ಆಂಧ್ರಪರದೇಶ ಸರ್ಕಾರ ಅಲ್ಲಿನ ಮೂರು ಜಿಲ್ಲೆಗಳಲ್ಲಿ ತೋತಾಪುರಿ ಮಾವಿನ ಕಾಯಿಗೆ ಪ್ರತಿ ಕೆಜಿಗೆ 4 ರೂ ಬೆಂಬಲ ಬೆಲೆ ಘೋಷಿಸಿದೆ.ಆಂಧ್ರದ ಕೃಷಿ ಸಚಿವ ಅಚ್ಚಂನಾಯುಡು ಗುರುವಾರ ತಡ ಸಂಜೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಆಂಧ್ರದ ಮೂರು ಜಿಲ್ಲೆಗಳಾದ ಅನ್ನಮಯ್ಯ,ಚಿತ್ತೂರು ಹಾಗು ತಿರುಪತಿ ಜಿಲ್ಲೆಗಳ ಮಾವು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ನ್ಯೂಜ್ ಡೆಸ್ಕ್:ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ಆಂಧ್ರದ ರೈತರು ಮೂಲತಃ ಚಿತ್ತೂರು ಜಿಲ್ಲೆಯವರಾದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.ಸ್ವಂತ ಜಿಲ್ಲೆಯ ಮಾವು ಬೆಳೆಗಾರರನ್ನು ಕಾಪಾಡುವಂತೆ ಪ್ರತಿ ಕೆಜಿಗೆ 12 ರೂಪಾಯಿಂದ 16 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಅಗ್ರಹಿಸಿದ್ದರು.
ಇದಕ್ಕೆ ಸ್ಪಂದಿಸಿರುವ ಆಂಧ್ರ ಸರ್ಕಾರ ತೋತಾಪುರಿ ಮಾವಿನಕಾಯಿಗೆ ಕೆಜಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಸಾವಿರಾರು ಮಾವಿನ ರೈತರಿಗೆ ಅಲ್ಪ ಪಟ್ಟದ ಪರಿಹಾರ ಸಿಕ್ಕಂತಾಗಿದೆ ಮಾವಿನಕಾಯಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಸರ್ಕಾರದ ನಿರ್ಧಾರ ನಿರ್ಣಾಯಕವಾಗಲಿದೆ ಎಂದು ಬೆಳೆಗಾರರು ಹೇಳುತ್ತಾರೆ.
ಕರ್ನಾಟಕದಲ್ಲೂ ಬೆಂಬಲ ಬೆಲೆ ನೀರಿಕ್ಷೆಯಲ್ಲಿ ಬೆಳೆಗಾರ
ಕರ್ನಾಟಕದ ಅದರಲ್ಲೂ ವಿಶೇಷ ಎನ್ನುವಂತೆ ಶ್ರೀನಿವಾಸಪುರ ಕೇಂದ್ರಿಕೃತವಾಗಿ ಕೋಲಾರ-ಚಿಕ್ಕಬಳ್ಳಾಪುರದ ಭಾಗದಲ್ಲಿ ಮಾವಿನ ಪ್ರಭೇದಗಳಲ್ಲಿ ವೈಷಿಷ್ಟ ತೋತಾಪುರಿ ಮಾವಿನ ಕಾಯಿ ಸಂಪತ್ತು ತರುವಂತ ಮಾವು ಬೆಳೆ ಎನ್ನಲಾಗುತಿತ್ತು, ಆದರೆ ಈಗ ತೋತಾಪುರಿ ಮಾವುಬೆಳೆಗಾರ ಸಂಕಷ್ಟಕ್ಕೆ ಈಡಾಗಿದ್ದಾನೆ ಅಲ್ಲದೆ ಬೆಂಬಲ ಬೆಲೆ ನೀಡುವಂತೆ ಅಂಗಲಾಚುವ ಪರಿಸ್ಥಿತಿ ತಲುಪಿದ್ದಾನೆ.
ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗು ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರದ ಪ್ರಭಾವಿ ಸಚಿವ ಪ್ರಹ್ಲಾದ್ ಜೋಷಿ ಮತ್ತು ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಹಾಗು ಪ್ರಗತಿಪರ ರೈತ ಹಾಗು ಜನಪರ ವೇದಿಕೆ ಸಂಚಾಲಕ ರಮೇಶ್ ಬಾಬು ಕೇಂದ್ರ ಸರ್ಕಾರದ ಕೃಷಿ ಸಚಿವ ಶಿವರಾಜ್ ಸಿಂಗ ಚೌಹಾಣ್ ಅವರಿಗೆ ಪತ್ರ ಬರೆದು ಮಾವಿಗೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೆ ಅರ್ಧಕ್ಕೂ ಹೆಚ್ಚು ತೋತಾಪುರಿ ಕೊಯ್ಲು ಆಗಿದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾವು ಬೆಳೆಗಾರರ ಸಮಸ್ಯಗಳ ಸರಮಾಲೆಯನ್ನು ಎದುರಿಸುತ್ತಿದ್ದು ಸಂಕಷ್ಟದಲ್ಲಿದ್ದಾರೆ ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಹವಮಾನ ವೈಪರಿತ್ಯದಿಂದ ಇಳುವರಿ ಕಡಿಮೆಯಾಗಿದೆ ಕೊಯ್ಲು ಮಾಡಿದರೆ ಕೂಲಿ ಕಮೀಷನ್ ಖರ್ಚು ವೆಚ್ಚಕ್ಕೆ ಸರಿಹೊಗುತ್ತದೆ ಎನ್ನುತ್ತಾರೆ ಮಾವುಬೆಳೆಗಾರ ಕಾಸಿಂಗಡ್ಡ ರೈತ ಫಾರೂಖ್.



