ಶ್ರೀನಿವಾಸಪುರ:ಈ ತಾಲೂಕಿನ ಜೀವನಾಡಿ ಬೆಳೆಯಾಗಿರುವ ಮಾವು ಬೆಳೆ ಬಿಸಿಲಿನ ತಾಪಮಾನದಿಂದ ಕುಂಠಿತವಾಗಿತ್ತು ಬುಧವಾರ ಸುರಿದ ಮಳೆಯಿಂದ ಅಳಿದುಳಿದ ಮಾವುಬೆಳೆ ನೆಲದ ಪಾಲಾಗಿದೆ ರೈತರು ನಷ್ಟಕ್ಕೊಳಗಾಗಿದ್ದಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಗುರುವಾರ ಸಂಸದ ಮಲ್ಲೇಶ್ ಬಾಬು ಜೊತೆಗೂಡಿ ಮಳೆಯಿಂದ ನಷ್ಟಕ್ಕೆ ಒಳಗಾದ ಕಸಬಾ ಹೋಬಳಿ ದೊಡಮಲದೊಡ್ಡಿ ಸೇರಿದಂತೆ ಗ್ರಾಮಗಳ ವ್ಯಾಪ್ತಿಯ ಮಾವಿನ ತೋಟಗಳಿಗೆ ಭೇಟಿ ನೀಡಿದ್ದ ಅವರು ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡಲು ವಹಿಸಬೇಕಾದ ಕ್ರಮದ ಕುರಿತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಅವರಿಗೆ ಸೂಚಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ವರದಿ ನೀಡಿ ಪರಿಹಾರ ಕುರಿತಾಗಿ ವಿಪತ್ತು ನಿರ್ವಹಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಮಾವು ಬೆಳೆ ತಾಪಮಾನದ ತೀವ್ರ ಏರಿಕೆ, ಅಕಾಲಿಕ ಮಳೆಯಿಂದ ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗುತ್ತಿರುವುದು ದುರಂತ ಎಷ್ಟೊ ಜನ ರೈತರು ಬೆಳೆ ವಿಮೆ ಸಹ ಮಾಡಿಸಿರುವುದಿಲ್ಲ ಆದ್ದರಿಂದ ರೈತರಿಗೆ ಅಗತ್ಯ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ತೋಟಗಾರಿಕೆ ಇಲಾಖೆ ಅಧಿಕಾರಿ ಹರಿಶ್ ದೊಡಮಲದೊಡ್ಡಿಶ್ರೀನಾಥ್ ರೆಡ್ಡಿ ಮುಂತಾದವರು ಇದ್ದರು.



