ಚಿಕ್ಕಬಳ್ಳಾಪುರ:ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದ್ದು,ಸಮೀಪದಲ್ಲಿದ್ದ ಹಾಲಿನ ಟ್ಯಾಂಕರಗೂ ಬೆಂಕಿ ವ್ಯಾಪಿಸಿ ಎರಡು ಟ್ಯಾಂಕರಗಳು ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 11ನೇ ಮೈಲಿ ಸಮೀಪ ಸಂಭವಿಸಿದೆ.ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟ್ಯಾಂಕರ್ಗೆ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ.ಅದೇ ಸಂದರ್ಭದಲ್ಲಿ ಅಲ್ಲೆ ರಿವರ್ಸ್ ಮಾಡುತ್ತಿದ್ದ ಹಾಲಿನ ಲಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿವೆ.
ವಾಹನಗಳಿಂದ ಜಿಗಿದು ಪಾರಾದ ಚಾಲಕರು
ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪೆಟ್ರೋಲ್ ಟ್ಯಾಂಕರ್ ಹಾಗೂ ಹಾಲಿನ ಲಾರಿಯ ಚಾಲಕರು ವಾಹನಗಳಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅವಘಡಗಳನ್ನು ತಡೆದಿದ್ದಾರೆ ಬೆಂಕಿಯಿಂದಾಗಿ ಆ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Trending
- ತೇಜೋವದೆ ಆರೋಪ ಮಾಲೂರು ಚಲಪತಿ ವಿರುದ್ದ ವೆಂಕಟಶಿವಾರೆಡ್ಡಿ ದೂರು!
- ರಸ್ತೆಯಲ್ಲಿ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್,ಜೊತೆಗೆ ಹಾಲಿನ ಟ್ಯಾಂಕರ್ ಭಸ್ಮ!
- ಲಂಚ ಪಡೆಯುವಾಗ ಲೋಕಾ ಪೊಲೀಸರಿಗೆ ಸಿಕ್ಕಿಬಿದ್ದ ಯಲ್ದೂರು ಪಂಚಾಯಿತಿ ಅಧಿಕಾರಿ!
- ಗಂಡನ ಟವಲ್ ಹಿಡಿದು ತಿರುಮಲ ಬೆಟ್ಟ ಹತ್ತಿದ ಹೆಂಡತಿ,ವೃದ್ಧ ದಂಪತಿ LOVE STEP!
- ಮಾಜಿ CM ಸಿದ್ದರಾಮಯ್ಯ ಭೇಟಿಯಾದ ಸಚಿವ ಆಕಾಂಕ್ಷಿಗಳು.
- ಯುರೋಪ್ ತಂತ್ರಜ್ಞಾನದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ!
- ಚಿಂತಾಮಣಿ ಕೈಲಾಸಗಿರಿ ದೇವಾಲಯ ಸಂದರ್ಶಿಸಿದ ಕರ್ನಾಟಕ ಮಹಿಳಾ ಶಾಸಕಿಯರು!
- ಶ್ರೀನಿವಾಸಪುರ ರೈಲು ಮಾರ್ಗವಾಗಿ ಒಂದೇ ರಾತ್ರಿ ಹತ್ತದಿನೈದು ರೈಲುಗಳ ಸಂಚಾರ!
Thursday, July 9



