ನ್ಯೂಜ್ ಡೆಸ್ಕ್: ತಮಿಳುನಾಡು ಚುನಾವಣೆಯಲ್ಲಿ ಚಾರಿತಾತ್ಮಕ ಗೆಲುವು ಸಾಧಿಸಿರುವ ದಳಪತಿ ವಿಜಯ್ ಮತ್ತು ಅವರ ಕುಟುಂಬದ ಬಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಅವರ ಪೋಷಕರು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು ಎನ್ನಲಾಗಿದ್ದು ವಿಜಯ್ ತಾತ ಚಿತ್ತೂರಿನಿಂದ ತಮಿಳುನಾಡಿನ ರಾಮೇಶ್ವರಂ ಗೆ ವಲಸೆ ಹೋದವರು ಹೇಳುತ್ತಾರೆ.ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ಪ್ರಸಿದ್ಧ ನಿರ್ದೇಶಕ ಸಿನಿಮಾ ನಿರ್ದೇಶಕರಾಗಿ ಖ್ಯಾತರಾಗಿದ್ದಾರೆ.ತಮಿಳು ಕನ್ನಡ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 70 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶರಾಗಿ ಅಷ್ಟೆ ಅಲ್ಲ ನಿರ್ಮಾಪಕ ಮತ್ತು ಬರಹಗಾರರಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.80-90 ರ ದಶಕದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕ್ರಾಂತಿಕಾರಿ ಕಥೆಗಳನ್ನು ಕನ್ನಡ ತೆಲಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡಿ ಸೈ ಅನಿಸಿಕೊಂಡಿದ್ದಾರೆ.
ಕನ್ನಡದ ನಂಟು
ಸ್ಯಾಂಡಲ್ವುಡ್ನ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಶಂಕರ್ ನಾಗ್ ಅವರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ವಿಷ್ಣುವರ್ಧನ್ ನಾಯಕರಾಗಿದ್ದ “ವಿಷ್ಣು ದಾದಾ” “ಸಿಂಹ ಘರ್ಜನೆ” ಮತ್ತು “ಗೆಲುವು ನನ್ನದೆ” ಚಿತ್ರಗಳನ್ನು ಹಾಗು ಅಂಬರೀಷ್ ಅಭಿನಯದ ಚಿತ್ರಗಳು ನಿರ್ದೇಶಕರು ಚಂದ್ರಶೇಖರ್, ಶಂಕರ್ ನಾಗ್ ಅವರಿಗಾಗಿ ‘ನ್ಯಾಯ ಎಲ್ಲಿದೆ'(ಚಿರಂಜಿವಿ ನಟನೆಯ ಚಟ್ಟಾನಿಕೆ ಕಳ್ಳು ಲೇವು ಸಿನಿಮಾ ರೀಮೇಕ್), ‘ಗೆದ್ದ ಮಗ’ ಮತ್ತು ‘ಹಸಿದ ಹೆಬ್ಬುಲಿ’ ಚಿತ್ರಗಳನ್ನು ನಿರ್ದೇಶಿಸಿ ಮಾಸ್ ಇಮೇಜ್ ತಂದುಕೊಟ್ಟರು.
ಮೆಗಾಸ್ಟಾರ್ ಜೊತೆ ಮೂರು ಸಿನಿಮಾ
ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ವಿಜಯ್ ಅವರ ತಂದೆ ಅವರು ಚಿರು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಇಬ್ಬರ ಕಾಂಬೊ 3 ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.1981 ರಲ್ಲಿ ಚಟ್ಟಾನಿಕೆ ಕಳ್ಳು ಲೇವು,1983 ‘ಪಲ್ಲೆಟೂರಿ ಮೊನಗಾಡು’ ಚಿತ್ರ,1984 ರಲ್ಲಿ, ಚಿರಂಜೀವಿ ಮತ್ತು ವಿಜಯಶಾಂತಿ ನಟಿಸಿದ ‘ದೇವಾಂತಕುಡು'(ಗೆಲುವು ನನ್ನದೆ ರೀಮೇಕ್) ಚಿತ್ರವನ್ನು ನಿರ್ದೇಶಿಸಿದ್ದಾರೆ.ವಿಜಯ್ ಅವರ ತಾಯಿ ಶೋಭಾ ಮೂಲತಃ ಮಲೆಯಾಳಿಯಾಗಿದ್ದು ಖ್ಯಾತ ಗಾಯಕಿಯಾಗಿ ಸ್ಕೀಪ್ಟ್ ರೈಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಮಗನನ್ನು ಬೆಳ್ಳಿ ತೆರೆಗೆ ತಂದವರು
ದಿಗ್ಗಜ ನಟರಿಗೆ ಆಕ್ಷನ್ ಕಟ್’ ಹೇಳಿದ್ದ ವಿಜಯ್ ತಂದೆ ಎಸ್. ಎ. ಚಂದ್ರಶೇಖರ್, ವಿಜಯ್ ಎಂಬ ಸಾಮ್ರಾಜ್ಯ ಕಟ್ಟಿದ ಶಿಲ್ಪಿ ಕೂಡ ಹೌದು.ಇವತ್ತು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಅವರನ್ನು ‘ನಾಲಯ ತೀರ್ಪು’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ತಂದವರು ಎಸ್. ಎ. ಚಂದ್ರಶೇಖರ್ ನಿರ್ದೇಶಿಸಿದ ಹಲವಾರು ಸಿನಿಮಾಗಳಲ್ಲಿ ವಿಜಯ್ ಬಾಲನಟನಾಗಿ ಮಿಂಚಿದ್ದಾರೆ.
ವಿಜಯ್ ಅವರ ಇಂದಿನ ಯಶಸ್ಸಿನ ಹಿಂದೆ ತಂದೆಯ ಗಟ್ಟಿ ಮಾರ್ಗದರ್ಶನವಿದೆ ಎನ್ನುವುದು ಮಹಾಸತ್ಯ.
ವಿಜಯ್ ಜಾತಿ ತಮಿಳು
ಮಗನ ಸಾರ್ವಜನಿಕ ಜೀವನದ ಬಗ್ಗೆ ಎಪ್ಪತ್ತರ ದಶದಲ್ಲೆ ಕನಸು ಕಂಡಿದ್ದ ವಿಜಯ್ ತಂದೆ ಎಸ್. ಎ. ಚಂದ್ರಶೇಖರ್ ಮಗನನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಮಗನ ಜಾತಿ ಕಾಲಂ ನಲ್ಲಿ ತಮಿಳು ಎಂದು ಬರೆಸಿದ್ದು ಇದನ್ನು ವಿರೋಧಿಸಿದ ಶಾಲೆ ಮುಖ್ಯಸ್ಥರಿಗೆ ಸವಾಲು ಹಾಕಿ ಜಾತಿ ಕಾಲಂ ನಲ್ಲಿ ತಮಿಳು ಉಳಿಸಿಕೊಂಡು ಸಾಧಿಸಿದ್ದಾರೆ.
Trending
- ತಮಿಳುನಾಡು:ವಿಜಯ್ ತಾತ ತೆಲಗು ಭಾಷಿಕ ತಂದೆ ಕನ್ನಡ ಸಿನಿಮಾ ನಿರ್ದೇಶಕ!
- ಮಾಲೂರು ರಾಜಕೀಯಕ್ಕಾಗಿ ಕೋಮುಲ್ ಮೇಲೆ ಆರೋಪ ಒಳ್ಳೆಯ ಬೆಳವಣಿಗೆಯಲ್ಲ!
- ಶ್ರೀನಿವಾಸಪುರ:ಶಿಕ್ಷಕರ ಸಂಘದ ಚುನಾವಣೆ ರೆಡ್ಡೆಪ್ಪ ಬಣಕ್ಕೆ ಗೆಲವು!
- ಮಾವು ನಷ್ಟಕ್ಕೆ ಪರಿಹಾರ ನೀಡುವಂತೆ ಶಾಸಕ ವೆಂಕಟಶಿವಾರೆಡ್ಡಿ ಮನವಿ
- ಶ್ರೀನಿವಾಸಪುರ:ಪ್ರಥಮ ವರ್ಷದ ನರಸಿಂಹಸ್ವಾಮಿ ರಥೋತ್ಸವ
- ಶ್ರೀನಿವಾಸಪುರ:ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮಾವು ನೆಲದ ಪಾಲು!
- ಕೊನೆಯುಸಿರು ಇರೊ ತನಕ ನಿಮ್ಮೊಂದಿಗೆ ಇರುತ್ತೇನೆ ಮಾಜಿ ಸ್ಪೀಕರ್ ಭಾವುಕ ನುಡಿ!
- V.KOTA ಹಾಡುಹಗಲೆ ಪತ್ರಕರ್ತನ ಭೀಕರ ಹತ್ಯೆ!
Thursday, May 7



