ಶ್ರೀನಿವಾಸಪುರ:ಮತದಾನ ಮುಗಿದಂತೆ ಎಕ್ಸಿಟ್ ಪೋಲ್ಗಳ ಸಮೀಕ್ಷೆಗಳು ಹೊರಬಿದ್ದಿವೆ.ಚುನಾವಣೆ ಫಲಿತಾಂಶಕ್ಕೆ ಇನ್ನೊಂದೇರಡು ದಿನ ಸಮಯ ಇದೆ, ಈಗೇನಿದ್ದರು ಅಭ್ಯರ್ಥಿ ಗೆಲ್ಲುವ ಬಗ್ಗೆ ಬೆಟ್ಟಿಂಗ್ ಮಾತು ಹೈವೋಲ್ಟೇಜ್ ಕ್ಷೇತ್ರಗಳಾದ ಶ್ರೀನಿವಾಸಪುರ,ಚಿಂತಾಮಣಿ,ಕೋಲಾರದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ.ಐಪಿಎಲ್ ಬೆಟ್ಟಿಂಗ್ ಮೀರಿಸುವ ರೀತಿ ಲಕ್ಷ ಲಕ್ಷಗಳಲ್ಲಿ ಯಾವ ಪಕ್ಷ ಗೆಲ್ಲುತ್ತೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ.
ವಿಶೇಷವಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್(ಸ್ವಾಮಿ) ಹಾಗೂ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ(ರೆಡ್ಡಿ) ಪರವಾಗಿ ಬೆಟ್ಟಿಂಗ್ ಹೆಚ್ಚಾಗಿ ನಡೆಯುತ್ತಿದೆ.
ಕಳೆದ ಇಪ್ಪತ್ತು-ಇಪ್ಪತೈದು ದಿನಗಳಿಂದ ಸ್ನೇಹತ್ವ ಬಂಧುತ್ವ ಬದಿಗಿಟ್ಟು ಆಜನ್ಮ ವೈರಿಗಳಂತೆ ಚುನಾವಣೆ ನಡೆಸಿದಂತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈಗ ಒಂದಾಗಿದ್ದಾರೆ,ಸಿಗರೇಟಿನ ಧಮ್ ಏಳೆಯುತ್ತ ಕಾಫಿ ಕುಡಿಯುತ್ತ ಅದು ಹಾಗಲ್ಲ ನಿಮ್ಮದು ವರ್ಕೌಟ್ ಆಗಿಲ್ಲ ನೀವು ಫೈಲೂರು ಆದ ಜಾಗದಲ್ಲಿ ನಾವು ವರ್ಕೌಟ್ ಮಾಡಿ ಮತ ಗಳಿಸಿದ್ದೀವಿ ಆ ಬೂತ್ ನಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ ಇಲ್ಲ ನೊ ಚಾನ್ಸ್ ನಮ್ಮವರೆ ಗೆಲ್ತಾರೆ ಎಂದು ಚಾಲೆಂಜಿಂಗ್ ಮಾತುಗಳು ಆಡುತ್ತಿದ್ದಾರೆ, ಹಾಗದ್ರೆ ಕಟ್ತಿಯಾ ಎಷ್ಟಕ್ಕೆ ಎಷ್ಟಿರಲಿ ನಂದು ಇಷ್ಟಾದ್ರೆ ನಿಂದು ಎಷ್ಟು ಎಂಬ ಮಾತುಗಳು ಕಾಫಿ ಅಂಗಡಿಗಳು ಹೋಟೆಲ್ ಜ್ಯೂಸ್ ಪಾರ್ಲರಗಳ ಬಳಿ ನಡೆಯುತ್ತಿರುವಂತಹದು.ಅಭ್ಯರ್ಥಿ ಗೆಲ್ಲುವ ಕುರಿತಾಗಿ ಕಾರ್ಯಕರ್ತರು ಸುಡು ಬಿಸಲಿಗಿಂತ ಹಾಟ್ ಆಗಿ ರಿಯಾಕ್ಟ್ ಆಗುತ್ತಾರೆ ದುಡ್ಡಿಗೆ ದುಡ್ಡು ಎನ್ನುವಂತೆ ಮಾತುಗಳಿಗೇನು ಕಡಿಮೆ ಇಲ್ಲ ಎಂದು ಕಾರ್ಯಕರ್ತರು ಬೆಟ್ಟಿಂಗ್ ಬಹಿರಂಗವಾಗಿ ಕಟ್ಟೋದಿಲ್ಲ, ಎಲ್ಲವು ಗುಟ್ಟು ಗುಟ್ಟಾಗಿ ನಡೆದು ಎಲೆಕ್ಷನ್ ಹೆಸರಲ್ಲಿ ನಾವು ನಾವೆ ಸಾರ್ ಎಂದು ಎಂದು ಫ್ರೆಂಡ್ಲಿ ಮಾತುಗಳನ್ನಾಡುತ್ತಾರೆ.
ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬೀಳಲು ಇನ್ನೊಂದು ದಿನ ಬಾಕಿ ಇದೆ ಯಾರು ಗೆಲ್ತಾರೊ ಯಾರು ಸೋಲ್ತಾರೊ, ಯಾರಿಗೆ ಲಾಭನೊ ಯಾರಿಗೆ ನಷ್ಟ ಅಗುತ್ತದೊ ಇದಕ್ಕೆ ಮತ ಎಣಿಕೆ ಆಗುವವರಿಗೂ ಕಾಯಲೇ ಬೇಕು.ಬೆಟ್ಟಿಂಗ್ ಗೆದ್ದವನು ಈರಭದ್ರ ಸೋತವನು ಕೊಡಂಗಿ ಆಟ ಇದು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17