ನ್ಯೂಜ್ ಡೆಸ್ಕ್:ಅಪಯಾಕಾರಿ ವಿಷದ ಹಾವನ್ನು ಹಿಡಿದ ವ್ಯಕ್ತಿ ಅದರೊಂದಿಗೆ ಹುಚ್ಚಾಟ ಆಡಿದ ಪರಿಣಾಮ ಹಾವು ವ್ಯಕ್ತಿಯನ್ನು ರೋಷದಿಂದ ನಾಲ್ಕೈದು ಬಾರಿ ಕಚ್ಚಿದೆ ಆದರೂ ಹಾವು ಕಚ್ಚಿದ ವ್ಯಕ್ತಿ ಪವಾಡ ಸದೃಶ ಬದುಕುಳಿದಿರುವ ಘಟನೆ ಕರ್ನಾಟಕದ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದ್ದು ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದ ವ್ಯಕ್ತಿಯನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆ ಬಳಿ ಹಾವು ಕಾಣಿಸಿಕೊಂಡಿದೆ.ತಕ್ಷಣವೇ ಸ್ಥಳಕ್ಕೆ ಬಂದ ಸಿದ್ದಪ್ಪ ಬಂದಿದ್ದಾನೆ ಮದ್ಯ ಕುಡಿದು ಫೂಲ್ ಟೈಟಾಗಿದ್ದ ಸಿದ್ದಪ್ಪ ವೀರಾವೇಷದಿಂದ ಬರಿಗೈಯಲ್ಲಿಯೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳದ ಸಿದ್ದಪ್ಪ, ನನ್ನ ಕೈಮೇಲೆ ಗರುಡರೇಖೆ ಇದೆ, ನನಗೇನೂ ಆಗಲ್ಲ ಎಂದು ಅದರೊಂದಿಗೆ ಆಟ ಆಡಿದ್ದಾನೆ.
ಇದರಿಂದಾಗಿ ಆಕ್ರೋಶಗೊಂಡ ಹಾವು ಸಿದ್ದಪ್ಪನನ್ನು ನಾಲ್ಕು ಬಾರಿ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ಸಿದ್ದಪ್ಪನನ್ನು ನರಗುಂದ ಸರಕಾರಿ ಆಸ್ಪತ್ರೆಗೆ ದಾಖಲಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.
ಇವೆಲ್ಲಾ ಬೆಳವಣಿಗೆ ನಡುವೆ ಸಿದ್ದಪ್ಪನ ಊರಾದ ಹಿರೇಕೊಪ್ಪ ಗ್ರಾಮದಲ್ಲಿ ಹಾವು ಕಚ್ಚಿದ ಸಿದ್ದಪ್ಪ ಮೃತಪಟ್ಟಿದ್ದಾನೆ ಎಂಬ ಗಾಳಿಸುದ್ದಿ ಹರಡಿದೆ ಗ್ರಾಮಸ್ಥರು ಆತನ ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಆದರೆ ಇತ್ತ ಆಸ್ಪತ್ರೆಯ ಹಾಸಿಗೆ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಪ್ಪ ಎದ್ದು ಕುಳಿತಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಸಿದ್ದಪ್ಪ ಸಾವಿನ ದವಡೆಯಿಂದ ಪಾರಾಗಿದ್ದಾನೆ ಈ ಸುದ್ದಿ ಗ್ರಾಮದಲ್ಲಿ ಹಬ್ಬಿದ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿರುತ್ತಾರೆ ಅಂತೂ ಸಿದ್ದಪ್ಪ ನಂಬಿದ ಕೈ ಮೇಲಿನ ಗರುಡರೇಖೆಯಿಂದಾಗಿ ಪವಾಡ ಸದೃಶವಾಗಿ ಬದುಕಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



