ಶ್ರೀನಿವಾಸಪುರ:ವಾರಂತ್ಯದ ಒಳಗಾಗಿ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಘೋಷಿಸಿದರು.
ಇಂದು ಮಂಗಳವಾರ ಕಾರ್ಮಿಕ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು,ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರೂಪಾಯಿಗಳು ಮಾತ್ರ ಬೆಳೆಗಾರನಿಗೆ ಉಳಿಯುತ್ತಿದೆ.ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯಗಳ ಸರಮಾಲೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆಗಾರನ ಕೈ ಹಿಡಿಯುವ ಅವಶ್ಯಕತೆ ಇದೆ ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡಬೇಕಿದೆ ಮಾವು ಕೊಯ್ಲು ಅರ್ದ ಭಾಗ ಮುಗಿದಿದೆ ಸಣ್ಣ-ಪುಟ್ಟ ಮಾವು ಬೆಳೆಗಾರರು ಕೊಯ್ಲು ಮಾಡಲು ಆರ್ಥಿಕ ಸಾಮರ್ಥ್ಯ ಇಲ್ಲದೆ ಮರದಲ್ಲೆ ಮಾವನ್ನು ಬಿಡುತ್ತಿದ್ದಾರೆ ಈ ಎಲ್ಲಾ ವಿದ್ಯಮಾನ್ಯಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದೆ ಆದರೂ ಸರ್ಕಾರ ಈ ಕುರಿತಾಗಿ ಯಾವುದೆ ನಿರ್ಧಾರ ಕೈಗೊಂಡಿಲ್ಲ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ ಪಾತಕೋಟನವೀನ್ ಕುಮಾರ್ ಮಾತನಾಡಿ ಮಾವುಬೆಳೆಗಾರರ ಸಮಸ್ಯ ಕುರಿತಂತೆ ಸರ್ಕಾರ ಈ ತಕ್ಷಣ ನಿಲವು ಪ್ರಕಟಿಸಬೇಕು ಬೆಂಬಲ ಬೆಲೆ ವಿಚಾರವಾಗಿ ಆದ್ಯತೆ ಮೆರೆಗೆ ನಿರ್ಧಾರ ತಗೆದುಕೊಳ್ಳಬೇಕು ಇಲ್ಲದಿದ್ದರೆ ಈ ತಿಂಗಳ 19 ನಂತರ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುವುದಾಗಿ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಯಣ್,ಪಾರೂಖ್,ರೈತ ಸಂಘದ ಈರಪ್ಪರೆಡ್ಡಿ, ಬೈರೆಡ್ಡಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
- ಶ್ರೀನಿವಾಸಪುರ:ತಾಲೂಕು ಶಿಕ್ಷಕರ ಸಂಘದಲ್ಲಿ ಗುಂಪುಗಾರಿಕೆ,ಭುಗಿಲೆದ್ದ ಭಿನ್ನಮತ!
- ನಮ್ಮ ಜಮೀನು ನಮಗೆ ವಾಪಸ್ಸು ಕೋಡಿ DFO ಕಚೇರಿ ಮುಂದೆ ಪ್ರತಿಭಟನೆ!
- ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೊತ್ತೂರು ಮಂಜುನಾಥ್ ಅವಿರೋಧ ಆಯ್ಕೆ!
- ಶ್ರೀನಿವಾಸಪುರ: ಶಿಕ್ಷಕನ ವಿರುದ್ಧ ದೂರು ವಿರೋಧಿಸಿ ನೌಕರರ ಸಂಘದ ಬೃಹತ್ ಪ್ರತಿಭಟನೆ!
- ಹಿಂದುಳಿದ ಜಾತಿಗಳ ಜನಜಾಗೃತಿ ಸಮಾವೇಶಕ್ಕೆ ಶ್ರೀನಿವಾಸಪುರದಿಂದ ಜನ!
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
Tuesday, September 15



