ಬೆಂಗಳೂರು: ಭಾರತದ ಪ್ರಖ್ಯಾತ ಕೊರಿಯರ್ ಸಂಸ್ಥೆ,ದಿ ಪ್ರೊಫೆಷನಲ್ ಕೊರಿಯರ್ಸ್(ಟಿಪಿಸಿ) The Professional Couriers ವತಿಯಿಂದ ಹೊಸ ಸೇವೆ ಪ್ರೊ ಇಎಕ್ಸ್ ಎಕ್ಸ್ಪ್ರೆಸ್ ಎಂಬ ಅಲ್ಟ್ರಾ ಪ್ರೀಮಿಯಂ ನೂತನ ಸೇವೆಯನ್ನು ಆರಂಭಿಸಿದ್ದು ಇದರ ಲೋಕಾರ್ಪಣೆ ಕಾರ್ಯವನ್ನು ಬೆಂಗಳೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ಭವ್ಯವಾದ ವೇದಿಕೆ ಕಾರ್ಯಕ್ರಮದಲ್ಲಿ ದಿ ಪ್ರೊಫೆಷನಲ್ ಕೊರಿಯರ್ಸ್ ಚೇರ್ಮನ್ ಥಾಮಸ್ ಜಾನ್,ವ್ಯವಸ್ಥಾಪಕ ನಿರ್ದೇಶಕ ಅಹಮದ್ ಮಿರನ್,ಐಟಿ ನಿರ್ದೇಶಕ ಶ್ರೀನಾಥ್,ಹಣಕಾಸು ನಿರ್ದೇಶಕ ಓಮನ್ ಚಾಕೋ,ಆಡಳಿತ ನಿರ್ದೇಶಕ ಸುರೇಶ್ ಭರ್ತನ್,ವಿತರಣ ನಿರ್ದೇಶಕ ಅಬ್ರಹಾಂ, ಪ್ರೊ ಇಎಕ್ಸ್ ಎಕ್ಸ್ಪ್ರೆಸ್ ಲೊಗೊ ಬಿಡುಗಡೆ ಮಾಡಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ ಉದ್ಯೋಗಿಗಳಿಗೆ ಹೊಸ ಸೇವೆ ಪ್ರೊ ಇಎಕ್ಸ್ ಕುರಿಯಂತೆ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ದೇಶದಲ್ಲಿ ತನ್ನದೆ ಆದ ಬೃಹತ್ ವಿತರಣಾ ಜಾಲ ಹೊಂದಿರುವ ಟಿಪಿಸಿ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಗ್ರಾಹಕ-ಕೇಂದ್ರಿತ ವಿತರಣೆಗಳನ್ನು ಮಾಡುತ್ತಿದ್ದು ಭಾರತದ ಪ್ರತಿಯೊಂದು ಮೂಲೆಯಲ್ಲು ತನ್ನದೆ ಸಾಮರ್ಥ್ಯದ ಕಚೇರಿಗಳನ್ನು ನಿರ್ವಹಿಸುತ್ತ ರಾಷ್ಟ್ರದ ಅತಿದೊಡ್ಡ ನಂ-1 ಕೊರಿಯರ್ ಮತ್ತು ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ಹಾಗು ಮಾರುಕಟ್ಟೆ ಅಗತ್ಯತೆಗಳನ್ನು ಅರಿತು ಕಾಲದ ಅನುವಿನಂತೆ ತಾಂತ್ರಿಕತೆ ಜೊಡಿಸಿಕೊಂಡು ಕಳೆದ 38 ವರ್ಷಗಳಿಂದ ದಿ ಪ್ರೊಫೆಷನಲ್ ಕೊರಿಯರ್ಸ್ ಸಂಸ್ಥೆ ವಿಶ್ವಾಸಾರ್ಹತೆಯಿಂದ ಗುಣಮಟ್ಟದ ಸೇವೆ ಒದಗಿಸಿದ ಖ್ಯಾತಿಯನ್ನು ಗಳಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಹಮದ್ ಮಿರನ್ ಹೇಳಿದರು.
ಕೈಗಾರಿಕ ಹಾಗು ಕಾರ್ಪೋರೇಟ್ ಗ್ರಾಹಕರ ಅಗತ್ಯತೆಗಳಿಗಾಗಿ ಕಳೆದ 14 ವರ್ಷಗಳ ಹಿಂದೆ ಪ್ರೀಮಿಯಂ ಸೇವೆಗಳನ್ನು ನೀಡುತ್ತಿರುವ ದಿ ಪ್ರೊಫೆಷನಲ್ ಕೊರಿಯರ್ಸ್, ಹೆಚ್ಚಿನ ಮಟ್ಟದ ಸೇವಾ ಭರವಸೆ, ವೇಗ ಮತ್ತು ವಿಶ್ವಾಸಾರ್ಹತೆಯ ಅಗತ್ಯವಿರುವ ವ್ಯವಹಾರಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಮತ್ತು ಸಮಯ-ಸೂಕ್ಷ್ಮ ವಿತರಣಾ ಪರಿಹಾರಗಳನ್ನು ನೀಡುವ ಸಲುವಾಗಿ “ಪ್ರೊ ಇಎಕ್ಸ್ ಎಕ್ಸ್ಪ್ರೆಸ್” ಸೇವೆಯನ್ನು ಆರಂಭಿಸಿರುವುದಾಗಿ ಚೇರ್ಮನ್ ಥಾಮಸ್ ಜಾನ್ ವಿವರಿಸಿದರು.
ಎಲ್ಲವೂ ಡಿಜಿಟಲೈಸ್
“ಪ್ರೊ ಇಎಕ್ಸ್ ಎಕ್ಸ್ಪ್ರೆಸ್” ಸೇವೆ ಇದೊಂದು ಅದ್ಭುತವಾದ ಪ್ರೀಮಿಯಂ ಸೇವೆಯಾಗಿದ್ದು ಇದನ್ನು ಸಂಪೂರ್ಣವಾಗಿ ಡಿಜಿಟಲೈಜ್ ಮಾಡಲಾಗಿದೆ ಈ ಸೇವೆಯನ್ನು ಗ್ರಾಹಕ tpcgo ಆಫ್ ಮೂಲಕ ನೇರವಾಗಿ ಶೀಪ್ ಮೆಂಟಲ್ ಅನ್ನು ಬುಕ್ ಮಾಡಬಹುದಾಗಿದೆ ಗ್ರಾಹಕನಿಂದ ಸ್ಥಳೀಯ ಪ್ರೊಫೆಷನಲ್ ಕೊರಿಯರ್ಸ್ ಶಾಖೆಯವರು ಅದನ್ನು ಕಲೆಕ್ಷನ್ ಮಾಡಿ ತಲುಪಬೇಕಾದ ಸ್ಥಳಕ್ಕೆ ರವಾನಿಸುತ್ತಾರೆ.ಇದರಿಂದಾಗಿ ಮೊಬೈಲ್ ಆಪ್ ನಲ್ಲಿ www.tpcindia.com ನೈಜ-ಸಮಯದ ಟ್ರ್ಯಾಕಿಂಗ್, ಸಾಗಣೆ ಸೇವೆಗಳ ಮಾಹಿತಿ ವಿನ್ಯಾಸಗೊಳಿಸಲಾಗಿದ್ದು ಗ್ರಾಹಕ ಈ ಮೂಲಕ ಪಾರದರ್ಶಕವಾಗಿ ಸೇವಾ ಮಾಹಿತಿ ಪಡೆಯಬಹುದಾಗಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



