ಶ್ರೀನಿವಾಸಪುರ:ದಕ್ಷೀಣ ಭಾರತದ ತಮಿಳುನಾಡು,ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 234 ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿದ್ದು ಮುಳಬಾಗಿಲು ಕಡೆಯಿಂದ ಬರುವಂತ ರಾಷ್ಟ್ರೀಯ ಹೆದ್ದಾರಿ 234 ಚಿಂತಾಮಣಿ ಕಡೆಗೆ ಮುಳಬಾಗಿಲು ವೃತ್ತ, ಸಂತೇಮೈದಾನ ರಸ್ತೆ ರಾಜಾಜಿ ರಸ್ತೆ ಚಿಂತಾಮಣಿ ವೃತ್ತದ ಮೂಲಕ ಚಿಂತಾಮಣಿಗೆ ಹಾದು ಹೋಗುತ್ತದೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಾದರು ಇಲ್ಲಿ ಸಂತೇ ಮೈದಾನದ ರಸ್ತೆ ಅಗಲೀಕರಣ ಮಾಡದೆ ರಸ್ತೆಗೆ ಹೊಂದಿಕೊಂಡಂತೆ ರಾಜ್ಯ ಸರ್ಕಾರದ ವತಿಯಿಂದ ಇಲ್ಲಿನ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದ ಮನೆಗಳನ್ನು ಕಟ್ಟಿಕೊಡುತ್ತಿದೆ ಮುಂದೆ ರಸ್ತೆ ಅಗಲಿಕರಣ ಆದರೆ ನಿರ್ಮಾಣ ಮಾಡಿರುವಂತ ಮನೆಗಳ ಪರಿಸ್ಥಿತಿ ಏನಾಗುತ್ತದೆ ರಾಷ್ಟ್ರೀಯ ಹೆದ್ದಾರಿಯ ಕನಿಷ್ಠ ಮಾನದಂಡಗಳನ್ನು ಪಾಲಿಸದೆ ಮನೆ ನಿರ್ಮಾಣ ಮಾಡಿರುವುದು ಆಳುವವರಿಗೆ ಕನಿಷ್ಟ ಆಲೋಚನೆ ಇಲ್ಲ ಎಂಬುದು ಸಾಬಿತಾಗಿದೆ, ಇನ್ನೂ ಕೋಲಾರ ನ್ಯೂ ಸರ್ಕಲ್ ನಿಂದ ಚಿಂತಾಮಣಿ ವೃತ್ತದವರಗಿನ ರಾಜಾಜಿ ರಸ್ತೆ ಸಿಂಗಲ್ ವಾಹನ ಒಡಾಡಲು ಕಷ್ಟವಾಗುವಷ್ಟು ರಸ್ತೆ ಇಕ್ಕಾಟ್ಟಾಗಿದೆ ಇಲ್ಲಿ ರಸ್ತೆ ಅಗಲೀಕರಣ ತೀರಾ ಅಗತ್ಯ ಇದೆ ಆದರೂ ಈ ರಸ್ತೆಯನ್ನು ಅಗಲೀಕರಣ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ದುರಂತವೆ ಸರಿ ಎನ್ನುತ್ತಾರೆ ಸ್ಥಳೀಯರು.
ಚಿಂತಾಮಣಿ ರಸ್ತೆಯೇನೋ ಆಗಲವಾಗಿದೆ ಆದರೆ ಹೆದ್ದಾರಿ ಮಾನದಂಡಗಳಷ್ಟು ಅಗಲವಾಗಿರುವುದಿಲ್ಲ ಕಳೆದ ಐದು ವರ್ಷಗಳ ಹಿಂದೆ ರಾಜಕೀಯ ಸಬೆ ನಡೆಸುವ ಉದ್ದೇಶದಿಂದ ತರಾತುರಿಯಾಗಿ ರಸ್ತೆಗೆ ಡಾಂಬರು ಹಾಕಿದ್ದು ಇದರಿಂದ ರಸ್ತೆ ವಿಭಜಕ ಬಹುತೇಕ ರಸ್ತೆ ಸಮಕ್ಕೆ ಬಂದಾಗಿದೆ,ಇನ್ನೂ ಈ ರಸ್ತೆಯಲ್ಲಿ ಎರಡು ಬದಿಯಲ್ಲಿ ಇರುವಂತ ಬಹುತೇಕ ವಾಹನ ರಿಪೇರಿ ಅಂಗಡಿಗಳವರು ಫುಟಭಾತ್ ಅಲ್ಲ ರಸ್ತೆಯನ್ನೇ ಅತಿಕ್ರಮಿಸಿಕೊಂಡು ವಾಹನ ನಿಲ್ಲಿಸಿಕೊಂಡು ರೀಪೇರಿ ಮಾಡುವುದರಿಂದ ಮುಕ್ತ ಸಂಚಾರಕ್ಕೆ ಸಮಸ್ಯೆಯಾಗಿದೆ,ರಸ್ತೆ ಸಮಸ್ಯೆ ಇಷ್ಟೆ ಅಲ್ಲ ಮಳೆ ನೀರು ಹರಿಯಲು ಸಮರ್ಪಕ ಯೋಜನೆ ರೂಪಿಸದೆ ಇರುವುದು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ,ಸಾಮನ್ಯ ಮಳೆ ಸುರಿದರೆ ರಸ್ತೆಯ ಮೇಲಿನ ನೀರೆಲ್ಲಾ ಅಂಗಡಿ ಮುಂಗಟ್ಟುಗಳ ಒಳಗೆ ನುಗ್ಗತ್ತದೆ.
ರಾಷ್ಟ್ರೀಯ ಹೆದ್ದಾರಿಯಲ್ಲೆ ವಾರದ ಸಂತೆ ವ್ಯಾಪಾರ
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಸಂತೇ ಮೈದಾನದಲ್ಲಿ ಮೊದಲಿನಿಂದಲೂ ವಾರದ ಸಂತೇ ವ್ಯಾಪಾರ ನಡೆಯುತಿತ್ತು ಕಾಲ ಬದಲಾದಂತೆ ಅಂಗಡಿ ಮುಂಗಟ್ಟುಗಳು ಹೆಚ್ಚಾಯಿತು ಜೊತೆಗೆ ಕಾಲದ ಅಣತಿಯಂತೆ ಆಡಳಿತ ಪಕ್ಷಗಳ ಭರವಸೆಗಳ ಭರಪೂರ ಬಾಯಿ ಚಪಲಕ್ಕೆ ಇದ್ದ ಬೆರಳಣೀಕೆಯಷ್ಟಿದ್ದ ಮನೆಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಸಂತೇ ಮೈದಾನ ದಿನೆ ದಿನೆ ಆಕಾರ ಕಳೆದುಕೊಂಡಿತು ಸಂತೇ ವ್ಯಾಪರಸ್ಥರು ಅನಿವಾರ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಅಂಗಡಿ ಹರಡಿ ವ್ಯಾಪಾರ ಶುರು ಮಾಡಿರುವುದರಿಂದ ವಾರಕ್ಕೊಮೆ ಈ ರಸ್ತೆಯಲ್ಲಿ ವಾಹನ ಒಡಾಟಕ್ಕೆ ನಿರ್ಭಂದ ಹೆರಲಾಗುತ್ತದೆ.
ಎಂ.ಜಿ.ರಸ್ತೆ ಒಡೆಸಿದ ವೀರರು ಏನಾದರು
ಪಟ್ಟಣದ ಎಂ.ಜಿ.ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಜಿಲ್ಲಾಡಿತದ ಮೇಲೆ ಒತ್ತಡ ಹಾಕಿದ ಭೂಪರು ಈಗ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ರಾಜಾಜಿ ರಸ್ತೆ ಅಗಲೀಕರಣದ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ ಎಂದು ನಾಗರೀಕರು ಪ್ರಶ್ನೆ ಕೇಳುತ್ತಿದ್ದಾರೆ, ಕಳೆದ ಎಂಟು ಹತ್ತು ವರ್ಷಗಳ ಹಿಂದೆ ಎಂ.ಜಿ.ರಸ್ತೆ ಅಗಲೀಕರಣ ವಿಚಾರದಲ್ಲಿ ತಾಲೂಕಿನ ಬಹುತೇಕ ರಾಜಕಾರಣಿಗಳು ಮೂಗು ತೂರಿಸಿದ್ದರು ವಿತಂಡ ವಾದ ಮಂಡಿಸಿದ್ದರು ಆದರೂ ಎಂ.ಜಿ.ರಸ್ತೆ ನಿವಾಸಿಗರು ಎಲ್ಲವನ್ನು ಸಹಿಸಿಕೊಂಡು ಮೌನಕ್ಕೆ ಶರಣಾಗಿ ಸ್ವಯಂ ಪ್ರೇರಣೆಯಿಂದ ಅಗಲೀಕರಣ ಮಾಡಿಕೊಂಡರು,ಅಂದು ಎಂ.ಜಿ.ರಸ್ತೆ ಅಗಲೀಕರಣ ಆಗಲೇ ಬೇಕು ಎಂದು ವಿತಂಡವಾದ ಮಂಡಿಸಿ ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಅರ್ಜಿಗಳ ಮೇಲೆ ಅರ್ಜಿ ಕೊಡಿಸಿ ಅಗಲೀಕರಣ ಆಗಲು ವಿಶೇಷ ಆಸಕ್ತಿ ವಹಿಸಿ ಪಟ್ಟು ಹಿಡಿದು ಒತ್ತಡ ಹೇರಿದವರು ಇಂದು ರಾಜಾಜಿ ರಸ್ತೆ ಅಗಲೀಕರಣದ ವಿಚಾರದಲ್ಲಿ ಮೌನವಾಗಿರುವುದರ ಹಿಂದಿನ ರಹಸ್ಯ ಏನು ಎಂಬುದು ಬಹಿರಂಗವಾಗಬೇಕಿದೆ.
ಉಳಿದುಕೊಂಡ ಅನಕೂಲವಂತರ ಕಟ್ಟಡಗಳು!
ಎಂ.ಜಿ.ರಸ್ತೆ ಅಗಲೀಕರಣ ಆಗುವ ವಿಚಾರದಲ್ಲಿ ಎಲ್ಲವೂ ಪಾರದರ್ಶಕತೆಯಿಂದ ಸಮರ್ಪಕವಾಗಿ ಆಗಲೆ ಇಲ್ಲ ಎಂಬ ಕೂಗು ಎದ್ದಿತಾದರು ಅದರ ಧ್ವನಿಪೆಟ್ಟಿಗೆಗೆ ಶಕ್ತಿ ಇಲ್ಲದ ಕಾರಣ ಕೆಲ ಅನಕೂಲವಂತ ಕಟ್ಟಡಗಳ ಮಾಲಿಕರು ತಮ್ಮ ಕಟ್ಟಡಗಳನ್ನು ತೆರವು ಗೊಳಿಸಲೆ ಇಲ್ಲ ಹಾಗೆಯೆ ಕಾಮಗಾರಿ ಮುಗಿಸಿದ ತಾಲೂಕು ಆಡಳಿತ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16