ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಇಂಡಿಕಾ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸೇರಿದಂತೆ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಪುಂಗನೂರು ಕ್ರಾಸ್ ಸಮೀಪ ಎನ್.ಮರೇಪಲ್ಲಿ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ಎನ್.ಮರೇಪಲ್ಲಿ ಗ್ರಾಮದ ಮುನಿರಾಜು(43)ಹಾಗು ಪನಸಮಾಕನಹಳ್ಳಿ ಗ್ರಾಮದ ಸತೀಶ್(38) ಎಂದು ಗುರುತಿಸಲಾಗಿದೆ.
ಮುನಿರಾಜು ಹಾಗು ಸತೀಶ್ ಅವರು ವೃತ್ತಿಯಲ್ಲಿ ಕಾರ್ಪೇಂಟರ್ ಗಳಾಗಿದ್ದು ಶನಿವಾರ ವಾರದ ಬಟವಾಡೆ ಮುಗಿಸಿ ಮುನಿರಾಜುನನ್ನು ಎನ್.ಮರೇಪಲ್ಲಿಯಲ್ಲಿ ಬಿಟ್ಟುಬರಲು ಶ್ರೀನಿವಾಸಪುರದಿಂದ ಎನ್.ಮರೇಪಲ್ಲಿ ಗ್ರಾಮಕ್ಕೆ ಹೋಗುತ್ತಿರುವಾಗ ಎನ್.ಮರೇಪಲ್ಲಿ ಗೇಟ್ ಬಳಿ ಎದುರಿನಿಂದ ಬಂದಂತ ಟಾಟಾ ಇಂಡಿಕಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಸವಾರರಿಬ್ಬರು ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡು ಒರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ ಸ್ಥಳಕ್ಕೆ ಪೊಲೀಸ್ ಇನ್ಸೆಪೇಕ್ಟರ್ ಶಂಕರಾಚಾರಿ ಪಿಎಸ್ಐ ಜಯರಾಮ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಚಿಂತಾಮಣಿ:ಅಜಾದ್ ಚೌಕದಲ್ಲಿ,ಬಾಹುಬಲಿ ದೃಶ್ಯ ವೈಭವ!
- ಶ್ರೀನಿವಾಸಪುರ:ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು ವೆಂಕಟಶಿವಾರೆಡ್ಡಿ!
- ಪೋಲಿಸ್ ಮೇಲೆ ಹಲ್ಲೆ ಆರೋಪ:ಕೈಕೋಳ ಹಾಕಿ ಮೆರವಣಿಗೆ!
- ತಿರುಮಲ ರೂಮ್ ಕೊಡಿಸುವ ದಂಧೆ,ನಕಲಿ ಆಧಾರ್ ಫೋಟೋ ವಶಕ್ಕೆ !
- ಆಂಧ್ರ ಚಿತ್ತೂರು-ಕುಪ್ಪಂ ನಡುವೆ ಹೊಸ ರೈಲು ಮಾರ್ಗ!
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಕೆ!
- ಕೋಲಾರ-ದೇವನಹಳ್ಳಿ ನಡುವೆ Hಕ್ರಾಸ್ ಬಳಿ ಫ್ಲೈಓವರ್ ನಿರ್ಮಾಣ!
- ಗ್ರಹ ದೋಷ ನಿವಾರಣೆಗೆ ಭೈರವಾರಾಧನೆ:ಕಾಲ ಭೈರವಾಷ್ಟಮಿ ಪೂಜೆ ಮಹತ್ವ!
Sunday, August 16



