ಶ್ರೀನಿವಾಸಪುರ:ಲಂಚ ಪಡೆಯುತ್ತಿದ್ದ ಪಂಚಾಯಿತಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದಿದ್ದಾರೆ.ನರೇಗಾ ಕಾಮಗಾರಿ ಸಂಬಂಧ ಸಪ್ಲೈ ಬಿಲ್ ಬಿಡುಗಡೆ ಮಾಡಲು ಗುತ್ತಿದಾರನಿಂದ ಲಂಚದ ಮುಂಗಡ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.
ಶ್ರೀನಿವಾಸಪುರ ತಾಲೂಕಿನ ಹೋಬಳಿ ಕೇಂದ್ರವಾದ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024-26 ನೇ ಸಾಲಿಗೆ ಸಂಬಂಧಪಟ್ಟಂತೆ ನರೇಗಾ ಯೋಜನೆಯಡಿಯಲ್ಲಿ ನಿರ್ವಹಿಸಲಾಗಿರುವ 32 ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನರೇಗಾ ಗುತ್ತಿಗೆದಾರ ಪಂಚಾಯಿತಿ ವತಿಯಿಂದ ಕಾರ್ಯಾದೇಶ ಪಡೆದುಕೊಂಡು 40 ಲಕ್ಷ ರೂ.ವೆಚ್ಚದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಬಿಲ್ಲಿನ ಮೊತ್ತ ಬಿಡುಗಡೆ ಮಾಡಲು ಕಮೀಷನ್ ರೂಪದಲ್ಲಿ ಆರೋಪಿಗಳು ಸೋಮವಾರ ಸಂಜೆ ಗುತ್ತಿಗೇದಾರ ಶಿವಕುಮಾರ್ ಮನೆಗೆ ಹೋಗಿ ಮೊದಲ ಕಂತಿನ ಲಂಚದ ಹಣ 5 ಲಕ್ಷ ರೂಗಳನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಶಿವಕುಮಾರ್ ಎಂಬುವವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಲಾಗಿದೆ.
ಪಿಡಿಒ ಸೇರಿ ನಾಲ್ಕು ಜನರ ಬಂಧನ
ಯಲ್ದೂರು ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ.ನರೇಂದ್ರಬಾಬು,ಗ್ರೇಡ್–2 ಕಾರ್ಯದರ್ಶಿ ಶಿವಶಂಕರ್, ಜೂನಿಯರ್ ಎಂಜಿನಿಯರ್ ಗೌತಮಿ ಹಾಗೂ ಡೇಟಾ ಎಂಟ್ರಿ ಆಪರೇಟರ್ ವಸಂತ್ ಬಂಧಿತ ಆರೋಪಿಗಳಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರಡಿ (ತಿದ್ದುಪಡಿ-2018) ಪ್ರಕರಣ ದಾಖಲಿಸಿದ್ದಾರೆ.
ರಾತ್ರಿಯಾದರು ಮುಗಿಯದ ತನಿಖೆ
ಲೋಕಾಯುಕ್ತ ಪೊಲೀಸರು ಅಪರಾಧಿಗಳನ್ನು ವಿಚರಾಣೆಗೆ ಒಳಪಡಿಸಿದ್ದು ರಾತ್ರಿ ಹನ್ನೊಂದು ಗಂಟೆಯಾದರೂ ವಿಚಾರಣೆ ಮುಂದುವರೆದಿತ್ತು ಆರೋಪಿಗಳಾದ ಗ್ರೇಡ್–2 ಕಾರ್ಯದರ್ಶಿ ಹಾಗೂ ಪಿಡಿಒ ಜೊತೆಗೆ ಜೂನಿಯರ್ ಎಂಜಿನಿಯರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಅವರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಲೋಕಾ ಕಾರ್ಯಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಆ್ಯಂಟನಿ ಜಾನ್.ಜೆ.ಕೆ, ಉಪಾಧೀಕ್ಷಕಾದ ಬಿ.ಸುನಿಲ್ಕುಮಾರ್,ಎ.ವಿ.ರೇಣುಕಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



