Author: Srinivas_Murthy

ಯಲ್ದೂರು: ಶ್ರೀನಿವಾಸಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಯಲ್ದೂರು ಸರ್ಕಾರಿ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವ ಯು.ಟಿ.ಖಾದರ್ ,ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರಿನಲ್ಲಿ ವಿವಿಧ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಗಂಗಾಧರ್ ನೇತೃತ್ವದಲ್ಲಿ ಯುವಕರು ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿದ್ದ ಯುವಕರು ಸುಮಾರು 40,000ಕ್ಕೂ ಅಧಿಕ ಜನಸಂಖ್ಯೆ ಇರುವ ಯಲ್ದೂರು ಹೋಬಳಿ ಕೇಂದ್ರದಲ್ಲಿ ಇರುವ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ ಸೌಲಭ್ಯ ಅತ್ಯಗತ್ಯವಾಗಿದೆ. ತುರ್ತು ಆರೋಗ್ಯ ಸೇವೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತ ಚಿಕಿತ್ಸೆ ದೊರೆಯಲು ಆಂಬುಲೆನ್ಸ್ ಸೇವೆ ಪ್ರಮುಖವಾಗಿದೆ ಎಂಬುದಾಗಿ ಮನವರಿಕೆ ಮಾಡಿದರು ಇದಕ್ಕೆ ಸ್ಪಂದಿಸಿದ ಸಚಿವ ಆದಷ್ಟು ಬೇಗ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿ, ಮುಖ್ಯಮಂತ್ರಿಗಳ ಕಚೇರಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿ,…

Read More

ಚಿಕ್ಕಬಳ್ಳಾಪುರ ತಾಲೂಕು ಗಂಗರೇಕಾಲುವೆಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಕುಂಭಾಭಿಷೇಕ ಮಹೋತ್ಸವ ಅದ್ಧೂರಿಯಾಗಿ ಭಕ್ತಿಭಾವದಿಂದ ನಡೆಯಿತು.ಮಠಾಧೀಶರು ಹಾಗೂ ಭಕ್ತರ ಉಪಸ್ಥಿತಿ ಹಾಗು ಸಂಸದ ಶಾಸಕ ಗಣ್ಯರು ಭಾಗವಹಿಸುವಿಕೆ. ಚಿಕ್ಕಬಳ್ಳಾಪುರ: ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಗ್ರಹ ಪ್ರತಿಷ್ಠಾಪನೆ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.ಗ್ರಾಮಸ್ಥರು ಹಾಗೂ ದೇವಾಲಯದ ಭಕ್ತರ ಸಹಕಾರದಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಅಭಿಷೇಕಗಳನ್ನು ನೆರವೇರಿಸಲಾಯಿತು. ದೇವಾಲಯದ ಜೀರ್ಣೋದ್ಧಾರದ ಬಳಿಕ ನಡೆದ ಮಹೋತ್ಸವಕ್ಕೆ ಗಂಗರೇಕಾಲುವೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಮೂಲ ಬಸವೇಶ್ವರ ಸ್ವಾಮಿ, ಗಣಪತಿ ಹಾಗೂ ಶಿವಪಾರ್ವತಿ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಇದರೊಂದಿಗೆ…

Read More

ನ್ಯೂಜ್ ಡೆಸ್ಕ್: ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ.ಕೇಂದ್ರೀಯ ತನಿಖಾ ಸಂಸ್ಥೆಗಳು ನೀಡಿದ ಗೌಪ್ಯ ಮಾಹಿತಿಯನ್ನಾಧರಿಸಿ ದೊಡ್ಡಬಳ್ಳಾಪುರ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಸೈಯದ್ ಅಬೂಬಕರ್ 25 ವರ್ಷದ ಏಸಿ ಟೆಕ್ನಿಷಿಯನ್‌ ನನ್ನು ಬಂಧಿಸಲಾಗಿದೆ ಈತ ಕಳೆದ ಎರಡು ವರ್ಷಗಳಿಂದ ಇನ್‌ಸ್ಟಾಗ್ರಾಮ್‌ ಮೂಲಕ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳು ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಜಾಲದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನಂತೆ.ಅಲ್ಲದೆ, ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ವೀಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ ಇದರ ಜೊತೆಗೆ ತನ್ನ ಗುರುತಿನ ಚೀಟಿ ಮತ್ತು ಪ್ರಮುಖ ವಿವರಗಳನ್ನು ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ. ಈತನ ಮೊಬೈಲ್ ಫೋನ್ ತಪಾಸಣೆ ನಡೆಸಿದಾಗ ಪಿಸ್ತೂಲ್‌ಗಳ ಹಲವಾರು ಫೋಟೋಗಳು ಪತ್ತೆಯಾಗಿವೆ.ಪೊಲೀಸರ ಮಾಹಿತಿಯಂತೆ, ಆರೋಪಿ ಸೈಯದ್ ಅಬೂಬಕರ್ ದೆಹಲಿ ಮತ್ತು ಕೇರಳದಲ್ಲಿ ತರಬೇತಿ ಪಡೆದಿದ್ದು, ಮಸೀದಿಯೊಂದರಲ್ಲಿ ಪಾಠ ಕೂಡ ಮಾಡುತ್ತಿದ್ದ. ಈತ ಸ್ಥಳೀಯವಾಗಿ ನೆಟ್‌ವರ್ಕ್ ಬೆಳೆಸಿಕೊಂಡು ಕಾನೂನುಬಾಹಿರ…

Read More

ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ರೂಢಿಗೆ ತಂದಿರುವ ಹಾಗೂ ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಹಬ್ಬ-ಹರಿದಿನಗಳು, ಸಂಸ್ಕಾರಗಳು ಮತ್ತು ಸಂಪ್ರದಾಯಗಳ ಹಿಂದೆ ಅನೇಕ ಅರ್ಥಪೂರ್ಣ ಲೆಕ್ಕಾಚಾರಗಳು, ಜೀವನದ ಅನುಭವಗಳು ಹಾಗೂ ಸಾಮಾಜಿಕ ಕಾಳಜಿ ಇವೆ. ಕೇವಲ ಸಂಪ್ರದಾಯವನ್ನು ಅನುಸರಿಸುವುದಕ್ಕಿಂತ ಅದರ ಹಿಂದಿರುವ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಹಿರಿಯರು ಏಕೆ ಈ ಆಚರಣೆಯನ್ನು ರೂಢಿಗೆ ತಂದರು? ಅದರ ಮೂಲಕ ಸಮಾಜಕ್ಕೆ ಯಾವ ಸಂದೇಶವನ್ನು ನೀಡಿದರು? ಮುಂದಿನ ಪೀಳಿಗೆಗೆ ಯಾವ ಮೌಲ್ಯವನ್ನು ತಲುಪಿಸಲು ಬಯಸಿದರು? ಎಂಬುದನ್ನು ಅರಿಯುವ ಪ್ರಯತ್ನವೂ ನಮ್ಮದಾಗಬೇಕು. ಕಾಲ ಬದಲಾಗಬಹುದು, ಜೀವನಶೈಲಿ ಬದಲಾಗಬಹುದು. ಆದರೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಮೂಲ ಆಶಯಗಳು ಮರೆಯಾಗಬಾರದು. ಅವುಗಳಲ್ಲಿರುವ ಉತ್ತಮ ಮೌಲ್ಯಗಳನ್ನು ಉಳಿಸಿಕೊಂಡು, ಅವುಗಳ ಅರ್ಥವನ್ನು ಇಂದಿನ ಪೀಳಿಗೆಗೆ ತಿಳಿಸಿ, ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಪ್ರದಾಯವನ್ನು ಕೇವಲ ಆಚರಿಸುವುದಲ್ಲ; ಅದರ ಹಿಂದಿರುವ ಅರ್ಥವನ್ನು ಅರಿತು ಕೊಳ್ಳಬೇಕು. ಸಂಸ್ಕಾರವನ್ನು ಕೇವಲ ಹೇಳಿಕೊಡುವುದಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರಿಂದ…

Read More

ಕಳ್ಳತನಕ್ಕಾಗಿ ಚಾಕು, ಗ್ಲೌಸ್‌ಗಳನ್ನು ಖರೀದಿಸಿ ಮನೆಗೆ ನುಗ್ಗಿದ್ದ ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿ ಹೊರಗೆ ಕಾವಲು, ಮತ್ತೊಬ್ಬ ಮನೆಯೊಳಗೆ ಪ್ರವೇಶಿಸಿ ಪ್ರಿನ್ಸಿಪಾಲ್‌ರನ್ನು 27 ಬಾರಿ ಚಾಕುವಿನಿಂದ ಇರಿದು ಹತ್ಯೆ. ಮನೆಯಿಂದ ₹2.50 ಲಕ್ಷ ನಗದು ದೋಚಿಕೊಂಡು ಪರಾರಿ, ಪೋಲಿಸ್ ತನಿಖೆಯಲ್ಲಿ ಕೊನೆಯ ಕ್ಷಣದಲ್ಲಿ ‘ಬಾಬು… ಏಯ್ ಬಾಬು…’ ಎಂದು ಕೂಗಿದ್ದ ರೂಪಾ ರೆಡ್ಡಿ ಕೊನೆಯ ದೂರವಾಣಿ ಮಾತುಗಳೇ ಪೊಲೀಸರಿಗೆ ಮಹತ್ವದ ಸುಳಿವು ಇಬ್ಬರು ವಿದ್ಯಾರ್ಥಿಗಳ ಬಂಧನ; ₹1.54 ಲಕ್ಷ ನಗದು, ಐಫೋನ್ ಹಾಗೂ ಎರಡು ಸ್ಮಾರ್ಟ್‌ಫೋನ್‌ಗಳ ವಶವಶಪಡಿಸಿಕೊಂಡ ಹಣದಲ್ಲಿದ್ದ ಮೂರು ₹500 ನೋಟುಗಳಲ್ಲಿ ರಕ್ತದ ಕಲೆ ಪತ್ತೆಇಬ್ಬರು ಅಪ್ರಾಪ್ತರನ್ನು ಜುವೆನೈಲ್ ಹೋಮ್‌ಗೆ ಕಳುಹಿಸಿದ ಪೊಲೀಸರು ಕ್ರೈಮ್ ಡೆಸ್ಕ್:ದುಶ್ಚಟಗಳಿಗೆ ಬಲಿಯಾಗಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು, ತಮಗೆ ಗದರಿಸಿ ಬುದ್ಧಿವಾದ ಹೇಳಿದ್ದ ಪ್ರಿನ್ಸಿಪಾಲ್ ಮೇಲೆ ದ್ವೇಷ ಬೆಳೆಸಿಕೊಂಡು, ಪ್ರಿನ್ಸಿಪಾಲ್ ಒಬ್ಬಂಟಿಯಾಗಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಅವರ ಮನೆಗೆ ನುಗ್ಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದು ಸಾಗರಾದಚೆ ವಿದೇಶದಲ್ಲಿ ನಡೆದಿರುವುದಲ್ಲ ದಕ್ಷಿಣಭಾರತದ ತೆಲಂಗಾಣದ…

Read More

ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವಾಗದ ಅಧಿಕಾರಿಗಳು ತೋಲಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ನಮಗೆ ಬೇಡ ಗ್ರಾಮಸ್ಥರ ಅಗ್ರಹ ಶ್ರೀನಿವಾಸಪುರ: ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಗ್ರಾಮಸ್ಥರ ವಿವಿಧ ಕೆಲಸಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಆರೋಪಿಸಿದ್ದಾರೆ. ಈ ಕುರಿತು ಲಕ್ಷ್ಮೀಸಾಗರ ಹಾಗೂ ಮಂಜಲನಗರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮಹೇಶ್‌ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಸಮಾಜ ಸೇವಕ ರಘುನಾಥ್‌ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಒಂದೂವರೆ–ಎರಡು ತಿಂಗಳಿಂದ ವಿವಿಧ ಕೆಲಸಗಳು ಹಾಗೂ ಬಿಲ್‌ಗಳಿಗೆ ಸಂಬಂಧಿಸಿದಂತೆ ಸ್ಪಂದನೆಗಾಗಿ ಪಂಚಾಯಿತಿಗೆ ಅಲೆದಾಡುತ್ತಿದ್ದರೂ, ಪಿಡಿಒ ಅವರು ಸಿಗುತ್ತಿಲ್ಲ ಎಂದು ದೂರಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿದ್ದರೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಂದಕ್ಕಿಂತ…

Read More

ಶ್ರೀನಿವಾಸಪುರ:ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಜಯಂತಿ ಆಚರಣೆಗೆ ತಾಲೂಕು ಆಡಳಿತ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹಿಂದುಳಿದ ಸಮಾಜಗಳ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಆರೋಪಿಸಿದರು.ದೇವರಾಜ ಅರಸು ಅವರ ಜಯಂತಿ ಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಅರ್ಥಪೂರ್ಣವಾಗಿ ಆಚರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಿಂದುಳಿದ ವರ್ಗಗಳು, ಬಡವರು ಹಾಗೂ ಶೋಷಿತ ಸಮಾಜಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದ ದೇವರಾಜ ಅರಸು ಅವರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಅವರ ಜಯಂತಿಯನ್ನು ಆಚರಿಸುವುದು ಸರ್ಕಾರದ ಆದೇಶ ಆದರೆ ಜಯಂತಿ ಆಚರಣೆ ಕಾರ್ಯಕ್ರಮದ ಆಯೋಜನೆ, ಪ್ರಚಾರ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಜವಾಬ್ದಾರಿ ತಗೆದುಕೊಳ್ಳುವಲ್ಲಿ ತಹಶೀಲ್ದಾರ್ ತೀವ್ರ ನಿರ್ಲಕ್ಷ್ಯ ಬೇಕಾಬಿಟ್ಟಿ ವರ್ತನೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಲ್ಲದೆ ಇಂತಹ ಬೇಜವಾಬ್ದಾರಿ ತಹಶೀಲ್ದಾರ್ ವಿರುದ್ದ ಸರ್ಕಾರ ಕ್ರಮ ಜರಿಗಿಸುವಂತೆ ಅಗ್ರಹಿಸಿದರು. ಜಯಂತಿ ಅಚರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹಿಂದುಳಿದ ಸಮಾಜಗಳ ವಿವಿಧ ಸಂಘಟನೆಗಳ…

Read More

ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರಾಗಿದ್ದ ತೇಜಸ್ವಿ ಸೂರ್ಯ ಅವರನ್ನು ಹೊಸ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಗುಜರಾತ್‌ನ ಡಾ. ಹೇಮಾಂಗ್ ಜೋಶಿ ಅವರನ್ನು ನೇಮಿಸಲಾಗಿದೆ. ನ್ಯೂಜ್ ಡೆಸ್ಕ್: ಭಾರತೀಯ ಜನತಾ ಪಕ್ಷವು ಆಗಸ್ಟ್ 17, 2026 ಸೋಮವಾರ ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಜನರ ಹೊಸ ತಂಡದಲ್ಲಿ ಹಲವಾರು ಹೊಸ ಮುಖಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ.ಒಟ್ಟು ಪದಾಧಿಕಾರಿಗಳ ಸಂಖ್ಯೆಯಲ್ಲಿ 51 ಹೊಸ ಹೆಸರುಗಳು ಸೇರಿವೆ. ಪಕ್ಷದೊಳಗೆ ಅನುಭವ ಮತ್ತು ಯುವ ನಾಯಕತ್ವದ ನಡುವೆ ಸಮತೋಲನವನ್ನು ಸಾಧಿಸಲು ಪಕ್ಷವು ಪ್ರಯತ್ನಿಸಿದೆ. ಈ ಮಧ್ಯೆ ಹೆಚ್ಚು ಚರ್ಚಿಗೆ ಒಳಗಾಗಿರುವ ವಿಚಾರ ಎಂದರೆ ಭಾರತೀಯ ಜನತಾ ಯುವ ಮೋರ್ಚಾ (BJYM) ನ ಹೊಸ ಅಧ್ಯಕ್ಷರು. ಗುಜರಾತ್‌ನ ವಡೋದರಾದ ಬಿಜೆಪಿ ಸಂಸದ ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಆ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ…

Read More

ಚಿಂತಾಮಣಿ:ಚಿಂತಾಮಣಿಯ ಹೃದಯ ಭಾಗ ಎಂದೇ ಕರೆಯಬಹುದಾದ ಅಜಾದ್ ಚೌಕ, ಹಳೇ ಊರಿನ ಬಹುದೊಡ್ಡ ಐಕಾನ್‌. ಇದು ಕೇವಲ ಒಂದು ವೃತ್ತವಲ್ಲ ನಗರದ ಹಳೆಯ ನೆನಪುಗಳು, ಜನಜೀವನ ಹಾಗೂ ವ್ಯಾಪಾರ-ವಹಿವಾಟಿನೊಂದಿಗೆ ಬೆಸೆದುಕೊಂಡಿರುವ ಪ್ರಮುಖ ತಾಣ. ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಮೂಡಿಸುವ ಅಜಾದ್ ಚೌಕ, ಹಲವು ತಲೆಮಾರುಗಳ ಚಿಂತಾಮಣಿಯ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ.. ಇದೀಗ ಐತಿಹಾಸಿಕ ಅಜಾದ್ ಚೌಕಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಯುರೋಪಿಯನ್ ನಗರಗಳ ಪ್ರಾಚೀನ ವಾಸ್ತುಶಿಲ್ಪವನ್ನು ನೆನಪಿಸುವ ಕಲಾತ್ಮಕ ವಿನ್ಯಾಸದ ರೂಪ ನೀಡಲಾಗಿದೆ.ಊರಿನ ನೆನಪುಗಳನ್ನು ಉಳಿಸಿಕೊಂಡು ಹೊಸ ಪೀಳಿಗೆಯನ್ನು ಆಕರ್ಷಿಸುವ ರೀತಿಯಲ್ಲಿ ಚೌಕವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೌಕದ ವಿನ್ಯಾಸ ಬಾಹುಬಲಿ ಸಿನಿಮಾದ ದೃಶ್ಯ ವೈಭವದಂತೆ ಕಲ್ಪಿತ ಪ್ರಾಚೀನ ನಗರ ಮಾಹಿಷ್ಮತಿ ಸಾಮ್ರಾಜ್ಯದ ಭವ್ಯ ವಾಸ್ತುಶಿಲ್ಪವನ್ನು ನೆನಪಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.ಚಿಂತಾಮಣಿಯ ಹೃದಯ ಭಾಗ ಅಜಾದ್ ಚೌಕ ಹೊಸ ರೂಪದಲ್ಲಿ ಕಾಣುತ್ತಿದೆ. ಅಜಾದ್ ಚೌಕದ ಸುತ್ತಮುತ್ತಲಿನ ಪ್ರದೇಶಕ್ಕೆ ತನ್ನದೇ ಆದ ಐತಿಹಾಸಿಕ ಹಾಗೂ ವಾಣಿಜ್ಯ ಹಿನ್ನೆಲೆಯಿದೆ. ಪುರಾತನ ಹರಿಹರೇಶ್ವರ ದೇವಾಲಯ, ಹಳೆಯ ಕಾಲದ…

Read More

ಶ್ರೀನಿವಾಸಪುರ: ಇಂದು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಅನೇಕ ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಅನೇಕ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ. ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಶಿಕ್ಷಣ, ಉದ್ಯೋಗ, ಆರೋಗ್ಯ, ಸುರಕ್ಷತೆ ಮತ್ತು ಗೌರವಯುತ ಜೀವನ ನಡೆಸಲು ಅನವು ಮಾಡಿಕೊಡುವುದೆ ಸ್ವಾತಂತ್ರ್ಯದ ಆಶಯವಾಗಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಬಾಲಕೀಯರ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಹಾಗೂ ಶಿಕ್ಷಣ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಯುವಕರು ಕೌಶಲ್ಯಯುತವಾದ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ಮೂಲ…

Read More