ಶ್ರೀನಿವಾಸಪುರ: ಶ್ರೀ ಭೈರವೇಶ್ವರ ಶಾಲೆ ವಿಧಾರ್ಥಿನಿ ಧರಣಿಕ.ಜಿ 622,ಎಸ್.ಎಫ್.ಎಸ್.ಶಾಲೆಯ ಎಸ್.ಚೈತನ್ಯ622, ಹಾಗು ಎಸ್.ಎಫ್.ಎಸ್.ಶಾಲೆಯ ಮತ್ತೊಬ್ಬ ವಿಧಾರ್ಥಿನಿ ಎಂ.ಮಿನುವರ್ಷ್ ಸಹ 622 ಅಂಕ ಗಳಿಸಿ ತಾಲೂಕಿನ ಪ್ರಥಮ ಸ್ಥಾನವನ್ನು ಮೂವರು ವಿಧ್ಯಾರ್ಥಿಗಳು ಹಂಚಿಕೊಂಡಿದ್ದಾರೆ.ಕೋಲಾರ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಾತಾಂಶದಲ್ಲಿ ಕೋಲಾರ ಜಿಲ್ಲೆ 6 ಸ್ಥಾನ ಪಡೆದಿದ್ದರೆ ಜಿಲ್ಲಾ ಪಟ್ಟದಲ್ಲಿ ಶ್ರೀನಿವಾಸಪುರ ಪ್ರಥಮ ಸ್ಥಾನ ಪಡೆದಿದೆ.ತಾಲೂಕಿನಲ್ಲಿರುವ ಒಟ್ಟು 66 ಶಾಲೆಗಳಿದ್ದು ಇವುಗಳಲ್ಲಿ 26 ಸರ್ಕಾರಿ ಶಾಲೆಗಳು, 5 ವಸತಿ ಶಾಲೆಗಳು,7 ಅನುಧಾನಿತ ಶಾಲೆಗಳು, 28 ಖಾಸಗಿ ಶಾಲೆಗಳು ಇವುಗಳಲ್ಲಿ ಒಟ್ಟು 2583 ವಿಧ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು 2495 ಉತ್ತೀರ್ಣರಾಗಿ ಶೇ96.5 ಫಲಿತಾಂಶ ಸಾಧಿಸಿದ್ದಾರೆ. ತಾಲೂಕು ಪಟ್ಟದ ಫಲಿತಾಂಶದಲ್ಲಿ 38 ಸರ್ಕಾರಿ ಶಾಲೆಗಳ ಪೈಕಿ 11 ಶಾಲೆಗಳ ವಿಧಾರ್ಥಿಗಳು ಹಾಗು 28 ಖಾಸಗಿ ಶಾಲೆಗಳ ಪೈಕಿ 17 ಶಾಲೆಗಳ ವಿಧ್ಯಾರ್ಥಿಗಳು ಶೇ%100 ಫಲಿತಾಂಶ ಸಾಧಿಸಿದ್ದಾರೆ.ಶೇ%೧೦೦ ಫಲಿತಾಂಶ ಸಾಧಿಸಿರುವಂತ 14 ಸರ್ಕಾರಿ ಶಾಲೆಗಳು ಕೂರಿಗೆಪಲ್ಲಿ, ಲಕ್ಷ್ಮೀಪುರ, ಮುತ್ತಕಪಲ್ಲಿ, ರೋಣುರು, ಭ್ಯರಗಾನಹಳ್ಳಿ, ಪಾತಪಲ್ಲಿ,ಆದರ್ಶ ವಿದ್ಯಾಲಯ ಕಲ್ಲೂರು,ಇಮರಕುಂಟೆ,ಮೌಲಾನ ಆಜಾದ್ ಶಾಲೆ, ಹಾಗು…
Author: Srinivas_Murthy
ಶ್ರೀನಿವಾಸಪುರ:ಕೇಂದ್ರದ ಮಾಜಿ ಸಚಿವೆ ದಿವಂಗತ ಎನ್.ಟಿ.ಆರ್ ಪುತ್ರಿ, ನಟ ಬಾಲಕೃಷ್ಣ ಅವರ ಸಹೋದರಿ ದಗ್ಗುಪಾಟಿಪುರಂದರೇಶ್ವರಿ ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಬಿಜೆಪಿ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.ಕಳೆದ ನಲವತೈದು ವರ್ಷಗಳಿಂದ ತೀರಾ ಹಿಂದುಳಿದ ಪ್ರದೇಶವಾಗಿದೆ ಇದನ್ನು ಹೋಗಾಲಾಡಿಸಲು ಇಲ್ಲಿ ಬದಲಾವಣೆ ಆಗಬೇಕಿದೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹೇಳಿದ ಅವರು ನಿಮ್ಮ ಮತ ಬಿಜೆಪಿಗೆ ಹಾಕಿದರೆ ಕರ್ನಾಟಕದ ಅಭಿವೃದ್ಧಿಯೊಂದಿಗೆ ನಿಮ್ಮ ಪ್ರಾಂತ್ಯದ ಅಭಿವೃದ್ಧಿಯಾಗಲಿದೆ ಎಂದ ಅವರು ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಸ್ಪೀಕರ್ ಆಗಿದ್ದರು ಅವರ ಪ್ರಭಾವ ಸರ್ಕಾರದ ಮೇಲೆ ಎಷ್ಟಿರುತ್ತದೆ ಎಂದರೆ ಎಲ್ಲರೀಗೂ ತಿಳಿದ ವಿಚಾರವೆ ಆದರೂ ಪ್ರಭಾವಿ ವ್ಯಕ್ತಿ ರಮೇಶ್ ಕುಮಾರ್ ಅಭಿವೃದ್ದಿಗೆ ಮುಂದಾಗಿಲ್ಲ ಎಂದು ದೂರಿದರು.ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕ ಅಭಿವೃದ್ದಿ ಕಾಣಬೇಕಿದೆ ಎಂದು ಪುರಂದರೇಶ್ವರಿ ಹೇಳಿದರು.ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ಮಾತನಾಡಿ ಬಿಜೆಪಿಯನ್ನು ಬೆಂಬಲಿಸಿ ಕರ್ನಾಟಕವನ್ನು ಅಭಿವೃದ್ಧಿ ಪತದತ್ತ ಕೊಂಡೋಯ್ಯೊಣ ಎಂದರು.ರೋಡ್ ಶೋ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ,ತಾಲೂಕು…
ಶ್ರೀನಿವಾಸಪುರ:ಸ್ಥಳೀಯವಾಗಿ ನಮ್ಮನ್ನು ಗುರುತಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತ ವ್ಯಕ್ತಿಯನ್ನು ಬೆಂಬಲಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ನಮ್ಮ ತಂಡ ವೆಂಕಟಶಿವಾರೆಡ್ಡಿ ಅವರನ್ನು ಬೆಂಬಲಿಸುತ್ತಿದೆ ಎಂದು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಸಂಚಾಲಕ ಡಾ.ರಮಾನಂದ್ ಹೇಳಿದರು ಅವರು ತಮ್ಮ ತಂಡದ ಸದಸ್ಯರೊಂದಿಗೆ ವೆಂಕಟಶಿವಾರೆಡ್ಡಿಯವರನ್ನು ಭೇಟಿಯಾಗಿ ಬೆಂಬಲ ಸೂಚಿಸಿ ಮಾತನಾಡಿದರು.ನಮಗೆ ವೈಯುಕ್ತಿಕವಾಗಿ ಯಾವುದೆ ಲಾಭದ ಅಪೇಕ್ಷೆಗಳು ಇಲ್ಲ ನಮ್ಮ ತಂಡ ಸಮಾಜದಲ್ಲಿ ಸಾಂಸೃತಿಕವಾಗಿ ಸೇವೆ ಸಲ್ಲಿಸುತ್ತಿದ್ದು ಇದನ್ನು ಗುರುತಿಸಿರುವ ವೆಂಕಟಶಿವಾರೆಡ್ಡಿಯವರನ್ನು ಬೆಂಬಲಿಸುತ್ತಿದ್ದೆವೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಗಾಯಿತ್ರಿ ಮುತ್ತಪ್ಪ,ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಗಿತಾರಾಜ್, ಚಂದ್ರಕಲಾ,ಇಂದ್ರಪ್ರಕಾಶ್ ಮುಂತಾದವರು ಇದ್ದರು.
ಶ್ರೀನಿವಾಸಪುರ: ವಿಧಾನಸಭೆ ಚುನಾವಣೆ ಕಾವು ದಿನೆ ದಿನೆ ಏರುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಟ್ಟಣದ ಮಾರುತಿ ನಗರದಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣದ ಅಭಿವೃದ್ಧಿಗೆ ನನ್ನದೆ ಆದಂತ ಕನಸಿದೆ ಅದರ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮತ್ತೊಂದು ಅವಕಾಶ ಕಲ್ಪಿಸುವಂತೆ ಹೇಳಿದರು.ಅವರು ಮಾರುತಿ ನಗರ ಪ್ರವೇಶ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು ಪುರಸಭೆ ಮಾಜಿ ಅಧ್ಯಕ್ಷರಾದ ಸೂರ್ಯನಾರಯಣ,ಪ್ರಕಾಶ್, ಮಾಜಿ ಉಪಾಧ್ಯಕ್ಷ ಸತ್ಯನಾರಯಣ,ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಹಾಲಿ ಸದಸ್ಯರಾದ ನಾಗೇಶ್,ಸಂಜಯ್ ಸಿಂಗ್, ಮುನಿರಾಜು.ಮುಖಂಡರಾದ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂತಾದವರು ಇದ್ದರು.
ಶ್ರೀನಿವಾಸಪುರ:ಶ್ರೀನಿವಾಸಪುರ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿರುತ್ತಾರೆ ಕೋಲಾರಕ್ಕೆ ಚುನಾವಣೆ ಪ್ರಚಾರಕ್ಕೆಂದು ಪ್ರಧಾನಿ ಮೋದಿ ಆಗಮಿಸಿದ್ದು ಈ ಸಂದರ್ಭದಲ್ಲಿ ಮೋದಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಮಾತನಾಡಿ ಹುರುದುಂಬಿಸಿದ್ದಾರೆ.ನಲ್ಲಪಲ್ಲಿರೆಡ್ಡಪ್ಪ,ರೋಣೂರು ಚಂದ್ರು,ನಾಗದೇನಹಳ್ಳಿ ಚಂದ್ರು,ಪುರಸಭೆ ಸದಸ್ಯ ರಾಮಂಜಿ,ರಾಜು,ವೆಂಕಟೇಗೌಡ, ಜೆಸಿಬಿ ಆಶೋಕ್,ಸೇರಿದಂತೆ ಸುಮಾರು ಹನ್ನೊಂದು ಮಂದಿಗೆ ಪ್ರಧಾನಿಯವರೊಂದಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು ಇದರಲ್ಲಿ ಒಂದಿಬ್ಬರು ಕೋವಿಡ್ ಲಸಿಕೆ ಪಡೆದಂತ ದಾಖಲೆ ಇಲ್ಲದ ಕಾರಣ ಭೇಟಿಗೆ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸಂಭ್ರದಲ್ಲಿರುವ ಕಾರ್ಯಕರ್ತರುಮೋದಿ ಭೇಟಿಯಾಗಿ ಮೂರನಾಲ್ಕು ದಿನಗಳು ಕಳೆದರು ಕಾರ್ಯಕರ್ತರಲ್ಲಿನ ಸಂಭ್ರಮ ಇನ್ನೂ ಮರೆಮಾಚಿಲ್ಲ ಈ ಬಗ್ಗೆ ರಾಮಾಂಜಿ ಹೇಳೀದ್ದೇನು ಎಂದರೆ ನಾವು ಇಲ್ಲಿ ಏನೇ ಆಗಿದ್ದರು ಪಕ್ಷದಲ್ಲಿ ಸಾಮನ್ಯ ಕಾರ್ಯಕರ್ತ ಪ್ರಧಾನಿ ಮೋದಿ ವಿಶ್ವನಾಯಕ ಅವರು ನಮ್ಮೊಂದಿಗೆ ಸಂವಾದ ನಡೆಸುವುದು ಎಂದರೆ ನಮ್ಮ ಕೈ ಮುಗಿಲು ಮುಟ್ಟಿದಂತೆ ಎಂದು ಬಣ್ಣಿಸುತ್ತಾರೆ.
ಶ್ರೀನಿವಾಸಪುರ:ಜೆಡಿಎಸ್ ಯುವಮುಖಂಡ SLNಮಂಜುನಾಥ್ ಜೆಡಿಎಸ್ ಯುವಕಾರ್ಯಕರ್ತರಿಗೆ ಜೋಷ್ ತುಂಬುತ್ತ ಚುನಾವಣೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಇಂದು ಮಂಗಳವಾರ ಬೆಳ್ಳಂ ಬೆಳ್ಳಿಗ್ಗೆ ಪಟ್ಟಣದ ಶ್ರೀ ವೆಂಕಟೇಶ್ವರ ಬಡಾವಣೆ ಯುವಕರೊಂದಿಗೆ ಸಂವಾದ ನಡೆಸಿ ಮಾತನಾಡಿದ SLNಮಂಜುನಾಥ್ ತಾಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ ಅದರಂತೆ ಮತದಾರರ ಮನಸ್ಸಿನಂತೆ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕಾರ್ಯನಿರ್ವಹಿಸೋಣ ಎಂದರು.ಈ ಸಂದರ್ಭದಲ್ಲಿ ಬಿಂದುಆಗ್ರೋ ಶ್ರೀನಿವಾಸರೆಡ್ದಿ,ತರಕಾರಿ ಕೇದಾರ್,ರಂಜಿತ್,ಶ್ರೀನಾಥಹೆಗ್ಗಡೆ,ಹರಿಷ್,ಈರುಳ್ಳಿರಂಗಪ್ಪ,ಕಲ್ಲೂರು ಮಂಡಿ ರೆಡ್ಡಪ್ಪ,ಬಸ್ ಶ್ರೀನಿವಾಸರೆಡ್ಡಿ ಮುಂತಾದವರು ಇದ್ದರು.
ಕೋಲಾರ: ಸರ್ಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಒತ್ತಾಯಿಸಿದರು.ಸೋಮವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಲಾಗಿದೆ. ಇದು ಮೂಲತ: ಕಾರ್ಮಿಕ ಸಂಘಟನೆಯಾಗಿದ್ದರೂ ಸಹ ಇದುವರೆಗೂ ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಕರ್ಯಗಳನ್ನು ಕಾರ್ಯನಿರತ ಪತ್ರಕರ್ತರಿಗೆ ಒದಗಿಸದೇ ಇರುವುದು ವಿಷಾಧಕರ ಎಂದು ಹೇಳಿದರು.ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಶ್ನಿಸಿದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಆದರೆ ವಾರ್ತಾ ಇಲಾಖೆಯು ಕೇವಲ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಸೌಕರ್ಯಗಳನ್ನು ಒದಗಿಸುತ್ತಿದೆ. ಇದರಿಂದ ಬಹುಸಂಖ್ಯಾತ ಕಾರ್ಯನಿರತ ಪತ್ರಕರ್ತರು ಯಾವುದೇ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಕೆಯುಡಬ್ಲೂಯಜೆ ಸದಸ್ಯರನ್ನು ಕಾರ್ಮಿಕರೆಂದೇ ಪರಿಗಣಿಸಿ ಕಾರ್ಮಿಕ ಇಲಾಖೆ…
ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರದಲ್ಲಿ ಸತತ 45 ವರ್ಷಗಳಿಂದ ರಾಜಕಾರಣ ಇಬ್ಬರು ವ್ಯಕ್ತಿಗಳ ನಡುವೆ ನಡೆಯುತ್ತಿದ್ದು ಇದರ ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಈ ಬಾರಿ ಬದಲಾವಣೆ ತರಲು ಇಲ್ಲಿನ ಜನ ಸ್ವಯಂ ಪ್ರೇರಿತರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗುಂಜೂರು ಆರ್ ಶ್ರೀನಿವಾಸರೆಡ್ಡಿ ಹೇಳಿದರು ಅವರು ತಾಲೂಕಿನ ರಾಯಲ್ಪಾಡು ಹೋಬಳಿಯಲ್ಲಿ ಮನೆಮನೆಗೂ ತೆರಳಿ ಪ್ರಚಾರ ಮಾಡಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಮಾಡಿಕೊಂಡು ಮಾತನಾಡಿದರು.ಬಿಜೆಪಿಗೆ ಉತ್ತಮ ಸ್ಪಂದನೆ ಇದ್ದು ಗ್ರಾಮಗಳಲ್ಲಿ ಜನತೆ ಆಪ್ಯಾಯತೆಯಿಂದ ನನ್ನನ್ನು ಬರಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಯುವ ಸಮುದಾಯ ದೊಡ್ಡಮಟ್ಟದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ನನಗೆ ಹುಮ್ಮಸ್ಸು ತಂದಿದೆ ಎಂದರು.ಡಬಲ್ ಇಂಜಿನ್ ಸರ್ಕಾರದ ಡಬಲ್ ಧಮಾಕರಾಷ್ಟ್ರೀಯವಾದದ ಚಿಂತನೆಯ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಅತ್ಯತ್ತಮವಾಗಿ ನೇರವೇರಿಸಿದೆ ರಾಜ್ಯದಲ್ಲಿ ವಿಶೇಷವಾಗಿ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಇನ್ನೂ ಹಲವಾರು ಯೋಜನೆಗಳ ಅನುಷ್ಠಾನ ರಾಜ್ಯದಲ್ಲಿ ಆಗಬೇಕಿದ್ದು ಅದಕ್ಕಾಗಿ ಜನತೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ…
ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ಹಿಂದುಳಿದ ಸಮಾಜಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು ಅವರು ಇಂದು ತಾಲೂಕಿನ ಯಲ್ದೂರು ಹೋಬಳಿ ಕೊಳತೂರು ಹಾಗು ಲಕ್ಷ್ಮಿಸಾಗರ ಪಂಚಾಯಿತಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ದಿ ಪರ ಪ್ರಚಾರ ನಡೆಸಿ ಮಾತನಾಡಿದರು, ವೆಂಕಟಶಿವಾರೆಡ್ಡಿಯವರು ಶಾಸಕರಾಗಿದ್ದ ಅವಧಿಯಲ್ಲಿ ಎಲ್ಲಾ ಸಮಾಜಗಳಿಗೆ ನ್ಯಾಯೋಚಿತವಾದ ಸಾಮಜಿಕ ನ್ಯಾಯ ಒದಗಿಸಿದ್ದರು ಸರ್ಕಾರದ ಸೌಲಭ್ಯಗಳ ಹಂಚಿಕೆ ಸಂದರ್ಭದಲ್ಲೂ ಅರ್ಹ ಬಡ ಫಲಾನುಭವಿಗಳನ್ನು ಪಕ್ಷಾತೀತವಾಗಿ ಧರ್ಮಾತೀತವಾಗಿ ಗುರುತಿಸಿ ನ್ಯಾಯ ಒದಗಿಸಿದ್ದಾರೆ ಆದರೆ ಈಗ ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಸಾಮಜಿಕವಾಗಿ ಹಿಂದುಳಿದ ಸಮಾಜಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು ವೆಂಕಟಶಿವಾರೆಡ್ಡಿ ಪರಿಶಿಷ್ಟ ಜಾತಿ ಜನಾಂಗ ಮತ್ತು ಹಿಂದುಳಿದ ವರ್ಗಗಳ ಹಿತಚಿಂತಕರಾಗಿದ್ದು ಅವರು ಮತ್ತೆ ಶಾಸಕರಾದರೆ ಹಿಂದುಳಿದ ಸಮಾಜಗಳಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದ್ದು ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿಯನ್ನು ಬೆಂಬಲಿಸುವಂತೆ ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಶೇಷಾಪುರ ಡಾ.ಗೋಪಾಲ್,ಸಹಕಾರಿ…
ಶ್ರೀನಿವಾಸಪುರ: ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂದು ಭಾವಿಸಿ ಪ್ರತಿಯೊಬ್ಬ ನಾಗರಿಕನೂ ಕಡ್ಡಾಯವಾಗಿ ಮತವನ್ನು ಚಲಾಯಿಸಿ, ದೇಶದ ಪ್ರಜಾತಂತ್ರದ ವ್ಯವಸ್ಥೆಯನ್ನುಎತ್ತಿ ಹಿಡಿಯಲು ಪ್ರಯತ್ನ ಮಾಡುವಂತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾಧಿಕಾರಿ ಇ. ಕೃಷ್ಣಪ್ಪ ಕರೆ ಇತ್ತರು.ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ಜಾಗೃತಿ ಅಭಿಯಾನ ಸಲುವಾಗಿ ಪಟ್ಟಣ ಎಂ. ಜಿ. ರಸ್ತೆಯಲ್ಲಿ ಮೊಂಬತ್ತಿ ಮತ್ತು ಪಂಜಿನ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಇ.ಒ. ಕೃಷ್ಣಪ್ಪ, ದೇಶ ಮುನ್ನೆಡಸಲು ಉತ್ತಮ ವ್ಯಕ್ತಿಯನ್ನು ಮತದಾನದ ಮೂಲಕ ಆಯ್ಕೆಮಾಡಿಕೊಳ್ಳಲು ಅವಕಾಶ ಇರುತ್ತದೆ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತದ ಪ್ರಜೆ ಮತದಾನ ಹಕ್ಕು ಚಲಾಯಿಸಬೇಕು, ಈ ನಿಟ್ಟಿನಲ್ಲಿ ಮತದಾರರು ಮೇ 10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂತೆಯ ತನಕ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಮುಂದಾಗಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಉಪ ಚುನಾವಣಾ ಅಧಿಕಾರಿಗಳಾದ ತಹಸೀಲ್ದಾರ್ ಶೀರಿನ್‌ತಾಜ್, ವೃತ್ತನಿರೀಕ್ಷಕ ನಾರಾಯಣಸ್ವಾಮಿ, ಪುರಸಭಾ…


