ಶ್ರೀನಿವಾಸಪುರ:ಗ್ರಾಮದೇವತೆ ಶ್ರೀಚೌಡೇಶ್ವರಿ ದೇವರಿಗೆ ಜೇಷ್ಠಮಾಸದ ಅಮಾವಸ್ಯೆ ಪೂಜೆಯನ್ನು ಸತ್ಸಂಗ ಬಳಗದ ಗುರುಗಳಾದ ಸತ್ಯಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಸತ್ಯಮೂರ್ತಿಯವರು ಮಾತನಾಡಿ ಜೇಷ್ಠಮಾಸ ಅಂತ್ಯ ಹಾಗು ಆಷಾಡ ಮಾಸದ ಆರಂಭದಲ್ಲಿ ಶಕ್ತಿದೇವತೆಗೆ ಅನಾವರಣ ಪೂಜೆ ಮಾಡಲಾಗುತ್ತದೆ ಇದೊಂದು ವೈಶಿಷ್ಟಪೂರ್ಣವಾದ ಲೋಕಕಲ್ಯಾಣಾರ್ಥವಾಗಿ ಮಾಡುವಂತ ಪೂಜೆಯಾಗಿದ್ದು ಗ್ರಾಮದ ಸುಹಾಸಿನಿಯರಿಂದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರೀಚಕ್ರ ಪೂಜೆಯಲ್ಲಿ ಒಂಬತ್ತು ಆವರಣಗಳಲ್ಲಿ ನವ ದುರ್ಗೆಯರನ್ನು ಅಹ್ವಾನಿಸಿ ಪೂಜಿಸಲಾಗುತ್ತದೆ ಒಂಬತ್ತು ಬಾರಿ ಅಭಿಷೇಕ ಒಂಬತ್ತು ಬಾರಿ ಆರತಿ ಮತ್ತು ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ಅಲಂಕಾರ ಮಾಡಿ ಲೋಕದಲ್ಲಿನ ಸಮಸ್ಯೆಗಳು ದೂರವಾಗಿ ಜನತೆ ಸುಖ ಶಾಂತಿಃ ನೆಮ್ಮದಿಯ ಜೀವನ ಮಾಡಲು ನೇರವಾಗುವಂತೆ ದೇವರನ್ನು ಕೋರಲಾಗುತ್ತದೆ ಎಂದರು.ಸೋಮವಾರದಿಂದ ಶಂಕರ ಮಠದಲ್ಲಿ ವಾರಾಹಿ ನವರಾತ್ರಿ ಉತ್ಸವಗಳು ಒಂಬತ್ತು ದಿನಗಳಕಾಲ ನಡೆಯಲಿದ್ದು ಪ್ರತಿದಿನ ಸಂಜೆ ಪೂಜಾಕಾರ್ಯಕ್ರಮ ಹಾಗು ಪ್ರವಚನ ಕಾರ್ಯಕ್ರಮ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಶಾಂತಮ್ಮ, ಸತ್ಸಂಗ ಬಳಗದ ಸಂಚಾಲಕಿ ಮಂಗಳಾ,ಎಸ್.ಎಸ್.ವಿ.ಎಸ್.ಟ್ರಸ್ಟ್ ಮುಖ್ಯಸ್ಥರಾದ ವನಜಾಕ್ಷಮ್ಮ,ಧನಲಕ್ಷ್ಮೀ,ಮಾಲಿನಿ, ಮುನಿಯಮ್ಮ, ಚಂದ್ರೇಗೌಡ,ಪ್ರಧಾನ…
Author: Srinivas_Murthy
ಮುಳಬಾಗಿಲು:ಕಾಂಗ್ರೆಸ್ ಪ್ರಜಾಯಾತ್ರೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಬಂದರೆ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಮ್ಮ ಮತ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲಿ ಇಲದಿದ್ದರೆ ಮಹಿಳೆಯರಿಗೆ ದ್ರೋಹ ಮಾಡಿದಂತೆ ಎಂದು ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿಹಾಕಲು ಮಹಿಳೆಯರು ಮುಂದಾದ ಘಟನೆ ಮುಳಬಾಗಿಲು ತಾಲ್ಲೂಕು ಬೈರಕೂರು ಗ್ರಾಮದಲ್ಲಿ ನಡೆದಿದೆ.ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಬಳಿ ಸಾಲ ವಸೂಲಿಗೆ ತೆರಳಿದ್ದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಮಹಿಳೆಯರು ತರಾಟೆಗೆ ತಗೆದುಕೊಂಡು ಸಿದ್ದರಾಮಯ್ಯ ಸಾಲ ಮನ್ನಾ ಮಾಡ್ತಾರೆ ಎಂದು ಹೇಳಿಕೆ ನೀಡಿರುವಂತ ಪೇಪರ್ ಕಟ್ಟಿಂಗ್ ತೋರಿಸಿದ ಮಹಿಳೆಯರು ಬ್ಯಾಂಕ್ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿದ್ದಾರೆ ಇದಕ್ಕೆ ಊರಿನ ಕೆಲ ಪುರಷರು ವಿರೋಧ ವ್ಯಕ್ತಪಡಿಸಿ ಮಹಿಳೆಯರಿಂದ ಬ್ಯಾಂಕ್ ಸಿಬ್ಬಂದಿಯನ್ನು ಬಿಡಿಸಿರುತ್ತಾರೆ. ಇದಕ್ಕೆ ಮಹಿಳೆಯರು ಗ್ರಾಮದ ಪುರಷರ ಮೇಲೆ ತಿರುಗಿ ಬಿದಿದ್ದಾರೆ ಚುನಾವಣೆಯಲ್ಲಿ ಹೇಳಿದಂತೆ…
ಚಿಂತಾಮಣಿ:ಚಿಂತಾಮಣಿ ನಗರದ ಅಭಿವೃದ್ಧಿ ದೃಷ್ಟಿಯಿಂದ ನಗರದ ಹೊರವಲಯದಲ್ಲಿ ಮಾಡಿಕೆರೆ ಕ್ರಾಸ್ ನಿಂದ ಚಿನ್ನಸಂದ್ರದವರಿಗೂ ನಾಲ್ಕುಪಥದ ಬೈಪಾಸ್ ರಸ್ತೆ ನಿರ್ಮಾಣ ಆಗಲಿದೆ ಚಿನ್ನಸಂದ್ರ ಕೇಂದ್ರಿಕೃತವಾಗಿ ಜಂಕ್ಷನ್ ನಿರ್ಮಾಣ ಆಗಲಿದ್ದು ಶಿಡ್ಲಘಟ್ಟ ರಸ್ತೆಯಲ್ಲಿ ಬಹುಷಃ ತಿನಕಲ್ಲು ಬಳಿವರಿಗೂ ಬೈ ಪಾಸ್ ರಸ್ತೆ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹೇಳಿದರು ಅವರು ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿ ಬೈಪಾಸ್ ರಸ್ತೆ ನಿರ್ಮಾಣ ಸಂಬಂದ ಎಲ್ಲಾ ಹಂತಗಳ ಕಾರ್ಯಗಳು ಪೂರ್ಣಗೊಂಡಿದೆ ಚಿಂತಾಮಣಿ ನಗರದಲ್ಲಿ ಹಾದುಹೋಗಿರುವ 234 ರಾಷ್ಟ್ರೀಯ ಹೆದ್ದಾರಿ ಸದ್ಯದಲ್ಲಿ ನಾಲ್ಕುಪಥ ರಸ್ತೆಯಾಗಲಿದೆ, ಗೌರಿಬಿದನೂರು ನಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಿಗೂ ನಾಲ್ಕು ಪಥ ರಸ್ತೆ ಕಾಮಗಾರಿ ಪ್ರಾರಂಭ ಆಗಲಿದೆ, ಮಾಡಿಕೆರಿ ಕ್ರಾಸ್ ನಿಂದ ಮುಳಬಾಗಿಲು ವರಿಗೂ ನಾಲ್ಕುಪಥದ ರಸ್ತೆ ನಿರ್ಮಾಣ ಆಗುತ್ತದೆ,ಹೊಸಕೊಟೆಯವರಗೆ ಹೆದ್ದಾರಿಯಲ್ಲಿನ ಈಗಿನ ವಾಹನ ದಟ್ಟಣೆಯಿಂದ ಆರುಪಥ ರಸ್ತೆಯ ಅಗತ್ಯ ಇದೆ…
ಶ್ರೀನಿವಾಸಪುರ:ರೈತನೊರ್ವ ದ್ವಿಚಕ್ರ ವಾಹದಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಪಟ್ಟಣದ ವೇಣು ಶಾಲೆ ವೃತ್ತದಲ್ಲಿ ನಡೆದಿರುತ್ತದೆ.ತಾಲ್ಲೂಕಿನ ಚಿರುವನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬ ರೈತ ಕೆನರಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡಿದ್ದು ಹಣವನ್ನು ಬೈಕ್ ಮುಂಬಾಗದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿ ಇರಿಸಿಕೊಂಡು ಊರಿಗೆ ಹೋಗಬೇಕಾದರೆ ವೇಣು ಶಾಲೆಯ ಬಳಿಯಿರುವ ಸಾಯಿ ಬೇಕರಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ತಿಂಡಿ ತರಲು ಬೇಕರಿ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ ಹಣದ ಜೊತೆಗೆ ಚೆಕ್ ಬುಕ್ ಹಾಗೂ ಪಾಸ್ ಪುಸ್ತಕವನ್ನು ಸಹ ಕಳ್ಳರು ಕದ್ದೊಯಿದಿರುತ್ತಾರೆ.ಹೊಸ ಕಾರು ಖರೀದಿಸಲು ಕೃಷ್ಣಾರೆಡ್ಡಿ ಮಕ್ಕಳು ಬೆಂಗಳೂರಿನಿಂದ ತಮ್ಮ ತಂದೆ ಖಾತೆಗೆ ಹಣ ಜಮಾ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯವನ್ನು ವೃತ್ತಿಪರ ಕಳ್ಳರು ಎಸಗಿರುವುದಾಗಿ .ಪೋಲಿಸರು ಶಂಕಿಸಿರುತ್ತಾರೆ.ಇಬ್ಬರು…
ಶ್ರೀನಿವಾಸಪುರ:ಮಹಿಳೆಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ “ಶಕ್ತಿ” ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಜಾರಿಗೆ , ತಂದಿರುವುದು ಉತ್ತಮ ಕಾರ್ಯಕ್ರಮವಾಗಿದೆ ಇದನ್ನು ನಾನು ವೈಯುಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ಹಳೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಯ “ಶಕ್ತಿ” ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ದಿನನಿತ್ಯ ಒಡಾಡುವಂತ ದಿನಕೂಲಿ ಕಾರ್ಮಿಕರು ಇತರೆ ಕಾರ್ಮಿಕರು ಹಾಗು ಸಾಮನ್ಯ ಕುಟುಂಬದ ಮಹಿಳೆಯರಿಗೆ ಅನಕೂಲವಾಗುತ್ತದೆ ಎಂದ ಅವರು ಕರೋನಾ ಸಮಯದಲ್ಲಿ ಆರ್ಥಿಕ ನಿಶ್ಯಕ್ತಿಯಿಂದ ನಿಲ್ಲಿಸಿರುವಂತ ಮಾರ್ಗಗಳಲ್ಲಿ ಮತ್ತೆ ಬಸ್ಸುಗಳನ್ನು ಒಡಿಸುವಂತೆ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಲು ವಿನಂತಿಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಅರಿತವರು ಅವರು ದೊಡ್ಡ ಮನಸ್ಸು ಮಾಡಿ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಯೋಜನೆ ಜಾರಿಗೆ ತರುವ ಮೂಲಕ ಸಾಮಾನ್ಯ ಕುಟುಂಬದ…
ಶ್ರೀನಿವಾಸಪುರ: ದೇವಾಲಯಗಳನ್ನು ಭಕ್ತರ ನಂಬಿಕೆಗಳು ಅವರ ಆಶಯದಂತೆ ದಾರಿ ದೀಪಗಳಾಗಿ ಮತ್ತು ಭಾವನೆಗಳ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೋಡಿಮಠದ ಶ್ರೀ ಗಳು ಹೇಳಿದರು ಅವರು ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮುಸ್ಲಿಂ ಕುಟುಂಬ ನೂತನವಾಗಿ ನಿರ್ಮಿಸಿರುವ ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.ದೇವಾಲಯ ನಿರ್ಮಾಣ ಮಾಡಿರವಂತ ಶಫಿ ಕುಟುಂಬದ ಕಾರ್ಯ ಸಮಸ್ತ ಮನಕುಲಕ್ಕೆ ಆದರ್ಶವಾಗಿದ್ದು ಸೌರ್ಹಾದತೆಯ ಕೆಲಸ ಎಂದು ಶ್ಲಾಘಿಸಿದರು.ಪ್ರಪಂಚಕ್ಕೆ ಮಳೆಯಿಂದ ಆಪತ್ತು!ಮಳೆಯಿಂದ ಇನ್ನಿಲ್ಲದ ಅನಾಹುತಗಳು ಪ್ರಪಂಚವನ್ನು ಕಾಡುತ್ತದೆ ಒಂದೇರಡು ರಾಷ್ಟ್ರಗಳು ಮಳೆಯ ನೀರಿನಲ್ಲಿ ಮುಳಗಿ ಹೋಗುತ್ತದೆ,ಪ್ರಪಂಚಕ್ಕೆ ಜಾಗತೀಕ ಯುದ್ದದ ಭೀತಿ ಇದೆ ಇದರ ಪರಿಣಾಮ ನಮ್ಮ ರಾಷ್ಟ್ರದ ಮೇಲೂ ಬೀರಲಿದೆ ವೀಪರಿತ ದುಖ ಸಾವು ನೋವುಗಳು ಕಾಣುವಂತಾಗುತ್ತದೆ,ಒಡಿಶಾ ರೈಲು ದುರಂತದಂತೆ ಬೇರೆ ಬೇರೆ ರಿತೀಯ ಅವಘಡಗಳು ಸಂಭವಿಸಲಿದೆ, ಭೂಮಿ ಬಾಯಿ ತೆರೆಯುತ್ತದೆ ಕಂಪನಗಳು ಆಗುತ್ತದೆ ಇದಕ್ಕೆ ಭಗವಂತನ ಪೂಜೆ ಧ್ಯಾನವೆ ಪರಿಹಾರ ಎಂದ ಅವರು ಮತೀಯ ಸಮಸ್ಯೆಯೂ ಇದೆ ಎಂದು ನುಡಿದರು.ದೇವಾಲಯದ ಆವರಣದಲ್ಲಿ ರಾಜಕೀಯ…
ನ್ಯೂಜ್ ಡೆಸ್ಕ್: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಜೊಡೆತ್ತುಗಳಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಹಾಲಿ ಮುಖ್ಯಮಂತ್ರಿ ಅಶೋಕ ಗೆಲ್ಲೋಟ್ ಹಾಗು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಅಧಿಕಾರ ಹಂಚಿಕೆ ನಿಲ್ಲದ ಸಮರವಾಗಿತ್ತು ಈಗ ಅದು ತಾರಕಕ್ಕೆ ತಲುಪಿದ್ದು ಮುಖ್ಯಮಂತ್ರಿ ಅಶೋಕ ಗೆಲ್ಲೋಟ್ ಜೊತೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ಸಂಬಂಧ ಕಡಿದುಕೊಂಡಿದ್ದಾರೆ ಈಗ ತಮ್ಮದೇ ಮಾರ್ಗದಲ್ಲಿ ಸಾಗಲು ತಯಾರಿ ನಡೆಸುತ್ತಿರುವ ಪೈಲಟ್ ರಾಜಾಸ್ಥಾನದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.ನೂತನ ಪಕ್ಷ ಸ್ಥಾಪನೆ ಪ್ರಕ್ರಿಯೆಯಲ್ಲಿ ರಾಜಕೀಯ ಮಹಾ ತಂತ್ರಗಾರ ಪ್ರಶಾಂತ ಕಿಶೋರ ಅವರ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಸಚಿನ್ ಪೈಲಟ್ ಗೆ ನೆರವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.ರಾಜೇಶ್ ಪೈಲಟ್ ಅವರ ತಂದೆಯ ಪುಣ್ಯತಿಥಿ ಜೂ.11ರಂದು ಪೈಲಟ್ ನೂತನ ಪಕ್ಷ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ ಪಕ್ಷದ ಹೆಸರು “ಪ್ರಗತಿಶೀಲ…
ಶ್ರೀನಿವಾಸಪುರ:ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಗ್ರಾಮಪಂಚಾಯಿತಿಯಲ್ಲಿ ಎಲ್ಲವೂ ಅಕ್ರಮಗಳೆ ಎಂದುಪೆದ್ದಪಲ್ಲಿ ಈರಪ್ಪ ಮತ್ತು ಎಮ್ಮನೂರುರಾಜಣ್ಣ ಮತ್ತಿತರರು ಆರೋಪಿಸಿದ್ದಾರೆ.ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕುಂಟಿತವಾಗಿದೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)ಚಲಪತಿ ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮದಾನ ವ್ಯಪ್ತಪಡಿಸಿದ್ದಾರೆ, ಕಳೆದ 8-10 ತಿಂಗಳ ಹಿಂದೆ ಪಿ.ಡಿ.ಒ. ಚಲಪತಿ ಅಧಿಕಾರ ಪಡೆದುಕೊಂಡಿದ್ದಾರೆ ಸಮರ್ಪಕವಾಗಿ ಪಂಚಾಯಿತಿ ಕಛೇರಿಗೆ ಬರುವುದಿಲ್ಲ, ಜನರ ಸಮಸ್ಯೆ ಕೇಳಲು ಇಲ್ಲಿ ಅಧಿಕಾರಿಗಳೆ ಇಲ್ಲದಂತಾಗಿದೆ.ಮುತ್ತಕಪಲ್ಲಿ ಪಂಚಾಯಿತಿಯಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆಮುತ್ತಕಪಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆ ಬಹುತೇಕ ಗ್ರಾಮಗಳಲ್ಲಿ ಚರಂಡಿಗಳಲ್ಲಿ ಕಸ ತುಂಬಿದ ಪರಿಣಾಮ ಗಬ್ಬು ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ ಕನಿಷ್ಠ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಯ ಆಗಿಲ್ಲ,ಸ್ವಚ್ಚ ಭಾರತ್ ಮಿಷಿನ್ ಯೋಜನೆಯಡಿ ಕಸ ವಿಭಜಿಸುವ ಬುಟ್ಟಿಗಳ ವಿತರಣೆ ಇದುವರಿಗೂ ಆಗದಿರುವುದು ದುರಂತ ಎನ್ನುತ್ತಾರೆ ಜನತೆ.ನರೇಗಾ ಯೋಜನೆಯಡಿ ಹಣ ಖರ್ಚಾಗುತ್ತಿದೆ ನರೇಗಾ ಕಾಮಗಾರಿ ನಿಯಮಾವಳಿಗಳಂತೆ ಅನುಷ್ಟಾನ ಅಗುತ್ತಿಲ್ಲ ಪಾರದರ್ಶಕತೆ ಇಲ್ಲ ,ಕೇಂದ್ರ…
ಬೆಂಗಳೂರು:ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿದ್ದ ಬಿ. ವೀರಪ್ಪನವರು ನಿವೃತ್ತರಾದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಸಂಜೆ ಅವರನ್ನು ಬೆಂಗಳೂರು ವಕೀಲರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯತೆಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ನ್ಯಾಯಮೂರ್ತಿ ಬಿ.ವೀರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ, ಕಂಚಿನ ವೆಂಕಟೇಶ್ವರ ಮೂರ್ತಿ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗು ಅಪಾರ ಸಂಖ್ಯೆಯಲ್ಲಿ ವಕೀಲರು ಪಾಲ್ಗೋಂಡಿದ್ದರು.ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮನುಷ್ಯನಿಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಬದುಕು ಸಾರ್ಥಕ ಆಗುತ್ತದೆ ಅದೆ ರಿತಿಯಲ್ಲಿ ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಿ.ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನೆ ಮುಖ್ಯಮಂತ್ರಿ ಆಗಿದ್ದೆ.…
ಚಿಂತಾಮಣಿ:ಅವಿಭಜಿತ ಕೋಲಾರ ಜಿಲ್ಲೆಯ ಪ್ರಖ್ಯಾತ ವಾಣಿಜ್ಯ ನಗರಿ ಚಿಂತಾಮಣಿಗೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಂತದಲ್ಲಿಯೇ ಚೌಕಾಸಿ ಇಲ್ಲದೆ ಮಂತ್ರಿ ಭಾಗ್ಯ ಸಿಕ್ಕಿದೆ ಸುಮಾರು ಮೂರು ದಶಕದ ನಂತರ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ.ಮಾಳಪಲ್ಲಿ ಕುಟುಂಬದ ಕುಡಿಗೆ ಒಲಿದ ಮಂತ್ರಿ ಭಾಗ್ಯಮಾಳಪಲ್ಲಿ ಕುಟುಂಬ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಕುಟುಂಬ ಎಂದೇ ಖ್ಯಾತಿ ಪಡೆದಿದೆ ಅಂತಹ ಮಾಳಪಲ್ಲಿ ಕುಟುಂಬದ ಮೂರನೆ ತಲೆಮಾರಿನ ರಾಜಕಾರಣಿ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್. ವೃತ್ತಿಯಲ್ಲಿ ದಂತ ವೈದ್ಯ ಇವರ ಸಹೋದರ ಡಾ.ಬಾಲಾಜಿ ಸಹ ವೃತ್ತಿಯಲ್ಲಿ ವೈದ್ಯರೆ ಅವರು ಹೈದರಾಬಾದ್ ನಲ್ಲಿ ವೈದ್ಯ ವೃತ್ತಿಯಲ್ಲಿ ನೆಲೆ ನಿಂತಿದ್ದಾರೆ.ಸಿದ್ದರಾಮಯ್ಯ ಸಂಪುಟದಲ್ಲಿ ಡಾ.ಎಂ.ಸಿ.ಸುಧಾಕರ್ ಮಂತ್ರಿ ಪದವಿ ಒಲಿದಿದೆ,ಐದು ಚುನಾವಣೆಗಳನ್ನು ಎದುರಿಸಿರುವ ಡಾ.ಎಂ.ಸಿ.ಸುಧಾಕರ್ 2004 ಹಾಗು 2008 ಶಾಸಕರಾಗಿದ್ದರು ನಂತರದಲ್ಲಿ ಸತತವಾಗಿ ಎರಡು ಚುನಾವಣೆಗಳಲ್ಲಿ ಸೋಲುಕಂಡರು ನಿರಂತರವಾಗಿ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ಸಂಪರ್ಕದಲ್ಲಿದ್ದ ಪರಿಣಾಮ 2023 ಚುನಾವಣೆಯ ಭರ್ಜರಿ ಗೆಲವು ಸಾಧಿಸಿದ್ದಾರೆಡಾ.ಎಂ.ಸಿ.ಸುಧಾಕರ್ ಅವರ ತಾತ ಅಂಜನೇಯರೆಡ್ಡಿ 1951…


