ಶ್ರೀನಿವಾಸಪುರ:ಗ್ರಾಮದೇವತೆ ಶ್ರೀಚೌಡೇಶ್ವರಿ ದೇವರಿಗೆ ಜೇಷ್ಠಮಾಸದ ಅಮಾವಸ್ಯೆ ಪೂಜೆಯನ್ನು ಸತ್ಸಂಗ ಬಳಗದ ಗುರುಗಳಾದ ಸತ್ಯಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸತ್ಯಮೂರ್ತಿಯವರು ಮಾತನಾಡಿ ಜೇಷ್ಠಮಾಸ ಅಂತ್ಯ ಹಾಗು ಆಷಾಡ ಮಾಸದ ಆರಂಭದಲ್ಲಿ ಶಕ್ತಿದೇವತೆಗೆ ಅನಾವರಣ ಪೂಜೆ ಮಾಡಲಾಗುತ್ತದೆ ಇದೊಂದು ವೈಶಿಷ್ಟಪೂರ್ಣವಾದ ಲೋಕಕಲ್ಯಾಣಾರ್ಥವಾಗಿ ಮಾಡುವಂತ ಪೂಜೆಯಾಗಿದ್ದು ಗ್ರಾಮದ ಸುಹಾಸಿನಿಯರಿಂದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರೀಚಕ್ರ ಪೂಜೆಯಲ್ಲಿ ಒಂಬತ್ತು ಆವರಣಗಳಲ್ಲಿ ನವ ದುರ್ಗೆಯರನ್ನು ಅಹ್ವಾನಿಸಿ ಪೂಜಿಸಲಾಗುತ್ತದೆ ಒಂಬತ್ತು ಬಾರಿ ಅಭಿಷೇಕ ಒಂಬತ್ತು ಬಾರಿ ಆರತಿ ಮತ್ತು ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ಅಲಂಕಾರ ಮಾಡಿ ಲೋಕದಲ್ಲಿನ ಸಮಸ್ಯೆಗಳು ದೂರವಾಗಿ ಜನತೆ ಸುಖ ಶಾಂತಿಃ ನೆಮ್ಮದಿಯ ಜೀವನ ಮಾಡಲು ನೇರವಾಗುವಂತೆ ದೇವರನ್ನು ಕೋರಲಾಗುತ್ತದೆ ಎಂದರು.
ಸೋಮವಾರದಿಂದ ಶಂಕರ ಮಠದಲ್ಲಿ ವಾರಾಹಿ ನವರಾತ್ರಿ ಉತ್ಸವಗಳು ಒಂಬತ್ತು ದಿನಗಳಕಾಲ ನಡೆಯಲಿದ್ದು ಪ್ರತಿದಿನ ಸಂಜೆ ಪೂಜಾಕಾರ್ಯಕ್ರಮ ಹಾಗು ಪ್ರವಚನ ಕಾರ್ಯಕ್ರಮ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಶಾಂತಮ್ಮ, ಸತ್ಸಂಗ ಬಳಗದ ಸಂಚಾಲಕಿ ಮಂಗಳಾ,ಎಸ್.ಎಸ್.ವಿ.ಎಸ್.ಟ್ರಸ್ಟ್ ಮುಖ್ಯಸ್ಥರಾದ ವನಜಾಕ್ಷಮ್ಮ,ಧನಲಕ್ಷ್ಮೀ,ಮಾಲಿನಿ, ಮುನಿಯಮ್ಮ, ಚಂದ್ರೇಗೌಡ,ಪ್ರಧಾನ ಅರ್ಚಕ ವೇದ ಬ್ರಹ್ಮಸುಬ್ರಮಣ್ಯ,ಮುಂತಾದವರು ಪಾಲ್ಗೋಂಡಿದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



