ಶ್ರೀನಿವಾಸಪುರ:ಅತಿವೇಗದದಿಂದ ತೆರಳುತ್ತಿದ್ದ ಮಹಿಂದ್ರಾ ಎಸ್.ಯು.ವಿ ಕಾರು ಡಿಕ್ಕಿ ಹೋಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ಕ್ರಾಸ್ ಬಳಿ ಇಂದು ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರರನ್ನು ತಾಡಿಗೋಳ್ ಗ್ರಾಮದ ಶಂಕರಪ್ಪ(38) ಹಾಗು ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ(40) ಎಂದು ಗುರುತಿಸಲಾಗಿದೆ.
ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಮಹಿಂದ್ರಾ ಹೈಬ್ರಿಡ್ ಕಾರು ತಾಡಿಗೊಳ್ ಕ್ರಾಸ್ ಬಳಿ ಜಲ್ಲಿ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಅತಿಯಾದ ವೇಗದಲ್ಲಿ ಸಾಗುತ್ತಿದ್ದ ಕಾರು ರಸ್ತೆ ಪಕ್ಕದ ಟಮ್ಯಾಟೋ ತೋಟಕ್ಕೆ ನುಗ್ಗಿದೆ.ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲಿಯೆ ಸಾವನಪ್ಪಿರುತ್ತಾರೆ.
ಈ ಬಗ್ಗೆ ಗೌವನಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರ ರಾಜಕಾರಣಿ ಕಾರು!
ಅತಿವೇಗದ ಚಾಲನೆಯಿಂದ ಇಬ್ಬರು ಗ್ರಾಮಸ್ಥರ ಸಾವಿಗೆ ಕಾರಣವಾದ ಮಹಿಂದ್ರಾ XUV ಕಾರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೂಟಿಯ ಆಡಳಿತ ರೂಡ ರಾಜಕಾರಣಿಯದು ಎನ್ನಲಾಗುತ್ತಿದೆ ಕಾರು ಬೆಂಗಳೂರಿಗೆ ತೆರಳುತ್ತಿದ್ದು ಕಾರಿನ ಮುಂಬಾಗದ ಗಾಜಿನ ಮೇಲೆ GOVT WHIP(ಸರ್ಕಾರಿ ಸಚೇತಕ) ಎಂದು ಸ್ಟೀಕರ್ ಅಂಟಿಸಲಾಗಿದೆ ಈ ಬಗ್ಗೆ ಗೌವನಪಲ್ಲಿ ಠಾಣಾಧಿಕಾರಿಯನ್ನು ಕೇಳಿದರೆ ವಾಹನದ ಸಂಖ್ಯೆ AP13AC6570 ಇದೆ ಸರ್ ಆದರೆ ಈ ಬಗ್ಗೆ ನಮಗೇನೂ ತಿಳಿಯದು ಎಂದು ಜಾರಿಕೊಳ್ಳುವ ಉತ್ತರ ಹೇಳುತ್ತಾರೆ
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



