ನ್ಯೂಜ್ ಡೆಸ್ಕ್:ಅಪಯಾಕಾರಿ ವಿಷದ ಹಾವನ್ನು ಹಿಡಿದ ವ್ಯಕ್ತಿ ಅದರೊಂದಿಗೆ ಹುಚ್ಚಾಟ ಆಡಿದ ಪರಿಣಾಮ ಹಾವು ವ್ಯಕ್ತಿಯನ್ನು ರೋಷದಿಂದ ನಾಲ್ಕೈದು ಬಾರಿ ಕಚ್ಚಿದೆ ಆದರೂ ಹಾವು ಕಚ್ಚಿದ ವ್ಯಕ್ತಿ ಪವಾಡ ಸದೃಶ ಬದುಕುಳಿದಿರುವ ಘಟನೆ ಕರ್ನಾಟಕದ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದ್ದು ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದ ವ್ಯಕ್ತಿಯನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆ ಬಳಿ ಹಾವು ಕಾಣಿಸಿಕೊಂಡಿದೆ.ತಕ್ಷಣವೇ ಸ್ಥಳಕ್ಕೆ ಬಂದ ಸಿದ್ದಪ್ಪ ಬಂದಿದ್ದಾನೆ ಮದ್ಯ ಕುಡಿದು ಫೂಲ್ ಟೈಟಾಗಿದ್ದ ಸಿದ್ದಪ್ಪ ವೀರಾವೇಷದಿಂದ ಬರಿಗೈಯಲ್ಲಿಯೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳದ ಸಿದ್ದಪ್ಪ, ನನ್ನ ಕೈಮೇಲೆ ಗರುಡರೇಖೆ ಇದೆ, ನನಗೇನೂ ಆಗಲ್ಲ ಎಂದು ಅದರೊಂದಿಗೆ ಆಟ ಆಡಿದ್ದಾನೆ.ಇದರಿಂದಾಗಿ ಆಕ್ರೋಶಗೊಂಡ ಹಾವು ಸಿದ್ದಪ್ಪನನ್ನು ನಾಲ್ಕು ಬಾರಿ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ಸಿದ್ದಪ್ಪನನ್ನು ನರಗುಂದ ಸರಕಾರಿ ಆಸ್ಪತ್ರೆಗೆ ದಾಖಲಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.ಇವೆಲ್ಲಾ ಬೆಳವಣಿಗೆ ನಡುವೆ…
Author: Srinivas_Murthy
ಶ್ರೀನಿವಾಸಪುರ:ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೋಡೆದ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಮದನಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿ ರಾಯಲ್ಪಾಡು ಸಮೀಪ ನಡೆದಿದೆ.ಬೆಂಕಿ ಅವಘಡಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ 4 ಸದಸ್ಯರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಅಂಧ್ರಪ್ರದೇಶದ ಕಡಪದ ಕುಟುಂಬವೊಂದು ಕರ್ನಾಟಕ ನೊಂದಣಿ ಹೊಂದಿರುವ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿತ್ತು ಮದನಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿ ರಾಯಲ್ಪಾಡು ಸಮೀಪ ಬರುತ್ತಿದ್ದಂತೆ ತಿರುವಿನಲ್ಲಿ ಕಾರಿನ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿದೆ ರಸ್ತೆ ಬದಿಯಲ್ಲಿನ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೋಡದಿದ್ದು ಕಾರಿನ ಇಂಜಿನ್ ನಲ್ಲಿ ಬೆಂಕಿಹೊತ್ತಿಕೊಂಡಿದೆ ತಕ್ಷಣ ಕಾರಿನಲಿದ್ದ ಕುಟುಂಬಸ್ಥರು ಕಾರಿನಿಂದ ಇಳಿದು ಪ್ರಾಣಗಳನ್ನು ಉಳಿಸಿಕೊಂಡಿದ್ದಾರೆ.ಕಾರು ಸಿಎನ್‌ಜಿ-ಪೆಟ್ರೋಲ್ ಆದ ಕಾರಣ ಬೆಂಕಿ ನಂದಿಸಲು ಸಾರ್ವಜನಿಕರು ಹಿಂದೇಟು ಹಾಕಿದ ಹಾಕಿದ ಕಾರಣ ಬೆಂಕಿ ಸಿ.ಎನ್.ಜಿ ಟ್ಯಾಂಕಿಗೆ ಬೆಂಕಿ ತಗುಲಿದರೆ ದೊಡ್ಡ ಮಟ್ಟದ ಅನಾಹುತ ಆಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ಸಂಪರ್ಕವನ್ನು ರಾಯಲ್ಪಾಡು ಪೊಲೀಸರು ಬಂದ್…
ನ್ಯೂಜ್ ಡೆಸ್ಕ್:ಚಿರತೆ ದಾಳಿಗೆ ಮಗು ಸಿಲುಕಿ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ತಿರುಮಲ ಮೆಟ್ಟಿಲು ದಾರಿಯಲ್ಲಿ ನಡದಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಐದು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಮಗುವಿನ ಪೋಷಕರ ಮುಂದೆ ನೊಡು ನೊಡುತ್ತಿದ್ದಂತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ ಈ ಸಂದರ್ಭದಲ್ಲಿ ಮಗವಿನ ಪೋಷಕರು ನೆರದಿದ್ದ ಭಕ್ತರ ಕಿರುಚಾಟ ಕಂಡ ಬಂದೋಬಸ್ತು ಡ್ಯೂಟಿಯಲ್ಲಿದ್ದ ಪೊಲೀಸರು ಚಿರತೆ ಹೋದ ದಿಕ್ಕಿನಲ್ಲಿ ಧೈರ್ಯವಾಗಿ ದೊಡ್ಡದಾಗಿ ಅರಚುತ್ತ ಚಿರತೆಯನ್ನು ಬೆನ್ನಟ್ಟಿದ್ದಾರೆ ಇದರಿಂದ ಗಲಿಬಿಲಿ ಗೊಂಡ ಚಿರತೆ ಬಾಲಕನನ್ನು ಬಿಟ್ಟು ಕಾಡಿನೊಳಗೆ ಓಡಿ ಹೋಗಿದೆ ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ತಿರುಮಲ-ತಿರುಪತಿ ದೇವಸ್ಥಾನದ ಪದ್ಮಾವತಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ಕೌಶಿಕ್ ಗೆ ಯಾವುದೇ ಪ್ರಾಣಾಪಯ ಆಗಿಲ್ಲ ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದ್ದಾರೆ.ಸುಮಾರು ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿರುವ ಘಟನೆಯಾಗಿದ್ದು ಆದೋನಿಯ ಕುಟುಂಬವೊಂದು ಪಾದಯಾತ್ರೆ ಮೂಲಕ ತಿರುಮಲ ಬೆಟ್ಟಕ್ಕೆ ಆಗಮಿಸಿದ್ದು ಏಳನೇ ಮೈಲಿನ…
ಕೋಲಾರ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಇಲಾಖೆಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಕೋದಂಡರಾಮಯ್ಯ ಅವರು ವಾಸಿಸುವ ಕೋಲಾರ ನಗರದ ಕುವೆಂಪು ನಗರದಲ್ಲಿರುವ ಪೂಜ ನಿಲಯದ ಮನೆ ಮೇಲೆ ಹಾಗು ಅವರ ಸ್ವಗ್ರಾಮವಾದ ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿಯ ಲಕ್ಷ್ಮಿಸಾಗರದ ಮನೆ, ಅವರು ಕಾರ್ಯನಿರ್ವಹಿಸುತ್ತಿರುವ ತುಮಕೂರಿನ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುತ್ತಾರೆ.ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ ನಡೆದಂತ ದಾಳಿಯಲ್ಲಿ ಲೋಕಾಯುಕ್ತದ 10ಕ್ಕೂ ಹೆಚ್ಚು ಜನ ಅಧಿಕಾರಿಗಳ ತಂಡದಿಂದ ದಾಳಿವೇಳೆ ಪರಿಶೀಲನೆ ನಡೆಸಿದ್ದಾರೆತುಮಕೂರಿನ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿರುವ ಕೋದಂಡರಾಮಯ್ಯ ಅವರು ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿ ಲಕ್ಷ್ಮೀಸಾಗರದವರಾಗಿದ್ದು ಲ್ಯಾಂಡ್ ಆರ್ಮಿ ಇಲಾಖೆ ಕೋಲಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಈಗ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸಪುರ:ದಕ್ಷೀಣ ಭಾರತದ ತಮಿಳುನಾಡು,ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 234 ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿದ್ದು ಮುಳಬಾಗಿಲು ಕಡೆಯಿಂದ ಬರುವಂತ ರಾಷ್ಟ್ರೀಯ ಹೆದ್ದಾರಿ 234 ಚಿಂತಾಮಣಿ ಕಡೆಗೆ ಮುಳಬಾಗಿಲು ವೃತ್ತ, ಸಂತೇಮೈದಾನ ರಸ್ತೆ ರಾಜಾಜಿ ರಸ್ತೆ ಚಿಂತಾಮಣಿ ವೃತ್ತದ ಮೂಲಕ ಚಿಂತಾಮಣಿಗೆ ಹಾದು ಹೋಗುತ್ತದೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಾದರು ಇಲ್ಲಿ ಸಂತೇ ಮೈದಾನದ ರಸ್ತೆ ಅಗಲೀಕರಣ ಮಾಡದೆ ರಸ್ತೆಗೆ ಹೊಂದಿಕೊಂಡಂತೆ ರಾಜ್ಯ ಸರ್ಕಾರದ ವತಿಯಿಂದ ಇಲ್ಲಿನ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದ ಮನೆಗಳನ್ನು ಕಟ್ಟಿಕೊಡುತ್ತಿದೆ ಮುಂದೆ ರಸ್ತೆ ಅಗಲಿಕರಣ ಆದರೆ ನಿರ್ಮಾಣ ಮಾಡಿರುವಂತ ಮನೆಗಳ ಪರಿಸ್ಥಿತಿ ಏನಾಗುತ್ತದೆ ರಾಷ್ಟ್ರೀಯ ಹೆದ್ದಾರಿಯ ಕನಿಷ್ಠ ಮಾನದಂಡಗಳನ್ನು ಪಾಲಿಸದೆ ಮನೆ ನಿರ್ಮಾಣ ಮಾಡಿರುವುದು ಆಳುವವರಿಗೆ ಕನಿಷ್ಟ ಆಲೋಚನೆ ಇಲ್ಲ ಎಂಬುದು ಸಾಬಿತಾಗಿದೆ, ಇನ್ನೂ ಕೋಲಾರ ನ್ಯೂ ಸರ್ಕಲ್ ನಿಂದ ಚಿಂತಾಮಣಿ ವೃತ್ತದವರಗಿನ ರಾಜಾಜಿ ರಸ್ತೆ ಸಿಂಗಲ್ ವಾಹನ ಒಡಾಡಲು ಕಷ್ಟವಾಗುವಷ್ಟು ರಸ್ತೆ ಇಕ್ಕಾಟ್ಟಾಗಿದೆ ಇಲ್ಲಿ ರಸ್ತೆ ಅಗಲೀಕರಣ ತೀರಾ ಅಗತ್ಯ…
ಬೆಂಗಳೂರು:ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ ಅವರು ವೃತ್ತಿಯಲ್ಲಿ ಸಕ್ರೀಯರಾಗಬೇಕಾದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರು ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು.ಆರೋಗ್ಯದ ವಿಚಾರದಲ್ಲಿ ಯಾರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಆಗಿಂದಾಗ್ಗೆ ಆರೋಗ್ಯದ ಕುರಿತಾದ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯೂಜೆ ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು…
ಶ್ರೀನಿವಾಸಪುರ:ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ರೋಣೂರು ಹೋಬಳಿ ನಿಲಟೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿರುತ್ತದೆ.ಮೃತ ಯುವಕನನ್ನು ನಿಲಟೂರು ಗ್ರಾಮದ ಪ್ರಸಾದ್(30) ಎಂದು ಗುರುತಿಸಲಾಗಿದೆ.ನಿಲಟೂರು ಗ್ರಾಮ ವ್ಯಾಪ್ತಿಯ ರೋಣೂರು ರಸ್ತೆಯಲ್ಲಿರುವ ಸುಮಾರು ಐದು ಎಕರೆ ಮಾವಿನ ತೋಪಿನ ವಿಚಾರದಲ್ಲಿ ಮೃತ ಯುವಕ ಪ್ರಸಾದ್ ತಂದೆ ಈರನ್ನಗಾರಿ ಶ್ರೀರಾಮರೆಡ್ಡಿ ಮತ್ತು ಆರೋಪಿ ಎನ್ನಲಾದ ಕಿರಣ್ ಕುಟುಂಬಗಳ ನಡುವಿನ ವಿವಾದ ಕೋರ್ಟ್ ಮೇಟ್ಟಿಲೇರಿತ್ತು ನ್ಯಾಯಾಲಯದ ಹೋರಾಟದಲ್ಲಿ ಕಿರಣ್ ಪರ ತೀರ್ಪು ಬಂದ ಹಿನ್ನಲೆಯಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ವೈಷಮ್ಯ ಇದ್ದು ಎರಡು ಮೂರು ದಿನಗಳ ಹಿಂದೆ ಜಮೀನಿನಲ್ಲಿರುವ ಮಾವಿನ ಕಾಯಿ ಕೊಯ್ಲು ವಿಚಾರಕ್ಕೆ ಎರಡು ಕುಟುಂಬಗಳು ಪೋಲಿಸ್ ಠಾಣೆ ಮೆಟ್ಟಿಲೇರಿದ್ದವು,ಇಂದು ಬೆಳ್ಳಂ ಬೆಳಿಗ್ಗೆ ಎರಡು ಕುಟುಂಬದವರು ಮತ್ತೆ ಗಲಾಟೆಗೆ ಬಿದ್ದು ದೊಣ್ಣೆಗಳನ್ನು ಹಿಡಿದು ಕಲ್ಲುಗಳಿಂದ ದಾಳಿಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಮೃತ ಪ್ರಸಾದ್ ಕುಟುಂಬದ ಸದಸ್ಯರು ಕಿರಣ್ ನನ್ನು ಅಟ್ಟಾಡಿಸಿಕೊಂಡು ಹೋಗಿದ್ದು ಈ…
ಶ್ರೀನಿವಾಸಪುರ:ಲಾರಿ ರಿವರ್ಸ್ ಹಾಕುವಾಗ ಲಾರಿ ವ್ಯಕ್ತಿಯೊಬ್ಬನ ಮೇಲೆ ಹರಿದು ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಮಾವಿನ ಮಂಡಿಗಳ ಬಳಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ಬಿಹಾರ ಮೂಲದ ಕಾರ್ಮಿಕ ದಿಲೀಪ್ (21) ಎಂದು ಗುರುತಿಸಲಾಗಿದೆ.ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವಿನಕಾಯಿ ಲೊಡ್ ಸಾಗಿಸಲು ಬಂದಿದ್ದ ಈಚರ್ ಲಾರಿ ರಿವರ್ಸ್ ಹಾಕುವಾಗ ಕಾರ್ಮಿಕನಿಗೆ ಲಾರಿ ಡಿಕ್ಕಿ ಹೊಡೆದಿದೆ ವ್ಯಕ್ತಿ ನೆಲಕ್ಕೆ ಬಿದಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿರುತ್ತಾನೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶ್ರೀನಿವಾಸಪುರದಿಂದ ಮಾವಿನಕಾಯಿ ಲೊಡ್ ಸಾಗಿಸಲು ಬರುವಂತ ಬಾರಿ ಗಾತ್ರದ ಲಾರಿಗಳು ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಲೆ ನಿಂತಿರುತ್ತದೆ ಈ ಲಾರಿಗಳು ಹಿಂದೆ ಮುಂದೆ ಚಲಿಸುವಾಗ ಸೂಚನೆ ಕೊಡುವರು ಯಾರು ಇರುವುದಿಲ್ಲ ಹಿಂದೆ ಚಲಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ಹಿಂದೆ ಬರುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವಂತ ಘಟನೆ ಸಾಕಷ್ಟು ನಡೆದಿವೆ. ಪೋಲಿಸರ ನಿರ್ಲಕ್ಷ್ಯ ಸ್ಥಳೀಯ ಆಡಳಿತದ ಬೇಜಾವಾಬ್ದಾರಿ!ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ…
ಶ್ರೀನಿವಾಸಪುರ:ಯೋಗ ವಿಙ್ಞಾನ ಭಾರತದ ಮೂಲಪರಂಪರೆ ಇದನ್ನು ದೇವಾನುದೇವತೆಗಳಿಂದ ಅನುಗ್ರಹ ಪಡೆದ ಋಷಿ ಮುನಿಗಳು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಯೋಗ ಶಿಕ್ಷಕ ವೆಂಕಟೇಶ್ ಬಾಬು ಹೇಳಿದರು ಅವರು ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಭ್ಯಾಸ ಉದ್ಘಾಟಿಸಿ ಮಾತನಾಡಿದರು.ಇಂದು ಇಡಿ ವಿಶ್ವದಲ್ಲಿ ಜನತೆ ಭಾರತ ಯೋಗಾಭ್ಯಸವನ್ನು ಅರಿಯಲು ಮುಂದಾಗಿ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಲು ಮುಂದಾಗಿದೆ ಎಂದರು.ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ ವಿಶ್ವದ ಹಲವಾರು ದೇಶಗಳು ಭಾರತದ ನೇತೃತ್ವದಲ್ಲಿ ಒಂದೇ ಕುಟುಂಬದಂತೆ ಇಂದು ಯೋಗ ದಿನಾಚರಣೆ ಆಚರಣೆ ಮಾಡುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಖುಷಿ ವಿಚಾರ, ನಾವೇಲ್ಲರು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ 20 ವರ್ಷಗಳ ಹಿಂದಿನ ಆಹಾರ ಕ್ರಮ ಅನುಸರಿಸಿ,ವಿದೇಶಿ ಆಹಾರ ಪದ್ದತಿ ತಿರಸ್ಕರಿಸಿ ಬದುಕು ಹಸನಾಗಿಸಿಕೊಳ್ಳೊಣ,ನಮ್ಮ ಸುಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ ಮೂಲಕ ಪರಿಸರದ ಸ್ವಾಸ್ಥವನ್ನು…
ಚಿತ್ತೂರು: ರಸ್ತೆ ಅಪಘಾತದಲ್ಲಿ ಮೂರು ಆನೆಗೆಳು ಜೀವ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ . ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಲಮನೇರು ಬಳಿಯ ಜಗಮರ್ಲ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಪಲಮನೇರು ಬಳಿ ಇರುವ ಕೌಂಡಿನ್ಯ ಅಭಯಾರಣ್ಯದ ಮದ್ಯವೆ ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು ಈ ರಸ್ತೆಯಲ್ಲಿ ಆನೆಗಳು ರಸ್ತೆ ದಾಟುವುದು ಸಾಮಾನ್ಯ, ಮೂರ್ನಾಲ್ಕು ದಿನಗಳ ಹಿಂದೆ ಮದ್ಯರಾತ್ರಿ ವೆಳೆ ಆನೆಗಳ ದಂಡು ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರಸ್ತೆ ದಾಟುತ್ತಿರುವಾಗ ಪಲಮನೇರು ಕಡೆಯಿಂದ ಚೆನ್ನೈ ಕಡೆಗೆ ಹೋರಟಿದ್ದ ಮಾವಿನಕಾಯಿ ತುಂಬಿದ್ದ ಇಚರ್ ಲಾರಿ ವೇಗವಾಗಿ ಹೊಗಿತಿದ್ದು ವಾಹನ ಚಾಲಕನಿಗೆ ರಸ್ತೆ ದಾಟುತ್ತಿರುವ ಆನೆಗಳ ಹಿಂಡು ಕಾಣದಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಈ ಅಪಘಾತದಲ್ಲಿ ಮೂರು ಆನೆಗಳು ಸ್ಥಳದಲ್ಲೆ ಸಾವನ್ನಪ್ಪಿವೆ ಅಪಘಾತದ ರಭಸಕ್ಕೆ ಆನೆಯೊಂದು ರಸ್ತೆ ಬದಿಯ ಹಳದಲ್ಲಿ ಬಿದಿದ್ದರೆ,ರಸ್ತೆ ಸುರಕ್ಷತೆಗೆ ಅಳವಡಿಸಿದ್ದ ಕ್ರ್ಯಾಶ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಮತ್ತೆರಡು ಆನೆಗಳು ಸಾವನ್ನಪ್ಪಿವೆ. ಈ ಅಪಘಾತದಲ್ಲಿ ಮಾವಿನಕಾಯಿ ಲಾರಿ ಸಂಪೂರ್ಣ…


