ಶ್ರೀನಿವಾಸಪುರ:ಆಕ್ಷೇಪಾರ್ಹ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿ ನನ್ನ ತೇಜೋವದೆ ಮಾಡಿದ್ದಾರೆಂದು ಆರೋಪಿಸಿ ಶಾಸಕ ವೆಂಕಟಶಿವಾರೆಡ್ಡಿ ಮಾಲೂರು ಚಲಪತಿ ಎಂಬುವರ ವಿರುದ್ದ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರವಾದ ಸುಳ್ಳು ಆಪಾದನೆಗಳನ್ನು ಮಾಡುವ ಮೂಲಕ ನನ್ನ ರಾಜಕೀಯ ವ್ಯಕ್ತಿತ್ವಕ್ಕೆ ಕಳಂಕ ತರುವಂತೆ ಆಕ್ಷೇಪಾರ್ಥವಾದ ವಿಚಾರಗಳನ್ನು ವಿಡಿಯೋ ಮೂಲಕ ಪ್ರಚಾರ ಮಾಡಿದ್ದಾರೆ ನಾನು ಶಾಸಕನಾಗಿ ನನ್ನ ನಡವಳಿಕೆ ಬಗ್ಗೆ ಆಗಲಿ ಅಥವಾ ನನ್ನ ಕರ್ತವ್ಯದಲ್ಲಾಗಲಿ ಏನಾದರೂ ಲೋಪವಿದ್ದಲ್ಲಿ ಈತ ನನ್ನನ್ನು ಸಂಪರ್ಕಿಸಿ ನನ್ನ ಜೊತೆ ಚರ್ಚಿಸಬಹುದಾಗಿತ್ತು. ಅದನ್ನು ಬಿಟ್ಟು ಈ ರೀತಿ ಏಕಾಏಕಿ ಮಾಧ್ಯಮದಲ್ಲಿ ನನ್ನ ಬಗ್ಗೆ ಮಾತಾಡಿರುವುದು ನನ್ನ ತೇಜೋವದೆ ಮಾಡಬೇಕೆಂದಲೇ ಮಾಡಿರುವ ಒಂದು ಕೃಕೃತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಇಂತಹ ಕಾನೂನು ಬಾಹಿರ ಮತ್ತು ಸಮಾಜದಲ್ಲಿ ಅಸಹ್ಯ ಮೂಡಿಸುವ ಪ್ರಯತ್ನದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿ ಹೇಳಿದ್ದಾರೆ.
ಕ್ಷೇತ್ರದ ಜನರ ಋಣ ತೀರಿಸುವ ನಿಟ್ಟಿನಲ್ಲಿ ಇದ್ದೀನಿ
ಕ್ಷೇತ್ರದ ಜನರ ಆಶೀರ್ವಾದದಿಂದ ಐದನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಿರುವೆ. ಕ್ಷೇತ್ರದ ಜನರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತ ಸರ್ಕಾರದ ಮಟ್ಟದಲ್ಲಿ ಅನುದಾನ ತರಲಿಕ್ಕೆ ಪ್ರಯತ್ನ ಮಾಡುತ್ತಿರುವೆ. ನನ್ನ ಕರ್ತವ್ಯದಲ್ಲಿ ಅಥವಾ ನನ್ನ ಜವಾಬ್ದಾರಿಯಲ್ಲಿ ಲೋಪ-ದೋಷ ಇದ್ದರೆ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಎಚ್ಚರ ತಪ್ಪಿದ್ದರೆ ದಯವಿಟ್ಟು ನನ್ನ ಗಮನಕ್ಕೆ ತನ್ನಿ ಮತ್ತು ನನ್ನೊಟ್ಟಿಗೆ ಚರ್ಚಿಸಿ. ನಾವು ನೀವು ಕೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ನಾನು ಇನ್ನಷ್ಟು ಕೆಲಸ ಮಾಡುವುದಕ್ಕೆ ಸಹಕಾರಿಯಾಗುತ್ತದೆ.ಅದನ್ನು ಹೊರತು ಪಡಿಸಿ ನನ್ನ ತೇಜೋವಧೆ ಮಾಡುವುದು ನ್ಯಾಯ ಸಮತ್ತವಲ್ಲ ಎಂದಿರುತ್ತಾರೆ.
Trending
- ತೇಜೋವದೆ ಆರೋಪ ಮಾಲೂರು ಚಲಪತಿ ವಿರುದ್ದ ವೆಂಕಟಶಿವಾರೆಡ್ಡಿ ದೂರು!
- ರಸ್ತೆಯಲ್ಲಿ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್,ಜೊತೆಗೆ ಹಾಲಿನ ಟ್ಯಾಂಕರ್ ಭಸ್ಮ!
- ಲಂಚ ಪಡೆಯುವಾಗ ಲೋಕಾ ಪೊಲೀಸರಿಗೆ ಸಿಕ್ಕಿಬಿದ್ದ ಯಲ್ದೂರು ಪಂಚಾಯಿತಿ ಅಧಿಕಾರಿ!
- ಗಂಡನ ಟವಲ್ ಹಿಡಿದು ತಿರುಮಲ ಬೆಟ್ಟ ಹತ್ತಿದ ಹೆಂಡತಿ,ವೃದ್ಧ ದಂಪತಿ LOVE STEP!
- ಮಾಜಿ CM ಸಿದ್ದರಾಮಯ್ಯ ಭೇಟಿಯಾದ ಸಚಿವ ಆಕಾಂಕ್ಷಿಗಳು.
- ಯುರೋಪ್ ತಂತ್ರಜ್ಞಾನದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ!
- ಚಿಂತಾಮಣಿ ಕೈಲಾಸಗಿರಿ ದೇವಾಲಯ ಸಂದರ್ಶಿಸಿದ ಕರ್ನಾಟಕ ಮಹಿಳಾ ಶಾಸಕಿಯರು!
- ಶ್ರೀನಿವಾಸಪುರ ರೈಲು ಮಾರ್ಗವಾಗಿ ಒಂದೇ ರಾತ್ರಿ ಹತ್ತದಿನೈದು ರೈಲುಗಳ ಸಂಚಾರ!
Thursday, July 9



