ಬೆಂಗಳೂರು:ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾದ್ಯಂತ ರೈತರ ಜೀವನಾಡಿ ಬೆಳೆ ಮಾವು ಹವಮಾನ ವೈಪರಿತ್ಯ ಪರಿಣಾಮ ಇಳುವರಿ ಬಾರದೆ,ಬಂದಂತ ಮಾವಿಗೆ ಬೆಲೆ ಇಲ್ಲದೆ ಮಾವು ರೈತರು ರೈತರು ನಷ್ಟಕ್ಕೆ ಒಳಗಾಗಿದ್ದಾರೆ ಅವರಿಗೆ ಬೆಂಬಲ ನೀಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ವೆಂಕಟಶಿವಾರೆಡ್ಡಿ ಮನವಿ ಸಲ್ಲಿಸಿದ್ದಾರೆ.ಇಂದು ನೂತನ ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕ ವೆಂಕಟಶಿವಾರೆಡ್ಡಿ ಭಾರಿ ಹೂಮಾಲೆಯೊಂದಿಗೆ ಹಾಕಿ ಅಭಿನಂದಿಸಿದ್ದಾರೆ.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಮಾವು ಬೆಳೆಗೆ ಬೆಂಬಲ ಕೋರಿ ಮನವಿ ಸಲ್ಲಿಸಿರುವ ಅವರು ನನ್ನ ಕ್ಷೇತ್ರದ ಮಾವಿನ ರೈತರ ಜೀವನಾಡಿ ಬೆಳೆ ಮಾವಿನಕಾಯಿಗೆ ಬೆಲೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದಾರೆ ಮಾವು ಕೊಯ್ಲು ಮಾಡಲು ಸಾಧ್ಯವಾಗದೆ ತೋಟದಲ್ಲಿ ಮಾವು ಕೊಳೆಯುವಂತ ಪರಿಸ್ಥಿತಿ ಒದಗಿದೆ ದಯವಿಟ್ಟು ಪ್ರತಿ ಟನ್ ಗೆ ಹತ್ತುಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ರೈತರಿಗೆ ನೀಡುವಂತೆ ಮನವಿ ಮಾಡಿದ್ದಾರೆ.ಕಳೆದ ವರ್ಷ ಇಂತಹುದೆ ಸಮಸ್ಯೆ ಆದಾಗ ಪಿಡಿಪಿಎಸ್ ಯೋಜನೆ ಅಡಿಯಲ್ಲಿ ಕೇಂದ್ರ-ರಾಜ್ಯಸರ್ಕಾರ ಜೊತೆಗೂಡಿ ಮಾವುಬೆಳೆಗಾರರಿಗೆ ಪರಿಹಾರ ನೀಡಲಾಗಿತ್ತು ಎಂದು ವಿವರಿಸಿದರು.ಈ ಸಂದರ್ಭದಲ್ಲಿ…
Author: Srinivas_Murthy
ನ್ಯೂಜ್ ಡೆಸ್ಕ್:ನಿಮಗಾಗಿ ಬಾಗಿಲು ತೆರೆದಿದೆ ಎಂಬುವುದರ ಬಗ್ಗೆ ಯೋಚಿಸಿ ಎಂದು ಜನತಾದಳ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ.ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ 2018ರ ಚುನಾವಣೋತ್ತರ ಮೈತ್ರಿಯನ್ನು ಅವರು ಉಲ್ಲೇಖಿಸಿ ಮಾತನಾಡಿ ಹೇಳಿದ್ದಾರೆ.ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಮಾತ್ರ ನಾಯಕನಲ್ಲ;ಜನತಾದಳ ಕಾರ್ಯಕರ್ತರಿಗೆ ಹೇಳುತ್ತೇನೆ ನಿಮಗೂ ಬಾಗಿಲು ತೆರೆದಿದೆ ಇದನ್ನು ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸಿ’ ಎಂದು ಶಿವಕುಮಾರ್ ತಮ್ಮ ತವರು ಕ್ಷೇತ್ರವಾದ ಕನಕಪುರದ ಹಾರೋಹಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.ಜೆಡಿಎಸ್ ಅನಿತಾಕುಮಾರಸ್ವಾಮಿ ಅವರ ಗೆಲುವಿಗೆ ಸಹಕಾರ ನೀಡಿದ್ದೇವೆ.2018ರಲ್ಲಿ ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಸ್ಥಾನದಿಂದ ಗೆಲುವು ಸಾಧಿಸಲು ಕಾಂಗ್ರೆಸ್ ಸಹಾಯ ಮಾಡಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.ಕುಮಾರಸ್ವಾಮಿ ಗೆಲ್ಲಲು ಸಹಾಯ ಮಾಡಿದ್ದೇವೆ. ಅನಿತಾ ಕುಮಾರಸ್ವಾಮಿ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದುಕೊಂಡಿದ್ದರು.ಆಗ ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸ್ಥಾನಗಳಲ್ಲಿ ಗೆಲವು ಸಾಧಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಒಟ್ಟು ಸಂಖ್ಯೆಯನ್ನು 115ಕ್ಕೆ ಹೆಚ್ಚಿಸಿತು.ನಾನು ಈಗ ಆ ವಿಷಯಗಳ…
ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ.ಆಂಧ್ರದಲ್ಲಿ ಕಾಂಗ್ರೆಸ್ ಗೆ ಪುನಃ ವೈಭವ ತರಲು ತನಗೆ ಅಧಿಕಾರ ನೀಡಿ ಇದಕ್ಕಾಗಿ ರಾಜ್ಯಸಭೆ ಸೀಟು ನೀಡಿ ಎಂಬ ಬೇಡಿಕೆಗೆ ಸ್ಪಂದಿಸಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಿಂದ ರಾಜ್ಯಸಭೆಗೆ ವೈ.ಎಸ್. ಶರ್ಮಿಳಾ ಅವರನ್ನು ರಾಜ್ಯಸಭೆಗೆ ಕಳಿಸಲು ಎಐಸಿಸಿ ಚರ್ಚೆ ನಡೆಯುತ್ತಿದಿಯಂತೆ. ನ್ಯೂಜ್ ಡೆಸ್ಕ್:ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸುತ್ತಿರುವಾಗಲೆ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ.ವೈಎಸ್ ರಾಜಶೇಖರರೆಡ್ದಿ ಪುತ್ರಿ ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಸ್ಪೋಟಕ ವಿಷಯ ಹೊರಬಂದಿದೆ.ಈ ತಿಂಗಳ 18 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ಆಕಾಂಕ್ಷಿಗಳು ಸಂಸದ/ರಾಜ್ಯಸಭೆ ಹುದ್ದೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 136 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್…
ಶ್ರೀನಿವಾಸಪುರ:ಹೆದ್ದಾರಿಗಳಲ್ಲಿ ಸಂಚರಿಸುವುದೆ ಅಪಾಯವೇನೋ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಘಾತಗಳ ವಿಷಯ ಕೇಳಿದ್ರೆ ನೋಡಿದ್ರೆ ಹೆದ್ದಾರಿಗಳು ಅದೆಷ್ಟು ಕಂಟಕ ಅನ್ನೋದು ಅರಿವಿಗೆ ಬರುತ್ತದೆ.ಹೆದ್ದಾರಿಗಳು ಅಪಘಾತಗಳ ಕೂಪಗಳಾಗಿವೆ. ಒಂದಲ್ಲ ಒಂದು ಕಾರಣಕ್ಕೆ ಆಕ್ಸಿಡೆಂಟ್‌ಗಳು ಆಗುತ್ತಲೆ ಇದೆ ಹೆದ್ದಾರಿಗಳಲ್ಲಿ ಆಗುತ್ತಿರುವಂಥ ಅಪಘಾತಗಳಿಗೆ ಬ್ರೇಕ್ ಹಾಕಲು ಹೈವೆಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮನುಷ್ಯನ ಜೀವಕ್ಕಿಂತ ಆರ್ಥಿಕ ಅಥವಾ ಆಡಳಿತಾತ್ಮಕ ಲಾಭಗಳು ದೊಡ್ಡದಲ್ಲ ಎಂದು ನ್ಯಾಯಾಲಯ, ದೇಶಾದ್ಯಂತ ಅನ್ವಯವಾಗುವಂತೆ ಹೆದ್ದಾರಿ ಸುರಕ್ಷತೆಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇನ್ಮುಂದೆ ಹೈವೇ ಪಕ್ಕದಲ್ಲಿ ಬೇಕಾಬಿಟ್ಟಿ ಹೋಟೆಲ್,ಢಾಬಾಗಳು ನಡೆಸಲು ಅನುಮತಿ ನೀಡಬಾರದು ಭಾರಿ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಬಾರದು ಎಂದು ಸೂಚಿಸಿದೆ.ಶ್ರೀನಿವಾಸಪುರ-ಚಿಂತಾಮಣಿ ಹೆದ್ದಾರಿಯಲ್ಲಿ ಸುಗಮ ಸಂಚಾರ ಇಲ್ಲಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿ National Highway 69 (NH 69) ತಮಿಳುನಾಡು ಆಂಧ್ರ ಹಾಗು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ನಡುವೆ ಕೊಂಡಿಯಂತಿದೆ. ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ NH 69 ಚಿಂತಾಮಣಿ ವೃತ್ತದಿಂದ ಖಾಸಗಿ…
ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಇಂಡಿಕಾ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸೇರಿದಂತೆ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಪುಂಗನೂರು ಕ್ರಾಸ್ ಸಮೀಪ ಎನ್.ಮರೇಪಲ್ಲಿ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ಎನ್.ಮರೇಪಲ್ಲಿ ಗ್ರಾಮದ ಮುನಿರಾಜು(43)ಹಾಗು ಪನಸಮಾಕನಹಳ್ಳಿ ಗ್ರಾಮದ ಸತೀಶ್(38) ಎಂದು ಗುರುತಿಸಲಾಗಿದೆ.ಮುನಿರಾಜು ಹಾಗು ಸತೀಶ್ ಅವರು ವೃತ್ತಿಯಲ್ಲಿ ಕಾರ್ಪೇಂಟರ್ ಗಳಾಗಿದ್ದು ಶನಿವಾರ ವಾರದ ಬಟವಾಡೆ ಮುಗಿಸಿ ಮುನಿರಾಜುನನ್ನು ಎನ್.ಮರೇಪಲ್ಲಿಯಲ್ಲಿ ಬಿಟ್ಟುಬರಲು ಶ್ರೀನಿವಾಸಪುರದಿಂದ ಎನ್.ಮರೇಪಲ್ಲಿ ಗ್ರಾಮಕ್ಕೆ ಹೋಗುತ್ತಿರುವಾಗ ಎನ್.ಮರೇಪಲ್ಲಿ ಗೇಟ್ ಬಳಿ ಎದುರಿನಿಂದ ಬಂದಂತ ಟಾಟಾ ಇಂಡಿಕಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಸವಾರರಿಬ್ಬರು ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡು ಒರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ ಸ್ಥಳಕ್ಕೆ ಪೊಲೀಸ್ ಇನ್ಸೆಪೇಕ್ಟರ್ ಶಂಕರಾಚಾರಿ ಪಿಎಸ್‌ಐ ಜಯರಾಮ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂಜ್ ಡೆಸ್ಕ್:ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಅಥಾವ ಮೀಮ್ (Meme) ಆಗುವ ಬಹುತೇಕ ವಿಡಿಯೋಗಳಲ್ಲಿ ಚಹಾ ಕುಡಿಯುತ್ತ ನಗುವ ಹುಡುಗನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಮೀಡಿ ವಿಡಿಯೋಗಳಲ್ಲಿ ಚಹಾ ಕುಡಿಯುತ್ತ ಗಹಗಹಿಸಿ ನಗುತ್ತ ಕೈಮೇಲೆ ಕಾಫಿ ಚಲ್ಲಿಕೊಳ್ಳುವ ಯುವಕ all time famous ಎಲ್ಲ ಮೀಮ್ಸ್ಗಳಲ್ಲಿ ಈ ಹುಡುಗನ ವಿಡಿಯೋವನ್ನು ಬಹುತೇಕರು ನೋಡಿದ್ದಾರೆ. ಅವನ ನಗು ಇದೀಗ ದೇಶದಲ್ಲಿ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರೆಂಬುದು ಬಹುತೇಕರಿಗೆ ಗೊತ್ತಿಲ್ಲ,ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಆತನ ಬಗ್ಗೆ ಕುತೂಹಲಕಾರಿಹುಡುಗನ ಹೆಸರು ಅರುಣ್. ಈತ ತೆಲಂಗಾಣ ರಾಜ್ಯದ ಭೂಪಾಲಪಲ್ಲಿ ಜಿಲ್ಲೆಯ ಮಾಳಪಲ್ಲಿ/ನಲ್ಲಪುಚ್ಚಟಪಲ್ಲಿಯ ಕುಗ್ರಾಮದವನು. ಅತ್ಯಂತ ಬಡತನದ ಕುಟುಂಬದಿಂದ ಬಂದ ಅರುಣ್, ನಾಲ್ಕನೆ ತರಗತಿ ಓದುತ್ತ ಸ್ಕೂಲ್ ಡ್ರಾಪ್ ಔಟ್ ಆಗುತ್ತಾನೆ ನಂತರ ಜೀವನೋಪಾಯಕ್ಕಾಗಿ ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಎಂಬಂತೆ ಲಾರಿ ಚಾಲಕ ನೆಹರು ಅವರು ಚಹಾ…
ಬೆಂಗಳೂರು:ಅನಧಿಕೃತವಾದ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತಗೆದುಕೊಂಡ ನಿಲುವನ್ನು, ರಾಜ್ಯದಲ್ಲಿ ಅನಧಿಕೃತ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಹಾಗೂ ಅನಧಿಕೃತ ಸಂಸ್ಥೆಗಳ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಮುಂದಾಗುವಂತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೊಟ ಅಗ್ರಹಿಸಿದೆ.ಈ ಬಗ್ಗೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜುಶರ್ಮಾ ಹೇಳಿಕೆ ನೀಡಿದ್ದು ಬೈಕ್ ಟ್ಯಾಕ್ಸಿ ಸೇವೆ ವಿರುದ್ದದ ಮಹಾರಾಷ್ಟ್ರ ಸರ್ಕಾರದ ನಿಲುವು ಸ್ವಾತಗತಹಾರ್ಹ ವಾಗಿದ್ದು ರಾಜ್ಯದಲ್ಲಿ ಇಂತಹ ಕ್ರಮಕ್ಕೆ ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸುತ್ತಾ ಬಂದಿರುತ್ತೇವೆ ಆದರೇ ರಾಜ್ಯ ಸಾರಿಗೆ ಇಲಾಖೆ ನಿರಾಸಕ್ತಿಯನ್ನು ತೋರುತ್ತಿದೆ ಎಂದು ಆರೋಪಿಸಿದ್ದಾರೆ.ಮಹಾರಾಷ್ಟ್ರ ಸರ್ಕಾರದ ದಿಟ್ಟ ನಿಲುವು ತಗೆದುಕೊಂಡು ಸೈಬರ್ ಕ್ರೈಂ ಅಡಿಯಲ್ಲಿ ಕ್ರಮ ತೆಗೆದುಕೊಂಡಿದಲ್ಲದೆ ಅಂತಹ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆಯಲು ಆದೇಶಮಾಡಿದೆ ರಾಜ್ಯದಲ್ಲೂ ಸಹ ಈ ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾರಿಗೆ ಇಲಾಖೆಯನ್ನು ಒತ್ತಾಯಿಸಿರುತ್ತಾರೆ.
ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆ ತರಾಕಾರಿ ಅಂಗಡಿಗಳ ವೃತ್ತದಲ್ಲಿ ಅತಿವೇಗದಿಂದ ಬಂದ ದ್ವಿಚಕ್ರವಾಹನ ಸವಾರರು ಡಿಕ್ಕಿಯಾಗಿ ಮತ್ತೊಂದು ದ್ವಿಚಕ್ರವಾಹನದಲ್ಲಿ ಹೋಗಿತಿದ್ದ ಮಹಿಳೆ ಹಾಗು ವಾಹನ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಬೆಳೆಗ್ಗೆ ನಡೆದಿರುತ್ತದೆ.ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.ಗಾಯಗೊಂಡ ವ್ಯಕ್ತಿಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನೌಕರಿ ಮಾಡುವ ವೇಣು ಎಂದು ಗುರುತಿಸಲಾಗಿದೆ. ಗಾಯಾಳು ವೇಣು ಮಾರುಕಟ್ಟೆಗೆ ಹೋಗಲು ನೆಹರು ರಸ್ತೆಯಿಂದ ಆಜಾದ್ ರಸ್ತೆ ಮೂಲಕ ಹೋಗಲು ತರಕಾರಿ ಮಾರುಕಟ್ಟೆ ವೃತ್ತದಿಂದ ಸಾಗುತ್ತಿರುವಾಗ ಎಂ.ಜಿ.ರಸ್ತೆಯಲ್ಲಿ ಮುಳಬಾಗಿಲು ವೃತ್ತದ ಕಡೆಯಿಂದ ಬಂದಂತ ಇಬ್ಬರು ಯುವಕರಿದ್ದ ಪಲ್ಸರ್ ಬೈಕ್ ಅತಿಯಾದ ವೇಗದಿಂದ ಬಂದು ವೇಣು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೋಡೆದ್ದಿರುತ್ತಾರೆ.ಗುದ್ದಿದ ರಭಸಕ್ಕೆ ವೇಣು ಅಜಾದ್ ರಸ್ತೆಯಲ್ಲಿ ತರಕಾರಿ ಅಂಗಡಿಗಳ ಬಳಿ ಇಟ್ಟಿದ್ದ ಕಲ್ಲುಗಳ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟಾಗಿದೆ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.ಅತಿಯಾದ ವೇಗದಿಂದ ಬಂದ ಯುವಕರಿದ್ದ ಪಲ್ಸರ್ ಬೈಕ್ ಎಂ.ಜಿ.ರಸ್ತೆಯಲ್ಲಿನ ತರಕಾರಿ ಅಂಗಡಿಯ ತೆಂಗಿನಕಾಯಿ ಸ್ಟಾಂಡ್ ಗುದ್ದಿ ಮೇಲಕ್ಕೆ ಎಗುರಿ ಬಿದಿದ್ದು ದ್ವಿಚಕ್ರವಾಹನದಲ್ಲಿದ್ದ ಯುವಕರು ಗಾಯಗೊಂಡಿದ್ದಾರೆ.ಎಂ.ಜಿ.ರಸ್ತೆಯಲ್ಲಿ…
ನ್ಯೂಜ್ ಡೆಸ್ಕ್:ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು ಗುರುವಾರ ಸಿಎಂ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿಅಗ್ರಿಗೋಲ್ಡ್ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮೂವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ಎಂಟು ರಾಜ್ಯಗಳಲ್ಲಿ 19 ಲಕ್ಷ ಸಂತ್ರಸ್ತರಿದ್ದು,ಆಂಧ್ರಪ್ರದೇಶದಲ್ಲಿ 11 ಲಕ್ಷ ಸಂತ್ರಸ್ತರಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಸಂತ್ರಸ್ತರ ಹಣ ದುರುಪಯೋಗ ಪಡಿಸಿಕೊಂಡವರಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿದ್ದ ಕೆಲವು ಪ್ರಮುಖ ಅಧಿಕಾರಿಗಳೂ ಪಾಲುದಾರರಾಗಿದ್ದಾರೆ ಅದಕ್ಕಾಗಿಯೇ ಅವರು ಈ ಪ್ರಕರಣದ ಕುರಿತು ಮೂವರು ಸದಸ್ಯರ ಸಮಿತಿಯನ್ನು ರಚಿಸಲು ಆದೇಶಿಸಿದ್ದಾರೆ.ಅಗ್ರಿಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ ವಂಚನೆಗೊಳಗಾದ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಸಿಎಂ ಚಂದ್ರಬಾಬು ಸ್ಪಷ್ಟಪಡಿಸಿದ್ದಾರೆ.
ನ್ಯೂಜ್ ಡೆಸ್ಕ್:ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದೆ. ಈ ನಿಟ್ಟಿನಲ್ಲಿ, ಎಐಸಿಸಿ ಗುರುವಾರ ನವದೆಹಲಿಯಲ್ಲಿ ಸತೀಶನ್ ಅವರ ಹೆಸರನ್ನು ಕೇರಳದ ಮುಖ್ಯಮಂತ್ರಿಯಾಗಿ ಘೋಷಿಸಿತು.ಕೇರಳ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದೊಂದು ವಾರದಿಂದ ನಡೆದಿದ್ದ ರಾಜಕೀಯ ಸಸ್ಪೆನ್ಸ್ ಕೊನೆಗೂ ಅಂತ್ಯವಾಗಿದ್ದು ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ.ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಮುಖ್ಯಮಂತ್ರಿ ಪದವಿ ರೇಸ್ ನಲ್ಲಿ ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಹೈಕಮಾಂಡ್ ನಿಂದ ಸಾಕಷ್ಟು ಆಶೀರ್ವಾದ ಇತ್ತಾದರೂ, ಕೇರಳದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಿದೆ.2026ರ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿದ…


