‘ಏಳೇಳು ಜನುಮದ ಬಾಂಧವ್ಯ’ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಪತಿ-ಪತ್ನಿ ನಡುವಿನ ಅತ್ಯಂತ ಪವಿತ್ರ ಮತ್ತು ಗಾಢವಾದ ಸಂಬಂಧವನ್ನು ಪ್ರತಿಪಾದಿಸುತ್ತದೆ.ದಾಂಪತ್ಯ ಜೀವನ ಒಂದು ಜನ್ಮಕ್ಕೆ ಸೀಮಿತವಾಗದೆ, ಮುಂದಿನ ಏಳು ಜನ್ಮಗಳಿಗೂ ಜೊತೆಯಾಗಿ ಸಾಗುವ ಪ್ರೀತಿ, ನಂಬಿಕೆ ಮತ್ತು ಅನುಬಂಧದ ಸಂಕೇತ ಎನ್ನುತ್ತಾರೆ.
ನ್ಯೂಜ್ ಡೆಸ್ಕ್:ಇದಕ್ಕೆ ಸಾಕ್ಷಿ ಎನ್ನುವಂತೆ ವೃದ್ಧ ದಂಪತಿ ಪ್ರಖ್ಯಾತ ತಿರುಮಲ ಮೆಟ್ಟಿಲು ಬೆಟ್ಟ ಹತ್ತುವಾಗ ಭಕ್ತರಿಗೆ ಕಂಡು ಬಂದಿದೆ.
ತಿರುಮಲ ಮೆಟ್ಟಿಲುಗಳ ಮೇಲೆ ಅಪರೂಪದ ಅದ್ಭುತ ದೃಶ್ಯವೊಂದು ಇತ್ತಿಚಿಗೆ ಕಂಡುಬಂದಿದ್ದು ವೃದ್ಧ ದಂಪತಿ ನಡುವಿನ ಬಾಂಧವ್ಯ ಎಷ್ಟೊಂದು ಗಾಡವಾಗಿದೆ ಎಂಬುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದ್ಭುತ ದೃಶ್ಯ ವೈರಲ್ ಆಗಿದ್ದು ತಿರುಮಲಕ್ಕೆ ಹೋಗುವ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಮೆಟ್ಟಿಲುಗಳನ್ನು ಹತ್ತಲು ವೃದ್ಧ ಹೆಂಡತಿ ಪ್ರಯಾಸ ಪಡುತ್ತಿದ್ದಾಗ ವೃದ್ಧ ಗಂಡ ತನ್ನ ಬುಜದ ಮೇಲಿನ ಟವಲ್ ಅನ್ನು ಒಂದು ಭಾಗ ಕೈಗೆ ಸುತ್ತಿಕೊಂಡು ಮತ್ತೊಂದು ಭಾಗವನ್ನು ಹೆಂಡತಿಗೆ ನೀಡುತ್ತಾನೆ ಇದನ್ನು ಹಿಡಿದುಕೊಂಡ ಪತ್ನಿ ಭಕ್ತಿಂದ ಹೆಜ್ಜೆಗಳನ್ನು ಇಡುತ್ತ ಬೆಟ್ಟ ಹತ್ತುತ್ತಿರುವ ಅಪರೂಪದ ದೃಶ್ಯ ಕಂಡವರು ಭಾವುಕರಾಗಿದ್ದಾರೆ.
ಇಳಿ ವಯಸ್ಸಲ್ಲು ಪತಿ ಮತ್ತು ಪತ್ನಿ ನಡುವಿನ ಬಾಂಧವ್ಯ ಬೆಟ್ಟ ಹತ್ತುತ್ತ ಇದ್ದ ಭಕ್ತರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಈಗಲೆ ಈ ಮಟ್ಟದಲ್ಲಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ವೃದ್ಧ ಆದರ್ಶ ದಂಪತಿ ತಮ್ಮ ಜೀವನದುದ್ದಕ್ಕೂ ಹೇಗೆ ನಡೆದಿರುತ್ತಾರೆ ಈಗೀನ ಪೀಳಿಗೆಯ ಪತಿ-ಪತ್ನಿ ಸಣ್ಣ-ಪುಟ್ಟದಕ್ಕೆಲ್ಲ ಜಗಳ ಆಡಿಕೊಂಡು ಬಟ್ಟೆ ಬರೆ ಮೂಟೆ ಕಟ್ಟಿಕೊಂಡು ಮನೆ ಬಿಡುದಲ್ಲ ಸಪ್ತಪದಿ ತುಳಿದು ಆದ ಮದುವೆಯನ್ನೆ ಮುರಿದು ಕೊಳ್ಳುತ್ತಾರೆ ಅಂತಹ ಅವಿವೇಕಿಗಳು ಈ ದೃಷ್ಯವನ್ನು ಅವರ ನಡುವಿನ ಭಾವನೆಗಳನ್ನು ನೋಡಿ ಬದುಕನ್ನು ಅರ್ಥಮಾಡಿಕೊಳ್ಳಬೇಕು.



