ನ್ಯೂಜ್ ಡೆಸ್ಕ್:ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರೆಡ್ದಿ ಪುತ್ರಿ ತೆಲಂಗಾಣದ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ,ಇದೊಂದು ಸೌಹಾರ್ದತೆಯ ಭೇಟಿ ಎನ್ನಲಾಗುತ್ತಿದೆ ಆದರೂ ತೆಲಂಗಾಣ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿಯೆ ಎದ್ದಿದೆಯಂತೆ.ತೆಲಂಗಾಣ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ಶರ್ಮಿಳಾ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಅವರ ಪುತ್ರಿ ಅವರ ಅಕಾಲಿಕ ನಿಧನದ ನಂತರ ತಮ್ಮ ಸಹೋದರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್ಮೋಹನ್ ರೆಡ್ಡಿ ಅವರ ರಾಜಕೀಯ ಬೆನ್ನುಲುಬಾಗಿ ಕಳೆದ ಹತ್ತು ವರ್ಷಗಳಿಂದ ನಿಂತಿದ್ದು ಅಲ್ಲದೆ ಆಂಧ್ರದಲ್ಲಿ 2009 ರಲ್ಲಿ ನಡೆದಂತ ಚುನಾವಣೆಯಲ್ಲಿ ತಮ್ಮ ಸಹೋದರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದರು ನಂತರದಲ್ಲಿ ನಡೆದಂತ ವ್ಯತ್ಯಾಸಗಳಲ್ಲಿ ಸಹೋದರ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯಿಂದ ದೂರ ಸರಿದ ಶರ್ಮಿಳಾ ಕಳೆದ ಒಂದು ವರ್ಷದಿಂದ ತೆಲಾಂಗಾಣದಲ್ಲಿ ತಮ್ಮ ತಂದೆ ರಾಜಶೇಖರರೆಡ್ಡಿ ಹೆಸರು ಬಳಿಸಿಕೊಂಡು ತೆಲಂಗಾಣ ವೈ.ಎಸ್.ಆರ್ ತೆಲಂಗಾಣ ಪಾರ್ಟಿ ಎಂದು…
Author: Srinivas_Murthy
ನ್ಯೂಜ್ ಡೆಸ್ಕ್:ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸರ್ಕಾರದ ನೂತನ ಸಚಿವರಾಗಿ ಇಂದು 24 ಮಂದಿಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಬಣದ ಭೈರತಿ ಸುರೇಶ್,ಕೆ.ವೆಂಕಟೇಶ್, ಕೃಷ್ಣ ಬೈರೇಗೌಡ, ಡಾ.ಎಚ್.ಸಿ ಮಹದೇವಪ್ಪ,ಶಿವರಾಜ ತಂಗಡಗಿ, ನಾಗೇಂದ್ರ,ಕೆ.ಎನ್. ರಾಜಣ್ಣ, ಮಂಕಾಳ ವೈದ್ಯಗೆ,ದೊರೆತರೆಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಚಲುವರಾಯಸ್ವಾಮಿ, ಡಾ.ಎಂ.ಸಿ ಸುಧಾಕರ್, ಪಿ.ನರೇಂದ್ರಸ್ವಾಮಿ,ಎಚ್.ಕೆ. ಪಾಟೀಲ್,ಮಧು ಬಂಗಾರಪ್ಪ,ಡಿ.ಸುಧಾಕರ್, ಭೋಸರಾಜು ಅವರಿಗೆ ಸಚಿವ ಸ್ಥಾನ ದೊರೆತಿದೆಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾಗಿ ಹೆಚ್.ಕೆ.ಪಾಟೀಲ್(ಕಾನೂನು ಮತ್ತು ಸಂಸದೀಯ),ಆರಂಭಗೊಂಡು ಬೆಂಗಳೂರು ಬ್ಯಾಟರಾಯನಪುರದ ಕೃಷ್ಣ ಭೈರೇಗೌಡ,ನಾಗಮಂಗಲದ ಎನ್. ಚಲುವರಾಯಸ್ವಾಮಿ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ಟಿ.ನರಸಿಪುರದ ಡಾ.ಹೆಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಮಧುಗಿರಿಯ ಕೆ.ಎನ್.ರಾಜಣ್ಣ, ಬೆಂಗಳೂರು ಗಾಂಧಿನಗರದ ದಿನೇಶ್ ಗುಂಡೂರಾವ್,ಶರಣಬಸಪ್ಪ ದರ್ಶನಾಪುರ್,ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಭಟ್ಕಳದ ಮಂಕಾಳು ವೈದ್ಯ, ಸಂತೋಷ್ ಲಾಡ್, ಎನ್…
ಕೋಲಾರ:ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು, ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗುವ ಅವಕಾಶ ಇದ್ದರೂ ಯಾವುದೆ ಅಧಿಕಾರದ ಆಸೆಗೆ ಒಳಪಡದೆ ತಮಗೆ ವೃತಿ ಬದುಕಿನ ಆಸರೆಯಾಗಿ ಇದುವರಿಗೂ ಸಾಕಿ, ಸಲುಹಿದ ಪತ್ರಿಕೋದ್ಯಮದ ವೃತ್ತಿಗೆ ಸಂಬಂಧಿಸಿದ ಅವಕಾಶವನ್ನು ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ ಅವರು ಪತ್ರಿಕೋದ್ಯಮದ ಜೀವನದ ಸಂದರ್ಭದಲ್ಲಿ ನನ್ನ ಬೆಳವಣಿಗೆಗೆ ಕಾರಣರಾದ ಕೋಲಾರದ ಹಿರಿಯ ಪತ್ರಕರ್ತರಾದ ದಿವಂಗತ ಬಿ.ವಿ.ನರಸಿಂಹಮೂರ್ತಿ, ಎಂ.ಮಲ್ಲೇಶ್ ಹಾಗೂ ಬಿ.ಎನ್.ಗುರುಪ್ರಸಾದ್, ಹಿರಿಯ ಪತ್ರಕರ್ತರಾದ ಕೆ.ಪ್ರಹ್ಲಾದರಾವ್, ಬಿ.ವಿ.ಗೋಪಿನಾಥ್, ಎಂ.ವಾಸುದೇವಹೊಳ್ಳ ಅವರುಗಳನ್ನು ಪ್ರಭಾಕರ್ ಇದೇ ವೇಳೆ ಸ್ಮರಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ…
ಶ್ರೀನಿವಾಸಪುರ: ಬೆಂಗಳೂರು ಕಳಾಸಿಪಾಳ್ಯಂ ನಿಂದ ಹೊರಟು ಹೆಚ್ ಕ್ರಾಸ್ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಅಪಘಾತವಾಗಿದೆ,ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಯಗಳಾಗಿದ್ದು ಅವರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ.ಗುರುವಾರ ಬೆಳೆಗ್ಗೆ 10 ಗಂಟೆಗೆ ರಾಯಲ್ಪಾಡು ಗೆಟ್ ನಿಂದ ಹಾದು ಹೊದ ಭಾರತಿ ಬಸ್ ಸರ್ವಿಸ್ ಆಂಧ್ರಪ್ರದೇಶದ ಮದನಪಲ್ಲಿ ವ್ಯಾಪ್ತಿಯ ಬಾರ್ಲಪಲ್ಲಿ ಬಳಿ ತಿರುವಿನಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಬಸ್ಸಿನ ಹಿಂಬದಿ ಗಾಜು ಒಡೆದು ಗಾಯಾಳುಗಳನ್ನು ಹೊರತಗೆದು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಅಪಘಾತದಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿದ್ದು 10ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆಯೆಂದು ಹೇಳಲಾಗಿದೆ. ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ಬೆಂಗಳೂರಿನವರಾಗಿದ್ದು ತಿರುಪತಿ ಹಾಗೂ ಮದನಪಲ್ಲಿಗೆ ಹೊಗುತ್ತಿದ್ದರು ಎನ್ನಲಾಗಿದೆ ಅಪಘಾತ ಸ್ಥಳಕ್ಕೆ ಮದನಪಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮದನಪಲ್ಲಿ ಆಸ್ಪತ್ರೆಗಳಲ್ಲಿ ಚಿಕಿಸ್ಥೆ ಪಡೆಯುತ್ತಿರುವ ಬಸ್…
ಶ್ರೀನಿವಾಸಪುರ:ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯದ ಮೂಲಕ ಜೀವನ ಕ್ರಮವನ್ನು ತಿಳಿಸಿಕೊಟ್ಟಂತ ಆದರ್ಶವಂತ ಶ್ರೀರಾಮಚಂದ್ರ, ಆತನ ನಾಮಬಲದಿಂದ ವಿಶ್ವದಲ್ಲಿ ಶಾಂತಿ ಸೌಹಾರ್ದತೆ ಏರ್ಪಡುತ್ತದೆ ಭಾರತೀಯ ಕೌಟುಂಬಿಕ ವ್ಯವಸ್ಥೆ ಕುಟುಂಬದಲ್ಲಿ ಪತಿ-ಪತ್ನಿ ಸಾಮರಸ್ಯ ಜೀವನಕ್ಕೆ ರಾಮನಾಮನ ಜಪವೆ ಸಾಕ್ಷಿ ಶ್ರೀ ಸೀತಾರಾಮರ ಆದರ್ಶ ದಾಂಪತ್ಯವೆ ಎಲ್ಲರಿಗೂ ಮಾರ್ಗದರ್ಶನ ಶ್ರೀ ಸೀತಾರಾಮರ ವಿವಾಹದಿಂದ ವಿಶ್ವಶಾಂತಿ ದೊರೆಯುತ್ತದೆ ಎಂಬುದು ಭಾರತದ ಹಿರಿಯರ ನಂಬಿಕೆ ಎಂದು ಯಲ್ದೂರು ಶ್ರೀ ಕೋದಂಡರಾಮ ದೇವಾಸ್ಥಾನದ ಪ್ರಧಾನ ಅರ್ಚಕ ಶೇಷಾದ್ರಿ ತಿಳಿಸಿದರು.ಅವರು ತಾಲೂಕಿನ ಅರಿಕೆರಿ ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಶ್ರೀಸೀತಾರಾಮಕಲ್ಯಾಣ ನೇರವೇರಿಸಿ ಮಾತನಾಡಿದರು.ಶ್ರೀರಾಮನ ಪರಮಾರ್ಥ ತತ್ವಗಳಾದ ಪಿತೃವಾಖ್ಯ ಪರಿಪಾಲನೆ,ಧರ್ಮಾಚರಣೆ,ಏಕಪತ್ನಿ ವ್ರತಸ್ಥ ಎಂಬ ವಿಶೇಷ ಗುಣಗಳಿಂದ ಜಗವೆ ಇಷ್ಟ ಪಡುವ ಸರ್ವರಿಗೂ ಮಾದರಿಯಾಗಿದ್ದಾನೆ ಶ್ರೀರಾಮ, ಈಶ್ವರನಿಗೂ ಶ್ರೀರಾಮನ ತಾರಕಮಂತ್ರ ಇಷ್ಟವಾಗಿದೆ ಎಂದರೆ ಈ ನಾಮದ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ ಎಂದರು. ಶ್ರೀಸೀತಾರಾಮಕಲ್ಯಾಣೊತ್ಸವದ ಅಂಗವಾಗಿ ಖ್ಯಾತ ಭರತನಾಟ್ಯಕಲಾವಿದೆ ನಯನಾರಾಜಣ್ಣ ಅವರಿಂದ ನೃತ್ಯಪ್ರದರ್ಶನ ಏರ್ಪಡಿಸಿದ್ದರು. ಶ್ರೀಸೀತಾರಾಮಕಲ್ಯಾಣೊತ್ಸವ…
ನ್ಯೂಜ್ ಡೆಸ್ಕ್:ಪ್ರಪಂಚದ ರಾಜಕೀಯ ನಾಯಕರಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಅವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದು ಅಲ್ಲದೆ ಮೋದಿಯವರ ಕಾಲಿಗೆ ನಮಸ್ಕರಿಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.ಇದೊಂದು ಅಪರೂಪದ ಸ್ವಾಗತ ಎಂದು ಜಾಗತಿಕ ಮಟ್ಟದಲ್ಲಿ ಖ್ಯಾತಿಯಾಗಿದೆ.ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಹಾಗು ಮೋದಿ ಅಪ್ಪುಗೆ ಮೂಲಕ ಪರಸ್ಪರ ಶುಭಾಶಯ ಕೋರಿದರು. ಬಳಿಕ ಪ್ರಧಾನಿ ಮೋದಿಯನ್ನು ಪಪುವಾ ನ್ಯೂಗಿನಿಯಾ ಅಧಿಕಾರಿಗಳಿಗೆ ಪರಿಚಯಿಸಲಾಯಿತು.ಭಾರತೀಯ ಡಯಾಸ್ಪೊರಾ ಸದಸ್ಯರು ಅವರನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ನಗುತ್ತಾ, ಕೈ ಬೀಸುವ ಮೂಲಕ, ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.ಪಪುವಾ ನ್ಯೂಗಿನಿಯಾದಲ್ಲಿ ತಮಗೆ ಸಿಕ್ಕ ಭವ್ಯ ಸ್ವಾಗತಕ್ಕೆ ಟ್ವೀಟ್‌ನಲ್ಲಿ ಕೃತಜ್ಞತೆ ಸಲ್ಲಿಸಿರುವ ಪ್ರಧಾನಿ ಮೋದಿ, “ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಪ್ರಧಾನಿ ಜೇಮ್ಸ್ ಮರಾಪೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ವಿಶೇಷವಾದ ಗೆಶ್ಚರ್ ಆಗಿದೆ. ನನ್ನ ಭೇಟಿಯ…
ಶ್ರೀನಿವಾಸಪುರ: ಬಿರುಗಾಳಿ ಸಮೇತದ ಮಳೆಯ ಆರ್ಭಟಕ್ಕೆ ಶ್ರೀನಿವಾಸಪುರ ಭಾಗದ ಜೀವನಾಡಿ ಮಾವಿನಕಾಯಿಗಳು ನೆಲದ ಪಾಲಾಗಿದೆ ಸುಮಾರು ಒಂದು ಗಂಟೆಯ ಕಾಲ ಬೀಸಿದಂತ ಬಿರುಗಾಳಿಗೆ ಬಾರಿಗಾತ್ರದ ಮರಗಳು ನೆಲಕ್ಕೂರಳಿದೆ.ಭಾನುವಾರ ಸಂಜೆ ಬಿರುಸಾದ ರಕ್ಕಸ ಗಾಳಿ ಮಳೆಯಿಂದ ಇಲ್ಲಿನ ರೈತಾಪಿ ಜನರ ವಾರ್ಷಿಕ ಜೀವನಾಡಿ ಬೆಳೆಯಾದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ ಗಂಟೆಗೆ ಅಂದಾಜು 30-40 ಕೀ.ಮಿ ವೇಗದಲ್ಲಿ ಬೀಸಿದಂತ ಗಾಳಿಯ ರಭಸಕ್ಕೆ ವಿಶೇಷವಾಗಿ ರೋಣೂರು ಹೋಬಳಿ ಕಸಬಾ ಹಾಗು ಯಲ್ದೂರು ಹೋಬಳಿಯ ಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಮಾವು ಬೆಳೆಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಟಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದೆ.ಶೇಡ್ ಮನೆಗಳ ತಗಡಿನ ರೇಖುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿದೆ.ಇದ-ಬದ್ದ ಬೆಳೆಯೂ ಹೋಯಿತುಕಳೆದ ಎರಡು ಮೂರು ತಿಂಗಳ ಹಿಂದೆ ಬಿದ್ದಂತ ಆಲಿಕಲ್ಲು ಮಳೆಯಿಂದ ಶೇ%60 ರಷ್ಟು ಮಾವು ಬೆಳೆ ಹೂ ಹಾಗು ಪಿಂದೆ ಹಂತದಲ್ಲಿಯೇ ಹಾಳಾಗಿತ್ತು ಇದ್ದ 30-40 ಭಾಗದಷ್ಟು ಬೆಳೆ ಇನ್ನೇನು ಹತ್ತು ಹದಿನೈದು ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಮಾವು ಬೆಳೆ…
ನ್ಯೂಜ್ ಡೆಸ್ಕ್: ದೇಶಾದ್ಯಂತ ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ. ದೇಶದ ಜನರು ಮತ್ತೇ ನೋಟ್ ಬ್ಯಾನ್ ಆಯ್ತಾ ಅಂತ ತಲೆಕಡಿಸಿಕೊಂಡಿದ್ದಾರೆ.₹2000 ನೋಟು ಹಿಂಪಡೆಯುವ ಕುರಿತಾದ ಜನಸಾಮಾನ್ಯರು ತಮ್ಮ ಬಳಿ ಇರುವಂತ ರೂ.₹2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಿಕೊಳ್ಳಬೇಕು,ಎಷ್ಟು ನೋಟು ಬದಲಾಯಿಸಕೊಳ್ಳಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ ₹2000 ನೋಟಿನ ಸುತ್ತ ಹತ್ತು ಹಲವು ರೀತಿಯ ಆತಂಕದ ಪ್ರಶ್ನೆಗಳು ಜನರನ್ನು ಕಾಡುತ್ತಿದೆ ಇವೆಲ್ಲ ಸಂದೇಹಗಳಿಗೆ ಉತ್ತರ ಇಲ್ಲಿದೆ.ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ಬೆನ್ನಲ್ಲೆ ಎಲ್ಲರೂ ನೋಟ್ ಬ್ಯಾನ್ ಅಂತ ತಲೆಕಡಿಸಿಕೊಂಡಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ನಿಗದಿತ ಸಮಯದವರೆಗೂ ₹2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಅಂತ ಆರ್‌ಬಿಐ ಸ್ಪಷ್ಟಪಡಿಸಿದೆ ಜೊತೆಗೆ ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ತಮ್ಮ ಬಳಿ ಇರುವಂತ…
ನ್ಯೂಜ್ ಡೆಸ್ಕ್: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.ಅವರೊಂದಿಗೆ ಎಂಟು ಮಂದಿ ಪ್ರಭಾವಿ ಕಾಂಗ್ರೆಸ್ ಶಾಸಕರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಪ್ರಥಮ ಎನ್ನುವಂತೆ ಪ್ರಭಾವಿ ಕಾಂಗ್ರೆಸ್ ಶಾಸಕರಾದ ಡಾ.ಪರಮೇಶ್ವರ್, ಕೋಲಾರದ ಮಾಜಿ ಸಂಸದ ಹಾಗು ಕೇಂದ್ರದ ಮಾಚಿವ ಸಚಿವ ಕೆ.ಹೆಚ್.ಮುನಿಯಪ್ಪ,ಲಿಂಗಾಯಿತ ಸಮಾಜದ ಪ್ರಭಾವಿ ಮುಖಂಡ ಎಂ.ಬಿ ಪಾಟೀಲ್ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಮಾಣ ವಚನ ಸ್ವೀಕಾರಮಾಡಿದರು.ಡಾ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕ್ರೀಶ್ಚಿಯನ್ ಸಮುದಾಯದ ಕೆ.ಜೆ.ಜಾರ್ಜ್ ಮತ್ತು ಲಿಂಗಾಯಿತ ಸಮಾಜದ ಎಂಬಿ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ ಸತೀಶ್ ಜಾರಕಿಹೊಳಿ ಬುದ್ದ ಬಸಣ್ಣನ ಹೇಸರುನಲ್ಲಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಚಾಮರಾಜಪೇಟೆ ಶಾಸಕ ಬಿಝಡ್ ಜಮೀರ್ ಅಹ್ಮದ್ ಖಾನ್ ಅಲ್ಲಾ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಇಂಗ್ಲೀಷ್ ನಲ್ಲಿ…
ಶ್ರೀನಿವಾಸಪುರ:ಎಸ್.ಸಿ. ಎಸ್.ಟಿ. ಹಿಂದುಳಿದ ಸಮಾಜಗಳ ಬಡಜನತೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ, ವಂಚನೆ ಮಾಡುವುದು ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅವರು ಹೊಗಳಗೆರೆ ತೋಟಗಾರಿಕೆ ಫಾರಂನಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮಾತನಾಡಿ, ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಎಸ್.ಸಿ.ಎಸ್.ಟಿ, ಹಿಂದುಳಿದ ಅಲ್ಪ ಸಂಖ್ಯಾತರ ಸಮುದಾಯಗಳಿಗೆ ಅನ್ಯಾಯ ಆಗಿದೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಮುಂದೆ ಇಂತಹ ಕೃತ್ಯಗಳಿಗೆ ಅಧಿಕಾರಿಗಳು ಅವಕಾಶ ಕೊಡದೆ ಸರ್ಕಾರದಿಂದ ಬರುವಂತ ಅನುಧಾನಗಳನ್ನು ಪಕ್ಷಾತೀತವಾಗಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು, ಇದಕ್ಕೆ ನೀವು ಸಹಕರಿಸಬೇಕು, ವಿಳಂಬ ನಿರ್ಲಕ್ಷ್ಯ ಮಾಡುವುದನ್ನು ನಾನು ಸಹಿಸಲಾರೆ ಎಲ್ಲವನ್ನು ಗಮನಿಸುತ್ತೇನೆ ಎಂದ ಅವರು ನನಗೆ ಅಭಿವೃದ್ದಿಯೇ ಮುಖ್ಯ ಜನ ಕಲ್ಯಾಣವೆ ಮೊದಲ ಆದ್ಯತೆ ಎಂದರು.ಅನೇಕ ವರ್ಷಗಳಿಂದ ಬಡವರು, ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ಇತ್ತೀಚೆಗೆ ಸಾವಿರಾರು ಎಕರೆ ಜಮೀನಿನ ದಾಖಲೆಗಳು ಅರಣ್ಯ…


