ಶ್ರೀನಿವಾಸಪುರ: ದೇವಾಲಯಗಳನ್ನು ಭಕ್ತರ ನಂಬಿಕೆಗಳು ಅವರ ಆಶಯದಂತೆ ದಾರಿ ದೀಪಗಳಾಗಿ ಮತ್ತು ಭಾವನೆಗಳ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೋಡಿಮಠದ ಶ್ರೀ ಗಳು ಹೇಳಿದರು ಅವರು ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮುಸ್ಲಿಂ ಕುಟುಂಬ ನೂತನವಾಗಿ ನಿರ್ಮಿಸಿರುವ ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.ದೇವಾಲಯ ನಿರ್ಮಾಣ ಮಾಡಿರವಂತ ಶಫಿ ಕುಟುಂಬದ ಕಾರ್ಯ ಸಮಸ್ತ ಮನಕುಲಕ್ಕೆ ಆದರ್ಶವಾಗಿದ್ದು ಸೌರ್ಹಾದತೆಯ ಕೆಲಸ ಎಂದು ಶ್ಲಾಘಿಸಿದರು.
ಪ್ರಪಂಚಕ್ಕೆ ಮಳೆಯಿಂದ ಆಪತ್ತು!
ಮಳೆಯಿಂದ ಇನ್ನಿಲ್ಲದ ಅನಾಹುತಗಳು ಪ್ರಪಂಚವನ್ನು ಕಾಡುತ್ತದೆ ಒಂದೇರಡು ರಾಷ್ಟ್ರಗಳು ಮಳೆಯ ನೀರಿನಲ್ಲಿ ಮುಳಗಿ ಹೋಗುತ್ತದೆ,ಪ್ರಪಂಚಕ್ಕೆ ಜಾಗತೀಕ ಯುದ್ದದ ಭೀತಿ ಇದೆ ಇದರ ಪರಿಣಾಮ ನಮ್ಮ ರಾಷ್ಟ್ರದ ಮೇಲೂ ಬೀರಲಿದೆ ವೀಪರಿತ ದುಖ ಸಾವು ನೋವುಗಳು ಕಾಣುವಂತಾಗುತ್ತದೆ,ಒಡಿಶಾ ರೈಲು ದುರಂತದಂತೆ ಬೇರೆ ಬೇರೆ ರಿತೀಯ ಅವಘಡಗಳು ಸಂಭವಿಸಲಿದೆ, ಭೂಮಿ ಬಾಯಿ ತೆರೆಯುತ್ತದೆ ಕಂಪನಗಳು ಆಗುತ್ತದೆ ಇದಕ್ಕೆ ಭಗವಂತನ ಪೂಜೆ ಧ್ಯಾನವೆ ಪರಿಹಾರ ಎಂದ ಅವರು ಮತೀಯ ಸಮಸ್ಯೆಯೂ ಇದೆ ಎಂದು ನುಡಿದರು.
ದೇವಾಲಯದ ಆವರಣದಲ್ಲಿ ರಾಜಕೀಯ ವಿಚಾರ ಬೇಡ ಎಂದ ಅವರು ಆರು ತಿಂಗಳ ಹಿಂದೆ ನುಡಿದಂತೆ ರಾಜ್ಯದಲ್ಲಿ ಯಾವುದೆ ಆಸರೆ ಇಲ್ಲದಂತೆ ಒಂದೇ ಪಕ್ಷ ಅಧಿಕಾರ ನಡೆಸುತ್ತಿದೆ ಇನ್ನಿತರೆ ರಾಜಕೀಯ ವಿಚಾರಗಳು ದೇವರ ಕಾರ್ಯಕ್ಕೆ ಬಂದಿರುವಾಗ ಹೇಳುವುದು ಸೂಕ್ತ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣ ಮಾಡಿದ ಶಫಿ ಕುಟುಂಬ ಸದಸ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು, ಈ ಸಂದರ್ಭದಲ್ಲಿ ನಾಟಿ ವೈದ್ಯ ಹೈದರ್ ಸಾಬ್, ದೇವಾಲಯಕ್ಕೆ ಜಮೀನು ದಾನ ನೀಡಿದ ನಿವೃತ್ತ ಪ್ರೋಫೇಸರ್ ವಿಜೇಂದ್ರ ಹಾಗು ಅವರ ಸಹೋದರ ಸುರೇಂದ್ರ ಮತ್ತು ಕುಟುಂಬ ಗ್ರಾಮದ ಮುಖಂಡರಾದ ಲಕ್ಷ್ಮೀಪುರ ಜಗದೀಶ್, ಪೇಪರ್ ವೆಂಕಟೇಶ್, ಕೆನರಾಬ್ಯಾಂಕ್ ಗೋವಿಂದ್ ಪತ್ರಕರ್ತ ನಾಗೇಂದ್ರ,ಶ್ರೀನಿವಾಸ್ ಮುಂತಾದವರು ಇದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16