ಬೆಂಗಳೂರು:ರಾಜಧಾನಿ ಬೆಂಗಳೂರು ಜನತೆಯ ದಿನನಿತ್ಯದ ಸಂಚಾರದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋದ ಪ್ರಸ್ತಾವಿತ ಕೆಂಪು ಲೈನ್ (Red Line)ಹೆಬ್ಬಾಳ-ಸರ್ಜಾಪುರ ಮಾರ್ಗವಾಗಿದ್ದು ಸುಮಾರು 37 ಕಿ.ಮೀ ಉದ್ದದ ಈ ಡಬಲ್ ಡೆಕ್ಕರ್ ಕಾರಿಡಾರ್ ಯೋಜನೆಯು ವೆಚ್ಚ ಕಡಿತ ಮತ್ತು ಪರಿಷ್ಕರಣೆ ಹಂತದಲ್ಲಿದೆ.ಇದು ಬೆಂಗಳೂರು ನಗರದ ಉತ್ತರ ಭಾಗದ ಕೈಗಾರಿಕಾ ಪ್ರದೇಶಗಳು ಹಾಗೂ ಆಗ್ನೇಯ ಭಾಗದ ಐಟಿ (IT) ಕಾರಿಡಾರ್ ನಡುವಿನ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ ಎನ್ನುತ್ತಾರೆ ತಜ್ಞರು.
ಕೆಂಪು ಮಾರ್ಗ ಎಂದೂ ಕರೆಯಲ್ಪಡುವ 36.59 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಬರಲಿದ್ದು ಇದರಲ್ಲಿ 11 ಸುರಂಗ ಮಾರ್ಗದ ನಿಲ್ದಾಣಗಳಾಗಿವೆ.ಈ ಪೈಕಿ 14.45 ಕಿ.ಮೀ. ಸುರಂಗ ಮಾರ್ಗ ಮತ್ತು 22.14 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುತ್ತದೆ.
ಡಿಪಿಆರ್ಗೆ ಸಿದ್ಧತೆ:
ಈ ಮಾರ್ಗದ ಭೂತಾಂತ್ರಿಕ ಅಧ್ಯಯನಕ್ಕಾಗಿ ಬಿಎಂಆರ್ಸಿಎಲ್ ಟೆಂಡರ್ ಕರೆದಿದ್ದು ಇದಕ್ಕಾಗಿ 6.86 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಗುತ್ತಿಗೆದಾರರು ಕಾರ್ಯಾದೇಶ ಪಡೆದ 150 ದಿನಗಳಲ್ಲಿಈ ಅಧ್ಯಯನ ಪೂರ್ಣಗೊಳಿಸಬೇಕಿದೆ. ತಮಿಳುನಾಡು ಗಡಿ ವರಿಗೂ ನಮ್ಮ ಮೆಟ್ರೋ ತಲಪುವ ಕೆಂಪು ಮಾರ್ಗದ ನಮ್ಮ ಮೇಟ್ರೋ 2030ಕ್ಕೆ ಶುರುವಾಗಲಿದಿಯಂತೆ.

ಮೆಟ್ರೋ ನಿಲ್ದಾಣಗಳು
ಹೆಬ್ಬಾಳ,ಗಂಗಾನಗರ್,ಜಿಕೆವಿಕೆ ಪಶು ವೈದ್ಯಕೀಯ ಕಾಲೇಜು, ಮೇಖ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು ಗಾಲ್ಫ್ ಕ್ಲಬ್,ಚಾಲುಕ್ಯ/ಬಸವೇಶ್ವರ ಸರ್ಕಲ್, ಕೆ.ಆರ್.ಸರ್ಕಲ್,ಟೌನ್ ಹಾಲ್,ಶಾಂತಿನಗರ, ನಿಮ್ಹಾನ್ಸ್ ,ಡೇರಿ ಸರ್ಕಲ್,ಕೋರಮಗಲ ಮೂರನೆ ಬ್ಲಾಕ್,ಕೋರಮಂಗಲ ಎರಡನೆ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳಂದೂರು, ಕಲಿಕೊಂಡಹಳ್ಳಿ, ದೊಡ್ಡಕನ್ನಲ್ಲಿ,ಕಾರ್ಮೆಲಿನ್,ಅಂಬೇಡ್ಕರ್ ನಗರ,ಕೊಡತಿಗೇಟ್, ಮುತ್ತಾನಲ್ಲೂರ್ ಕ್ರಾಸ್,ದೊಮ್ಮಸಂದ್ರ,ಸೊಂಪುರ,ಕಾಡ ಅಗ್ರಹಾರ,ಸರ್ಜಾಪುರ. ಮಾರ್ಗದಲ್ಲಿ ಬರುವಂತ ಮೆಟ್ರೋ ನಿಲ್ದಾಣಗಳಾಗಿದ್ದು,ಇದರಲ್ಲಿ ಸದ್ಯದ ಮಾಹಿತಿ ಪ್ರಕಾರ, ಪರಿಷ್ಕೃತ ವಿವರವಾದ ಯೋಜನಾ ವರದಿ (DPR) ಯಿಂದ ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ.
ಯೋಜನಾ ವೆಚ್ಚ ಕಡಿತಗೊಳಿಸಲು ಫ್ರೆಂಚ್ ಸಂಸ್ಥೆ ‘ಸಿಸ್ಟ್ರಾ’ ನೀಡಿದ ಸಲಹೆಯಂತೆ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ಸುರಂಗ ಮಾರ್ಗದ ಮೆಟ್ರೋ ನಿಲ್ದಾಣಗಳ ಉದ್ದವನ್ನು ಕಡಿಮೆ ಮಾಡಿದ್ದ BMRCK ಇದೀಗ ಮೆಖ್ರಿ ಸರ್ಕಲ್ ಮತ್ತು ಹೆಬ್ಬಾಳ ಸಮೀಪದ ಗಂಗಾನಗರ ನಡುವೆ ಈ ಹಿಂದೆ ಯೋಜಿಸಲಾಗಿದ್ದ ವೆಟರ್ನರಿ ಕಾಲೇಜು ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣದ ನಿರ್ಮಾಣವನ್ನು ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಪಡೆಯಲು ವೆಚ್ಚವನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಹೇಳಲಾಗುತ್ತಿದೆ. ಒಟ್ಟು ವೆಚ್ಚವನ್ನು 25,485 ಕೋಟಿಗೆ ಪರಿಷ್ಕರಣೆ ಮಾಡಲಾಗಿದ್ದು ಇದೇ ವೇಳೆ, ಡಬಲ್ ಡೆಕ್ಕರ್ ವಿನ್ಯಾಸಕ್ಕೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದಿಯಂತೆ ಈ ಬಗ್ಗೆ ಅಧ್ಯಯನ ನಡೆಸಲು IIT ರೂರ್ಕಿಗೆ ಕೋರಲಾಗಿದೆ ಎನ್ನುತ್ತಾರೆ.



