ನ್ಯೂಸ್ ಡೆಸ್ಕ್ :ಆಂಧ್ರದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ.ಈಗ್ಗೆ ಹನ್ನೆರಡು ವರ್ಷಗಳಿಂದ ಇದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ. ಹಲವಾರು ಕಾರಣಗಳಿಂದ ರಾಜಧಾನಿ ವಿಚಾರ ಗೊಂದಲದ ಗೂಡಾಗಿ ವಿವಾದಕ್ಕೆ ಕಾರಣವಾಗಿ ಘೋಷಣೆ ಮುಂದಕ್ಕೆ ಹೋಗುತ್ತಲೇ ಇತ್ತು. ಹಾಲೀ ಸಿಎಂ ಚಂದ್ರಬಾಬು ನಾಯ್ಡು ಅವರು ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಈಗ ಸಾಕಾರಗೊಂಡಿದೆ.
2014ರಲ್ಲಿ ಅಖಂಡ ಆಂಧ್ರ ಪ್ರದೇಶ ವಿಭಜನೆಗೊಂಡು ಹೈದರಾಬಾದ್ ಕೇಂದ್ರವಾಗಿ ತೆಲಂಗಾಣ ಹುಟ್ಟಿಕೊಂಡಿತ್ತು. ಕರ್ನೂಲ್ ಅನಂತಪುರ ಸೇರಿದಂತೆ ರಾಯಲಸೀಮಾ ರಾಜಮಂಡ್ರಿ ವಿಶಾಖಪಟ್ಟಣಂ ಸೇರಿದಂತೆ ಕರಾವಳಿ ಚಿತ್ತೂರು,ತಿರುಪತಿ ಮದನಪಲ್ಲಿ ಒಳಗೊಂಡ 26ಜಿಲ್ಲೆಗಳ ಪ್ರದೇಶವನ್ನು ಆಂಧ್ರಪ್ರದೇಶದ ಎಂದು ಗುರುತಿಸಲಾಗಿದ್ದು ಅಂದಿನಿಂದ, ರಾಜಧಾನಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಆಂಧ್ರ ವಿಭಜನೆಯಾಗಿ ಬಂದ ಮೊದಲ ಚಂದ್ರಬಾಬು ನೇತೃತ್ವದ ಸರ್ಕಾರ ಹೈದರಾಬಾದ್ ಮಹಾನಗರ ತೆಲಂಗಾಣಕ್ಕೆ ರಾಜಧಾನಿ ಅಂದರೆ ಆಂಧ್ರಪ್ರದೇಶದಕ್ಕೆ ರಾಜಧಾನಿ ಬೇಕು ಎಂದು ಗುಂಟೂರು ನಗರ ಹಾಗೂ ಗ್ರಾಮೀಣ ಪ್ರಾಂತ್ಯದ ಪ್ರದೇಶಗಳನ್ನು ಕ್ರೂಡಿಕರಿಸಿ ಅಮರಾವತಿ ಎಂದು ನಾಮಕರಣ ಮಾಡಿ ಇದೆ ಆಂಧ್ರದ ರಾಜಧಾನಿ ಎಂದು ಘೋಷಿಸಿಕೊಂಡಿದ್ದರು.

ಅಮರಾವತಿಗೆ ಸ್ವತಃ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದ್ದರು,ಬದಲಾದ ಕಾಲಘಟ್ಟದಲ್ಲಿ ಆಂಧ್ರದ ಸಿಎಂ ಚಂದ್ರಬಾಬು ಎನ್ಡಿಎ ಮೈತ್ರಿಯಿಂದ ದೂರ ಸರಿದರು ರಾಜಕೀಯ ಬದಲಾಯಿತು ಚಂದ್ರಬಾಬು ತೆಲುಗುದೇಶಂ ಸರ್ಕಾರ ಸೋತು,ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂತು.ಜಗನ್ಮೋಹನ ರೆಡ್ಡಿ ಆಂಧ್ರಕ್ಕೆ ಮೂರು ರಾಜಧಾನಿ ಆಗಬೇಕು ಎಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಶಾಸಕಾಂಗ ವ್ಯವಸ್ಥೆಗೆ ಅಮರಾವತಿ, ನ್ಯಾಯಾಂಗ ವ್ಯವಸ್ಥೆಗೆ ಕರ್ನೂಲ್ ಮತ್ತು ಆಡಳಿತಾತ್ಮಕವಾಗಿ ವಿಶಾಖಪಟ್ಟಣಂ ನಗರವನ್ನು ರಾಜಧಾನಿಯಾಗಿ ಮಾಡಲು ಮುಂದಾಗಿದ್ದರು ಅಲ್ಲಿನ ಜನ ಒಲವು ತೋರಲಿಲ್ಲ ರಾಜಧಾನಿ ನೆನೆಗುದಿಗೆ ಬಿತ್ತು ರಾಜಧಾನಿ ಘೋಷಣೆಯಾಗಿರಲಿಲ್ಲ.
2024ರಲ್ಲಿ ಆಂಧ್ರಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು, ಅಮರಾವತಿ ಒಂದೇ ರಾಜಧಾನಿ ಎಂದು ಘೋಷಣೆಯನ್ನು ಮುಂದುವರಿಸಿದರು,ಅದಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡರು. ಹಿಂದೆ ಆದ ಕಹಿ ಅನುಭವಗಳನ್ನು ಅನುಭವಿಸಿದ್ದ ಚಂದ್ರಬಾಬು ಭವಿಷ್ಯದಲ್ಲಿ ಬೇರೆ ಸರ್ಕಾರ ಅಧಿಕಾರಕ್ಕೆ ಬಂದು, ಮತ್ತೆ ರಾಜಧಾನಿಯನ್ನು ಬದಲಿ ಮಾಡದಂತೆ ತಡೆಯಲು
ಆಂಧ್ರಪ್ರದೇಶದ ವಿಧಾನಸಭೆಯಲ್ಲಿ, ಆಂಧ್ರಪ್ರದೇಶ ಪುನರ್ ವಿಂಗಡಣೆ (ತಿದ್ದುಪಡಿ) ಕಾಯಿದೆ – 2026 ಮಂಡಿಸಲಾಯಿತು ಹಾಗು ಅದನ್ನು ಆಂಗೀಕರಿಸಲಾಯಿತು. ನಂತರ ಅದನ್ನು ದೇಶದ ಇತಿಹಾಸದಲ್ಲೇ ಮೊದಲು ಎನ್ನುವಂತೆ ರಾಜ್ಯವೊಂದರ ರಾಜಧಾನಿಗೆ ಭದ್ರ ಬುನಾದಿ ಹಾಕಲು ಸಂಸತ್ತಿನಲ್ಲಿ ಮಂಡಿಸಿ ಅಂಗಿಕಾರ ಪಡೆಯಲು ಮುಂದಾಗಿ ಯಶಸ್ವಿಯಾದರು.
ಅತ್ತ ಅಮರಾವತಿ ಮಂಡನೆ ಕಸರತ್ತು ಇತ್ತ “ಮಾವಿಗನ್” ಜಪ
ಸಂಸತ್ತಿನಲ್ಲಿ ಅಮರಾವತಿ ಮಂಡನೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದರೆ YSRCP ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಅಮರಾವತಿಯನ್ನು ರಾಜಧಾನಿ ಎಂದು ಘೋಷಿಸಿರುವುದನ್ನು ವಿರೋಧಿಸುತ್ತ ಅಮರಾವತಿ ಬದಲಿಗೆ “ಮಾವಿಗನ್ ಪ್ರದೇಶಾಭಿವೃದ್ದಿ” ಎಂದು ಅಮರಾವತಿ ವಿರುದ್ದ ತಮ್ಮ ಮಂಡಿಸಿದರು.ಇದನ್ನೆ ಅಂಗಿಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಬಗ್ಗೆ ಹೇಳುತ್ತಾರೆ. ಮಾವಿಗುನ್ ಅಂದರೆ, ಮಚಲೀಪಟ್ಟಣಂMA, ವಿಜಯವಾಡVI, ಗುಂಟೂರುGUN(mavigun) ಈ ಮೂರು ನಗರವನ್ನು ಹೊಂದಿರುವ ಪ್ರದೇಶಗಳನ್ನುಅಭಿವೃದ್ದಿಗೊಳಿಸಿ, ಅದಕ್ಕೆ ರಾಜಧಾನಿ ಸ್ಟೇಟಸ್ ಕೊಡುವಂತೆ ಅವರ ಒತ್ತಾಯ.ಸಂಸತ್ತಿನಲ್ಲಿ ಕಾಯಿದೆಯನ್ನು ಮಂಡಿಸಿದಾಗ ವೈಎಸ್ಆರ್ ಕಾಂಗ್ರೆಸ್ ಹೊರತು ಪಡಿಸಿ ದೇಶಾದ್ಯಂತ ಇರುವ ಎಲ್ಲಾ ಪಕ್ಷಗಳು ಬಹುಮತ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅಂಗಿಕರಿಸಲಾಯಿತು ಎನ್ನುತ್ತಾರೆ.ಈ ಎಲ್ಲಾ ಪ್ರಕ್ರಿಯೆಗಳಿಂದ
ಅಮರಾವತಿ ಘೋಷಣೆಗೆ ವಿಳಂಬ ಆದ ಬಗ್ಗೆ ಹೇಳುತ್ತಾರೆ.ಆಂಧ್ರ ಪ್ರದೇಶದ ರಾಜಕೀಯ ನಾಯಕರಲ್ಲಿ ಇದ್ದಂತಹ ಗೊಂದಲ ಮತ್ತು ಒಣ ಪ್ರತಿಷ್ಠೆ ಇದನ್ನು ತೊಲಗಿಸಿ ಕೊನೆಗೂ ಸಂಸತ್ತಿನ ಆಂಗೀಕಾರ, ಅಮರಾವತಿಗೆ ಸಿಕ್ಕಿದೆ. ಅಮರಾವತಿ ಆಂಧ್ರ ಪ್ರದೇಶದ ಏಕೈಕ ಮತ್ತು ಖಾಯಂ ರಾಜಧಾನಿಯಾಗಿ ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟಿದೆ ಇದಕ್ಕೆ ರಾಜ್ಯಪಾಲರು ಮುದ್ರೆ ಒತ್ತಿ ಗೆಜೆಟ್ ಹೊರಡಿಸಿದ್ದಾರೆ.ಹನ್ನೆರಡು ವರ್ಷಗಳ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದೆ.



