ಶ್ರೀನಿವಾಸಪುರ:ಸಾಮಜಿಕ ನ್ಯಾಯದ ಅನುಷ್ಟಾನಕ್ಕಾಗಿ ಕ್ಷೇತ್ರದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಹಾಗು ಶೋಷಿತ ಸಮುದಾಯಗಳ ಅಭಿವೃದ್ಧಿಯನ್ನು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ ಜಮೀನುಗಳ ವಿಚಾರದಲ್ಲಿ ಎಲ್ಲಾ ವರ್ಗದ ಜನರಿಗೂ ಅನ್ಯಾಯವಾಗಿದೆ,ಸೂರು ರಹಿತ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಸಿಕ್ಕಿಲ್ಲ ವಿಶೇಷವಾಗಿ ಪರಿಶಿಷ್ಟ ಜಾತಿ ಜನಾಂಗದ ಬಂಧುಗಳಿಗೆ ಸಿಗಬೇಕಾದ ಸರ್ಕಾರಿ ಸೌಲತ್ತುಗಳು ಸಿಗದೆ ತೀವ್ರವಾದ ಅನ್ಯಾಯವಾಗಿದೆಇವರ ಅಭಿವೃದ್ಧಿಗಾಗಿ ವಿಶೇಷ ಆಸಕ್ತಿ ವಹಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಇದಕ್ಕೆ ಎಲ್ಲ ವರ್ಗದ ಜನರ ಸಹಕಾರ ಬಯಸುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರುವ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಬುಧವಾರ ಶ್ರೀನಿವಾಸಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರಿಗೆ ಕೃತಙ್ಞತೆ ಸಲ್ಲಿಸಿ ಮಾತನಾಡಿದರು.ಕ್ಷೇತ್ರದಲ್ಲಿ ಬಡಜನರ ಅಭಿವೃದ್ಧಿಗೆ ಮಾಡಬೇಕಾದ ಕೆಲಸಗಳು ಸಾಕಷ್ಟು ಇದೆ ಸರ್ಕಾರದ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಜರೂರಾಗಿ ಆಗಬೇಕಿದೆ ಅದಕ್ಕೆ ಆದ್ಯತೆ ಕೊಡಬೇಕು ಅಧಿಕಾರಿಗಳ ಸಹಕಾರ ಪಡೆದು ಈ ತಕ್ಷಣದಿಂದಲೆ ಕೆಲಸ ಮಾಡುತ್ತೇನೆ.ಶ್ರೀನಿವಾಸಪುರ ಪಟ್ಟಣದ ರಸ್ತೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಆಗಿರುವಂತ ಅನ್ಯಾಯಗಳನ್ನು ಸರಿಮಾಡಬೇಕಿದೆ ಅಧಿಕಾರಿಗಳ ಬೇಜವಬ್ದಾರಿ ಎಸಗಿರುವ…
Author: Srinivas_Murthy
ನ್ಯೂಜ್ ಡೆಸ್ಕ್:ಬಿಜೆಪಿ ಸೋತಿದ್ದಕ್ಕೆ ನೂರಾರು ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನು ಪುಂಖವಾಗಿ ಬರೆಯಲಾಗುತ್ತಿದೆ ಅದೆ ಹಳೆಯ ಕಥೆಗಳು ಕಾರಣಗಳು,ಯಡಿಯೂರಪ್ಪನವರನ್ನ ಕೈ ಬಿಟ್ಟದ್ದು,ಲಿಂಗಾಯಿತರನ್ನು ಸೈಡ್ ಲೈನ್ ಮಾಡಿದ್ದು ಹೊಸ ಮುಖಗಳಿಗೆ ಮಣೆ ಹಾಕಿದ್ದು ನಿಷ್ಟಾವಂತರಿಗೆ ನ್ಯಾಯ ಒದಗಿಸದೆ ಇದ್ದದ್ದು ಇತ್ಯಾದಿ ಇತ್ಯಾದಿಗಳು ಆದರೆ ಇದ್ಯಾವುದು ಅಲ್ಲ ಈ ಚುನಾವಣೆಯಲ್ಲಿ ನಡದದ್ದೆ ಬೆರೆ ಇದ್ಯಾವುದು ಮತದಾರನ ಗಮನಕ್ಕೆ ಬರಲೆ ಬಿಜೆಪಿ-ಜೆಡಿಎಸ್ ಯಾವುದನ್ನೂ ಸಿರಿಯಸ್ ಆಗಿ ಪರಿಗಣಿಸಲೆ ಇಲ್ಲ.ಬಿಜೆಪಿ ಪಕ್ಷದ ಮೂಲ ಬ್ರಾಂಡ್ ಆದ ಬ್ರಾಹ್ಮಣ ಮತಗಳು ಅತಿ ಹೆಚ್ಚು ಇದ್ದ ಕಡೆ ಕೂಡ ಬಿಜೆಪಿ ಸೋತಿದೆ ಎಂದರೆ ಅದಕ್ಕೆ ಕಾರಣ ಸ್ಥಳೀಯ ವಿಷಯಗಳಿಗೆ ಮಹತ್ವ ನೀಡದೆ ಎಲ್ಲಕ್ಕೂ ಮೋದಿಯೇ ಮದ್ದು ಎಂದದ್ದುಕಾಂಗ್ರೆಸ್ ಗ್ಯಾರಂಟಿಯನ್ನು ಗಟ್ಟಿಯಾಗಿ ಘೋಷಣೆ ಮಾಡಿತು, ಅದನ್ನ ಯಶಸ್ವಿಯಾಗಿ ಮನೆಮನೆಗೆ ತಲುಪಿಸಿತು. ಅದು ಜನರಿಗೆ ಇನ್ನಿಲ್ಲದಷ್ಟು ಇಷ್ಟವಾಗಿ ಹೋಯ್ತು. ಇದೆಲ್ಲ ಬಿಟ್ಟಿ ಭಾಗ್ಯ ಎಂದು ಕಾಂಗ್ರೆಸ್ ಜರೆದಿದ್ದ ಬಿಜೆಪಿಗೆ ಇದು ಅರ್ಥವಾಗುವುದರಲ್ಲಿ ಸಮಯ ಮೀರಿ ಹೋಗಿತ್ತು.ಬಿಜೆಪಿ ಟಾಪ್ ಲೀಡರ್ ಗಳಿಗೆ ವಿಷಯ ಅರ್ಥವಾಗಿ…
ಶ್ರೀನಿವಾಸಪುರ:ಶ್ರೀನಿವಾಸಪುರದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಗೆದ್ದು ವಿಜಯ ಪತಾಕೆ ಹಾರಸಿದ್ದಾರೆ ತಮ್ಮ ಸಮೀಪದ ಪ್ರತಿಸ್ಪರ್ದಿ ಹಾಲಿ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹ್ಯಾಟ್ರಿಕ್ ಗೆಲವಿಗೆ ಬ್ರೆಕ್ ಹಾಕಿ ಸುಮಾರು ಹತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.ಕೋಲಾರ ಜಿಲ್ಲೆಯ ವ್ಯಕ್ತಿಗತ ರಾಜಕೀಯಕ್ಕೆ ಹೆಸರಾದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಸಾಂಪ್ರದಾಯಿಕ ಎದುರಾಳಿಗಳಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ಹತ್ತನೆ ಬಾರಿ ಎದುರಾಳಿಗಳಾಗಿ ಸ್ಪರ್ದಿಸಿ ಜಿದ್ದಾ ಜಿದ್ದಿಯಾಗಿ ನಡೆಸಿದ ಹೋರಾಟದಲ್ಲಿ ವೆಂಕಟಶಿವಾರೆಡ್ಡಿ ಭರ್ಜರಿ ಗೆಲವು ಸಾಧಿಸಿದ್ದಾರೆ.ನೀರಿಕ್ಷಿಸಿದಂತೆ ಈ ಕ್ಷೇತ್ರದಲ್ಲಿ ಯಾವುದೆ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸಿದ್ದರು ಚುನಾವಣೆ ನಡೆದಿರುವುದು ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ನಡುವೆ ಇಲ್ಲಿ ಇತರೆ ಪಕ್ಷಗಳ ಅಭ್ಯರ್ಥಿಗಳು ನಗಣ್ಯ.ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ ಗೆದ್ದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ 94496 ಮತಗಳನ್ನು ಪಡೆದರೆ ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ 84123 ಮತಗಳನ್ನು ಪಡೆದಿರುತ್ತಾರೆ, ಇಬ್ಬರ ನಡುವಿನ ಗೆಲುವಿನ ಅಂತರ 10373 ಮತಗಳು ಇನ್ನುಳಿದಂತೆ…
ಶ್ರೀನಿವಾಸಪುರ:ಚುನಾವಣೆ ದಿನ ಹಾಗು ಮಾರನೆ ದಿನ ಗುರುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಗಲಭೆಗಳಿಗೆ ಕಾರಣವಾಗಿ ವ್ಯಕ್ತಿಯೊರ್ವನಿಗೆ ಇರಿದ ಆರೋಪದಲ್ಲಿ ಶ್ರೀನಿವಾಸಪುರ ಠಾಣೆಯಲ್ಲಿ ಪಟ್ಟಣದ ಇಂದಿರಾನಗರ ಹಾಗು ಹೈದರಾಲಿ ಮೊಹ್ಹಲ್ಲಾದ ನಿವಾಸಿಗಳಾದ ಐವರ ವಿರುದ್ದ ಪ್ರಕರಣ ದಾಖಲಾಗಿದ್ದು ಇದರಲ್ಲಿ ಆರೀಫ್ ಹಾಗು ನಾಸೀರ್ ಎನ್ನುವ ಇಬ್ಬರನ್ನು ಶ್ರೀನಿವಾಸಪುರ ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆಈ ಸಂಬಂದ ಪೋಲಿಸರು ಫುಲ್ ಹೈ ಆಲರ್ಟ್ ಆಗಿದ್ದು ಚಿಂತಾಮಣಿ ವೃತ್ತ, ಮೊಹ್ಹಲ್ಲಾಗಳಲ್ಲಿ ಜನ ಜಾಗೃತಿ ಸಭೆ ನಡೆಸಿರುವ ಪೋಲಿಸರು ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೆ ಕಾರಣಕ್ಕೂ ಪಟಾಕಿ ಹೊಡೆಯುವುದು ವಿಜಯೋತ್ಸವ ಮೆರೆವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು ಇಂತಹ ಕಾರ್ಯಗಳಲ್ಲಿ ಯಾರು ತೊಡಗಿಸಿಕೊಳ್ಳಬಾರದು ಎಂದು ಸೂಚನೆ ನೀಡಿರುತ್ತಾರೆ.ರಾಜ್ಯ ಸಶಸ್ತ್ರ ಮೀಸಲು ಪಡೆ ಬಂದೋಬಸ್ತ್ ಅನ್ನು ನಿಯೋಜಿಸಿ ಬಿಗಿ ಬದ್ರತೆ ಮುಂದುವರೆಸಿದ್ದಾರೆ.ಸಮುದಾಯದ ಮುಖಂಡರ ಜೊತೆಗೆ ಶಾಂತಿ ಸಭೆ ನಡೆಸಿ ಮಾತನಾಡಿದ ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ಯಾರು ಪ್ರೇರೆಪಿತ ಮಾತುಗಳಿಗೆ ಮರುಳಾಗಬಾರದು ಯಾವುದೆ ಕಾರಣಕ್ಕೂ ಕಾನೂನು ಕೈಗೆ…
ಶ್ರೀನಿವಾಸಪುರ:ಚುನಾವಣೆ ನಿನ್ನೆ ನಡೆದಿದ್ದು ಚುನಾವಣೆ ನಡೆಯುವ ಸಂದರ್ಬದಲ್ಲಿ ಹೈದರಾಲಿ ಮೊಹಲ್ಲಾದ ಉರ್ದು ಶಾಲೆ ಮತಗಟ್ಟೆ 147 ಬಳಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮೀಲಾಯಿಸಿದ್ದು ಕಾಂಗ್ರೆಸ್ ಪುರಸಭೆ ಸದಸ್ಯ ಎ.ಟಿ.ಎಸ್. ತಜಮಲ್ ಹಾಗು ಜೆ.ಡಿ.ಎಸ್. ಮುಖಂಡ ಸಾಧಿಕ್ ನಡುವೆ ತೀವ್ರ ಹೊಡೆದಾಟಗಳಾಗಿತ್ತು ಈ ಸಮಯದಲ್ಲಿ ಪೋಲಿಸರು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದರು ಆದರೆ ನಿನ್ನೆಯ ಗಲಾಟೆ ಇಂದು ಸಹ ಮುಂದುವರೆದಿದ್ದು ಇಂದು ಗುರುವಾರ ಸಂಜೆ ಉರ್ದು ಸ್ಕೂಲ್ ಬಳಿ ಕುಳತಿದ್ದ ಎ.ಟಿ.ಎಸ್. ತಜಮಲ್ ಅವರನ್ನು ಸಾಧಿಕ್ ಕಡೆಯವರು ಎನ್ನಲಾದ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ,ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿಸ್ಥೆಗಾಗಿ ಕೋಲಾರಕ್ಕೆ ಸಾಗಿಸಲಾಗಿದೆ.ಪಟ್ಟಣದ ಚಿಂತಾಮಣಿ ವೃತ್ತ ಸುತ್ತ ಮುತ್ತ ತ್ವೇಷಮಯ ವಾತಾವರಣ ನಿರ್ಮಾಣವಾಗಿ ಜನ ಅತಂಕ ಗೊಂಡಿದ್ದಾರೆ.ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಪೋಲಿಸರನ್ನು ನಿಯೋಜಿಸಿ ಬಿಗಿ ಬದ್ರತೆ ಎರ್ಪಡಿಸಿದೆ,ಘಟನಾ ಸ್ಥಳಕ್ಕೆ ಕೋಲಾರ…
ಶ್ರೀನಿವಾಸಪುರ:ಮತದಾನ ಮುಗಿದಂತೆ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಹೊರಬಿದ್ದಿವೆ.ಚುನಾವಣೆ ಫಲಿತಾಂಶಕ್ಕೆ ಇನ್ನೊಂದೇರಡು ದಿನ ಸಮಯ ಇದೆ, ಈಗೇನಿದ್ದರು ಅಭ್ಯರ್ಥಿ ಗೆಲ್ಲುವ ಬಗ್ಗೆ ಬೆಟ್ಟಿಂಗ್ ಮಾತು ಹೈವೋಲ್ಟೇಜ್ ಕ್ಷೇತ್ರಗಳಾದ ಶ್ರೀನಿವಾಸಪುರ,ಚಿಂತಾಮಣಿ,ಕೋಲಾರದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ.ಐಪಿಎಲ್ ಬೆಟ್ಟಿಂಗ್ ಮೀರಿಸುವ ರೀತಿ ಲಕ್ಷ ಲಕ್ಷಗಳಲ್ಲಿ ಯಾವ ಪಕ್ಷ ಗೆಲ್ಲುತ್ತೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ.ವಿಶೇಷವಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್(ಸ್ವಾಮಿ) ಹಾಗೂ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ(ರೆಡ್ಡಿ) ಪರವಾಗಿ ಬೆಟ್ಟಿಂಗ್ ಹೆಚ್ಚಾಗಿ ನಡೆಯುತ್ತಿದೆ.ಕಳೆದ ಇಪ್ಪತ್ತು-ಇಪ್ಪತೈದು ದಿನಗಳಿಂದ ಸ್ನೇಹತ್ವ ಬಂಧುತ್ವ ಬದಿಗಿಟ್ಟು ಆಜನ್ಮ ವೈರಿಗಳಂತೆ ಚುನಾವಣೆ ನಡೆಸಿದಂತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈಗ ಒಂದಾಗಿದ್ದಾರೆ,ಸಿಗರೇಟಿನ ಧಮ್ ಏಳೆಯುತ್ತ ಕಾಫಿ ಕುಡಿಯುತ್ತ ಅದು ಹಾಗಲ್ಲ ನಿಮ್ಮದು ವರ್ಕೌಟ್ ಆಗಿಲ್ಲ ನೀವು ಫೈಲೂರು ಆದ ಜಾಗದಲ್ಲಿ ನಾವು ವರ್ಕೌಟ್ ಮಾಡಿ ಮತ ಗಳಿಸಿದ್ದೀವಿ ಆ ಬೂತ್ ನಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ ಇಲ್ಲ ನೊ ಚಾನ್ಸ್ ನಮ್ಮವರೆ ಗೆಲ್ತಾರೆ ಎಂದು ಚಾಲೆಂಜಿಂಗ್ ಮಾತುಗಳು ಆಡುತ್ತಿದ್ದಾರೆ, ಹಾಗದ್ರೆ…
ಶ್ರೀನಿವಾಸಪುರ:ಚುನಾವಣಾ ಫಲಿತಾಂಶಕ್ಕೂ ಮುನ್ನವೆ ಕಾಂಗ್ರೇಸ್ – ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ಸಂದರ್ಬದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿಕೊಂಡು ಘರ್ಷಣೆಗೆ ಮುಂದಾದ ಹಿನ್ನಲೆಯಲ್ಲಿ ಪೋಲಿಸರು ಲಾಠಿಚಾರ್ಜ್ ಮಾಡಿ ರಾಜಕೀಯ ಕಾರ್ಯಕರ್ತರನ್ನು ಚದುರಿಸಿರುವ ಘಟನೆ ಇಂದು ಪಟ್ಟಣದಲ್ಲಿ ಎರಡು ಬಾರಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 147 ಬಳಿ ಸಂಜೆ ಮತದಾನ ಸಮಯ ಮುಗಿಯುವುದಕ್ಕೂ ಮುಂಚಿತವಾಗಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು ಪೋಲಿಸರು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿದ್ದರು ಈ ಸಂದರ್ಭದಲ್ಲಿ ಪುರಸಭೆ ಸದಸ್ಯರೊಬ್ಬರ ಮೇಲೆ ವಿರೋಧಿ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿದ್ದು ಇದರ ಬೀಸಿ ಆರುವ ಮುನ್ನವೆ ಮತದಾನ ಸಮಯ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಪವೆ ಯಾರಿಗೆ ಯಾರು ಕಡಿಮೆ ಇಲ್ಲದಂತೆ ಜೆಡಿಎಸ್ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ರಾಜಕೀಯ ನಾಯಕರ ಪರವಾಗಿ ಪೈಪೊಟಿಗೆ ಬಿದ್ದು ನಿನಾದಗಳನ್ನು ಕೂಗುತ್ತ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುತ್ತ…
ಶ್ರೀನಿವಾಸಪುರ:ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ತಮ್ಮ ಸ್ವಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ಗುಡಿಸವಾರಿಪಲ್ಲಿ ಗ್ರಾಮದಲ್ಲಿ ಮತ ಚಲಾವಣೆ ಮಾಡಿ ಫಸ್ಟ್ ರಿಯಾಕ್ಷನ್ ನೀಡಿದ್ದು ಕ್ಷೇತ್ರದಲ್ಲಿ ಉತ್ತಮ ವಾತವರಣ ಇದೆ ಜನತಾ ಜನಾರ್ದನ ಆಶಿರ್ವಾದ ಮಾಡುತ್ತಾನೆ ಎಂಬ ಭರವಸೆ ಇದೆ ಎಂದ ಅವರು ಕೋಲಾರ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳು ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀನಿವಾಸಪುರ:ತಾಲೂಕಿನ ಪಾತಮುತ್ತಕಪಲ್ಲಿ ಮತಗಟ್ಟೆ ಸಂಖ್ಯೆ 163 ರಲ್ಲಿ ಹಾಗು ತಾಡಿಗೊಳ್ ಗ್ರಾಮದಲ್ಲಿ ಇವಿಎಂ ಮಿಷನ್ ಕಾರ್ಯನಿರ್ವಹಿಸದೆ ಕೈ ಕೊಟ್ಟ ಹಿನ್ನಲೆಯಲ್ಲಿ 10 ಗಂಟೆಗೆ ತಡವಾಗಿ ಮತದಾನ ಪ್ರಾರಂಭವಾಗಿದೆ ಇವಿಎಂ ಮಿಷನ್ ರಿಪೇರಿ ತಂತ್ರಙ್ಞರು ಬರುತ್ತಾರೆ ಎಂದು ಮುಂಜಾನೆ 7 ಗಂಟೆಯಿಂದಲು ಮತಗಟ್ಟೆ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಪ್ರಾರಂಬಿಸದೆ ಕಾಯುತ್ತಿದ್ದರು.
ಶ್ರೀನಿವಾಸಪುರ: ಮೇ 10 ಬುಧವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ನಡೆಸಲು ಸಿಬ್ಬಂದಿ ವರ್ಗ ಮತಗಟ್ಟೆಗಳತ್ತ ತೆರಳಿದ್ದಾರೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 289 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಯಲ್ಲಿ ಒರ್ವ ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿ ಇರುತ್ತಾರೆ ಪ್ರತಿ ಮತಗಟ್ಟೆಗೂ ಒರ್ವ ಪೋಲಿಸ್ ಸಿಬ್ಬಂದಿ ಇರುತ್ತಾರೆ. 289 ಮತಗಟ್ಟೆಗಳ ಪೈಕಿ ಸುಮಾರು 78 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು ಇದರಲ್ಲಿ ಸುಮಾರು 9 ಮತಗಟ್ಟೆಗಳನ್ನು ಅದರ ಹಿಂದಿನ ಚುನಾವಣೆ ಸಂದರ್ಭಗಳಲ್ಲಿ ನಡೆದಿರುವಂತ ಘಟಾನಾವಳಿಗಳ ಆಧಾರದಲ್ಲಿ ವಿಶೇಷ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ಇಂತಹ ಮತಗಟ್ಟೆಯಲ್ಲಿ ಕೇಂದ್ರ ಬದ್ರತಾ ದಳದ ಸಿಬ್ಬಂದಿಗಳನ್ನು ವಿಶೇಷವಾಗಿ ನೇಮಿಸಲಾಗಿರುತ್ತದೆ.ಜನ ಮನ್ನಣೆಗಾಗಿ ವಿಶೇಷ ಮತಗಟ್ಟೆಗಳುಮತದಾರರನ್ನು ಆರ್ಷಿಸಲು ಚುನಾವಣೆ ಆಯೋಗ ನೀಡಿರುವ ಸೂಚನೆಯಂತೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ ಇದರಲ್ಲಿ ಸಖಿ ಮತಗಟ್ಟೆ ಮಹಿಳಾ ಮತದಾರರನ್ನು ಆಕರ್ಷಿಸಲು ರೂಪಿಸಲಾಗಿದೆ ಪಟ್ಟಣದ ಸರೋಜಿನಿ ರಸ್ತೆ ಹಾಗು ಮೊಹಲ್ಲಾ ಆಸ್ಪತ್ರೆ ಮತಗಟ್ಟೆ ಸೇರಿದಂತೆ ತಾಲೂಕಿನಾದ್ಯಂತ ಐದು ಮತಗಟ್ಟೆಗಳನ್ನು ಸಖಿ ಮತಗಟ್ಟೆ ಎಂದು ಪರಿಗಣಿಸಲಾಗಿದೆ.ಮಾವಿನ ಮಡಿಲು…


