ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನ ಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಗುಂಜೂರುಶ್ರೀನಿವಾಸರೆಡ್ಡಿ ಸಿಕ್ಕಿದೆ, ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುಂಜೂರುಶ್ರೀನಿವಾಸರೆಡ್ಡಿ ಪಕ್ಷೇತರನಾಗಿ ಚುನಾವಣೆ ಎದರಿಸುವೆ ಎಂದು ಕ್ಷೇತ್ರಾದ್ಯಂತ ಪರ್ಯಟನೆ ನಡೆಸಿ ನಿರಂತರವಾಗಿ ತಾಲೂಕಿನ ಜನರೊಂದಿಗೆ ಒಡನಾಟದಲ್ಲಿ ಇದ್ದ ಅವರು ಚುನಾವಣಾ ರಣಕಹಳೆ ಮೊಳಗಿಸಿದ್ದರು.ಇತ್ತಿಚಿಗೆ ಅವರ ಕಾರ್ಯಕರ್ತರು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದು ಬಿಜೆಪಿ ಸೇರುವ ಬಗ್ಗೆ ಶ್ರೀನಿವಾಸರೆಡ್ಡಿ ಮೀನಾ ಮೇಷ ಎಣಿಸುತ್ತಿದ್ದರು ಎನ್ನುತ್ತಾರೆ ಅವರ ಕಾರ್ಯಕರ್ತರು ಬದಲಾದ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರ ಸಲಹೆ ಕಾರ್ಯಕರ್ತರ ಬಲವಂತದ ಮೇರೆಗೆ ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಕಳೆದವಾರ ಬಿಜೆಪಿ ಸೇರ್ಪಡೆಯಾಗಿದ್ದರು.ಗುಂಜೂರುಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಸುದ್ದಿ ಹರಡುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ತಾರಕ್ಕೇರಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅವರು ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕುರಿತಾಗಿ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದರು. ಈ ಮಧ್ಯೆ ರಾಜ್ಯ ಬಿಜೆಪಿ ವರಿಷ್ಠರು ದೆಹಲಿಗೆ…
Author: Srinivas_Murthy
ಶ್ರೀನಿವಾಸಪುರ: ಕಳೆದ ಎರಡು ಚುನಾವಣೆಗಳಲ್ಲಿ ಸೋತಿರುವ ಮಾಜಿ ಶಾಸಕ ಹಾಗು ಜೆ.ಡಿ.ಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಈ ಚುನಾವಣೆಯಲ್ಲಿ ಶತಾಯಗತಾಯ ಗೆಲವು ಸಾಧಿಸಬೇಕು ಎಂದು ತಾಲೂಕಿನಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ನಿರಂತರವಾಗಿ ಒಡಾಡುತ್ತಿದ್ದು ಅವರು ಇಂದು ಶ್ರೀನಿವಾಸಪುರ ಪಟ್ಟಣದಲ್ಲಿ ಸಹಸ್ರಾರು ಜನರೊಂದಿಗೆ ಭರ್ಜರಿ ರ್‍ಯಾಲಿ ಮೂಲಕ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು,ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದಿಂದ ಆರಂಭವಾದ ರೋಡ್ ಶೋ ವಲ್ಲಭಾಯಿ ರಸ್ತೆ ಶಂಕರಮಠದ ವೃತ್ತ,ರಂಗಾರಸ್ತೆ ವೃತ್ತ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಮೂಲಕ ಇಂದಿರಾಭವನ್ ಸರ್ಕಲ್ ನಿಂದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಾರಿಗೂ ಸಾಗಿತ್ತು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಪಟ್ಟಣದ ಬಿ.ಎಲ್. ಕುಟುಂಬದ ಸದಸ್ಯೆ ಪುರಸಭೆ ಮಾಜಿ ಅಧ್ಯಕ್ಷೆ ಚಂದ್ರಕಲಾ ಅವರ ನೇತೃತ್ವದಲ್ಲಿ ಬಿ.ಎಲ್.ಸೀನಾ,ದುರ್ಗಾಪ್ರಸಾದ್,ಗೌತಮ್ ಮುಂತಾದವರು ಸೇರ್ಪಡೆಯಾದರು. ಗಾರೆ ಮೇಸ್ತ್ರೀ ಕುಟುಂಬ ಎಂದು ಖ್ಯಾತಿ ಪಡೆದಿರುವ ಈರಗಕ್ಕಗಾರಿ ನಾಗರಾಜ್ ಮತ್ತು ಸಹೋದರರು,ಬಿಲ್ಡಿಂಗ್ ಕಂಟ್ರಾಕ್ಟರ್ ನೆತ್ತೊಳ್ಳು ಶ್ರೀರಾಮ್ ಕುಟುಂಬದವರು,ಬಾಂಬೆ ನಾಗರಾಜ್,ಮುನಿರಾಜ್,ಕುಂಬಾರ ಸಮುದಾಯದ ಹಿರಿಯ…
ಶ್ರೀನಿವಾಸಪುರ: ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಚುನಾವಣಾ ಆಯೋಗ ಒದಗಿಸಿದೆ ಇದರಂತೆ ಅಯಾ ಭಾಗದ ಬಿ.ಎಲ್.ಒ ಗಳು ಮನೆ ಮನೆಗೆ ತೆರಳಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೈಕರ ಪಟ್ಟಿ ತಯಾರಿಸುತ್ತಿದ್ದಾರೆ.ಇದರಂತೆ ಶ್ರೀನಿವಾಸಪುರ ಪಟ್ಟಣದ ಅಕ್ಬರ್ ರಸ್ತೆಯ ಭಾಗದ ಬಿ.ಎಲ್.ಒ ಶಿಕ್ಷಕ ಗೋಪಾಲಕೃಷ್ಣ ಮನೆ ಮನೆಗೆ ತೆರಳಿ ಚುನಾವಣಾ ಆಯೋಗ ಈ ಬಾರಿ ರಾಜ್ಯದಲ್ಲಿ ಅತಿ ಹಿರಿಯ ಮತದಾರರಿಗೆ ಅನುಕೂಲವಾಗುವಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದಲೆ ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ ಈ ಬಗ್ಗೆ ಆಸಕ್ತಿ ಇರುವಂತ ಸಂಬಂದಿತರು ಅರ್ಜಿ ಸಲ್ಲಿಸಬೇಕು ಅವರಿಗೆ ಮನೆಯಲ್ಲಿ ಮತದಾನ ಸಲ್ಲಿಸಲು ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ನೆಲೆ ನಿಂತಿರುವ ಪುರಾತ ವೈಷ್ಣವ ಪುಣ್ಯಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ಬೃಗ ಮಹಿರ್ಷಿ ಪ್ರತಿಷ್ಠಾಪಿತ ಎನ್ನಲಾಗಿದ್ದು ನಂತರ ಚೋಳರ ಅವಧಿ ಹಾಗೆ ವಿಜಯ ನಗರ ಅರಸರ ಕಾಲದಲ್ಲಿ ದೇವಾಲಯ ಪೂರ್ಣವಾಗಿದೆ ಎನ್ನುತ್ತಾರೆ ದೇವಾಲಯದಲ್ಲಿ ಅತ್ಯಾಕರ್ಷಕ ಮುಖ ಮಂಟಪ ಎತ್ತರದ ಗಾಳಿ ಗೋಪುರ ನೋಡಲು ವೈಶಿಷ್ಟಪೂರ್ಣವಾಗಿದೆ. ವಿಶೇಷ ಏನು ಅಂದರೆ ಬಹುಶಃ ಶ್ರೀನಿವಾಸಪುರ ತಾಲೂಕಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ಹಾಗೆ ಭವ್ಯ ದೇವಾಲಯವಾಗಿದೆದೇವಾಲಯದಲ್ಲಿ ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀ ರಾಮನವಮಿಯಂದು ಆರಂಭಗೊಂಡು ಸುಮಾರು ಒಂಬತ್ತು ದಿನಗಳ ಕಾಲ ವೈಭವೋಪೆತವಾಗಿ ವಾರ್ಷಿಕ ಭ್ರಹ್ಮೋತ್ಸವಗಳು ವೈಖಾಸ ಆಗಮನ ಶಾಸ್ತ್ರದಂತೆ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಚೈತ್ರ ಶುದ್ದ ಚತುರ್ದಶಿಯಂದು ಸಂಜೆ ನಡೆಯುವ ಶ್ರೀ ಸೀತಾರಾಮರ ಕಲ್ಯಾಣ ಅದ್ಭುತವಾಗಿರುತ್ತದೆ ನಾಗಪೆಡೆಯ ವಿಶೇಷವಾದ ಹೂವಿನ ಮಂಟಪದಲ್ಲಿ ಲಕ್ಷ್ಮಣ ಸಮೇತ ಜ್ಞಾನದ ಸಂಕೇತವಾಗಿ ಶ್ರೀಕೋದಂಡರಾಮ ಹಾಗು ಭಕ್ತಿಯ ಸಂಕೇತವಾಗಿ ಸೀತಾ ಮಾತೆಯನ್ನು ಕೂರಿಸಿ ದೇವಾಲಯದ ವಂಶ ಪಾರಂಪರ‍್ಯ ಅರ್ಚಕರು ಕಲ್ಯಾಣೋತ್ಸವ…
ಶ್ರೀನಿವಾಸಪುರ:ಜೆಡಿಎಸ್ ಮುಖಂಡರೊಂದಿಗೆ ಕಾಂಗ್ರೆಸ್ ಮುಖಂಡ ಕೂತಿರುವ ಫೋಟೊ ತಾಲೂಕಿನಾದ್ಯಂತ ವೈರಲ್ ಆಗುತ್ತಿದೆ ಚುನಾವಣೆ ಸಮಯದಲ್ಲಿ WhatsAAp ವ್ಯಾಟ್ಸಾಪ್ ನ ವೈಯುಕ್ತಿಕ ಹಾಗು ಗ್ರೂಪಗಳಲ್ಲಿ ಶರವೇಗದಲ್ಲಿ ಹಂಚಿಕೆಯಾಗುತ್ತಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರಕೂತುಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಒಂದು ಕಾಲದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಲ್ಲಿ ಆಪ್ತರಾಗಿದ್ದ ಶೇಷಾಪುರ ಗೋಪಾಲ್ ಹಾಗು ಅವರ ಆಪ್ತರು ಎನ್ನಲಾದ ಕೆಲ ಕಾಂಗ್ರೆಸ್ ಯುವ ಮುಖಂಡರು ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆಗೆ ಕೂಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ವಿಶೇಷವಾಗಿ ಯಲ್ದೂರು ಹೋಬಳಿಯ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಚರ್ಚೆಗೆ ಗ್ರಾಸವಾಗಿದೆ ಎಂಬ ಮಾತು ಕೇಳಿಬರುತ್ತಿದೆ.ಕಳೆದ ವಿಧಾನಸಭೆ ಚುನಾವಣೆ ನಂತರದಲ್ಲಿ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಯಾಂಪಿನಿಂದ ದೂರಸರಿದಿದ್ದರು ಆನಂತರ ಇಬ್ಬರ ನಡುವೆ ಸ್ನೇಹ ಸಂಪೂರ್ಣವಾಗಿ ಹಳಸಿದ ಪರಿಣಾಮ ವೇದಿಕೆಗಳು ಸಿಕ್ಕಾಗಲೆಲ್ಲ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್…
ಶ್ರೀನಿವಾಸಪುರ:ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಡೆಗಣಿಸಿದರೆ ಪಕ್ಷ ಮೂಲೆಗುಂಪಾಗುತ್ತದೆ ಆಂಧ್ರದಲ್ಲಿ ಕಾಂಗ್ರೆಸ್ ಗೆ ಬಂದಿರುವ ಗತಿ ಬರುತ್ತದೆ ಎಂದು ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈ ಮಾತನ್ನು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಪರವಾಗಿ ಸಂದೇಶ ರವಾನಿಸಿದ್ದಾರೆ.ಕುರುಬಸಮಾಜದವರ ಬೆಂಬಲ ಕೋರಿ ಕನಕ ಭವನದಲ್ಲಿ ಶ್ರೀನಿವಾಸಪುರ ತಾಲೂಕಿನ ಕುರುಬ ಸಮುದಾಯದವರ ಸಭೆ ನಡೆಸಿ ಮಾತನಾಡಿದ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಿ ಅವರ ಸ್ಥಾನಕ್ಕೆ ನಾನು ಬರಬಹುದು ಎಂಬ ಲೆಕ್ಕಾಚಾರ ಯಾರಿಗಾದರೂ ಇದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದರು.ಕೆಲವರು ಸಿದ್ದರಾಮಯ್ಯ ಅವರ ಬೆನ್ನಮೇಲೆ ಕೈಹಾಕಿಕೊಂಡು ಕರೆದುಕೊಂಡು ಹೋಗಿ ವರುಣಾದಲ್ಲಿ ನಿಲ್ಲಿಸಿ ಸೋಲಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು, ಇವತ್ತು ರಾಹುಲ್ ಗಾಂಧಿಗೆ ಸರಿಸಮನಾಗಿ ವಿರೋಧ ಪಕ್ಷಗಳನ್ನು ಎದರಿಸುವ ತಾಕತ್ತು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಇದ್ದು ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ದಿಸಿದರೆ ಹಿಂದುಳಿದ ಅಲ್ಪಸಂಖ್ಯಾತ ಪರಿಶಿಷ್ಟರು ಮತ ನೀಡಿ ಗೆಲ್ಲಿಸುತ್ತಾರೆ ಇದನ್ನು…
ಶ್ರೀನಿವಾಸಪುರ:ಚರಂಡಿ ನೀರು ಹರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ಕಲಹ ರಾಜಕೀಯ ಬಣ್ಣ ಪಡೆದುಕೊಂಡು ಗುಂಪು ಘರ್ಷಣೆಗೆ ಕಾರಣವಾಗಿರುವ ಘಟನೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ಗೌಡತಾತನಗಡ್ಡ ಗ್ರಾಮದಲ್ಲಿ ನಡದಿರುತ್ತದೆ.ಶ್ರೀನಿವಾಸಪುರ ತಾಲೂಕಿನಲ್ಲಿ ಬಹುತೇಕ ನಿಂತುಹೋಗಿದ್ದ ಹೊಡಿ ಬಡಿ ರಾಜಕೀಯಕ್ಕೆ ಗೌಡತಾತನಗಡ್ಡ ಗ್ರಾಮದ ಘಟನೆ ಮತ್ತೆ ನಾಂದಿ ಹಾಡುತ್ತ ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ.ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಬೆಂಬಲಿಗರ ಮಧ್ಯೆ ಮಾರಾ ಮಾರಿನಡೆದು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬರುತ್ತಿದೆ.ತಾಲೂಕಿನ ಗೌಡತಾತನಗಡ್ಡ ಗ್ರಾಮದಲ್ಲಿ ಮಂಗಮ್ಮ ಹಾಗು ಬಾಲಾವತಿ ಮನೆಗಳವರು ಇಬ್ಬರು ದಾಯದಿಗಳಾಗಿದ್ದು ಇತ್ತಿಚಿಗೆ ಗ್ರಾಮದಲ್ಲಿ ನಡೆದಂತ ರಾಜಕೀಯ ಸಭೆಗಳಿಂದ ಎರಡು ಕುಟುಂಬಗಳ ನಡುವೆ ವೈಮನಸ್ಯ ಏರ್ಪಟ್ಟಿದೆ ಇದು ಬೂದಿ ಮುಚ್ಚಿದ ಕೆಂಡದಾಂತೆ ಇರುವಾಗಲೆ ಮನೆ ಮುಂದೆ ಚರಂಡಿ ನೀರು ಹರಿಯುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿಕೊಂಡಿದ್ದಾರೆ ಎರಡು ಕುಟುಂಬಗಳ ಜಗಳ ಗ್ರಾಮದ ರಾಜಕೀಯ ಪಕ್ಷದ ಕಾರ್ಯಕರ್ತರ ನಡುವೆ…
ಕೋಲಾರ:ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್.ಸಿ ವಿಭಾಗದ ಉಪಾಧ್ಯಕ್ಷರಾಗಿ ಶ್ರೀನಿವಾಸಪುರ ತಾಲೂಕಿನ ಪಣಸಮಾಕನಹಳ್ಳಿ ನರಸಿಂಹಮೂರ್ತಿ ನೇಮಕ ಗೊಂಡಿರುತ್ತಾರೆ.ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ನರಸಿಂಹಮೂರ್ತಿ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಸೇವೆ ಗುರುತಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಹಾಗು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೋಲಾರ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಜಯದೇವ್ ಅನುಮೋದನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಧರ್ಮಸೇನ ಅವರು ನನ್ನ ಮೆಲೆ ವಿಶ್ವಾಸ ಇಟ್ಟು ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್.ಸಿ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ ಅವರ ಸೂಚನೆಯಂತೆ ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಸಂಘಟನೆಗೆ ಒತ್ತು ನೀಡುವ ಮೂಲಕ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಪಕ್ಷ ಸಂಘಟನೆ ಮಾಡುವುದಾಗಿ ನರಸಿಂಹಮೂರ್ತಿ ತಿಳಿಸಿದರು.
ನ್ಯೂಜ್ ಡೆಸ್ಕ್:ಬೆಂಗಳುರು ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಾರ್ಚ್ 30 ರಿಂದ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್‌ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬೆಂಗಳೂರು ಮೆಟ್ರೋ ರೈಲ್ವೆ ನಿಗಮ(ಬಿಎಂಆರ್ಸಿಎಲ್) ನೂತನ ವ್ಯವಸ್ಥೆಯನ್ನು ಜನರಿಗೆ ನೀಡಿದೆ. ಒಂದು ದೇಶ, ಒಂದು ಕಾರ್ಡ್ ಘೋಷಣೆ ಅಡಿ ಈ ನೂತನ ವ್ಯವಸ್ಥೆ ಜಾರಿ ಮಾಡಲಾಗಿದೆ.ಬೆಂಗಳೂರು ಮೆಟ್ರೋ ರೈಲು ನಿಗಮ ಆರ್‌ಬಿಎಲ್ ಬ್ಯಾಂಕ್ ಸಹಯೋಗದಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದ್ದು ಕಾರ್ಡನ್ನು ಡೆಬಿಟ್, ಕ್ರೆಡಿಟ್ ಕಾರ್ಡ್‌ನಂತೆ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ ಕೇವಲ ಮೆಟ್ರೋ ಅಷ್ಟೇ ಅಲ್ಲದೇ ಮೆಟ್ರೋದಿಂದ ಹೊರೆಗೂ ಕಾರ್ಡ್ ಅನ್ನು ಬಳಕೆ ಮಾಡಬಹುದು. ಕಾರ್ಡ್ ಬಳಸಿ ಶಾಪಿಂಗ್, ಇಂಧನ ಖರೀದಿ, ಟೋಲ್ ಶುಲ್ಕ ಪಾವತಿ ಸೇರಿದಂತೆ ಇತರೆ ಪಾವತಿಗಳನ್ನು ಮಾಡಬಹುದಾಗಿದೆ ಎನ್ನಲಾಗಿದ್ದು ಕಾರ್ಡ್ ಬಳಕೆಗಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆರ್‌ಬಿಎಲ್ ಬ್ಯಾಂಕ್ ನಿಂದ ಪಿಓಎಸ್ ಮೆಷಿನ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಪ್ರಯಾಣಿಕರಿಗೆ ಈ…
ಶ್ರೀನಿವಾಸಪುರ:ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ ಎಂದು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಪರಿಚಿತರಾಗಿದ್ದ ಗುಂಜೂರು ಶ್ರೀನಿವಾಸರೆಡ್ದಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಈ ಬೆಳವಣಿಗೆ ಶ್ರೀನಿವಾಸಪುರ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಕರ್ನಾಟಕದ ಪ್ರಭಾವಿ ಮಂತ್ರಿಗಳಾದ ಭೈರತಿಬಸವರಾಜ್,ಡಾ.ಅಶ್ವಥನಾರಯಣ್,ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಜಯಚಂದ್ರಾರೆಡ್ದಿ,ಹಿರಿಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾ,ಜನರಲ್ ಸೆಕೆಟ್ರಿ ಸಿದ್ದರಾಜ್, ಸಮ್ಮುಖದಲ್ಲಿ ಬೆಂಗಳೂರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನಾಥ ಭವನದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ಗುಂಜೂರು ಶ್ರೀನಿವಾಸರೆಡ್ದಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್,ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಸಂದ್ರಆಶೋಕ್ ರೆಡ್ದಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಅತ್ತಿಕುಂಟೆರಾಜಶೇಖರರೆಡ್ದಿ,ಅಹಿಂದ ಮುಖಂಡ ಶ್ರೀರಾಮ್,ಬಂಗವಾದಿನಾಗರಾಜ್,ಗೌವನಪಲ್ಲಿಶೇಖರ್,ಕೊಟ್ರಗೂಳಿನಾರಯಣಸ್ವಾಮಿ,ಬಂಗವಾದಿಶಿವಶಂಕಗೌಡ,ಯಲ್ದೂರು ಶಿವಣ್ಣ,ಹಳೇಪೆಟೆ ಮುನಿರೆಡ್ಡಿ ಮುಂತಾದವರು ಇದ್ದರು. ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಅಶ್ವಥನಾರಯಣ್ ಶ್ರೀನಿವಾಸರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಶ್ರೀನಿವಾಸಪುರ ಕ್ಷೇತ್ರದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಅವರಿಗೆ ಪಕ್ಷ ಉನ್ನತ ಸ್ಥಾನ ನೀಡುವುದರೊಂದಿಗೆ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತದೆ ಎಂದರು. ಸಚಿವ ಭೈರತಿಬಸವರಾಜ್ ಮಾತನಾಡಿ ಗುಂಜೂರು ಶ್ರೀನಿವಾಸರೆಡ್ದಿ ಉತ್ತಮ…


