ಶ್ರೀನಿವಾಸಪುರ: ಬಿರುಗಾಳಿ ಸಮೇತದ ಮಳೆಯ ಆರ್ಭಟಕ್ಕೆ ಶ್ರೀನಿವಾಸಪುರ ಭಾಗದ ಜೀವನಾಡಿ ಮಾವಿನಕಾಯಿಗಳು ನೆಲದ ಪಾಲಾಗಿದೆ ಸುಮಾರು ಒಂದು ಗಂಟೆಯ ಕಾಲ ಬೀಸಿದಂತ ಬಿರುಗಾಳಿಗೆ ಬಾರಿಗಾತ್ರದ ಮರಗಳು ನೆಲಕ್ಕೂರಳಿದೆ.
ಭಾನುವಾರ ಸಂಜೆ ಬಿರುಸಾದ ರಕ್ಕಸ ಗಾಳಿ ಮಳೆಯಿಂದ ಇಲ್ಲಿನ ರೈತಾಪಿ ಜನರ ವಾರ್ಷಿಕ ಜೀವನಾಡಿ ಬೆಳೆಯಾದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ ಗಂಟೆಗೆ ಅಂದಾಜು 30-40 ಕೀ.ಮಿ ವೇಗದಲ್ಲಿ ಬೀಸಿದಂತ ಗಾಳಿಯ ರಭಸಕ್ಕೆ ವಿಶೇಷವಾಗಿ ರೋಣೂರು ಹೋಬಳಿ ಕಸಬಾ ಹಾಗು ಯಲ್ದೂರು ಹೋಬಳಿಯ ಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಮಾವು ಬೆಳೆಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಟಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದೆ.ಶೇಡ್ ಮನೆಗಳ ತಗಡಿನ ರೇಖುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿದೆ.
ಇದ-ಬದ್ದ ಬೆಳೆಯೂ ಹೋಯಿತು
ಕಳೆದ ಎರಡು ಮೂರು ತಿಂಗಳ ಹಿಂದೆ ಬಿದ್ದಂತ ಆಲಿಕಲ್ಲು ಮಳೆಯಿಂದ ಶೇ%60 ರಷ್ಟು ಮಾವು ಬೆಳೆ ಹೂ ಹಾಗು ಪಿಂದೆ ಹಂತದಲ್ಲಿಯೇ ಹಾಳಾಗಿತ್ತು ಇದ್ದ 30-40 ಭಾಗದಷ್ಟು ಬೆಳೆ ಇನ್ನೇನು ಹತ್ತು ಹದಿನೈದು ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಮಾವು ಬೆಳೆ ಗಾಳಿಯ ರಭಸಕ್ಕೆ ಹಾಗು ಕೆಲವೊಂದು ಗ್ರಾಮಗಳಲ್ಲಿ ಆಲಿಕಲ್ಲು ಬಿದ್ದು ನೆಲದ ಪಾಲಾಗಿದೆ ಎಂದು ರೈತ ಸೂರ್ಯನಾರಯಣ ಹೇಳುತ್ತಾರೆ
ಪರಿಹಾರಕ್ಕೆ ಅಗ್ರಹ
ಇಂದು ಬಿದ್ದ ಬಿರುಗಾಳಿ ಸಮೇತ ಮಳೆಯಿಂದ ಮಾವು ಬೆಳೆ ನಷ್ಟಕ್ಕೆ ಒಳಗಾಗಿದ್ದು ಮಾವುಬೆಳೆಗಾರರಿಗೆ ಸರ್ಕಾರ ತೋಟಗಾರಿಕೆ ಹಾಗು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಬೆಳೆಹಾನಿ ಪರಿಹಾರ ಕೊಡಬೇಕು ಎಂದು ಮಾವು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ನವೀನ್ ಕುಮಾರ್ ಸರ್ಕಾರವನ್ನು ಹಾಗು ಇದಕ್ಕೆ ಸ್ಥಳೀಯ ಶಾಸಕರು ವಿಧಾನಪರಿಷತ್ ಸದಸ್ಯರು ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



