ಚಿಂತಾಮಣಿ:ಕರ್ನಾಟಕ ವಿಧಾನಸಭೆ ಮಹಿಳಾ ಶಾಸಕಿಯರಾದ ಮಂಜುಳಾ ಅರವಿಂದ ಲಿಂಬಾವಳಿ,ಶಶಿಕಲಾ ಜೊಲ್ಲೆ, ಹಾಗು ಭಾಗೀರಥಿ ಮುರುಳ್ಯ ಮೂವರು ಶಾಸಕಿಯರು ಚಿಂತಾಮಣಿಯ ಕೈಲಾಸಗಿರಿ ಬೆಟ್ಟದಲ್ಲಿ ಪ್ರಸಿದ್ದ ಗುಹಾಂತರ ದೇವಾಲಯವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳ ಶಿವ),ಜಗದಾಂಬೆ(ಪಾರ್ವತಿ ದೇವಿ) ಮತ್ತು ಶ್ರೀ ವಲ್ಲಭ ಗಣಪತಿ ದೇವರ ದರ್ಶನ ಪಡೆದರು.
ಈ ಕುರಿತು ಹಿರಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವು ಭೇಟಿ ನೀಡಿದ್ದ ಕೈಲಾಸಗಿರಿ ಬೆಟ್ಟದ ಬಗ್ಗೆ ಹಂಚಿಕೊಂಡಿದ್ದು ಪ್ರಕೃತಿಯ ಮಡಿಲಿನಲ್ಲಿ ಮಾನವ ನಿರ್ಮಿತ ಗುಹಾಂತರ ದೇವಾಲಯವಾಗಿದ್ದು ‘ಅಂಬಾಜಿದುರ್ಗ’ ಪರ್ವತ ಶ್ರೇಣಿಯ ಕಲ್ಲಿನ ಬೆಟ್ಟವನ್ನು ಕೊರೆದು ಅದ್ಭುತವಾಗಿ ಬೃಹದಾಕಾರದ ಗುಹಾಂತರ ದೇವಾಲಯಗಳ ಸಮುಚ್ಛಯವನ್ನು ನಿರ್ಮಿಸಲಾಗಿದೆ ಇಲ್ಲಿ ಗಿರಿಜಾ ಕಲ್ಯಾಣದಂತ ಸುಂದರ ಶಿಲ್ಪಕಲೆಗಳಿವೆ ಎಂದು ವರ್ಣಿಸಿದ್ದಾರೆ.

ನಂತರ ಅವರು ಕೈವಾರದ ಐತಿಹಾಸಿಕ ಪುಣ್ಯಕ್ಷೇತ್ರ ಹಾಗೂ ಆಧ್ಯಾತ್ಮಿಕ ತಾಣವಾದ ಶ್ರೀ ಕೈವಾರ ಯೋಗೀ ತಾತಯ್ಯ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆದಿರುತ್ತಾರೆ.



