ಶ್ರೀನಿವಾಸಪುರ:ದೇವರಾಜ್ ಅರಸ್ ರಾಜ್ಯ ಕಂಡಂತ ಶ್ರೇಷ್ಠ ಸಮಾಜ ಸುಧಾರಕ ಹಾಗೆ ಅವರು ಮುಖ್ಯಮಂತ್ರಿಯಾಗಿ ಹಲವಾರು ಕಾನೂನುಗಳನ್ನು ತಂದು ಹಿಂದುಳಿದ ಸಮಾಜಗಳಿಗೆ ಶಕ್ತಿ ತುಂಬಿದರು ಎಂದು ತಹಶೀಲ್ದಾರ್ ಶೀರಿನ್ ತಾಜ್ ಹೇಳಿದರು ಅವರು ಇಂದು ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರಾಜ್ ಅರಸ್ ಕೇವಲ ರಾಜಕಾರಣಿ, ಮುಖ್ಯಮಂತ್ರಿ ಅಷ್ಟೆ ಆಗಿರದೆ,ಸಾಮಾಜಿಕ ಬದಲಾವಣೆಯ ಹರಿಕಾರರಾಗಿ,ತತ್ವಜ್ಞಾನಿಯಾಗಿ,ಸಮಾಜದ ಚಿಂತಕರಾಗಿದ್ದರು ಎಂದರು.
ತಾಲೂಕು ಹಿಂದುಳಿದ ಸಮಾಜಗಳ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ ದೇವರಾಜ್ ಅರಸ್ ಹೆಸರೇ ಹೇಳುವಂತೆ ಧಿಮಂತಿಕೆ ಇರುವ ಆಡಳಿತಗಾರರಾಗಿ ಕರ್ನಾಟಕ ರಾಜ್ಯದಲ್ಲಿ ಮೌನ ಸಾಮಾಜಿಕ ಕ್ರಾಂತಿ ಪ್ರತಿಪಾದಕರಾಗಿ
ಜನಸಾಮನ್ಯರ,ತುಳಿತಕ್ಕೊಳಗಾದವರ ಧ್ವನಿಯಾಗಿ ಅಂತಹವರ ಪರವಾಗಿ ನಿಂತು ಕರ್ನಾಟಕದ 8 ನೇ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸುದೀರ್ಘಕಾಲ ಕ್ರಾಂತಿಕಾರಿ ಮುಖ್ಯಮಂತ್ರಿಯಾಗಿ ಧಿಮಂತ ಆಡಳಿತಗಾರರಾಗಿ ಹಲವಾರು ಜನಪಯೋಗಿ ಸುಧಾರಣೆಗಳನ್ನು ತಂದ ಅವರು ಸ್ವತಃ ಭೂಮಾಲಿಕರಾಗಿ ತಮ್ಮ ಆಡಳಿತಾವಧಿಯಲ್ಲಿ ಭೂಸುಧಾರಣೆ ಕಾಯ್ದೆ ತಂದವರು,ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಉಳ್ಳವರು ನಡೆಸುತ್ತಿದ್ದ ಲೇವಾದೇವಿ ವ್ಯವಹಾರಕ್ಕೆ ಕಾನುನಾತ್ಮಕ ಲಗಾಮು ಹಾಕುವ ಮೂಲಕ ಶ್ರೀಮಂತ ಮತ್ತು ಬಡವರ ನಡುವಿನ ಕಂದಕವನ್ನು ಕಡಿಮೆ ಮಾಡಿ,ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅವರ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಸಮಾಜಗಳ ಮಕ್ಕಳ ಶಿಕ್ಷಣದ ಅಭಿವೃದ್ದಿಗೆ ಒತ್ತು ನೀಡಿದ ಅವರು ನಿರುದ್ಯೋಗಿ ಪದವೀಧರರಿಗೆ ಸ್ಟೈಪೆಂಡರಿ ಕೊಡುವ ಮೂಲಕ ಯುವಕರು ವಿದ್ಯಾವಂತರಾಗಲು ಪ್ರೋತ್ಸಾಹ ನೀಡಿದರು.
ಉಳುವವನಿಗೆ ಭೂಮಿಯಂತಹ ಮಹತ್ತರ ಯೋಜನೆಗಳನ್ನು ಜಾರಿಗೆ ತಂದು ಬಡ ಶೋಷಿತ ಸಮಾಜಗಳನ್ನು ಮೇಲೆತ್ತುವ ಅವರ ದೂರದೃಷ್ಟಿ ಸರ್ವಕಾಲಕ್ಕೂ ಜನಮನ್ನಣೆ ಪಡೆದಿವೆ,ನೀರಾವರಿ ಕ್ಷೇತ್ರದಲ್ಲೂ ಅವರು ಕೈಗೊಂಡಂತ ನಿರ್ಧಾರಗಳು ರೈತ ಸಮುದಾಯಕ್ಕೆ ಅಪಾರ ಸಹಾಯ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ,ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ,ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ,ಬೆಸ್ಕಾಂ ಅಭಿಯಂತರ ರಾಮತಿರ್ಥಂ,ನವೀನ್ ಮುಂತಾದವರು ಇದ್ದರು,
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16