗೌಡ, ಶ್ರೀನಿವಾಸ್ ಮಾನೆ, ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತು ಕೆ ವೆಂಕಟೇಶ್ ಅವರುಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರಮುಖ ಆಕಾಂಕ್ಷಿಗಳು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ  ಕೆಲವು ಜೆಡಿಎಸ್ ಕಾರ್ಯಕರ್ತರು ಅವರ ಕಡೆಗೆ ಚಪ್ಪಲಿ ಎಸೆದ ಘಟನೆ ಕುರಿತು ವಿವರಿಸಿ ಭಾವುಕರಾದರು.ಇದಕ್ಕೆ ಸಿದ್ದರಾಮಯ್ಯ ಮಾತನಾಡಿ ಪೊಲೀಸರ ಉಪಸ್ಥಿತಿಯ ಹೊರತಾಗಿಯೂ ಆಡಳಿತ ಪಕ್ಷದ ಶಾಸಕರೊಬ್ಬರು ಇಂತಹ ಘಟನೆಯನ್ನು ಎದುರಿಸಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.ಜೊತೆಗೆ ಸಿದ್ದರಾಮಯ್ಯ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಘಟನೆಯ ಕುರಿತು ಸೂಕ್ತ ತನಿಖೆ ನಡೆಸುವಂತೆ ಹೇಳಿದ ಅವರು…

Read More