ಕೋಲಾರ:ಆನ್ಲೈನ್ ಮೂಲಕ ಗ್ರಾಹಕ ಆದೇಶ ಮಾಡಿದ್ದ ವಸ್ತು ಬದಲಿಗೆ ಬೆರೊಂದು ಪ್ರಾಡಕ್ಟ್ ನೀಡಿದಲ್ಲದೆ ಈ ಬಗ್ಗೆ ದೂರು ಸಲ್ಲಿಸಿದರು ಪರಿಗಣಿಸಿದೆ ನಿರ್ಲಕ್ಷ್ಯವಹಿಸಿದ ಆರೋಪಕ್ಕಾಗಿ ಕೋಲಾರ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ದೂರುದಾರನಿಗೆ ಬಡ್ಡಿಸಮೇತ ಹಾಗು ವ್ಯಾಜ್ಯದ ಖರ್ಚು ಭರಿಸುವಂತೆ ರಿಲಿಯನ್ಸ್ ಸಂಸ್ಥೆಗೆ ಆದೇಶ ಮಾಡಿದೆ.
ಕೋಲಾರ ನಗರದ ಜವಹರ್ ಬಾಬು ಎನ್ನುವ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಿಲಿಯನ್ಸ್ ರಿಟೈಲ್ ಲಿ. ಭಾಗವಾಗಿ ಕೋಲಾರದ ರಿಲಿಯನ್ಸ್ ಸ್ಮಾರ್ಟ್ ಪಾಯಿಂಟ್ ಗೆ ಜಿಯೋಮಾರ್ಟ್ ಮೂಲಕ ಮನೆ ಬಳೆಕೆಗಾಗಿ ಉಜಾಲ್ ಲಿಕ್ವಿಡ್ ಡಿಟರ್ಜೆಂಟ್ ಆನ್ಲೈನ್ ಮೂಲಕ ಆರ್ಡರ್ ಮಾಡಲಾಗಿತ್ತು. ಇದಕ್ಕಾಗಿ ಮೊಬೈಲ್ ಮೂಲಕ ಪೇಮೆಂಟ್ ಸಹ ಮಾಡಿದ್ದು ಆದರೆ ಆರ್ಡರ್ ಮಾಡಿದ ವಸ್ತು ಕಳಿಸದೆ ಕಡಿಮೆ ಮೌಲ್ಯದ ಬೆರೊಂದು ಪ್ರಾಡಕ್ಟ್ ಅನ್ನು ಕಳಿಸಿದ್ದು ಈ ಬಗ್ಗೆ ಜವಹರ್ ಬಾಬು ಸ್ಮಾರ್ಟ್ ಪಾಯಿಂಟ್ ತಿಳಿಸಿದ್ದರು ಯಾವುದೆ ಪ್ರಯೋಜನೆ ಆಗದ ಹಿನ್ನಲೆಯಲ್ಲಿ ತಮಗಾದ ವ್ಯತ್ಯಾಸದ ಕುರಿತು ತಾವು ಆರ್ಡರ್ ಮಾಡಿದ ವಸ್ತು ಕೋಡಿ ಇಲ್ಲ ವ್ಯತ್ಯಾಸದ ಹಣ ವಾಪಸ್ಸು ಮಾಡುವಂತೆ ಕೋರಿ ಗ್ರಾಹಕರ ಅಧಿನಿಯಮ 2019 ಕಲಂ 35 ರಂತೆ ಖರೀದಿದಾರ ಜವಹರ್ ಬಾಬು ಗ್ರಾಹಕರ ಆಯೋಗದಲ್ಲಿ ದೂರು ದಾಖಲು ಮಾಡಿದ್ದರು.ಅವರ ಪರವಾಗಿ ಕೋಲಾರದ ಖ್ಯಾತ ವಕೀಲ ನಟರಾಜ್ ಬಾಬು ವಾದ ಮಂಡಿಸಿದರು ಎದರುದಾರ ಪರವಾಗಿ ಹೆಚ್.ವಿ.ಸುಬ್ರಮಣಿ ವಾದ ಮಂಡಿಸಿ ನಮ್ಮ ಸಂಸ್ಥೆ ವತಿಯಿಂದ ಖರೀದಿದಾರರಿಗೆ ಸೇವಾ ನ್ಯೂನತೆ ಆಗಿಲ್ಲ ಆರೋಪದಲ್ಲಿ ಯಾವುದೆ ಉರಳಿಲ್ಲ ಎಂದು ಪ್ರತಿಪಾದಿಸಿದ್ದರು.
ಆರ್ಡರ್ ಮಾಡಿದ ಪ್ರಾಡೇಕ್ಟ್ ಕೋಡಿ ಇಲ್ಲವೆ ನಾವು ನೀಡಿದ ಹಣಕ್ಕೆ ಬಡ್ಡಿ ಸಮೇತ ವಾಪಸ್ಸು ಮಾಡುವಂತೆ ಮಾನಸಿಕ ಹಿಂಸೆ ಅನುಭವಿಸಿದಕ್ಕೆ ಹತ್ತು ಸಾವಿರ ಇತರೆ ವೆಚ್ಚ ಹತ್ತುಸಾವಿರ ವ್ಯಾಜ್ಯದ ಖರ್ಚಿಗೆ ಐದು ಸಾವಿರ ನೀಡುವಂತೆ ಕೋರ್ಇದ್ದರು.
ಈ ಬಗ್ಗೆ ಗ್ರಾಹಕರ ವೇದಿಕೆ ಕೂಲಂಕುಷವಾಗಿ ವಾದ ಪ್ರತಿವಾದ ಅಲಿಸಿ ವಿಚಾರಣೆ ನಡೆಸಿ,ರಿಲಿಯನ್ಸ್ ಸಂಸ್ಥೆ ಸೇವಾ ನ್ಯೂನತೆ ಎಸಗಿರುವುದು ಸಾಬಿತಾಗಿದ್ದು ಖರೀದಿಗೆ ಪಾವತಿ ಮಾಡಿದ ಮೊತ್ತ 395/- ರೂಪಾಯಿಗಳನ್ನು ವಾಪಸ್ಸು ಮಾಡುವಂತೆ ಖರೀದಿ ಮಾಡಿದ ದಿನದಿಂದ ಶೇ 10 ರಂತೆ ಬಡ್ಡಿ ಪಾವತಿಸಲು, ಪರಿಹಾರವಾಗಿ ನಾಲ್ಕು ಸಾವಿರ ಮತ್ತು ವ್ಯಾಜ್ಯದ ಖರ್ಚಿಗಾಗಿ ಎರಡು ಸಾವಿರ ನೀಡಲು ಆದೇಶಿಸಿದೆ.
Trending
- ಟನ್ ಮಾವಿಗೆ ಹತ್ತು ಸಾವಿರ ನೀಡಲು ನಿಲಟೂರು ಚಿನ್ನಪ್ಪರೆಡ್ಡಿ ಒತ್ತಾಯ!
- ಮುಖ್ಯಮಂತ್ರಿಗೆ ಅಭಿನಂದಿಸಿ,ಮಾವು ಬೆಳೆಗೆ ಬೆಂಬಲ ಬೆಲೆ ಕೋರಿದ ವೆಂಕಟಶಿವಾರೆಡ್ಡಿ.
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
Wednesday, June 10



