ಶ್ರೀನಿವಾಸಪುರ: ಟ್ರಾಫಿಕ್ ಸಮಸ್ಯೆಯಿಂದ ಯುವನೊರ್ವ ಟಿಪ್ಪರ್ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿರುತ್ತದೆ.
ಲಾರಿಗೆ ಸಿಲುಕಿ ಮೃತ ಪಟ್ಟ ದ್ವಿಚಕ್ರ ವಾಹನ ಸವಾರನನ್ನು ಶ್ರೀನಿವಾಸಪುರ ಪಟ್ಟಣದ ದಿಗವಪಲ್ಲಿ ಚಲಪತಿ@ಥಿಯೆಟರ್ ಚಲಪತಿ ಮಗ ರಕ್ಷಿತ(23) ಎಂದು ಗುರುತಿಸಲಾಗಿದೆ.ಮೃತ ಯುವಕ ರಕ್ಷಿತ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಊರಿಗೆ ಬಂದಿದ್ದು ಬಾಲ್ಯ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಮಿಡ್ಲ್ ಸ್ಕೂಲ್ ಆವರಣಕ್ಕೆ ಹೋಗುತ್ತಿರಬೇಕಾದರೆ ಅಪಘಾತ ಆಗಿದೆ ಎನ್ನುತ್ತಾರೆ.
ಮಿಡ್ಲ್ ಸ್ಕೂಲ್ ಆವರಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರಬೇಕಾದರೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಯುವಕ ರಕ್ಷಿತ್ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಸವರಿಕೊಂಡು ಹೋಗಿದೆ ಇನ್ನೊಂದಡೆ ಹಬ್ಬಕ್ಕೆ ತೆಂಗಿನ ಕಾಯಿ ಮಾರುವ ಆಟೋ ನಿಂತಿದ್ದು ಇಕ್ಕಾಟಾದ ಜಾಗದಲ್ಲಿ ದ್ವಿಚಕ್ರ ವಾಹನ ಆಯಾ ತಪ್ಪಿದೆ ಸವಾರ ರಕ್ಷಿತ್ ಅನಾಮತ್ ಲಾರಿ ಚಕ್ರದಡಿ ಬಿದ್ದಿರುತ್ತಾನೆ ಚಲಿಸುತ್ತಿದ್ದ ಲಾರಿ ಚಕ್ರಕ್ಕೆ ಅರ್ದ ದೇಹ ಸಿಲುಕಿದೆ ಟಿಪ್ಪರ್ ಲಾರಿ ಯುವಕನ ಮೆಲೆ ಹತ್ತಿದ್ದು ಕೆಲ ಹೊತ್ತು ನರಳಾಡಿ ನರಳಾಡಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.ಸಾರ್ವಜನಿಕವಾಗಿ ನಡೆದ ಘಟನೆಯಿಂದ ಪ್ರತ್ಯಕ್ಷವಾಗಿ ನೋಡಿದ ಜನ ತತ್ತರಿಸಿ ಹೋಗಿದ್ದಾರೆ,ಅಪಘಾತವಾದಾಗ ಮೃತ ಯುವಕ ಕೆಲ ಸೆಕೆಂಡುಗಳ ಕಾಲ ರಸ್ತೆ ಮೆಲೆ ನರಳಾಡಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು ಮನ ಕಲುಕುವಂತಿದೆ.ಘಟನೆ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲುಮಾಡಿಕೊಂಡಿದ್ದಾರೆ.
ಪೋಲಿಸರ ನಿರ್ಲಕ್ಷ್ಯ ಹದಗೆಟ್ಟ ಟ್ರಾಫಿಕ್
ಪಟ್ಟಣದಲ್ಲಿ ಸಂಪುರ್ಣವಾಗಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ ಮಕ್ಕಳು ವೃದ್ಧರು ಒಡಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿ ಫುಟ್ ಬಾತ್ ಅಲ್ಲ ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ವ್ಯವಹಾರ ಮಾಡಲಾಗುತ್ತಿದೆ,ಇದಕ್ಕೆ ಪ್ರತಿ ಅಂಗಡಿ ವ್ಯಾಪಾರಿಯ ಹಿಂದೆ ಮರಿ ರಾಜಕಾರಣಿ ಇನ್ಫುಲಿಯನ್ಸ್ ಹಾಗಾಗಿ ಸ್ಥಳೀಯ ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳತಿದ್ದಾರೆ.ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯ ಇಂದಿರಾಭವನ್ ವೃತ್ತ,ಎಸ್.ಬಿ.ಎಂ ಭಾಗದಲ್ಲಿ,ವಾಸವಿ ದೇವಾಲಯದ ಬಳಿ ಬಹುತೇಕ ತರಕಾರಿ ಅಂಗಡಿಗಳು ರಸ್ತೆಯಲ್ಲೆ ವ್ಯಾಪಾರ ನಡೆಸುವುದು!
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17