ಶ್ರೀನಿವಾಸಪುರ: ಒಂದು ಟನ್ ಮಾವಿನಕಾಯಿಗೆ ಹತ್ತು ಸಾವಿರ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರಿಗೆ ಮಾವು ಬೆಳೆಗಾರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಮಾವು ಬೆಳೆಗಾರರು ಮಂಗಳವಾರ ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರ ಕಚೇರಿಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಮಾವು ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರರು, PDPS ಸ್ಕೀಮಿನಲ್ಲಿ ಮಾವಿನಕಾಯಿಗೆ ಒಂದು ಟನ್ ಗೆ ಕನಿಷ್ಠ 10000ರೂಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಮತ್ತು ಒಂದು ರೈತನಿಗೆ ಸುಮಾರು 30 ಟನ್ನು ರವರಿಗೂ ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಕೂಡ ಮನವಿ ಮಾಡಿರುತ್ತಾರೆ.ಇದಕ್ಕೆ ಸ್ಪಂದಿಸಿದ ಪ್ರಿನ್ಸಿಪಲ್ ಸೆಕ್ರೆಟರಿ ಗೀರಿಶ್ ಅವರು ಸರ್ಕಾರದ ಹಂತದಲ್ಲಿ ಮಾವು ಬೆಳೆಗಾರರ ಸಮಸ್ಯೆಯನ್ನು ಚರ್ಚಿಸಿ ಸರ್ಕಾರದ ಅನುಮತಿ ಪಡೆದು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅನುಮೋದನೆ ಪಡೆದುಕೊಂಡು ಶೀಘ್ರದಲ್ಲಿ ಬೆಂಬಲ ಬೆಲೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ನಿಲಟೂರು ಚಿನ್ನಪ್ಪರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ವಿವಿಧ ಹಂತದ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಮ್ಯಾಂಗೋ ಬೋರ್ಡ್ ಎಂ.ಡಿ.ವೇದಮೂರ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸೀಕಲ್ ಶ್ರೀನಿವಾಸಗೌಡ, ಮಾದರಿರೈತ ರಾಜಾರೆಡ್ಡಿ ಮುಂತಾದವರು ಭಾಗವಹಿಸಿದ್ದರು.ಒಂದು ವಾರದ ಅವಧಿಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿಸುತ್ತಾರೆ ಎಂಬ ಭರವಸೆ ಇರುವುದಾಗಿ ಮಾವು ಬೆಳೆಗಾರರ ಸಂಘದ ಮುಖ್ಯಸ್ಥರು ಆಶಾಭಾವನೆ ವ್ಯಕ್ತಪಡಿಸಿದರು.




