Author: Srinivas_Murthy

ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಾನೆ ಬಿಜೆಪಿ ಅಭ್ಯರ್ಥಿಯಾಗಿದ್ದು ಜನತೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸುವಂತೆ ವಿಧಾನಪರಿಷತ್ ಮುಖ್ಯಸಚೇತಕ ವೈ ಎ ನಾರಾಯಣಸ್ವಾಮಿ ಹೇಳಿದರು ಅವರು ಇಂದು ತಮ್ಮ ಸ್ವಗ್ರಾಮವಾದ ಹೆಚ್ಚನಹಳ್ಳಿ ಹಾಗು ದೊಡ್ಡಪಲ್ಲಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸ್ ರೆಡ್ಡಿ ಪರ ಮತ ಯಾಚನೆ ಮಾಡಿ ಮಾತನಾಡಿದರು.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೂ ತೆರಳಿ ಮತಯಾಚನೆ ಮಾಡುತ್ತಿದ್ದು ಇಂದು ಯಚ್ಚನಹಳ್ಳಿ ಗ್ರಾಮದಲ್ಲಿ ಈ ಭಾಗದ ಗ್ರಾಮಗಳ ಜನರ ಸಭೆ ನಡೆಸಿ ಮತ ಕೇಳುತ್ತಿದ್ದೇವೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬಡವರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ರೈತರ ಪರ ನಿಲವು ಹೊಂದಿದೆ ಎಂದರು.ಜನಧನ್ ಯೋಜನೆಯಿಂದಾಗಿ ದೊಡ್ದ ಮಟ್ಟದಲ್ಲಿ ಜನಸಾಮನ್ಯರಿಗೆ ಅನಕೂಲ ಆಗಿದೆ ಅದೆ ರೀತಿ ಕಿಸಾನ್ ಸನ್ಮಾನ ಯೋಜನೆ ಜಾರಿಗೆ ತಂದಿದ್ದು ಇದರಿಂದ ಸಾಮನ್ಯ ರೈತರು ಅನಕೂಲ ಪಡೆದಿರುತ್ತಾರೆ ಆಯಿಷ್ಮಾನ್ ಭಾರತ್ ಯೊಜನೆ ಪರಿಣಾಮ ಸಾಮನ್ಯ ಜನರು ಉತ್ತಮ ವೈದ್ಯಕೀಯ ಪಡೆಯಲು ಸಹಕಾರಿಯಾಗಿದೆ,ಕೊರೋನಾ ಸಮಯದಲ್ಲಿ…

Read More

ನ್ಯೂಜ್ ಡೆಸ್ಕ್:ವಾರ್ಡ್ ಮೆಂಬರ್,ಗ್ರಾಮಪಂಚಾಯಿತಿ ಸದಸ್ಯನೊ ಜಿಲ್ಲಾಪಂಚಾಯಿತಿ ಸದಸ್ಯನೊ ಇನ್ಯಾವೊದೊ ರಾಜಕೀಯದ ಸ್ಥಾನಮಾನ ಸಿಕ್ಕರೆ ಸಾಕು ಒಂದಷ್ಟು ಗಂಟು ಮಾಡಿಕೊಂಡು ಕೈಗೆ ಕುತ್ತಿಗೆಗೆ ಸಾಕಷ್ಟು ಬಂಗಾರ ಹೇರಿಕೊಂಡು ಅಹಂಕಾರದಿಂದ ಮೆರೆಯುತ್ತ ದೌಲತ್ತಿನ ಮಾತುಗಳನ್ನಾಡುವ ರಾಜಕಾರಣಿಗಳ ನಡುವೆ ನಾವು ಇದ್ದೀವಿ ಇಂತಹ ವ್ಯವಸ್ಥೆಯಲ್ಲೊಬ್ಬ ರಾಜಕೀಯ ಸಂತನೊ ಒಬ್ಬ ಇದ್ದಾನೆ ಎಂದರೆ ಎಲ್ಲರಿಗೂ ಆಶ್ಚರ್ಯ ಆಗಬಹುದು ಸತತವಾಗಿ 5 ಬಾರಿ ಗೆದ್ದು ಶಾಕಸನಾದರು ಇಂದಿಗೂ ಸೈಕಲ್ನಲ್ಲೆ ಓಡಾಟ,ಚಿಕ್ಕದಾದ ಹಳ್ಳಿಯ ಮನೆಯಲ್ಲೇ ವಾಸ ಜೀವನಾಧಾರಕ್ಕೆ ಕೃಷಿ ನಂಬಿಕೊಂಡಿರುವ ವ್ಯಕ್ತಿಯ ಬದಕು ಇದು ಸಾಧ್ಯ ಆಗಿರುವುದು ವಿಭಜಿತ ಆಂಧ್ರಪ್ರಶೇದದ ಖಮ್ಮಂ ಜಿಲ್ಲೆಯಲ್ಲಿ.ಐದು ಬಾರಿ ಶಾಸಕರಾಗಿ ಗೆದ್ದರೂ ಸಿಂಪಲ್ ಆಗಿದ್ದಾರೆ ಸರಳತೆಯಿಂದ ಜೀವನ ಮಾಡುತ್ತಿದ್ದಾರೆ ಅವರೇ ಗುಮ್ಮಡಿ ನರಸಯ್ಯ.. ಖಮ್ಮಂ ಜಿಲ್ಲೆ ಈಗ ತೆಲಂಗಾಣ ರಾಜ್ಯದಲ್ಲಿದ್ದೆ ಇಲ್ಲಂದು ವಿಧಾನ ಸಭಾ ಕ್ಷೇತ್ರದಿಂದ 5 ಬಾರಿ ಗೆದ್ದು ಶಾಸಕರಾಗಿದ್ದಾರೆ. ಶಾಸಕರಾಗಿದ್ದ ಅವಧಿಯಲ್ಲೂ ಅವರು ಈ ಸರಳತೆಯನ್ನು ಉಳಿಸಿಕೊಂಡಿದ್ದರು.ಗುಮ್ಮಡಿ ನರಸಯ್ಯ ಶಾಸಕರಾಗಿದ್ದಾಗ ರಾಜಧಾನಿ ಹೈದರಾಬಾದಿಗೆ ಬಸ್ಸು ಅಥಾವ ರೈಲಿನಲ್ಲಿ ಒಡಾಡುತ್ತಿದ್ದ ಅವರು ಇಂದಿನ…

Read More

ಶ್ರೀನಿವಾಸಪುರ:ದ್ವಿತೀಯ ಪಿಯು ಫಲಿತಾಂಶದಲ್ಲಿ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿಙ್ಞಾನ ವಿಭಾಗದ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾನೆ.ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿ ಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ PCMB ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಡೆದಿದ್ದು ಹಿಂದಿ ಮತ್ತು ಇಂಗ್ಲೀಷ್ ಭಾಷೆ ವಿಷಯಗಳಲ್ಲಿ ತಲಾ 98 ಪಡೆದು ಒಟ್ಟು 596 ಅಂಕ ಗಳಿಸಿರುತ್ತಾನೆ.ಗಂಗೋತ್ರಿ ಪಿಯು ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಸುಂಕುಮುರಳಿ ಮತ್ತು ಸುಜಾತ ಅವರ ಪುತ್ರನಾಗಿರುವ ಎಸ್.ಎಂ.ಕೌಶಿಕ್ ಸಾಧನೆಗೆ ಅವರ ತಂದೆ ಹಾಗು ದೊಡ್ಡಪ್ಪ ಸುಂಕುಅಮರನಾಥ್ ಕಾಲೇಜು ಆವರಣದಲ್ಲಿ ಸಂಭ್ರಮ ಆಚರಣೆ ಮಾಡಿದರು ಇದು ನನ್ನ ಮಗನ ಸಾಧನೆಯಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಯ ಸಾಧನೆ ಎಂದು ಬಣ್ಣಿಸಿದರು,ಕಾಲೇಜಿನ ಅಧ್ಯಕ್ಷರಾದ ಎಸ್.ಎಂ.ಕೌಶಿಕ್ ಅವರ ದೊಡ್ಡಪ್ಪ ಸುಂಕುಅಮರನಾಥ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ಬಹುತೇಕ ಗ್ರಾಮೀಣ ಭಾಗದ ಮಕ್ಕಳೆ ಹೆಚ್ಚು ಒದುತ್ತಿದ್ದಾರೆ ಕಳೆದ ಆರು ವರ್ಷಗಳಿಂದ ನಮ್ಮಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಕಷ್ಟ ಅರಿತು ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ…

Read More

ಶ್ರೀನಿವಾಸಪುರ:ಯುವರಾಜಕಾರಣಿಯಾಗಿ,ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡ ಬಿಜೆಪಿ ಸಿಂಬಲ್ ಅಡಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಧೂಳೆಬ್ಬಿಸುತ್ತ ಒಡಾಡುತ್ತಿದ್ದ SLN ಮಂಜು ಕಳೆದ ಮೂರನಾಲ್ಕು ತಿಂಗಳಿನಿಂದ ಕ್ಷೇತ್ರದಿಂದ ದೂರ ಸರಿದು ಹೋಗಿದ್ದರು ಇದು ಹಲವಾರು ವದಂತಿಗಳಿಗೆ ಉಹಾಪೋಹಗಳಿಗೆ ಕಾರಣವಾಗಿತ್ತು ಆದರೂ SLN ಮಂಜು ತಾಲೂಕು ಕಚೇರಿ ಬಳಿ ಉಚಿತ ಅನ್ನಧಾನ ಕಾರ್ಯಕ್ರಮ ಸೇರಿದಂತೆ ಸೇವಾ ಕಾರ್ಯಗಳನ್ನು ನಿಲ್ಲಿಸಿರಲಿಲ್ಲ, ಬಿಜೆಪಿ ವಿಜಯ ಸಂಕಲ್ಪಯಾತ್ರೆ ಬಂದಾಗಲೂ SLN ಮಂಜು ಕಾಣದೆ ಹೋದ ಹಿನ್ನಲೆಯಲ್ಲಿ ಅವರೊಂದಿಗೆ ಗುರುತಿಸಿಕೊಂಡಿದ್ದ ಒಂದಷ್ಟು ಯುವಕರು ಮಾನಸಿಕವಾಗಿ ಕುಗ್ಗಿಹೋಗಿದ್ದರು.ಆದರೆ ಬುಧವಾರ ಸಂಜೆಯಿಂದ ಜೆಡಿಎಸ್ ಕಾರ್ಯಕರ್ತರ ಮುಖಂಡರ ವ್ಯಾಟ್ಸಾಪ್ ಸ್ಟೇಟಸ್ ಮತ್ತು ಎಫ್ಬಿಗಳಲ್ಲಿ SLN ಮಂಜು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಫೋಟೋಗಳು ಹರಿದಾಡುತಿದೆ ಈ ಫೋಟೋಗಳಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಮಾಜಿ ವಿಧಾನಪರಿಷತ್ ಸದಸ್ಯ ಚೌಡರೆಡ್ದಿ ಇದ್ದು ಅವರೆ SLN ಮಂಜು ಅವರನ್ನು ಜಕ್ಕೂರು ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಮಾಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮದ್ಯೆ SLN…

Read More

ಶ್ರೀನಿವಾಸಪುರ: ಉತ್ತಮ ಆಡಳಿತಕ್ಕೆ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಡಾ. ವೆಂಕಟಾಚಲ ಕೋರಿದರು ಅವರುತಮ್ಮ ಪತ್ನಿ ಡಾ.ಶುಭ ಹಾಗು ಕೆಲವೆ ಕೆಲವು ಬೆಂಬಲಿಗರ ಜೊತೆಗೂಡಿ ತಾಲ್ಲೂಕು ಕಚೇರಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ರಾಷ್ಟ್ರದ ಎರಡು ರಾಜ್ಯಗಳಲ್ಲಿ ಆಡಳಿದಲ್ಲಿರುವ ಪಕ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಉತ್ತಮವಾಗಿ ಸರ್ಕಾರ ನಡೆಸುತ್ತಿದೆ ಎಂದರು ಶ್ರೀನಿವಾಸಪುರದಲ್ಲಿಯೂ ಜನತೆ ಬೆಸೆತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ಕ್ಷೇತ್ರದ ಜನತೆ ನನ್ನ ಸೇವಾಕಾರ್ಯಗಳನ್ನು ಮೆಚ್ಚಿದ್ದು ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆ ಇದೆ ಚುನಾವಣಾ ನೀತಿ ಸಂಹಿತೆಯ ಮಾರ್ಗಸೂಚಿಯಂತೆ ಚುನಾವಣಾ ಪ್ರಚಾರ ಮಾಡುವ ಪ್ರಾಮಾಣಿಕವಾಗಿ ಜನರ ಬಳಿ ಮತ ಯಾಚಿಸುತ್ತೇನೆ ಅವರ ಆಶೀರ್ವಾದ ನನಗೆ ಸಿಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Read More

ಶ್ರೀನಿವಾಸಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ದೇಶಕ್ಕೆ ಅವರು ನೀಡಿರುವಂತ ಕಾರ್ಯಕ್ರಮಗಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು ಅವರು ಇಂದು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಹ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿದ ಸಂದರ್ಬದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗುಂಜೂರುಶ್ರೀನಿವಾಸರೆಡ್ಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅವರು ಪಕ್ಷದ ಮಾರ್ಗದರ್ಶನದಂತೆ ಪಕ್ಷದ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಈ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂಬುದಾಗಿ ತಿಳಿಸಿದರು.ಗುಂಜೂರು ಶ್ರೀನಿವಾಸರೆಡ್ಡಿ ರಾಜಕೀಯ ಮತ್ತು ಬಿಜೆಪಿಗೆ ಹಳಬರು ಪಕ್ಷದ ಹಿರಿಯರು ಪ್ರಮುಖರ ಅಭಿಪ್ರಾಯದಂತೆ ಅವರನ್ನು ಗುರುತಿಸಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಪರ್ದಿಸಲು ಅವಕಾಶ ಕಲ್ಪಿಸಿದೆ ಎಂದರು ಕಳೆದ 45 ವರ್ಷಗಳಿಂದ ಕ್ಷೇತ್ರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಇಲ್ಲಿನ ಮತದಾರರು ಬೇಸತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದು…

Read More

ಶ್ರೀನಿವಾಸಪುರ:ಚಲಿಸುತ್ತಿದ್ದ ಲಾರಿಗೆ ಸಿಲುಕಿ ದ್ವಿಚಕ್ರ ವಾಹನ ನಡೆಸುತ್ತಿದ್ದ ಯುವಕನೊಬ್ಬ ಸ್ಥಳದಲ್ಲೆ ಮೃತ ಪಟ್ಟ ಘಟನೆ ತಾಲೂಕಿನ ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ಕ್ರಾಸ್ ನಲ್ಲಿ ಜಿಯೋ ಪೆಟ್ರೊಲ್ ಬಂಕ್ ಬಳಿ ನಡೆದಿದೆ, ಮೃತ ಯುವಕನನ್ನು ಆಂಧ್ರದ ಅನಮಯ್ಯ ಜಿಲ್ಲೆಯ ರಾಜಂಪೇಟ ಮಂಡಲ್ ಬೇಗಂಪೇಟ ನಿವಾಸಿ ದುರ್ಗಾಪ್ರಸಾದ್ (25) ಎಂದು ಗುರುತಿಸಲಾಗಿದೆ.ಮೃತ ದ್ವಿಚಕ್ರ ವಾಹನ ಸವಾರ ಆಂಧ್ರದ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್(software)ಆಗಿ ಕೆಲಸ ಮಾಡುತಿದ್ದು ಭಾನುವಾರ ಬೆಂಗಳೂರಿಗೆ ಹೋಗಲು ಕಳೆದ ಆರು ತಿಂಗಳ ಹಿಂದೆ ಖರೀದಿ ಮಾಡಿದ್ದ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ಈ ಸಂದರ್ಭದಲ್ಲಿ ಲಕ್ಷ್ಮಿಪುರ ಕ್ರಾಸ್ ನಲ್ಲಿ ತೆರಳುವಾಗ ಬಂಕ್ ನಲ್ಲಿ ಡೀಸಲ್ ತುಂಬಿಸಿಕೊಂಡು ರಸ್ತೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿಹೊಡೆದಿರುತ್ತಾನೆ,ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಅನಾಮತ್ತು ಲಾರಿಗೆ ಕೆಳೆಗೆ ಬಿದ್ದಿರುತ್ತಾನೆ ದ್ವಿಚಕ್ರ ವಾಹನ ರಸ್ತೆಗೆ ಬದಿಗೆ ಬಿದ್ದಿರುತ್ತದೆ,ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿದ ದ್ವಿಚಕ್ರ ವಾಹನ ಸವಾರ ಪ್ರಸಾದ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೆ ಪ್ರಾಣ ಬಿಟ್ಟಿರುತ್ತಾನೆ.ದ್ವಿಚಕ್ರ…

Read More

ಶ್ರೀನಿವಾಸಪುರ:ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಜಾರಿಯಾಗಿದ್ದು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಇಂದು ಶನಿವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಜಿ.ಕೆ.ವೆಂಕಟಶಿವಾರೆಡ್ಡಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್,ಪುರಸಭೆ ಉಪಾಧ್ಯಕ್ಷೆ ಅಯಿಶಾಖಾನಂ ಹಾಗು ಮಾಜಿ ಅಧ್ಯಕ್ಷ ಮುನಿಯಪ್ಪ ಜೊತೆಗೂಡಿ ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.ನಾಮ ಪತ್ರ ಸಲ್ಲಿಸುವುದಕ್ಕೂ ಮುಂಚಿತವಾಗಿ ತಮ್ಮ ಕಾರ್ಯಕರ್ತರೊಂದಿಗೆ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ತಮ್ಮ ಹೆಸರು ಗೋತ್ರ ಹೇಳದೆ ಸರ್ವಜನರ ಹೆಸರಿನಲ್ಲಿ ಪೂಜೆ ಸಲ್ಲಿಸಿದ ಅವರು ನಂತರ ಪಟ್ಟಣದ ಮುಳಬಾಗಿಲು ರಸ್ತೆಯಲ್ಲಿನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ನಾಮ ಪತ್ರ ಸಲ್ಲಿಸಿದ್ದಾರೆ.

Read More

ಶ್ರೀನಿವಾಸಪುರ:ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ದಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾವುದೆ ನಿರ್ಧಾರ ತಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಉಹಾಪೋಹಗಳ ಹಿನ್ನಲೆಯಲ್ಲಿ ಅವರನ್ನು ಮನವೊಲಿಸಲು ಅಡ್ಡಗಲ್ ಗ್ರಾಮದ ಅವರ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೆಲಿಕಾಫ್ಟರ್ ನಲ್ಲಿ ಬಂದು ಭೇಟಿ ನೀಡಿ ಕೋಪಶಮನಗೋಳಿಸುವ ಪ್ರಯತ್ನ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷದ ನಾಯಕರ ನಿಲವುಗಳ ಬಗ್ಗೆ ಬೆಸರಗೊಂಡು ಭಾನುವಾರ ‘ಕೋಲಾರದಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಕಾರ್ಯಕ್ರಮದ ಪೂರ್ವತಯಾರಿಗೂ ಬಾರದೆ ಅಂತರ ಕಾಪಾಡಿಗೊಂಡು ಕಾರ್ಯಕ್ರಮಕ್ಕೂ ಬಾರದೆ ಕ್ಷೇತ್ರದಿಂದ ಜನರನ್ನೂ ಕರೆತರುವುದಿಲ್ಲವಂತೆ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಏಕಾಏಕಿ ಗಾಭಾರಿಯಾದ ಕಾಂಗ್ರೆಸ್ ಹೈಕಮಾಂಡ್ ಹಟ ಹಿಡಿದ ರಮೇಶ್ ಕುಮಾರ್ ಅವರ ಮನವೊಲಿಸಲು ರಮೇಶ್ ಕುಮಾರ್ ಸ್ವಗ್ರಾಮಕ್ಕೆ ದಡಬಡಾಯಿಸಿ ಬಂದಿದ್ದಾರೆ.ತಾಲ್ಲೂಕಿನ ಅಡ್ಡಗಲ್ ಗ್ರಾಮದ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಸುರ್ಜೇವಾಲಾ ಮತ್ತು ಹೆಬ್ಬಾಳ ಶಾಸಕ ಹಾಗು ಸಿದ್ದರಾಮಯ್ಯ ಆಪ್ತ ಭೈರತಿ ಸುರೇಶ್ ಆಗಮಿಸಿ ಮಾತುಕತೆ ನಡೆಸಿ ರಮೇಶ್ ಕುಮಾರ್ ಅವರೊಂದಿಗೆ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ಬಿಜೆಪಿ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ದಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಬಿ ಫಾರಂ ಅನ್ನು ಪಡೆದು ನಂತರ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಸೇರಿದಂತೆ ಸಂಘ ಪರಿವಾರ ಮೂಲದ ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್,ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್, ಕೋಲಾರದ ಸಂಸದ ಮುನಿಸ್ವಾಮಿ ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗು ವಿಧಾನಪರಿಷತ್ ಸದಸ್ಯ ರವಿಕುಮಾರ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಭೇಟಿ ಮಾಡಿ ಕೃತಙ್ಞತೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ|| ವೇಣುಗೋಪಾಲ್,ತಾಲೂಕು ಅಧ್ಯಕ್ಷ ತಿಮ್ಮಸಂದ್ರಆಶೋಕರೆಡ್ಡಿ,ಕೋಲಾರ ಅಭ್ಯರ್ಥಿ ವರ್ತೂರ್ ಪ್ರಕಾಶ್ ತಾಲೂಕಿನ ಹಿರಿಯ ಮುಖಂಡ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ಓಭೇನಹಳ್ಳಿ ಮಂಜುನಾಥರೆಡ್ದಿ ಮುಂತಾದವರು ಇದ್ದರು.

Read More