ನ್ಯೂಜ್ ಡೆಸ್ಕ್:ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಅಪರೂಪದ ಘಟನೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಯಶಸ್ವಿಯಾಗಿ ಜೀವಂತ ಹೃದಯ ಸಾಗಾಟ ಮಾಡಲಾಗಿದೆ.ಇತಿಹಾಸ ಸೃಷ್ಟಿಸಿದ ಕಥೆ. ಇದಕ್ಕೆ ಗುಜರಾತ್ ಸಿಎಂ ಸಹ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ
ಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ಜೀವಂತ ಹೃದಯವನ್ನು ಸಾಗಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸೂರತ್ನಿಂದ ಅಹಮದಾಬಾದ್ಗೆ ಹೃದಯವನ್ನು ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮೂಲಕ ಕೊಂಡೊಯ್ಯಲಾಯಿತು. ಇದನ್ನು ಅಹಮದಾಬದ್ ಯು.ಎನ್. ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಕಸಿ ಮಾಡಲು ಕಳುಹಿಸಲಾಗಿತ್ತು. 20901 ಸಂಖ್ಯೆಯ ರೈಲಿನ ಮೂಲಕ ಕಳುಹಿಸಲಾದ ಈ ಹೃದಯ ನಿಗದಿತ ಸಮಯದೊಳಗೆ ಅಹಮದಾಬಾದ್ಗೆ ತಲುಪಿತು. ಈ ಸಂಪೂರ್ಣ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ, ಗುಜರಾತ್ ಪೊಲೀಸ್, ರೈಲ್ವೆ ಭದ್ರತಾ ಪಡೆ (RPF) ಮತ್ತು ವೈದ್ಯಕೀಯ ತಂಡಗಳ ನಡುವೆ ಸಮನ್ವಯ ಸಾಧಿಸಿ ಹೃದಯವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲಾಯಿತು.
ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF ಮತ್ತು ಗುಜರಾತ್ ಪೊಲೀಸ್ ಪ್ಲಾಟ್ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದ್ದರು. ಇದರಿಂದ ನಿಗದಿತ ಸಮಯದಲ್ಲಿ ಕಸಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು.
ಸಮಯದ ದೃಷ್ಟಿಯಿಂದ ಸಮಯ ಅತ್ಯಂತ ನಿರ್ಣಾಯಕವಾಗಿತ್ತ್ತು ಅದಕ್ಕಾಗಿ 3 ಗಂಟೆ 45 ನಿಮಿಷಗಳಲ್ಲಿ ಹೃದಯ ತಲುಪಿದೆ. ಈ ಪ್ರಯಾಣಕ್ಕೆ ಸುಮಾರು 217 ನಿಮಿಷಗಳು (3 ಗಂಟೆ 45 ನಿಮಿಷಗಳು) ಬೇಕಾಯಿತು. ಇದರಿಂದಾಗಿ ಹೃದಯವನ್ನು ಯಶಸ್ವಿ ಕಸಿ ಮಾಡಲು ಅಗತ್ಯವಿರುವ ನಿಗದಿತ ಸಮಯದೊಳಗೆ ತಲುಪಿಸಲು ಸಾಧ್ಯವಾಯಿತು. ಈ ಹೃದಯದ ಜೊತೆ ಎರಡು ಮೂತ್ರಪಿಂಡಗಳು (ಕಿಡ್ನಿ) ಮತ್ತು ಒಂದು ಯಕೃತ್ತನ್ನು (ಲಿವರ್) ಸೂರತ್ ಜಿಲ್ಲೆಯ ಕಿಮ್ನಲ್ಲಿ ವಾಸಿಸುತ್ತಿದ್ದ ಒಡಿಶಾ ಮೂಲದ 36 ವರ್ಷದ ಜವಳಿ ಕಾರ್ಮಿಕರಿಂದ (ಟೆಕ್ಸ್ಟೈಲ್ ವರ್ಕರ್) ಸೂರತ್ನ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ (NCH) ಹೊರತೆಗೆಯಲಾಗಿತ್ತು. ಈ ಅಂಗಾಂಗ ದಾನದಿಂದ ನಾಲ್ಕು ರೋಗಿಗಳಿಗೆ ಹೊಸ ಜೀವನ ಸಿಕ್ಕಂತಾಗಿದೆ ಮತ್ತು ಇದು NCH ಸೂರತ್ ನಡೆಸಿದ 96ನೇ ಅಂಗಾಂಗ ದಾನವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಸಿದ್ದಾರೆ.
Trending
- ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
- ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
- ಶ್ರೀನಿವಾಸಪುರ:ತಾಲೂಕು ಶಿಕ್ಷಕರ ಸಂಘದಲ್ಲಿ ಗುಂಪುಗಾರಿಕೆ,ಭುಗಿಲೆದ್ದ ಭಿನ್ನಮತ!
- ನಮ್ಮ ಜಮೀನು ನಮಗೆ ವಾಪಸ್ಸು ಕೋಡಿ DFO ಕಚೇರಿ ಮುಂದೆ ಪ್ರತಿಭಟನೆ!
- ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೊತ್ತೂರು ಮಂಜುನಾಥ್ ಅವಿರೋಧ ಆಯ್ಕೆ!
- ಶ್ರೀನಿವಾಸಪುರ: ಶಿಕ್ಷಕನ ವಿರುದ್ಧ ದೂರು ವಿರೋಧಿಸಿ ನೌಕರರ ಸಂಘದ ಬೃಹತ್ ಪ್ರತಿಭಟನೆ!
Wednesday, September 16



