ನ್ಯೂಜ್ ಡೆಸ್ಕ್:ಶ್ರೀನಿವಾಸಪುರ:ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಹಾಗೂ ಮಹಾನಗರಗಳಿಗೆ ಬದುಕು ಆರಿಸಿ ವಲಸೆ ಹೋಗುವುದನ್ನು ತಡೆಯಲು ಕರ್ನಾಟಕ ಸರ್ಕಾರ ಶ್ರೀನಿವಾಸಪುರ ಪಟ್ಟಣ ಸೇರಿ 108 ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆಯ ‘ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ರೂಪಿಸಿದೆ. ಇದರಡಿ 100 ಅಡಿ ಅಗಲದ ವರ್ತುಲ ರಸ್ತೆ ಹಾಗೂ 2 ಕಿ.ಮೀ ಪ್ರಭಾವ ವಲಯವನ್ನು (ಇಂಪ್ಯಾಕ್ಟ್ ಝೋನ್) ನಿರ್ಮಿಸಲಾಗುತ್ತದೆ.
ಇದರಿಂದ ಸಣ್ಣ-ಮಧ್ಯಮ ಪಟ್ಟಣಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವುದರೊಂದಿಗೆ ಕರ್ನಾಟಕದ ಸಣ್ಣ ಮತ್ತು ಮಧ್ಯಮ ಪಟ್ಟಣಗಳನ್ನು ಹೊಸ ಬೆಳವಣಿಗೆಯ ಆರ್ಥಿಕ ಕೇಂದ್ರಗಳನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ‘ ಕರ್ನಾಟಕ ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್ ’ ಅನ್ನು ಅನುಮೋದಿಸಿದೆ.
ಇದರಡಿ ಪ್ರತಿಯೊಂದು ಪಟ್ಟಣಕ್ಕೂ 100 ಅಡಿ ಅಗಲದ ವರ್ತುಲ ರಸ್ತೆ ಹಾಗೂ 2 ಕಿ.ಮೀ ಪ್ರಭಾವ ವಲಯವನ್ನು (ಇಂಪ್ಯಾಕ್ಟ್ ಝೋನ್) ನಿರ್ಮಿಸಲಾಗುತ್ತದೆ. ಇದು ಸಂಚಾರ ದಟ್ಟಣೆ ನಿಯಂತ್ರಿಸಿ, ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಹಾಗೂ ಮಹಾನಗರಗಳಿಗೆ ಆಗುವ ವಲಸೆ ತಡೆಯಲು ಸಹಕಾರಿಯಾಗಲಿದೆ. ಈ ಯೋಜನೆಯಿಂದಾಗಿ ರಾಜ್ಯದಾದ್ಯಂತ ಸಾರಿಗೆ ಸಂಪರ್ಕ ಅತ್ಯಂತ ಸುಲಭವಾಗಲಿದ್ದು, ಗ್ರಾಮೀಣ ಹಾಗೂ ಅರೆ-ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಸೋದ್ಯಮ ರಿಯಲ್ ಎಸ್ಟೇಟ್, ಉದ್ಯೋಗ, ವ್ಯಾಪಾರ-ವಹಿವಾಟುಗಳಿಗೆ ಹೊಸ ಚೈತನ್ಯ ದೊರೆಯಲಿದ್ದು ಬೆಂಗಳೂರಿನಂತಹ ಮಹಾನಗರಗಳ ಮೇಲಿನ ವಲಸೆಯ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದರಿಂದಾಗುವ ಪ್ರಯೋಜನ
ಈ ಯೋಜನೆಯಲ್ಲಿ ಆಯ್ಕೆಯಾದ ಪ್ರತಿಯೊಂದು ಪಟ್ಟಣದ ಸುತ್ತಲೂ 30 ಮೀಟರ್ (100 ಅಡಿ) ಅಗಲದ ಸುಸಜ್ಜಿತ ವರ್ತುಲ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಇದು ನಗರದೊಳಗಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಹೊರವಲಯದ ಸಂಪರ್ಕವನ್ನು ಹೆಚ್ಚಿಸಲು ನೆರವಾಗಲಿದೆ.
2 ಕಿ.ಮೀ ಪ್ರಭಾವ ವಲಯ: ಪ್ರಸ್ತಾಪಿತ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ತಲಾ 2 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ಇಂಪ್ಯಾಕ್ಟ್ ಝೋನ್’ ಎಂದು ಗುರುತಿಸಲಾಗಿದ್ದು, ಈ ವಲಯದಲ್ಲಿ ಯೋಜನಾಬದ್ಧ ನಗರ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತದೆ.
ಆರ್ಥಿಕ ವಿಕೇಂದ್ರೀಕರಣ: ಕೇವಲ ಮಹಾನಗರಗಳಿಗೆ ಸೀಮಿತವಾಗಿದ್ದ ಹೂಡಿಕೆ, ವ್ಯಾಪಾರ ಮತ್ತು ಕೈಗಾರಿಕೆಗಳನ್ನು ತಾಲೂಕು ಹಾಗೂ ಹೋಬಳಿ ಮಟ್ಟದ ಪಟ್ಟಣಗಳಿಗೂ ವಿಸ್ತರಿಸಿ ಉತ್ತೇಜಿಸಿ ಯೋಜನೆಯ ಮುಖ್ಯ ಗುರಿಯಾಗಿದೆ.
ರಾಜ್ಯಾದ್ಯಂತ 2 ಮತ್ತು 3ನೇ ಹಂತದ ನಗರಗಳಲ್ಲಿ ರಿಂಗ್ ರೋಡ್ ನಿರ್ಮಿಸುವ ಹಾಗೂ ಈ ರಸ್ತೆ ಸುತ್ತಮುತ್ತ ಮನೆ ಮತ್ತಿತರ ಕಟ್ಟಡ ಕಟ್ಟದಂತೆ ಇಂಪ್ಯಾಕ್ಟ್ ಜೋನ್ ನಿಗದಿಪಡಿಸಿವ ಯೋಜನೆ ಕೇವಲ ಮರ ಬೆಳೆಸುವ ಮೂಲಕ ಹಸಿರು ಬೆಳಸುವ ಚಿಂತನೆಯ ಯೋಜನೆ ಇದಾಗಿದೆ. ಅದಕ್ಕಾಗಿ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿನ ಅನುಮೋದಿತ ಮಹಾಯೋಜನೆ ಹೊಂದಿರುವ ಹಾಗೂ ಮಹಾಯೋಜನೆ ಸಿದ್ಧಪಡಿಸುವ ಹಂತದಲ್ಲಿರುವ ನಗರ ಮತ್ತು ಪಟ್ಟಣಗಳಿಗೆ ಇದು ಅನ್ವಯವಾಗಲಿದೆ
ಆಯ್ಕೆಯಾದ ಸಣ್ಣ-ಮಧ್ಯಮ ಪಟ್ಟಣಗಳು ಜಿಲ್ಲಾವಾರ ಪಟ್ಟಿ— ಬೆಳಗಾವಿ: 25, ವಿಜಯಪುರ: 9, ರಾಯಚೂರು: 7
ಕಲಬುರಗಿ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ: ತಲಾ 5, ಗದಗ, ಹಾವೇರಿ, ಮಂಡ್ಯ, ವಿಜಯನಗರ, ಯಾದಗಿರಿ: ತಲಾ 4
ಬಾಗಲಕೋಟೆ, ಧಾರವಾಡ, ಮೈಸೂರು: ತಲಾ 3, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ತುಮಕೂರು: ತಲಾ 2, ಬೀದರ್, ಚಿಕ್ಕಬಳ್ಳಾಪುರ(ಗುಡಿಬಂಡೆ), ಹಾಸನ, ಕೊಡಗು, ಕೋಲಾರ(ಶ್ರೀನಿವಾಸಪುರ), ಉಡುಪಿ: ತಲಾ 1.ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪಟ್ಟಣವನ್ನು ಮಾತ್ರ ಆಯ್ಕೆಯಾದ 108 ಪಟ್ಟಣಗಳ ಪಟ್ಟಿಯಲ್ಲಿದೆ.

ಇಲ್ಲಿ ಮಾಡಿದರೆ ಅನಕೂಲನಾ?
ಶ್ರೀನಿವಾಸಪುರ ಪಟ್ಟಣದ ಉತ್ತರ ಭಾಗದಲ್ಲಿ ಸಾಗುವ ಕೋಲಾರ-ಹೊಸಹುಡ್ಯ ರಾಜ್ಯ ಹೆದ್ದಾರಿಯಿಂದ ಪೂರ್ವ ದಿಕ್ಕಿನಲ್ಲಿ ಹೋಗುವ ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 69 ಗೆ ಸಂಪರ್ಕ ಕಲ್ಪಿಸುವ ಯಾವುದೇ ರಸ್ತೆ ಮಾರ್ಗ ಇಲ್ಲ.ಈ ಎರಡು ರಸ್ತೆಗಳನ್ನು ಕಲ್ಪಿಸುವ ಸಂಪರ್ಕ ರಸ್ತೆಯಾಗಿ ಕರ್ನಾಟಕ ರೋಡ್ ನೆಟ್ವರ್ಕ್ ಗ್ರಿಡ್ ಯೋಜನೆಯಲ್ಲಿ ವರ್ತುಲ ರಸ್ತೆ ಅನಕೂಲ ಆಗಲಿದಿಯ ಎಂಬ ಅಂದಾಜು.vcsnewz ತಂಡದ್ದು.



