ಬೆಂಗಳೂರು:ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾದ್ಯಂತ ರೈತರ ಜೀವನಾಡಿ ಬೆಳೆ ಮಾವು ಹವಮಾನ ವೈಪರಿತ್ಯ ಪರಿಣಾಮ ಇಳುವರಿ ಬಾರದೆ,ಬಂದಂತ ಮಾವಿಗೆ ಬೆಲೆ ಇಲ್ಲದೆ ಮಾವು ರೈತರು ರೈತರು ನಷ್ಟಕ್ಕೆ ಒಳಗಾಗಿದ್ದಾರೆ ಅವರಿಗೆ ಬೆಂಬಲ ನೀಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ವೆಂಕಟಶಿವಾರೆಡ್ಡಿ ಮನವಿ ಸಲ್ಲಿಸಿದ್ದಾರೆ.
ಇಂದು ನೂತನ ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕ ವೆಂಕಟಶಿವಾರೆಡ್ಡಿ ಭಾರಿ ಹೂಮಾಲೆಯೊಂದಿಗೆ ಹಾಕಿ ಅಭಿನಂದಿಸಿದ್ದಾರೆ.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಮಾವು ಬೆಳೆಗೆ ಬೆಂಬಲ ಕೋರಿ ಮನವಿ ಸಲ್ಲಿಸಿರುವ ಅವರು ನನ್ನ ಕ್ಷೇತ್ರದ ಮಾವಿನ ರೈತರ ಜೀವನಾಡಿ ಬೆಳೆ ಮಾವಿನಕಾಯಿಗೆ ಬೆಲೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದಾರೆ ಮಾವು ಕೊಯ್ಲು ಮಾಡಲು ಸಾಧ್ಯವಾಗದೆ ತೋಟದಲ್ಲಿ ಮಾವು ಕೊಳೆಯುವಂತ ಪರಿಸ್ಥಿತಿ ಒದಗಿದೆ ದಯವಿಟ್ಟು ಪ್ರತಿ ಟನ್ ಗೆ ಹತ್ತುಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ರೈತರಿಗೆ ನೀಡುವಂತೆ ಮನವಿ ಮಾಡಿದ್ದಾರೆ.ಕಳೆದ ವರ್ಷ ಇಂತಹುದೆ ಸಮಸ್ಯೆ ಆದಾಗ ಪಿಡಿಪಿಎಸ್ ಯೋಜನೆ ಅಡಿಯಲ್ಲಿ ಕೇಂದ್ರ-ರಾಜ್ಯಸರ್ಕಾರ ಜೊತೆಗೂಡಿ ಮಾವುಬೆಳೆಗಾರರಿಗೆ ಪರಿಹಾರ ನೀಡಲಾಗಿತ್ತು ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಉಪನಾಯಕಿ ಶಾರದ ಸೇರಿದಂತೆ ಜೆಡಿಎಸ್ ಶಾಸಕರು ಇದ್ದರು.




