ನ್ಯೂಜ್ ಡೆಸ್ಕ್: ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಮುಖಂಡ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ವಿಂಟೇಜ್ ಕಾರುಗಳ ಮಾಲೀಕ ಡಾ. ರವಿಪ್ರಕಾಶ್ ಅವರ ಕಿಡ್ನಾಪ್ ಪ್ರಕರಣ ಹೊಸ ತಿರವು ಪಡೆದಿದ್ದು ಈಗ ಬಂದಿರುವ ಮಾಹಿತಿಯಂತೆ ಅವರನ್ನು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರಂತೆ.
ಬೆಂಗಳೂರಿನಲ್ಲಿ ಆಂಧ್ರದ ಕಡಪಾ ಜಿಲ್ಲೆಯ ಮೈದುಕೂರು ಶಾಸಕ ಪುತ್ತಾ ಸುಧಾಕರ್ ಹಾಗೂ ಅವರ ಪುತ್ರ ರವಿಕುಮಾರ್ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದ್ದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿನ ಬಿಜೆಪಿ ಮುಖಂಡ ವಿಂಟೆಜ್ ಕಾರುಗಳ ಮಾಲಿಕ ಹಾಗು ರಿಯಲ್ ಎಸ್ಟೇಟ್ ಉದ್ಯಮಿ ರವಿಪ್ರಕಾಶ್ ಅವರನ್ನು ಅಪಹರಿಸಲಾಗಿದೆ ಎಂದು ಅವರ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು ಅದರಂತೆ ಅದರಂತೆ ಬೆಂಗಳೂರು ಪೊಲೀಸರು ಪುಟ್ಟ ಸುಧಾಕರ್ ಹಾಗು ಮಗನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡಿದಾಗ ಆಗಸ್ಟ್ 30ರಂದು ಆರ್.ಆರ್. ನಗರದಲ್ಲಿರುವ ಉದ್ಯಮಿ ರವಿಪ್ರಕಾಶ್ (65) ಅವರನ್ನು ಅಪಹರಿಸಲಾಗಿದೆ ಎಂದು ಅವರ ಪತ್ನಿ ಸಬೀನಾ ನೀಡಿದ ದೂರಿನ ಪ್ರಕಾರ, ಆಗಸ್ಟ್ 30ರಂದು ಬೆಳಗ್ಗೆ ಸುಮಾರು 10.15ಕ್ಕೆ ದಂಪತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ನಂಬರ್ ಪ್ಲೇಟ್ ಇಲ್ಲದಿದ್ದ ನಾಲ್ಕು ವಾಹನಗಳು ನಮ್ಮ ಕಾರಿನ್ನು ಅಡ್ಡಗಟ್ಟಿದ್ದವು.
ನಂತರ 10ರಿಂದ 15 ಮಂದಿ ವ್ಯಕ್ತಿಗಳು ಕಾರಿನಿಂದ ರವಿಪ್ರಕಾಶ್ ಅವರನ್ನು ಹೊರಗೆಳೆದು ಹಲ್ಲೆ ನಡೆಸಿ, ಮತ್ತೊಂದು ವಾಹನಕ್ಕೆ ಬಲವಂತವಾಗಿ ಹತ್ತಿಸಿ ಕರೆದೊಯ್ದರು ಎಂದು ಸಬೀನಾ ಆರೋಪಿಸಿದ್ದರು.
ರವಿಪ್ರಕಾಶ್ ಅವರನ್ನು ತಡೆಯಲು ಮುಂದಾದಾಗ ತಮ್ಮ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ತಮ್ಮ ಹೊಟ್ಟೆಗೆ ಒದ್ದು, ಕಪಾಳಕ್ಕೆ ಹೊಡೆದು, ತಮ್ಮ ಹಾಗೂ ಕುಟುಂಬದ ಸದಸ್ಯರಿಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು.
ಈ ಸಂಪೂರ್ಣ ಘಟನೆ ತಮ್ಮ ನಿವಾಸದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದು ಸಬೀನಾ ಪೊಲೀಸರಿಗೆ ತಿಳಿಸಿದ್ದಾರೆ.ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಬೆಂಗಳೂರು ಪೊಲೀಸರ ಸ್ಪಷ್ಟನೆ.
ಬೆಂಗಳೂರು ನಗರ ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ, ರವಿಪ್ರಕಾಶ್ ಅಪಹರಣಕ್ಕೊಳಗಾಗಿಲ್ಲ ಎಂಬುದು ತಿಳಿದುಬಂದಿದ್ದು, ಆಂಧ್ರಪ್ರದೇಶ ಪೊಲೀಸರು ಮೈದುಕೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ರವಿಪ್ರಕಾಶ್ ಅವರ ಕುಟುಂಬಸ್ಥರು ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದು, ಮೈದುಕುರ್ ವಿಧಾನಸಭಾ ಕ್ಷೇತ್ರದ ಆಡಳಿತ ರೂಡ ತೆಲಗಿದೇಶಂ ಶಾಸಕ ಸುಧಾಕರ್ ಅವರ ಪ್ರಭಾವ ಬಳಸಿ ರವಿಪ್ರಕಾಶ್ ಅವರನ್ನು ಬಂಧಿಸಲಾಗಿದೆ ಎನ್ನುತ್ತಾರೆ
Trending
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
- ಶ್ರೀನಿವಾಸಪುರ:ನಾರಮಾಕಲಹಳ್ಳಿ ನೀರಿನ ಸಮಸ್ಯೆ ಗ್ರಾಮಸ್ಥರ ಅಳಲು!
- ಜನಸಾಮನ್ಯರ ಕಣ್ಣೀರಿಗೆ ಕಾರಣವಾಗುತ್ತಿದೆ ಈರುಳ್ಳಿ ಸಕ್ಕರೆ ಬೆಲೆ!
- ಯಲ್ದೂರು ಆಸ್ಪತ್ರೆಗೆ ಆಂಬುಲೆನ್ಸ್: ಆರೋಗ್ಯ ಸಚಿವ ಖಾದರ್ ಭರವಸೆ
Wednesday, September 2



