ನ್ಯೂಜ್ ಡೆಸ್ಕ್: ತಿರುಮಲಕ್ಕೆ ಹೋಗುವ ಅಲಿಪಿರಿ ಕಾಲ್ನಡಿಗೆ ಮೆಟ್ಟಿಲು ದಾರಿಯಲ್ಲಿ ಕಾಡು ಪ್ರಾಣಿ ದಾಳಿಗೆ ಸಿಲುಕಿ ಮಗುವೊಂದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿರುತ್ತದೆ.
ಶುಕ್ರವಾರ ರಾತ್ರಿ ತಡ ಸಂಜೆ 7 ಗಂಟೆ ಸಮಯದಲ್ಲಿ ತಿರುಮಲ ಬೆಟ್ಟವನ್ನು ಕಾಲ್ನಡಿಗೆ ಮೂಲಕ ಹೋಗುತ್ತಿದ್ದ ನೆಲ್ಲೂರಿನ ಕುಟುಂಬದ ಸದಸ್ಯೆ ತನ್ನ ಕುಟುಂಬದೊಂದಿಗೆ ವೆಂಕಟೇಶ್ವರ ಆರು ವರ್ಷದ ಬಾಲಕಿ ಲಕ್ಷಿತಾಳ ಮೇಲೆ ಕಾಡು ಪ್ರಾಣಿ ದಾಳಿ ಮಾಡಿ ಕಾಡಿಗೆ ಎಳೆದೊಯ್ದಿದೆ. ಬೆಳಗ್ಗೆ ಅಲಿಪಿರಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಬಾಲಕಿಯ ಅರ್ಧ ಶವ ಪತ್ತೆಯಾಗಿದ್ದು,ಬಾಲಕೀಯನ್ನು ಕಾಡು ಪ್ರಾಣಿ ಅರ್ದಬಂರ್ದ ತಿಂದಿರ ಬಹುದು ಎಂದು ಶಂಕಿಸಲಾಗಿದೆ.
ಈ ಘಟನೆ ಕುರಿತಾಗಿ ಟಿಟಿಡಿ ಇಒ ಧರ್ಮ ರೆಡ್ಡಿ ಪ್ರತಿಕ್ರಿಯಿಸಿದ್ದು ಕಾಡುಪ್ರಾಣಿ ದಾಳಿಗೆ ಬಾಲಕಿ ಸಾವನ್ನಪ್ಪಿರುವುದು ತೀವ್ರ ನೋವಿನ ವಿಚಾರ ಎಂದಿರುತ್ತಾರೆ. ಈ ಹಿಂದೆ ಬಾಲಕನಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟಂತೆ, ಶುಕ್ರವಾರದ ಘಟನೆಡಗೆ ಕಾರಣವಾದ ಚಿರತೆ ಅಥವಾ ಇನ್ಯಾವುದೇ ಕಾಡುಪ್ರಾಣಿ ಆಗಿರಲಿ ಅದನ್ನು ಬಲೆಗೆ ಬೀಳಿಸಿ ಕಾಡಿಗೆ ಅಟ್ಟಲಾಗುವುದು ಎಂದ ಅವರು
ತಿರುಮಲ ಪಾದಚಾರಿ ಮಾರ್ಗದಲ್ಲಿ ಪ್ರತಿ 40 ಅಡಿಗೊಬ್ಬರಂತೆ ಭದ್ರತಾ ಸಿಬ್ಬಂದಿಯನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಪೊಲೀಸ್ ಹಾಗು ಅರಣ್ಯ ಇಲಾಖೆ ಪೊಲೀಸ್ ವ್ಯವಸ್ಥೆ ಬೀಗಿಗೊಳಿಸಲಾಗುತ್ತದೆ ಮತ್ತು ಮಾರ್ಗದಲ್ಲಿ 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಧರ್ಮಾ ರೆಡ್ಡಿ ವಿವರಿಸಿದ್ದಾರೆ.
ತಿರುಮಲ ಮೆಟ್ಟಿಲು ಮಾರ್ಗದಲ್ಲಿ ಬರುವಂತ ಭಕ್ತರಿಗೆ ಸಮಯ ನಿಗದಿ ಮಾಡವ ಅವಕಾಶ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಾಲಕೀಯ ಸಾವಿಗೆ ಟಿಟಿಡಿ ಪರಿಹಾರ.
ಬಾಲಕಿ ಲಕ್ಷಿತ ಸಾವಿಗೆ ಟಿಟಿಡಿ ತೀವ್ರ ವಿಷಾದ ವ್ಯಕ್ತ ಪಡಿಸಿದ್ದು ಪರಿಹಾರವಾಗಿ ರೂ.5 ಲಕ್ಷ, ಹಾಗು ಅರಣ್ಯ ಇಲಾಖೆ ವತಿಯಿಂದ ರೂ.5 ಲಕ್ಷ ಸೇರಿದಂತೆ 10 ಲಕ್ಷ ಪರಿಹಾರ ಘೋಷಿಸಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



