ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆ ಇಂದು ನಡೆಯಿತು ಸಂಜೆ ಮತ ಎಣಿಕೆ ನಡೆದು ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ರೊಣೂರುರೆಡ್ಡಪ್ಪ ನೇತೃತ್ವದ ಬಣದ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸಿದ್ದಾರೆ.
ಒಟ್ಟು 13 ಸ್ಥಾನಗಳಿಗೆ 2 ಶಿಕ್ಷಕರ ಬಣಗಳಿಂದ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ಅವರಲ್ಲಿ 11 ಮಂದಿ ರೆಡ್ಡೆಪ್ಪ ಬಣದವರು ಗೆಲವು ಸಾಧಿಸಿದ್ದಾರೆ. 13 ಸ್ಥಾನಗಳಲ್ಲಿ ಒಂಬತ್ತು ಮಂದಿ ಪುರಷ ಅಭ್ಯರ್ಥಿಗಳು ನಾಲ್ಕು ಮಂದಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಬೇಕಿತ್ತು ಮಹಿಳಾ ಕ್ಷೇತ್ರದ ನಾಲ್ಕು ಅಭ್ಯರ್ಥಿಗಳು ಹಾಗು ಪುರುಷ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ರೆಡ್ಡೆಪ್ಪ ಬಣದವರು ವಿಜೇತರಾಗಿದ್ದಾರೆ.ಇಬ್ಬರು ಅಭ್ಯರ್ಥಿಗಳು ಮೂರ್ತಿ ಹಾಗು ಬಿ.ಆರ್.ಪಿ ನಾಗರಾಜ್ ವಿರೋಧಿ ಬಣದ ಅಭ್ಯರ್ಥಿಗಳು ಗೆದ್ದಿರುತ್ತಾರೆ.
ವಿಜೇತ ಅಭ್ಯರ್ಥಿಗಳ ವಿವರ
ರೆಡ್ಡೆಪ್ಪ, ಭಯ್ಯಾರೆಡ್ಡಿ, ರಘುನಾಥರೆಡ್ಡಿ, ಶಿವಣ್ಣ, ವೇಣುಗೋಪಾಲ, ವೆಂಕಟರಾಮರೆಡ್ಡಿ, ವೇಣುಗೋಪಾಲರೆಡ್ಡಿ. ಮಹಿಳಾ ಕ್ಷೇತ್ರದಲ್ಲಿ ಅನುರಾಧ, ಅನಿತಾ, ನಾಗರತ್ನಮ್ಮ, ತನುಜ.
ತಡ ರಾತ್ರಿ ಚುನಾವಣೆ ಫಲಿತಾಂಶ
ಚುನಾವಣಾಧಿಕಾರಿಗಳಾಗಿ ಉಪನ್ಯಾಸಕ ಜೆ.ಗೋಪಿನಾಥ್,ಸಹಾಯಕರಾಗಿ ಲೋಕೆಶ್ ಮತ್ತು ಹನುಮೇಗೌಡ ಕಾರ್ಯನಿರ್ವಹಿಸಿದರು.ಚುನಾವಣೆ ಪ್ರಕ್ರಿಯೆ ಮುಗಿದು ಪೂರ್ತಿಯಾಗಿ ಚುನಾವಣೆ ಫಲಿತಾಂಶ ರಾತ್ರಿ 11 ಗಂಟೆಗೆ ಪ್ರಕಟವಾಗಿದೆ.
ಪ್ರತಿಷ್ಠೆಯಾಗಿದ್ದ ಶಿಕ್ಷಕರ ಸಂಘದ ಚುನಾವಣೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ಸ್ಥಳೀಯವಾಗಿ ಶಿಕ್ಷಕರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರಿಂದ ಚುನಾವಣಾ ಕಣ ಕಳೆದ ಹಲವಾರು ದಿನಗಳಿಂದ ಅಬ್ಬರದ ಪ್ರಚಾರದಲ್ಲಿ ರಂಗೇರುವಂತಾಗಿತ್ತು.ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ ತಾಲೂಕಿನ ಶಿಕ್ಷಕರ ಬಳಗ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಡಾಡಿ ಪ್ರಚಾರ ಮಾಡಿದ್ದರು. ಇದರಿಂದ ಸಂಘದ ಚುನಾವಣೆ ಶಿಕ್ಷಕರ ವಲಯದಲ್ಲಿ ಅಷ್ಟೇ ಅಲ್ಲದೆ ಸಾರ್ವಜನಿಕವಾಗಿಯೂ ಸಾಕಷ್ಟು ಪ್ರಚಾರ ಪಡೆದು ತೀವ್ರ ಕುತೂಹಲ ಮೂಡಿಸಿತ್ತು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



